ಮೊದಲ ಬಾರಿ ಪೇಯಿಂಗ್ ಗೆಸ್ಟ್ ಆಗಿ ಹೋದಾಗ

ಅನುಭವ

ಮೊದಲಬಾರಿಪೇಯಿಂಗ್ ಗೆಸ್ಟ್ಆಗಿಹೋದಾಗ

     ಬೆಂಗಳೂರಿಗೆ ಹೋಗಿ ಬಂಧುಗಳ ಮನೆಯಲ್ಲಿ  ಬಂಧುಗಳ  ಹಾಗೆ ಒಂದೆರಡು ದಿನ ಇದ್ದು ಬರುವುದು ಬೇರೆ ವಿಚಾರ !ಅದೇ ನಮ್ಮ ಕೆಲಸಕ್ಕೆ ಹೋಗಿ ಇರುವುದು ವೆರಿ ಹಾರಿಬಲ್‌! ಯಾರಿಗೂ ಇರಿಸು ಮುರಿಸು ಬೇಡ ಎಂಬ ಕಾರಣಕ್ಕೆ ಸಾಧನಾಕಾಂಕ್ಷೆಗಳ ಅರ್ಥಾತ್ ಉದ್ಯೋಗಾಕಾಂಕ್ಷೆಗಳು,. ಸ್ಪರ್ಧಾಕಾಂಕ್ಷಿಗಳು ಏನೇ ಕರೆಯಲಿ ಅವರ ಮುಂದಿನ ಆಯ್ಕೆ ಪಿಜಿ.  ಪಿಜಿ ಅಂದರೆ  ‘ಪೇ’ ಮಾಡಿ ‘ಗೆಸ್ಟ್’ ಆಗಿರಿ ಅಂತ ಅಲ್ಲ ಪೇ ಮಾಡಿ  ಪೇನ್ಫುಲ್ ಅಡ್ಜಸ್ಮೆಂಟ್ ಮಾಡಿಕೊಂಡಿರಿ ಎಂದರ್ಥ. ಅತ್ತೆ ಮನೆಯ ಝಲಕ್‌ಗಳನ್ನು ಅಂದರೆ ಅತ್ತೆ ಮನೆಯಲ್ಲಿ ಎದುರಾಗಬಹುದಾದ ಸಮಸ್ಯೆಗಳನ್ನು ರಿಯಲ್ ಡೆಮೊ ಕ್ಲಾಸ್‌ಮಾಡಿ ತೋರಿಸಿ ಬಿಡುತ್ತಾರೆ  ಕೆಲವೊಮ್ಮೆ ಪಿಜಿ ಸುಂದರಿಯರು ಎದ್ದರೆ ಕಾಲು ಹಿಡಿಯುತ್ತಾರೆ ಬಗ್ಗಿದರೆ ಜುಟ್ಟು ಹಿಡಿಯುತ್ತಾರೆ ಅಂತರಲ್ಲ ಹಾಗೆ ಮುಖ ನೋಡಿ ವ್ಯವಹರಿಸುತ್ತಾರೆ. ನಮಗೆ ಪ್ರತಿಸ್ಪರ್ಧೆ ಒಡ್ಡುತ್ತಾರೆ ಎಂದು ಗೊತ್ತಾಗಿಬಿಟ್ಟರೆ ಚಿತ್ರ-ವಿಚಿತ್ರವಾಗಿ ವರ್ತಿಸುತ್ತಾರೆ. ಆದರೆ ನನಗೆ ಸಿಕ್ಕಿದ ರೂಮ್ಮೇಟ್ ಸ್ಮಿತಳ ಹಾಗೆ ಸದ್ಭಾವದವರೂ ಖಂಡಿತಾ ಇರುತ್ತಾರೆ ಹೇಗಾದರೂ ಮಾಡಿ ಕೆ.ಎ.ಎಸ್. ಪಾಸು ಮಾಡಿಯೇ ತೀರುತ್ತೇನೆ ಅಂತಿದ್ದ ನಂಗೆ ಪಿಜಿ ಗೆ ಹೋಗಲು ಮನಸ್ಸಾಯಿತು. ಲಗೇಜ್ ಸಮೇತ ಹೊರಟೇಬಿಟ್ಟೆ.  ಜಸ್ಟ್ ಡಯಲ್‌ ಮೂಲಕ ಪಿಜಿ ಅಡ್ರೆಸ್ ಹುಡುಕಿದ್ದ ನನಗೆ ವಿಳಾಸ ಸಿಕ್ಕಿತು.  ಅದು ನನ್ನ ಪಾಲಿಗೆ “ಅಡ್ಜಸ್ಟ್ ಡಯಲ್”  ಪಿಜಿಯ ಹೆಸರು ‘ವಸಂತವಿಹಾರ’. ಅಲ್ಲಿಯ ವಾಚ್‌ಮ್ಯಾನ್ ನನ್ನನ್ನು ನೋಡುತ್ತಲೇ ಒಳಕರೆದ ನನ್ನ ತಮ್ಮ ಪೂರ್ವಾಪರ ವಿಚಾರಿಸತೊಡಗಿದ. ನಮ್ಮ ಲಗೇಜ್ ನೋಡುತ್ತಲೇ ಶಾಕ್‌ಗೆ ಒಳಗಾಗಿದ್ದ ಅವನು ನನ್ನ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಡಲಾರದೆ ಬಾಯಿ ಮುಚ್ಚಿಸಬೇಕೆಂದು “ನಿಮ್ಮನೆ ಅಂತ ತಿಳಿದುಕೊಳ್ಳಬೇಡಿ ಇದು ಬೆಂಗಳೂರು ಅದೂ  ಪಿಜಿ…” ಅಂದುಬಿಟ್ಟ. “ಪ್ರಥಮ ಚುಂಬನA ದಂತಭಗ್ನA” ಆಯಿತು ಎಂಬ ಭಾವನೆ ನನ್ನನ್ನಾವರಿಸಿತು.

