ಮಾಜಿ ಪ್ರದಾನಿಯವರ ಅನುವಾದಿತ ಕಥೆ
ಅನುವಾದಿತ ಕಥೆ ಗೊಲ್ಲರ ರಾಮವ್ವ (ಭಾಗ- ಎರಡು) ಮಾಜೀ ಪ್ರಧಾನ ಮಂತ್ರಿ ಶ್ರೀ ಪಿ.ವಿ. ನರಸಿಂಹರಾವ್ ಅವರ ಕಥೆಯ ಕನ್ನಡಾನುವಾದ ಭಾಗ – ೨ “ಅದೆಲ್ಲ ಬಿಡವ್ವಾ ! ಅದೊಂದು ಕಥೆ. ಸ್ವಲ್ಪ ಹೊತ್ತು ನನ್ನನ್ನ ಇಲ್ಲಿ ಅಡಗಿಸಿಡು. ಮತ್ತೆ ನಾನು ಹೊರಟುಹೋಗ್ತೀನಿ” ಅಂತ ಅತಿ ಕಷ್ಟದಲ್ಲಿ ನುಡಿದನಾತ. “ಆ! ಹೋಗ್ತಾನಂತೆ ಹೋಗ್ತಾನೆ.. ! ಒಂದೇ ಸಲ ಸ್ವರ್ಗಕ್ಕೆ ಹೋಗ್ತೀಯಾ …! ಒಳ್ಳೆ ಬುದ್ಧಿವಂತನೇ ನೀನು… ಹೋಗು..! ಹು ! ಹೋಗ್ತಾನಂತೆ ಎಲ್ಲಿಗೋ !” ಹೊಸಬ […]
ಆಕಾಶಕ್ಕೆ ಹಲವು ಬಣ್ಣಗಳು
ಪುಸ್ತಕ ಸಂಗಾತಿ ಆಕಾಶಕ್ಕೆ ಹಲವು ಬಣ್ಣಗಳು ಗಜಲ್ ಪ್ರೇಮಿಗಳ ಭಾವಬಾಂದಳದಿ ಮಾಸದ ಬಣ್ಣಗಳ ಮೂಡಿಸಿದ ಕೃತಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಈಗಾಗಲೇ ಹೆಸರು ಮಾಡಿರುವ ಶಹಾಪುರದ ಹಿರಿಯ ಲೇಖಕರಾದ ಶ್ರೀ. ಸಿದ್ಧರಾಮ ಹೊನ್ಕಲ್ ಅವರು ಮೈಸೂರಿಗರಿಗೆ ಪರಿಚಿತರೇನೂ ಅಲ್ಲ. ಮೈಸೂರಿನಲ್ಲೇ ಹುಟ್ಟಿ, ಬೆಳೆದು ಕಳೆದ ಹದಿನೇಳು ವರ್ಷಗಳಿಂದ ಸಂಘಟನೆ ಹಾಗೂ ಕವನ ರಚನೆಯಲ್ಲಿ ತೊಡಗಿಸಿಕೊಂಡಿದ್ದ ನನಗೆ ಹೊನ್ಕಲ್ ಅವರ ಪರಿಚಯವಾದುದು ಗಜಲ್ ಗಳಿಗೆಂದೇ ಮೀಸಲಾದ ಗುಂಪೊಂದರಲ್ಲಿ. ಕಳೆದ ಒಂದೂವರೆ ವರ್ಷಗಳಿಂದ ಗಜಲ್ ಗುರುಗಳಾದ ಡಾ. ಗೋವಿಂದ ಹೆಗ್ಡೆಯವರ […]
ಹೊಸ ಬಾಳಿಗೆ
