ಗಝಲ್
ರತ್ನರಾಯ ಮಲ್ಲ
ಸಿದ್ಧಾಂತಗಳು ಕಚ್ಚಾಡಿದರೆ ಮತ್ತೆಂದಿಗೂ ಹತ್ತಿರವಾಗಲಾರವು
ವಾಸನೆಗಳು ಬಡಿದಾಡಿದರೂ ಯಾವತ್ತೂ ದೂರವಾಗಲಾರವು
ಜಗಳವು ಸಾಗುತ್ತಿದೆ ಅಲ್ಲಿ ಜೋರಾಗಿ ನಿನ್ನ ಮನ ಕಲುಕುವಂತೆ
ನ್ಯಾಯ ಹುಡುಕುವ ಮನಗಳು ನೆಮ್ಮದಿಯಿಂದ ಬಾಳಲಾರವು
ಮೂರನ್ನು ತೊರೆಯುವುದೆ ಇಂದು ಸೌಹಾರ್ದದ ರೂಪ ತಾಳಿದೆ
ಕೈ-ಕಾಲುಗಳು ಹಿಡಿಯದ ಪ್ರತಿಭೆಗಳಿಗೆ ಪ್ರಚಾರ ಮುತ್ತಿಕ್ಕಲಾರವು
ಕಸ ಗುಡಿಸುವ ಹುಚ್ಚು ಭ್ರಮೆಯಲ್ಲಿ ಕಸಬರಿಗೆ ಆಗದಿರು ನೀನು
ಸುಂದರ-ಉತ್ತಮ ಪೊರಕೆಗಳೂ ಸಹ ಪೂಜೆಗೆ ಒಳಗಾಗಲಾರವು
ವೈಯಕ್ತಿಕ ಗಟ್ಟಿ ಹೆಜ್ಜೆಯೂರಬೇಕು ನಿಸ್ವಾರ್ಥದ ನೆಲೆಯಲ್ಲಿ ಇಲ್ಲಿ
ಚೂರಿ ಹಾಕಿದ ಹೃದಯಗಳು ‘ಮಲ್ಲಿ’ ಎದೆಯಲ್ಲಿ ಉಳಿಯಲಾರವು
************************************