     ಪಿಜಿಯ ಮ್ಯಾನೇಜರ್ ನೀಲಾದೇವಿ ಬಂದು  “ಮ್ಯಾಡಮ್” ಎಂದು ಪರಿಚಯ ಮಾಡಿಕೊಂಡು ಅಡ್ವಾನ್ಸ್ ತೆಗೆದುಕೊಂಡರು  ಅಡ್ರೆಸ್ ಫೋಟೊ ಎಲ್ಲಾ ತೆಗೆದುಕೊಂಡು “ನಮ್ಮ ಪಿಜಿ ಅಂದರೆ ಬಹಳ ಫೇಮಸ್ ಇಲ್ಲಿ ಬಂದವರಿಗೆ ಯಾರಿಗೂ ಮೋಸವಾಗಿಲ್ಲ sಸಕ್ಸಸ್ss ಅಗಿಯೇ ಇಲ್ಲಿಂದ ಕಾಲ್ತೆಗೆಯುವುದು. ನಿಮಗೂ ಶುಭಕಾಲ ಬಂದಿದೆ ಅದಕ್ಕೆ ಇಲ್ಲಿಗೆ ಬಂದಿರುವುದು” ಎಂದು ಕೊಚ್ಚಿಕೊಂಡಿದ್ದೇ ಕೊಚ್ಚಿಕೊಂಡಿದ್ದು. ನಂತರ “ನೀವು ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಬೇಕು ಯುಗಾದಿ ಹಬ್ಬಕ್ಕೆ ವೆಕೇಟ್ ಮಾಡ್ತೀವಿ ಅಂದವರು ಇನ್ನೂ ಬಂದಿಲ್ಲ ಇನ್ನೆರಡು ದಿನದಲ್ಲಿ ಅವರು ಬರುತ್ತಾರೆ. ಅಲ್ಲಿವರೆಗೆ ಹಬ್ಬಕ್ಕೆ ಊರಿಗೆ ಹೋಗಿರುವವರ ಬೆಡ್‌ಖಾಲಿ ಇದೆ ಅದನ್ನು ಉಪಯೋಗಸಿಕೊಳ್ಳಿ” ಎಂದರು ಸರಿ! ಎಂದು ನಾನು ತಲೆಯಾಡಿಸಿದೆ ಅಲ್ಲಿಗೆ ಎರಡನೆ ದಂತಭಗ್ನವಾದAತಾಯಿತು.