ಕವಿತೆ ಹೊಸ ಬಾಳಿಗೆ ಶ್ವೇತಾ ಎಂ.ಯು.ಮಂಡ್ಯ ಹಳತು ಕಳೆದುಹೊಸ ವರ್ಷ ಮರಳಿಎಲ್ಲಿಂದಲೋ ಬಂದುಮತ್ತೆಲಿಗೋ ಸಾಗೋಈ ಬದುಕ ಹಾದಿಯಲಿಹೊಸ ಭರವಸೆಯ ಚಿಗುರಿಸಲಿ ರಾಗಯೋಗ ಪ್ರೇಮಸೌಂದರ್ಯಮೇಳೈಸಿ ಭೂರಮೆಯ ಸಿಂಗಾರಗೊಳಿಸಿರೆಂಬೆಕೊಂಬೆಗಳು ತೂಗಿ ಬಾಗಿನರುಗಂಪು ತಣ್ಣನೆಯ ಗಾಳಿ ಸೂಸಿಆನಂದವನೆ ಹಂಚಿವೆ ಈ ಹರುಷವು ಹೀಗೆ ಉಳಿಯಲಿಖಂಡ ಖಂಡಗಳ ದಾಟಿಅರೆಗೋಡೆ ಮಹಾಗೋಡೆಅರೆತಡಿಕೆ ಮಹಾಮನೆಗಳೊಳಗಿನರೋಗಗ್ರಸ್ತ ಮನಸುಗಳಲಿಸೊರಗದ ಸಂಜೀವಿನಿಯಾಗಲಿ ಮೈಮುದುಡಿ ಚಳಿಯೊಳಗೆಬಿಟ್ಟುಬಿಡದೆ ಕಾಡುವ ಶಾಪಗ್ರಸ್ತ ದಾರಿದ್ರಕ್ಕೆ ಬಲಿಯಾದ ಜೀವಗಳಿಗೆಬೇಡುವ ಕೈಗಳಿಗೆ ನೀಡುವಶಕ್ತಿಯ ನೀ ಇಂದಾದರುಹೊತ್ತು ತಾ ಹೊಸ ವರುಷವೇ ಬದುಕನ್ನೇ ಹಿಂಡಿದ ಕಾಣದ ಮುಖವುಕಾಣದೆ ಹೋಗಲಿ ಹಾಗೆಯೇಈ […]
ಸಹಜ ಪ್ರೇಮ
ಕವಿತೆ ಸಹಜ ಪ್ರೇಮ ದೇವರಾಜ್ ಹುಣಸಿಕಟ್ಟಿ. ಅವಳದು ನನ್ನದು ಅಮರಪ್ರೇಮ ಅಲ್ಲವೇ ಅಲ್ಲ..ಕಾರಣ ಅವಳಿಗಾಗಿ ನಾನುಗೋರಿ ಕಟ್ಟಲಿಲ್ಲ..ವಿಷ ಉಣಿಸಲಿಲ್ಲ ಉಣ್ಣಲಿಲ್ಲ..ಇನ್ನು ಗೋಡೆ ಕಟ್ಟುವಬಾದಶಾಗಳು ಇರಲೇ ಇಲ್ಲಾ… ತಿಂಗಳಿಗೊಮ್ಮೆ ಅವಳಹೆಜ್ಜೆಗಳು ಭಾರವಾಗುತ್ತವೆ..ಆಗೆಲ್ಲ ಮನೆಯ ತುಂಬಾನನ್ನದೇ ಕಾರುಬಾರು..ಉಪ್ಪು ಹುಳಿ ಹೆಚ್ಚು ಕಡಿಮೆಆಗಿರುವ ಅನ್ನ ಸಾಂಬಾರು…ನನ್ನಂತಲ್ಲ ಅವಳು ಉಂಡು ಬಿಡುತ್ತಾಳೆತುಟಿಪಿಟಕ್ ಅನ್ನದೇ ಬಿಡದೇ ಚೂರು… ಮುನಿಸು ಬರುತ್ತೆ ಆಗಾಗ ಸಂತೆಯಲ್ಲಿಜೊತೆಯಾದ ಅಪರಿಚಿತ ಗೆಳೆಯನಂತೆಕಾರಣ ತುಸು ಹೊತ್ತಾಗಿ ರಾತ್ರಿ ಬಾರಿಂದ ಮರಳಿದ್ದು..ತುಸು ನಶೆ ಹೆಚ್ಚಾಗಿ ಪೆಚ್ಚುಪೆಚ್ಚಾಗಿ ಮಾತನಾಡಿದ್ದು..ತುಸು ಸಿಗರೇಟಿನ ಹೋಗೆಹೆಚ್ಚಾಗಿ ಉಸಿರಿದ್ದು….ಇದು ಹೆಚ್ಚೊತ್ತು […]
ಅಪ್ಪಣ್ಣನಿಗೊಂದು ಮನವಿ
