ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


(ಜಾನಪದ ಶೈಲಿಯ‌ಲ್ಲಿ‌ ಬರೆದ ಗೀತೆ)
ಮಳೆರಾಯ ಮದುಮಗ ಬಂದಾನ
ಭೂದೇವಿಗ ಮದುವ್ಯಾಗಕ ನಿಂದಾನ|

ಮೋಡಗಳ ದಿಬ್ಬಣ ಹೊತ್ತ ಬಂದಾನ
ಸುರಗಿನೀರ ಬರಬರ ಸುರಸ್ಯಾನ|

ಭೂದೇವಿಗೆ ಮನಸೋತು ಕರಿಗ್ಯಾನ
ಮುತ್ತು ಹನಿಗಳ ಹೂಹಾರ ಹಿಡಿದಾನ|

ರೈತ ಬೀಗನ್ನ ಹಂದರಕ ಕರೆದಾನ
ಜೊಡೆತ್ತಿನ್ಯಾಗ ಸಾರೂಟ ಹೊರಟಾಣ|

ಜೋಳಗ್ಯಾಗ ಮುತ್ತಿನ ಜೋಳ ಹಿಡದಾನ
ಬಸವಣ್ಣ ನೇಗಿಲ ಹೊತ್ತಾನ|

ಬಸವಣ್ಣ ಬಿತ್ತುತ ನೇಯ್ಗಿ ನೇಯ್ದಾನ
ಭೂದೇವಿಯ ಹಸಿರು ಸೀರೆಯ ಉಟ್ಟಾಳ|

ಹಸಿರು ಉಸುರಾಗಿ ಫಲವಾಗಿ ನಿಂತಾಳ
ದವಸದ ಉಡಿ ತಂದೇನಿ ಅಂದಾಳ|

ಹಿಗ್ಗಿ ಹಿರಿದು ಊರ ಮಂದಿನ
ನಮ್ಮಣ್ಣ ಸುಗ್ಗಿ ಊಟಕ್ಕ ಕರದಾನ|

ಉಂಡ ಮಂದಿ ಬಾಯಿತುಂಬ ಅಣ್ಣನ ಹರಸ್ಯಾರ
ಭೂತಾಯವ್ವಗ ಕೈ ಎತ್ತಿ ಮುಗದಾರ|


About The Author

Leave a Reply

You cannot copy content of this page

Scroll to Top