  ಎರಡು ದಿನ ಹೇಗೋ ಕಳೆಯಿತು ಹಬ್ಬಕ್ಕೆ ಹೋದವಳು ಮರಳಿ ಬಂದು ನನ್ನನ್ನು ನೋಡಿದ ಕೂಡಲೆ ನೀಲಾದೇವಿಯನ್ನು ಕರೆದು “ನೋಡಿ ನಮ್ಮ ರೂಂನಲ್ಲಿ ಇರೋರು ಮೂವರು ಮೂವರನ್ನು ಬಿಟ್ಟರೆ  ವಾಶ್ ರೂಮನ್ನು ಬೇರೆಯವರು ಉಪಯೋಗಿಸುವಂತಿಲ್ಲ”. ಎಂದು ಸುಟ್ಟುರಿಯುವಂತೆ ನುಡಿದಳು. ಬೇಜಾರಿನ ಮೇಲೆ ಬೇಜಾರು ಪ್ರಾರಂಭವಾಯಿತು. ಅಷ್ಟರಲ್ಲಾಗಲೇ ಅವರಿಗೆ ಜಾಗ! ಜಾಗ! ಎಂದು ಸುದ್ದಿ ಇಡೀ ಪಿ.ಜಿಯ ತುಂಬೆಲ್ಲಾ ಹರಡಿತು. ಬೃಹತ್ ಸುದ್ದಿಯೇ ಆಯಿತು ಅನ್ನಿ. ಇವತ್ತೊಂದು ದಿನ ಬಂಧುಗಳ ಮನೆಗೆ ತೆರಳಿ ಊರಿಗೆ ಹೊರಡುವ ನಿರ್ಧಾರದಿಂದ ಲಗೇಜ್ ಬ್ಯಾಗ್ ಎತ್ತಿಕೊಂಡಾಗಲೇ ಸ್ಮಿತ ನನಗೆ ಪರಿಚಯವಾದಳು. ಹುಡುಗಿ ಮಂದಸ್ಮಿತಳಾಗಿಯೇ ಬಂದು “ಎಲ್ಲಿ ಮಲಗುವಿರಿ?” ಎಂದಳು “ಗೊತ್ತಿಲ್ಲ? ಊರಿಗೋ ಕಸಿನ್ ಮನೆಗೋ ಹೋಗುವೆ” ಎಂದೆ “ನೀವು ಬಂದಿರುವುದು ಸಾಧನೆಯ ಉದ್ದೇಶದಿಂದ ಊರಿಗೆ ಹೊರಡುವುದು ಏನು ಮಾತು ಬನ್ನಿ ನನ್ನ ರೂಮಿಗೆ ಅರೆ ಏನು ನೋಡೋದು ಬನ್ನಿ…. ಬನ್ನಿ ಅಂದರೆ ಬರಬೇಕಪ್ಪ” ಎಂದು ನನ್ನನ್ನು ಅವಳ ರೂಮಿಗೆ ಕರೆದೊಯ್ದಳು.

     “ನಿಮ್ಮನ್ನು ನೋಡಿದರೆ ನನಗೆ ಏನು ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ ನಮ್ಮ ರೂಮು ಖಾಲಿಯಿಲ್ಲ ಅದರೆ ನನ್ನ ಗೆಳತಿ ಬೇಸಿಗೆ ರಜೆಗೆ ಊರಿಗೆ ಹೋಗಿದ್ದಾಳೆ ಅವಳ ಬೆಡ್ ನೀವು ಉಪಯೋಗಿಸಬಹುದು” ಎಂದಳು. ನನಗೆ ಏನು ಹೇಳಬೇಕೆಂದು ತಿಳಿಯಲಿಲ್ಲ.  ಒಡಹುಟ್ಟಿದವರಿಗಿಂತ ಹೆಚ್ಚಾಗಿ ಪ್ರೀತಿ ತೋರಿಸಿದಳು.