ಕವಿತೆ ಅಪ್ಪಣ್ಣನಿಗೊಂದು ಮನವಿ ಎ.ಎಸ್.ಮಕಾನದಾರ ಅಪ್ಪಣ್ಣಎಷ್ಟೊಂದು ಕತ್ತಿಗಳುಸೇರಿಕೊಂಡಿವೆ ನಿನ್ನ ಹಸಬಿಯೊಳುಆ ಕತ್ತಿಗಳೇ ಮಾಡಿದ ಕ್ಷೌರಹೇಗೆ ಸೂಚಿಸಿ ಬಿಡುತ್ತವೆ. ಆ ಚಾಂದ ದಾಡಿ ಮುಸ್ಲಿಮನದೆಂದುಆ ಜುಟ್ಟು ಬ್ರಾಹ್ಮಣನನದೆಂದುಆ ಕೆಳದಾಡಿ ಸಿಖ್ಖನದೆಂದುಆ ಫ್ರೆಂಚ್ ದಾಡಿ ಕ್ರಿಶ್ಚಿಯನನದೆಂದು ಮೀಸೆ ಬಿಟ್ಟರೊಂದು ಜಾತಿಕೇಶ ಬಿಟ್ಟರೊಂದು ಜಾತಿಮುಡಿ ಕಟ್ಟಿ ದಾಡಿ ಬಿಟ್ಟರೊಂದು ಜಾತಿಎಲ್ಲವನು ಬೋಳಿಸಿಟ್ಟುಹೊಸದೊಂದು ವ್ಯವಸ್ಥೆನಿರ್ಮಿಸಬಾರದಿತ್ತೇ ಅಪ್ಪಣ್ಣ ನೀನುಅಣ್ಣ ಅಕ್ಕ ಅಲ್ಲಮರೊಂದಿಗೆಅನುಭವ ಮಂಟಪದ ಚುಕ್ಕಾಣಿಯಾಗಿದ್ದಿ ಯಾಕಣ್ಣ ಈ ವ್ಯವಸ್ಥೆಗೆಕಡಿವಾಣ ಹಾಕದೆ ಸುಮ್ಮನಾದೆಗಂಡಲ್ಲದೆ-ಹೆಣ್ಣಲ್ಲದೆ ಒಳಗಿರುವಆತ್ಮಕ್ಕೆ ಅನುಭವ ಮಂಟಪದಲಿಅಂತರಂಗ ಶುದ್ಧಿ ಮಾಡಿದ ನೀನೇಬಹಿರಂಗ ಶುದ್ಧಿಗಾಗಿಮಾಡಿದ ಈ ಕ್ಷೌರದಿಂದಅದ್ಹೇಗೆ […]
ಗಾಂಧಾರಿ ಸಂತಾನ
ಕವಿತೆ ಗಾಂಧಾರಿ ಸಂತಾನ ಕಾತ್ಯಾಯಿನಿ ಕುಂಜಿಬೆಟ್ಟು ಆ ಸೂಯ೯ ಹೆರುತ್ತಾನೆನೀಲಿ ನೀಲಿ ಮೋಡ ಪರದೆಗಳಹೆರಿಗೆ ಮನೆಯಲ್ಲಿನೀಳ ನೀಳ ಬೆಳಕು ಶಿಶುಗಳಕಣ್ಣುಗಳಿಗೆ ಕತ್ತಲ ಪಟ್ಟಿ ಕಟ್ಟಿಕೊಂಡುಈ ಗಾಂಧಾರಿಯ ಹಾಗೆ!ಹೊತ್ತದ್ದು ಹೆತ್ತು ವೀರಶತಜನನಿಹೆತ್ತದ್ದು ಸತ್ತು ದುಃಖಶತಜನನಿ!ಬಸಿರ ಹೊಸೆಹೊಸೆದು ಅತ್ತರೂಈಗ ವೇದವ್ಯಾಸನಿಲ್ಲ ಮಡಕೆಯಿಲ್ಲಮಹಾಭಾರತ ಮುಗಿದು ಹೋಗಿದೆಕುರುಕ್ಷೇತ್ರದಲ್ಲಿ ಸಾಲು ಗಭಾ೯ಪಾತ! ಆ ಸೂಯ೯ನದ್ದೋ ಅಕ್ಷಯ ಗಭ೯ !ಪ್ರಸವಬೇನೆಯೇ ಇಲ್ಲದೆ ಹೆರುತ್ತಾನೆತನ್ನ ಬೇನೆಯನ್ನೆಲ್ಲ ಭೂಮಿಯಹೆಂಗಸರ ಗಭ೯ಗಳಿಗೆ ಹಂಚಿಬಿಟ್ಟಿದ್ದಾನೆಹೆರುಹೆರುತ್ತಲೇ ಕಳೆದುಕೊಳ್ಳುತ್ತ ಬಿಕ್ಕಿಬಿಕ್ಕಿ ಕಿರಣಗಳನ್ನು ಹೆತ್ತು ಒಂದು ನಿರಾಳ ಸೊನ್ನೆಯಾಗಿಮುಳುಗುತ್ತಾನೆಇರುಳಿಡೀ ಕಡಲಿಗೆ ಪ್ರಸವ ಬೇನೆಅದರ ಕೊನೆಯ ಬಿಕ್ಕೊಂದು […]
