ಹಾಯ್ಚಳಿ!
ಶಾಲಿನಿ ಆರ್.
೧)ಚಳಿ ಸುಳಿಗೆ
ಶಿಲೆಯಾದಳವಳು
ಕರಗದಂತೆ
೨)ಬೆಚ್ಚಿಸದಿರು
ಬೆಚ್ಚಗಿಡು ನೆನಪಾ
ಕೊನೆ ಚಳಿಗೆ
೩)ಮಂಜಿನ ಹನಿ
ಕರಗಲರಿಯದು
ಬೆಚ್ಚಗಾದರೂ,
೪)ಬಿರಿದ ತುಟಿ
ನೆನಪಿಸುತಿದೆಯೋ,
ವಸಂತ ಋತು,
೫)ಬಿಸಿ ಬಿಸಿ ಚಾ
ಮುಂಜಾನೆಯ ಚಳಿಗೆ
ನೀ ನೆನಪಾದೆ,
೬)ಹಗಲು ಮಾಯ
ಇರುಳ ಹಾಸಿನ ಮೇಲೆ
ಚಳಿ ಗಾಳಿಗೆ
೭)ನಮ್ಮೀ ಪ್ರೀತಿಗೆ
ಮರೆಯಾಯಿತೇನು
ಹಗಲು ನಾಚಿ,
೮)ತೇವಗೊಂಡಿದೆ
ಮತ್ತೆ ಆರುವ ಮುನ್ನ
ಹೇಮಂತ ಋತು,
೯)ಮುಗಿಯದಿದು
ಮಾಗಿ ಮುಗಿವ ಮುನ್ನ
ಮಬ್ಬಿನ್ಹಗಲು
೧೦)ಹಗಲು ನುಂಗಿ
ಬಿಗಿಯಾದವು ಇರುಳು
ಬಿಗುಮಾನದಿ
******************
Nice