     ಎಷ್ಟು ಆತ್ಮೀಯತೆ ಎಂದರೆ ಇವತ್ತಿಗೂ ನೆನೆಸಿಕೊಂಡರೆ ಕಣ್ಣಾಲಿಗಳು ತೇವಗಟ್ಟುತ್ತವೆ. ಪರಿಚಯ ಗಾಢವಾದಂತೆ ಒಂದೇ ಊರಿನವರು ಎಂದು ಗೊತ್ತಾಯಿತು. ಕಣ್ಣರಿಯದಿದ್ದರೂ ನಮ್ಮ ಕೊರಳ ಧ್ವನಿ ಒಂದೇ ಆದ್ದರಿಂದ ಕರುಳ ಬಳ್ಳಿಯ ಸಂಬAಧಕ್ಕಿAತ ನಮ್ಮ ಭಾಂದವ್ಯ ಹೆಚ್ಚಾಗಿಬಿಟ್ಟಿತು. ಒಂದೇ ಮಾತು ಹೇಳಿದಳು “ನೀವು ಬಂದಿರುವುದು ಉದ್ದೇಶವಿಟ್ಟುಕೊಂಡು ಉದ್ದೇಶ ಈಡೇರಿಸಿಕೊಳ್ಳಿ ಅಷ್ಟೆ” ಎಂದಳು. ಮರುದಿನ ಎದ್ದು ಸ್ನಾನ ಮುಗಿಸಿ ಕ್ಲಾಸ್‌ಗೆ ಹೊರಟೆ. ನನ್ನ ಊರಿನಿಂದ ನನ್ನೊಟ್ಟಿಗೆ ಬಂದಿದ್ದ ನನ್ನ ಜೊತೆಗಾತಿಗೆ ಆಗಲೆ ಮುಖ ಗಡಿಗೆಯಾಯಿತು! ಇಲ್ಲಿ ಬಂದರೂ ಅವರಿಗೆ ಆತ್ಮೀಯರು ಸಿಕ್ಕಿಬಿಟ್ಟರಲ್ಲ ಎಂಬ ಧಗೆ ಇತ್ತು. ಪಾಪ ಸ್ಮಿತ  ಪಿಜಿಗೆ ಬರುವಷ್ಟರಲ್ಲಿ ತಿಂಡಿ ಖಾಲಿಯಾಗಿರುತ್ತದೆಂದು ಬಾಕ್ಸ್ಗೆ ತಿಂಡಿ ತುಂಬಿಸಿಕೊAಡು ನಮ್ಮ ತರಗತಿಗೇ ತಂದುಕೊಟ್ಟಳು. ರುಚಿರುಚಿಯಾಗಿ ಮಾಡಿಕೊಂಡು ತಿಂದಿದ್ದ ನಾಲಿಗೆಗೆ ಸ್ವಲ್ಪ ಕಷ್ಟದ ದಿನಗಳೆನೇ. ಮುರಿದ ಇಡ್ಲಿ, ಸುಕ್ಕುಗಟ್ಟಿದ ದೋಸೆ, ಬಣ್ಣಕಳೆದುಕೊಂಡ ಚಿತ್ರನ್ನ, ಸೊರಗಿದ ಉಪ್ಪಿಟ್ಟು, ಬಾಡಿದ ಪಲವ್ ಇವೆ! ಹಿಡಿಸಲಿಲ್ಲ.

     ನಾನು ಡಯಟ್ ಮಾಡುತ್ತಿದ್ದೇನೆ ಎಂದು ನೆಪಹೇಳಿ  ಫ್ರಷ್ ಫ್ರೂಟ್ ಜೂಸ್ ತಂದು ಕುಡಿದು ರೂಮಿನಲ್ಲಿಯೇ ಓದುತ್ತಾ ಕುಳಿತೆ.  ಅದೇ ಟೈಮ್ ಟೇಬಲ್ .  ಸಂಜೆಯ  ತರಗತಿ ಮತ್ತೆ ರಿಂದ ಗಂಟೆಗೆ, ಸರಿಯಾಗಿ ೧೨.೦೦ ೧೨.೦೫ಕ್ಕೆ ಕುಕ್ಕರ್‌ಯುವತಿ ವಿಷಲ್ ಹಾಕಿ ಹಾಕಿ ಅಡುಗೆ ಆಗುತ್ತಿದೆ ಎಂದು ಸಾರಿಸಾರಿ ಹೇಳುತ್ತಿದ್ದಳು. ಒಗ್ಗರಣೆಯ ಸದ್ದು ಅಷ್ಟೇನು ಆರ್ಭಟಿಸಲಿಲ್ಲ ! ಆಘ್ರಾಣಿಸುವಂತಿರಲಿಲ್ಲ!. ನಮಗೆ ಒಂದು ಗಂಟೆಗೆ ಊಟಕ್ಕೆ ಬನ್ನಿ ಎಂಬ ಕರೆ ಬಂತು. ಬೇರೆ ಬೇರೆ ರೂಮಿನವರೆಲ್ಲ ಊಟದ ಬಾಕ್ಸ್ಗಳನ್ನು ಲೋಟಗಳನ್ನು ಸದ್ದುಮಾಡಿಕೊಂಡು ಹೊರ ಮೆಟ್ಟಿಲಿಳಿಯುತ್ತ ಬಂದರು. ನನಗೆ ಮಜುಗರವಾಯಿತು ಅವರೆಲ್ಲ ಊಟ ತೆಗೆದುಕೊಂಡು ಹೋಗಲಿ ಎಂದು ನಿಧಾನವಾಗಿ ಹೊದೆ. ಸಾಂಬರ್ ಏನೋ ಇದೆ ಸರಿ! ಆದರೆ ಯಾವ ಎಂದು ಕೇಳುವ ಪರಿಸ್ಥಿತಿ ಬಂದೇ ಬಿಟ್ಟಿತು.   ಮೊದಲಿಗೆ ಬಂದವರ ಪಾತ್ರೆಗೆ ಇದ್ದ ಸ್ವಲ್ಪ ತರಕಾರಿಗಳು ಸೇರಿದ್ದವು.