“ಮಧ್ಯಘಟ್ಟವೆಂಬ ಒಂದು ಮೈಲಿಗಲ್ಲು”
ಪುಸ್ತಕ ಸಂಗಾತಿ “ಮಧ್ಯಘಟ್ಟವೆಂಬ ಒಂದು ಮೈಲಿಗಲ್ಲು” ಊರೂರು ಅಲೆಯುತ್ತಲೆ ಬದುಕು ಕಟ್ಟಿಕೊಳ್ಳುವುದನ್ನು ಕಲಿತ ಮನುಷ್ಯನಿಗೆ ವಲಸೆ ಎನ್ನುವುದು ಅವನ ಬದುಕಿನ ಅವಿಭಾಜ್ಯ ಅಂಗ. ತನ್ನ ಅಸ್ತಿತ್ವದ ಸಲುವಾಗಿ, ಹೊಟ್ಟೆ ಪಾಡಿನ ಸಲುವಾಗಿ ಆತ ಸೂಕ್ತ ಸ್ಥಳವೊಂದರ ಆಯ್ಕೆಗೆ ತೊಡಗುತ್ತಾನೆ. ಇದು ಮನುಷ್ಯ ಸಹಜ ಪ್ರಕ್ರಿಯೆ ಅವನ ಈ ಕ್ರಮದಿಂದಾಗಿಯೇ ರಾಜ್ಯ ಸಾಮ್ರಾಜ್ಯಗಳು ಹುಟ್ಟಿಕೊಳ್ಳುತ್ತವೆ ಅಳಿಸಿಹೋಗುತ್ತವೆ. ಕೆಲವೊಂದು ಚರಿತ್ರೆಯಲ್ಲಿ ದಾಖಲಾಗುತ್ತವೆ ಮತ್ತೆ ಮುಖ್ಯವಲ್ಲದ್ದು ಎಲ್ಲಿಯೋ ಕಣ್ಮರೆಯಾಗಿ ಬಿಡುತ್ತವೆ. ಅಂತಹ ಒಂದು ಕಾಲಘಟ್ಟದ ಎಳೆಯನ್ನು ಹಿಡಿದು ಒಂದು ಶತಮಾನದ ಕತೆಯನ್ನು […]
ಕ್ರಿಸ್ತನಿಗೆ ಒಂದು ಪ್ರಶ್ನೆ
ಕ್ರಿಸ್ತನಿಗೆ ಒಂದು ಪ್ರಶ್ನೆ ಅಕ್ಷತಾ ರಾಜ್ ನೀನಂದು ನೋಡಿದೆಯೆಂದರು….ಯಾವ ಹೊಸರೂಪವಿತ್ತು ಬಾನಿನಲ್ಲಿ?ಹೊಳೆವ ನಕ್ಷತ್ರವೇ! ಅಥವಾ ಕಾರ್ಮುಗಿಲೇ!ಇದ್ಯಾವುದೂ ಅಲ್ಲವೆಂದರೆ ಉಲ್ಕೆ ಪ್ರವಾಹವೇ?ಯಾವುದೂ ಅರ್ಥವಾಗದಿದ್ದಾಗ ನಿನ್ನ ಹುಟ್ಟೆಂದರುಹೌದೇ ! ನಿನ್ನ ಹುಟ್ಟಷ್ಟು ಅಪರೂಪವೇ ಬಿಸಿಲು ಬೆಳ್ದಿಂಗಳಂತೆ? ನೀನಂದು ಅತ್ತೆಯೆಂದರು….ಯಾವ ತಾಪದ ಹನಿ ತೋಯ್ದಿತ್ತು ನೆಲ ?ಚುಚ್ಚಿದ ಮೊಳೆಯದ್ದೇ ! ಅಥವಾ ಹೊತ್ತ ಶಿಲುಬೆಯದ್ದೇ!