ಮುಗುಳು
ವೀಣಾ ರಮೇಶ್
ಇರುಳ ಸೆರಗೊಳಗೆ
ತಿಳಿಮೌನ ಸುರಿದು
ಬಿಗುಮಾನ ಕಳೆದು
ಬೆರೆತು ಗಂಧದೊಳಗೆ
ಈ ಮನವದು ಬಿರಿದು
ನಿನ್ನ ಸನಿಹದಲಿ
ಮೌನವದು ಘಾಸಿ
ಬಯಲು ಅಲಯದಲಿ
ಹಕ್ಕಿ ಹಾರುತಿದೆ
ನಿನ್ನನೆನಪುಗಳ ರೆಕ್ಕೆಕಟ್ಟಿ, ಪ್ರತಿದಿನವೂ ಸೋತಿದೆ
ಹಾರಿ ಬರಲೇನು ಈ
ಹೃದಯ ತಟ್ಟಿ
ಮುಸುಕು ಬೀರಿದ ಮುಗುಳು
ಲಜ್ಜೆಯೊಳಗೆ ಅದೇ ನೀನು
ಸಜೆಯಾಗಿದೆ ಪ್ರೀತಿಯ
ಸರಳೊಳಗೆ ನಾನು
ಎಳೆದು ಬಿಡು ಮುಸುಕು
ಬೀರಿ ಮಲಗಿದ,
ಮೌನದ ಪರದೆ
ನಿನಗಲ್ಲವದು ಶೋಭೆ
ನಿನ್ನ ಮುಗುಳು
ನಗುವದು ಹೊತ್ತು ತರದೆ
ಮೌನ ಕೋಟೆಗೆ ಪ್ರಭೆ
**************************