     ಸಂಜೆ  ಟೀ ಟೈಮ್ ಅಗುತ್ತಲೇ ಬೆಕ್ಕು ಕೆಡಿಸಿದ ದುರ್ನಾತ ಎಲ್ಲಾ ಕಡೆ ಹಬ್ಬಿತು ಪಿಜಿ  ಲಲನೆಯರು ಮೂಗು ಹಿಡಿದುಕೊಂಡೇ ಬೆಕ್ಕು ಕೆಡಿಸಿದ ಜಾಗ ಹುಡುಕಹೊರಟರೆ ಗಬ್ಬುನಾತ ಬರುತ್ತಿರುವುದು ಟೀ…  ಪಾತ್ರೆಯಿಂದ ಎಂದು ತಿಳಿದುಕೊಳ್ಳುವುದಕ್ಕೆ ಹೆಚ್ಚು ಸಮಯ ಹಿಡಿಯಲಿಲ್ಲ. ಕಾಫಿ ಅಭ್ಯಾಸವಿದ್ದ ನಮಗೆ ಟೀ   ಉಸಾಬರಿ ಬೇಡವೆಂದೇ ಕಾಫಿಗೆ ಅನ್ಯ ಮಾರ್ಗ ಕಂಡುಕೊAಡೆ. ತಿಂಗಳಿಗೆ ರೂ.೫೦ ಕೊಟ್ಟರೆ ಎರಡು ಗ್ಲಾಸ್ ಬಿಸಿನೀರು ಸಿಗುತ್ತಿತ್ತು ಸಂಜೆಗೆ ಸರಿ ಅಂತ ಬಿಸಿನೀರು ತಂದು ಇನ್ಸಟಂಟ್ ಕಾಫಿ ಪೌಡರ್, sಸಕ್ಕರೆ  ಮಿಲ್ಕ್ ಪೌಡರ್ ಹಾಕಿ ಕಾಫಿ Éಅರೇಂಜ್   ಮಾಡಿಕೊಂಡರೆ ನನ್ನ ಊರಿನ ಜೊತೆಗಾತಿ “ಇದು ಕಾಫಿ ತರಾನೇ ಇಲ್ಲ” ಎಂದಳು ಇನ್ನೇನು ಅವಳ ತಲೆಗೆ ಮೊಟಕುವುದೊಂದು ಬಾಕಿ ಸುಮ್ಮನಾದೆ. ಹೀಗೆ ದಿನಗಳು ಉರುಳಿದವು. ಸಂಜೆ ಹೊರಗೆಲ್ಲು ಹೋಗಲಾಗುವುದಿಲ್ಲವಲ್ಲ ಪೇರ‍್ನಂಥ  ನಂತಹ ಚಪಾತಿಗೆ  ಟಿ ಸ್ಪೂನ್ನಂಥ sಸ್ಪೂನಲ್ಲಿ  ಪಲ್ಯ ಹೆಸರುಗೊತ್ತಿಲ್ಲದ ಸಾಂಬರ್ ಸೋಡದಿಂದ ಉಬ್ಬಿದ ಅನ್ನ ನೀರ್‌ರ್ ……… ಮಜ್ಜಿಗೆ ಅನಿವಾರ್ಯವಾಗಿ ನನ್ನ ಊಟದ ಪರಿ ಅಡ್ಜಸ್ಟ್  ಆಯ್ತು.

