ಕಾವ್ಯಸಂಗಾತಿ
ಡಾ.ಲತಾ ಎ. ಆರ್. ಬಾಳೆಹೊನ್ನೂರು
“ಸವಿಗಾನ”


ಹೃದಯದಲಿ ವೀಣೆಯ ತಂತಿ ಮೀಟಿದೆ
ಸುಖ ಸ್ವಪ್ನದ ಸವಿಗಾನ ನುಡಿಸಿದೆ
ಮಧುರ ಮಮತೆಯ ಭಾವ ಬಿಂಬಿಸಿದೆ
ಒಡಲಿನೊಳಗೆ ಬಿಸಿ ಅನುಭವ ಮೊಳಗಿಸಿದೆ
ನೀ ನೀಡಿದ ಪ್ರೀತಿ ಕಾಣಿಕೆ ಮರೆಯಲಾರೆ
ಎಂದೆಂದೂ ಜೊತೆಯ ಪಾತ್ರ ತೊರೆಯಲಾರೆ
ಭರವಸೆಯ ಜೊತೆಗಾರ ಬಾಳಲಿ ನೀನಾಸರೆ
ನೆನಪಿಡುವೆ ಸದಾಕಾಲ ಮರೆಯದೆ ಮನಸಾರೆ
ನಂಬಿಕೆಯ ನಡೆಯಲಿ ಸದಾ ನನ್ನೊಂದಿಗಿರು
ಬದುಕಲಿ ಬದುಕುವ ಭರವಸೆ ನೀನಾಗಿರು
ಯಾವ ಜನ್ಮದ ಋಣವೋ ತಿಳಿದಿರು
ಕೈ ಹಿಡಿದು ಬಾಳಲಿ ಮುನ್ನಡೆಸುತ್ತಿರು
ಮುಗಿಯುವ ಪಯಣದಲಿ ಕಾವ್ಯವಾಗಿರು
ನಾ ಬರೆವ ಕವಿತೆಯಲಿ ಹಸಿರಾಗಿರು
ನೆಮ್ಮದಿಯ ಬದುಕಿಗೆ ನಿರಾಳ ಉಸಿರಾಗಿರು
ನಾ ಕಂಡ ಸುಂದರ ಕನಸುಗಳಲಿ ನನಸಾಗಿರು.
ಡಾ.ಲತಾ ಎ. ಆರ್. ಬಾಳೆಹೊನ್ನೂರು