ಇದಾವುದೂ ಅಲ್ಲವೆಂದರೆ ಮುಳ್ಳುಕೀರೀಟದ ಭಾರವೇ?ಯಾವುದೂ ಅರ್ಥವಾಗದಿದ್ದಾಗ ತನುವಿನ ನೋವೆಂದರುಹೌದೇ ! ನಿನ್ನ ಕಂಬನಿಯಷ್ಟು ದುರ್ಬಲವೇ ಮಂಜಿನಂತೆ ? ನೀನಂದು ನಕ್ಕೆಯೆಂದರುಮತ್ತೆ ಮೂರು ದಿನದೊಳಗೆ ಎದ್ದು ಬಂದಾಗಯಾವ ಸಂತಸಕ್ಕಾಗಿ […]
ಮುಗುಳು
ಮುಗುಳು ವೀಣಾ ರಮೇಶ್ ಇರುಳ ಸೆರಗೊಳಗೆತಿಳಿಮೌನ ಸುರಿದುಬಿಗುಮಾನ ಕಳೆದುಬೆರೆತು ಗಂಧದೊಳಗೆಈ ಮನವದು ಬಿರಿದುನಿನ್ನ ಸನಿಹದಲಿಮೌನವದು ಘಾಸಿ ಬಯಲು ಅಲಯದಲಿಹಕ್ಕಿ ಹಾರುತಿದೆನಿನ್ನನೆನಪುಗಳ ರೆಕ್ಕೆಕಟ್ಟಿ, ಪ್ರತಿದಿನವೂ ಸೋತಿದೆಹಾರಿ ಬರಲೇನು ಈಹೃದಯ ತಟ್ಟಿ ಮುಸುಕು ಬೀರಿದ ಮುಗುಳುಲಜ್ಜೆಯೊಳಗೆ ಅದೇ ನೀನುಸಜೆಯಾಗಿದೆ ಪ್ರೀತಿಯಸರಳೊಳಗೆ ನಾನು ಎಳೆದು ಬಿಡು ಮುಸುಕುಬೀರಿ ಮಲಗಿದ,ಮೌನದ ಪರದೆನಿನಗಲ್ಲವದು ಶೋಭೆನಿನ್ನ ಮುಗುಳುನಗುವದು ಹೊತ್ತು ತರದೆಮೌನ ಕೋಟೆಗೆ ಪ್ರಭೆ **************************
ಹಾಯ್ಕು
ಹಾಯ್ಚಳಿ! ಶಾಲಿನಿ ಆರ್. ೧)ಚಳಿ ಸುಳಿಗೆ ಶಿಲೆಯಾದಳವಳು ಕರಗದಂತೆ ೨)ಬೆಚ್ಚಿಸದಿರು ಬೆಚ್ಚಗಿಡು ನೆನಪಾ ಕೊನೆ ಚಳಿಗೆ ೩)ಮಂಜಿನ ಹನಿ ಕರಗಲರಿಯದು ಬೆಚ್ಚಗಾದರೂ, ೪)ಬಿರಿದ ತುಟಿ ನೆನಪಿಸುತಿದೆಯೋ, ವಸಂತ ಋತು, ೫)ಬಿಸಿ ಬಿಸಿ ಚಾ ಮುಂಜಾನೆಯ ಚಳಿಗೆ ನೀ ನೆನಪಾದೆ, ೬)ಹಗಲು ಮಾಯ ಇರುಳ ಹಾಸಿನ ಮೇಲೆ ಚಳಿ ಗಾಳಿಗೆ ೭)ನಮ್ಮೀ ಪ್ರೀತಿಗೆ ಮರೆಯಾಯಿತೇನು ಹಗಲು ನಾಚಿ, ೮)ತೇವಗೊಂಡಿದೆ ಮತ್ತೆ ಆರುವ ಮುನ್ನ ಹೇಮಂತ ಋತು, ೯)ಮುಗಿಯದಿದು ಮಾಗಿ ಮುಗಿವ ಮುನ್ನ ಮಬ್ಬಿನ್ಹಗಲು ೧೦)ಹಗಲು ನುಂಗಿ ಬಿಗಿಯಾದವು ಇರುಳು […]