     ಒದಲು ಕುಳಿತರೆ ೯.೩೦ ರಿಂದ ೯.೪೦ರ ಒಳಗೆ ಒಳ್ಳೆಯ  ಸ್ಟಾçಂಗ್ ಕಾಫಿಯ ಮಸಾಲೆ ರೊಟ್ಟಿ ಬೇಯುತ್ತಿರುವ ಘಮಲು ಹಾಗೆ ನಾವಿದ್ದ ಎರಡನೆ ಮಹಡಿಗೆ ತೇಲಿ ತೇಲಿ ಬರುತ್ತಲಿತ್ತು. ಅಂದರೆ ನಮ್ಮ ಅಡುಗೆಯಾಕೆ ದ್ರೌಪದಿಯಮ್ಮನ ಸ್ಪೆಷಲ್ ಅಡುಗೆ ಅವರಿಗೆ ಮಾತ್ರ. ತೋಳಿಲ್ಲದ ಬಟ್ಟೆಯ ಲಲನೆಯರು ಬಂದರೆ ಕೆಂಗಣ್ಣಾಗುತ್ತಿದ್ದರು. ವಾಪಸಕಳಿಸಿ “ಮೈತುಂಬ ಬಟ್ಟೆ ಹಾಕೊಂಡು ಬಿಟ್ಟಿದ ಮುಡಿಯನ್ನು ಕಟ್ಟಿಕೊಂಡು ಬಾ!” ಎಂದು ಗದರುತ್ತಿದ್ದರು.

ಸ್ಮಿತಾಳ ಚಿಕ್ಕಪ್ಪನ ಮನೆ ಜಯನಗರದ ಕಡೆಯಿತ್ತು. ಆಕೆ ವಾರಾಂತ್ಯದ ಎರಡು ದಿನಗಳು ಅಲ್ಲಿ ಹೋಗಿ ಗೆಳತಿಯರ ಜೊತೆ ಸೇರಿಸಿ ನನಗೂ ಬೇಕಾದ ಅಡುಗೆಯನ್ನು ದೊಡ್ಡ ದೊಡ್ಡ ಬಾಕ್ಸ್ಗಳಲ್ಲಿ ತುಂಬಿ ತರುತ್ತಿದ್ದಳು. ಸದ್ಯ ಒಳ್ಳೆಯ ಮನೆ ರುಚಿ ತೋರಿಸಿ ಆಕೆಗೆ ಇಂದಿಗೂ ಮನಸ್ಸಿನಲ್ಲಿ ನೆನಪಾದಾಗಲೆಲ್ಲ ಥ್ಯಾಂಕ್ಸ್s ಹೇಳಿಕೊಳ್ಳುತ್ತೇನೆ. ಊಟವಾದ ನಂತರ ಬಿಡುವು ಮಾಡಿಕೊಂಡು ನಾನು ಕುಮಾರ ವ್ಯಾಸ ಭಾರತ ಸನ್ನಿವೇಶಗಳನ್ನು, ಕುವೆಂಪುರವರ ಬಗೆಗಿನ ವಿಚಾರ ಹೇಳುತ್ತಿದ್ದೆ ಅವಳು ಅವಳ ಗೆಳತಿ ರಮ್ಯ ಬಹಳ ಆಸಕ್ತಿಯಿಂದ ಕೇಳಿ ಮಲಗುತ್ತಿದ್ದರು.

     ಸ್ಮಿತ ಉದ್ಯೋಗ ಮಾಡುತ್ತಿದ್ದ ಯುವತಿ ನಾನು ಸಂಜೆಯ ತರಗತಿಗೆ ಹೋಗುವಾಗ ಹಾಲ್‌ನಲ್ಲಿ  ಕೀಇಡುವ ಬದಲು ಮರೆತು ತೆಗೆದುಕೊಂಡು ಹೋಗಿದ್ದೆ  ಫೋನ್ ಮಾಡಿ ಸುಟ್ಟವರಿಯುವಂತೆ ಮಾತನಾಡಿದಳು ದಢದಢನೆ ಅವಳೆಡೆಗೆ ಧಾವಿಸಿ ಬರುತ್ತಿದ್ದ ನನ್ನನ್ನು ಕಂಡಾಕೆ ಕೂಲ್ ಆದಳು ಮರುಮಾತನಾಡಲಿಲ್ಲ. ಇಂದಿಗೂ ಅವಳ ನೆನಪು ನನ್ನಲ್ಲಿ ಹಸಿರಾಗಿದೆ. ಬಿಸಿ ನೀರು ಎಲ್ಲಿ ಖಾಲಿಯಾಗಿಬಿಡುವುದೋ ಎಂದು ಸ್ನಾನಮಾಡಿಕೊಂಡು ಮಲಗುವವರು ಅಲ್ಲಿದ್ದರು. ಸ್ವಲ್ಪವೂ ಮುಜುಗರವಿಲ್ಲದೆ ಉಪಯೋಗಿಸಿದ ಪ್ಯಾಡನ್ನು ಬೇಕಾಬಿಟ್ಟಿ ಎಸೆದು ಬೇರೆಯವರಿಗೆ ಮಜುಗರ ತರಿಸುವವರು ಅಲ್ಲಿದ್ದರು. ಎದ್ದು ಶನಿಕಸ ಗುಡಿಸಿಕೊಳ್ಳದೆ ಕಸ ಗುಡಿಸುವವರು ಬರುವವರೆಗೂ ಕಾಯುವ ಸೋಮಾರಿಗಳು ಅಲ್ಲಿದ್ದರು. ಅಂತವರಿಗೆಲ್ಲ ಸ್ಮಿತ ಅಂದರೆ ಭಯ. ಒಂತರಾ  ಲೇಡಿ ರ್ಯಾಂಬೋ ಆಕೆ ಬರುತ್ತಿದ್ದಳೆಂದು ಗೊತ್ತಾದರೆ ಎಲ್ಲರು ಅಲರ್ಟ್ ಆಗಿ ಬಿಡುತ್ತಿದ್ದರು. ನನಗೋಸ್ಕರ ಅವರಿವರ ಬಳಿ ಕೇ ಕೇಳಿ  ನೋಟ್ಸ್s ತಂದುಕೊಡುತ್ತಿದ್ದಳು. ಇಷ್ಟರಲ್ಲಿ ಸ್ಮಿತಳ  ರೂಮ್ ಮೇಟ್ ವಾಪಾಸ್ಸು  ಪಿಜಿಗೆ ಬರುವುದು ಖಾತ್ರಿಯಾಯಿತು. ಬೇರೆ ರೂಂಗಳು ಖಾಲಿಯಿದ್ದರೂ ಅಲ್ಲಿಗೆ ಹೋಗಲು ನನಗೆ ಮನಸ್ಸಾಗಲಿಲ್ಲ. ಸ್ಮಿತ ಆಫೀಸಿನಿಂದ ಬರುವುದನ್ನೆ ಕಾಯ್ದು ನಾನು ಊರಿಗೆ ಹೊರಡುತ್ತೇನೆ! ನಿನಗೆ ಶುಭವಾಲಿ! ಎಂದೆ. ಮನಸ್ಸಿನಲ್ಲಿ ಅಲ್ಲಿ ಇರುವುದಕ್ಕೆ ಅಸೆ ಅದರೆ ಪರಿಸ್ಥಿತಿ ಬೇಡ ಅನ್ನಿಸುತ್ತಿತ್ತು. ಅಲ್ಲಿಗೆ ಅಕ್ಷಯ ತದಿಗೆ ಸ್ಮಿತಳ ಗೆಳತಿ ರಶ್ಮಿ ಅವರಿಬ್ಬರು ವಿಜಯನಗರ  ಮಾರ್ಕೆಟ್ಗೆ ಹೋಗಿ ಅಗತಾನೆ ಸಂಪಿಗೆ, ಕನಕಾಂಬರ, ಮರುಗ ಹಾಕಿ ಕಟ್ಟಿದ ಮೈಸೂರು  ಮಲ್ಲಿಗೆಹೂವನ್ನು , ಬಳೆ ಅರಿಸಿನ ಕುಂಕುಮ ಸ್ವೀಟ್ ಎಲ್ಲ ತಂದರು. ನನ್ನನ್ನು ಕೂರಿಸಿ ನನ್ನ ಮಡಿಲು ತುಂಬಿದರು ಎಲ್ಲರ ಕಣ್ಣಂಚಲ್ಲಿ ನೀರು!  ನನ್ನ ವೇಲನ್ನೆ ಹರಹಿ ಮಡಿಲು ತುಂಬಿಸಿಕೊಂಡೆ.ಈಗಿನ ಹಾಗೆ ಸ್ಮಾರ್ಟ್   ಫೋನ್ ಹಾವಳಿ ಅಗಿರಲಿಲ್ಲ ಇದ್ದರೆ  ಫೋಟೊಗಳಲ್ಲಿ ಒಂದಷ್ಟು ನೆನಪು ಹಸಿಯಾಗಿ ಇರುತ್ತಿದ್ದವೇನೋ.? ಗೊತ್ತಿಲ್ಲ!! “ಥ್ಯಾಂಕ್ಸ್ ಫಾರ್ ಟೀಚಿಂಗ್ ಪಲ್ಸಸ್ ಆಫ್ ಲೈಫ್ ಬಿಟ್ಸ್ ಆಫ್ ಲೈಫ್”s  ಅಂತ ಅಂದುಕೊAಡೇ ನನ್ನೆಲ್ಲಾ ಲಗೇಜ್ ಪ್ಯಾಕ್ ಮಾಡಿಕೊಂಡೆ. ಆದರೆ ಹೊಸಬರನ್ನು ಕಳ್ಳಗಣ್ಣುಗಳಿಂದಲೆ ನೋಡುವ ಅನುಮಾನದ ಕಣ್ಣುಗಳಿಗೆ ಈಗಲೂ ಧಿಕ್ಕಾರವಿದೆ.

     ಮರು ದಿನ ಸ್ಮಿತ ಕಛೆರಿಗೆ ರಜೆ ಹಾಕಿ ಅಚೇ ಕರೆದುಕೊಂಡು ಎಂದು ಲಗೇಜ್ ಇಟ್ಟುಕೊಟ್ಟು ಶುಭಾಶಯಗಳನ್ನು ಗದ್ಗದಿತಳಾಗಿಯೇ ಹೇಳಿದಳು ಬಾಯ್! ಬಾಯ್! ಅನ್ನುವ ಆಕೆಯ ಕೈಸನ್ನೆ ಇನ್ನೊಮ್ಮೆ “ಈ ಪಿ.ಜಿ. ಗೆ ಕಾಲಿಡಬೇಡಿ ನಿಮ್ಮಂತಹವರಿಗೆಲ್ಲ ಪಿ.ಜಿ. ಜೀವನ!” ಎಂದು ವಿನಂತಿಸಿಕೊಳ್ಳುವAತಿತ್ತು. ವಿನಂತಿಗೊಳ್ಳುತ್ತಲೇ ಆಕೆ ಮರೆಯಾದಳು.. ಬಿಳಿಬಣ್ಣದ ಚೂಡಿದಾರ್ಗೆ ಧರಿಸಿದ್ದ ಅವಳ ತಿಳಿನೀಲಿ ಬಣ್ಣದ ವೇಲ್ ತಿಳಿಗಾಳಿಗೆ  ಹಾರಾಡುತ್ತಿರುವಂತೆಯೇ  ನಾನಿದ್ದ ಅಟೋ ಮುಂದೆ  ಸಾಗಿತ್ತು. ಅವಳ ನಂಬರ್  ಬಹಳ ದಿನಗಳವರೆಗೆ ಇತ್ತು! ಆದರೆ ಈಗಿಲ್ಲ !ಕಡೆ ಪಕ್ಷ ಆಕೆಯ ನಂಬರನ್ನಾದರೂ ಉಳಿಸಿಕೊಂಡಿಲ್ಲವಲ್ಲ ಎಂಬ ಕೊರಗು ಇವತ್ತಿಗೂ ಇದೆ. ಆದರೆ ಆಕೆ ಸಾಯಿಮಂದಿರದಿAದ ತಂದು ಕೊಟ್ಟ ಸಾಯಿ ಫೋಟೋ ನನ್ನ ಬಳಿ ಈಗಲು ಭದ್ರವಾಗಿದೆ ಅವಳ ನೆನಪಿನಂತೆ.  “ಸ್ಮಿತ ನೀವು ಒಂದಲ್ಲ ಒಂದು ದಿನ ನಿಮ್ಮ ಮಂದಸ್ಮಿತದೊAದಿಗೆ ಸಿಗುವಿರಿ” ಎಂದು ಮಂದಸ್ಮಿತದಿAದಲೆ ಇಲ್ಲಿಗೆ ವಿರಾಮ ಇಡುತ್ತೇನೆ. 

******************************************

Leave a Reply

Back To Top