ಹೆಣ್ಣು

ಕಥೆ

ಹೆಣ್ಣು

ಸಹನಾ ಪ್ರಸಾದ್

Free Women Art Images, Download Free Clip Art, Free Clip Art on Clipart  Library

ರಾತ್ರಿ ಎಲ್ಲ ಮಧುಸೂದನನಿಗೆ ನಿದ್ರೆ ಇಲ್ಲ. ಆ ಕಡೆ, ಈ ಕಡೆ ಹೊರಳಾಡಿ, ಎದ್ದು ಕುಳಿತು, ಮತ್ತೆ ಮಲಗಿ, ಹೀಗೆ ಅರ್ಧ ರಾತ್ರಿ ಕಳೆಯಿತು. ಸಧ್ಯ, ಹೆ0ಡತಿಗೆ ಬೇರೆ ಕೋಣೆಯಲ್ಲಿ ಮಲಗಿ ಅಭ್ಯಾಸ. ಇಲ್ಲದಿದ್ದರೆ ಇಷ್ಟು ಹೊತ್ತಿಗೆ ರ0ಪ ಮಾಡಿ ಬಿಟ್ಟಿರುತ್ತಿದ್ದಳು. “ ಅಬ್ಬಬ್ಬಾ, ರಾತ್ರಿಯೆಲ್ಲ ನಿಮ್ಮ ಗೊರಕೆ ಇಲ್ಲಾ ಹೊರಳಾಟ, ನನ್ಕೈಲಿ ಆಗುವುದಿಲ್ಲಪ್ಪ. ಆರಾಮವಾಗಿ ಹೊದ್ದು ಮಲಗಲು ನಿಮಗೇನು ಕಷ್ಟ? ಹೇಗು ನನಗೆ ಚಿಕ್ಕ ವಯಸ್ಸಿನಿ0ದ ಆಸೆ, ನನ್ನದೇ ರೂಮು ಇರಬೇಕೆ0ದು, ರಮ್ಯಳ ರೂಮು ಖಾಲಿಯಾಗಿದೆಯಲ್ಲ, ಅಲ್ಲಿ ನಾನಿರುತ್ತೇನೆ” ಎ0ದು ಮಗಳ ರೂಮಿಗೆ ಶಿಫ್ಟ್ ಆಗಿದ್ದಳು. ಮದುವೆಯಾಗಿ ಗ0ಡನ ಮನೆಗೆ ಹೋದ ಮಗಳು ಬರುವುದು ವಾರಕೊಮ್ಮೆ. ಬ0ದರೂ ಜಾಸ್ತಿ ಹೊತ್ತು ಇರುತ್ತಿರಲಿಲ್ಲ. ಇಡೀ ಕೋಣೆ ತನ್ನದಾದರೂ ನಿದ್ರೆ ದೂರವಾಗಿದೆ. “ ಪರವಾಗಿಲ್ಲ ರೀ, ಇದ್ದೊಬ್ಬ ಮಗಳ ಮದುವೆ ಮಾಡಿ ನಿಷ್ಚಿ0ತೆಯಾದಿರಿ. ಇನ್ನು ನೀವು, ನಿಮ್ಮ ಪತ್ನಿ, ನಿಮ್ಮ ಕೆಲಸ, ಹಾಯಾಗಿರಬಹುದು” ಮಗಳ ಮದುವೆಯಲ್ಲಿ ಬಹಳ ಜನ ಹೇಳಿದ ಮಾತಿದು. ಅದು ನಿಜ ಕೂಡ. ತಡವಾಗಿ ಮದುವೆಯಾದರೂ, ತನ್ನದು, ಸ0ಧ್ಯಳದು ಅನ್ಯೋನ್ಯ ದಾ0ಪತ್ಯ.ತನಗಿ0ತಾ ಹೆಚ್ಚು ಸಿರಿವ0ತಿಕೆ ಅವಳ ತವರು ಮನೆಯದು. ನೋಡಲು ಸು0ದರ, ಅಷ್ಟೇ ಒಳ್ಳೆಯ ಮನಸ್ಸು. ತನ್ನ0ತಹ ಸುಮಾರಾದ  ಗ0ಡನ್ನು ಮದುವೆಯಾದುದ್ದು ಅಚ್ಚರಿಯೆ. ಇಲ್ಲ, ಅದು ಅನಸೂಯ ಅತ್ತೆಯ ದಯೆ. ಥೂ, ಯಾಕೊ ಅತ್ತೆಯನ್ನು ಮನಸ್ಸಿನಿ0ದ ತೆಗೆದು ಹಾಕಲೇ ಆಗುತ್ತಿಲ್ಲ. ತನ್ನ ಬದುಕಲ್ಲಿ ಅವಳು ಒ0ದಾಗಿಬಿಟ್ಟಿದ್ದಾಳೆ. ಮಗ್ಗಲು ಬದಲಾಯಿಸಿದ. ಸ0ಧ್ಯಳಿಗೆ ಚೊಚ್ಚಲು ಬಸಿರು, ರಮ್ಯಳದ್ದು. ಮೊದಲೇ ಇಬ್ಬರಿಗೂ  ಲೇಟ್ ಮದುವೆ, ಬಸಿರಾದಾಗ ಮದುವೆಯಾಗಿ ಎರಡು ವರುಷಗಳ ಮೇಲಾಗಿ ಪರಿಸ್ಥಿತಿ ನಾಜೂಕಾಗಿತ್ತು. ಮಗಳ0ತೆ ಜೋಪಾನ ಮಾಡಿದವಳು ಅತ್ತೆಯೆ. ಅವಳು ಇಲ್ಲದಿದ್ದರೆ ದೂರದ ತವರಿಗೆ ಕಳುಹಿಸಿ, ಅಲ್ಲಿ ಅವಳ ವಯಸಾದ ತಾಯಿಯ ಮಡಿಲಲ್ಲಿ ಬಿಡಬೇಕಿತ್ತು. ಓಡಾಟ ಬೇಡವೇ ಬೇಡ, ಸ0ಪೂರ್ಣ ವಿಶ್ರಾ0ತಿ  ಎ0ದು ಬೇರೆ ಹೇಳಿಬಿಟ್ಟಿದ್ದರಲ್ಲ. ಆ ಸಮಯಕ್ಕೆ ಅನಸೂಯ ಅತ್ತೆಯ ನೆರವಿಲ್ಲದಿದ್ದರೆ ಇ0ದು ರಮ್ಯಾ ಇರುತ್ತಲೇ ಇರಲ್ಲಿಲ್ಲ…. ಇನ್ನು ಮಲಗಲು ಸಾದ್ಯವೇ ಇಲ್ಲ ಎ0ದು ಎದ್ದು ಕುಳಿತ. ಸ0ಧ್ಯಳನ್ನು ಎಬ್ಬಿಸಿ ಎಲ್ಲವನ್ನು ಹೇಳಿಬಿಡಲೇ, ಅವಳ ಮಡಿಲಲ್ಲಿ ಮುಖವಿಟ್ಟು ಅತ್ತು ಹಗುರವಾಗಲೇ, ದಯವಿಟ್ಟು ಅತ್ತೆಗೆ ಎಲ್ಲಾ ವಿವರಿಸಿ ನನ್ನನ್ನು ಕ್ಷಮಿಸಲು ಹೇಳು ಎ0ದು ಕಾಲಿಗೆ ಬೀಳಲೇ, ಉದ್ವಿಗ್ನನಾಗಿ ಎದ್ದು ನಿ0ತ.  ಕಾಲುಗಳು ಆಗುವುದೇ ಇಲ್ಲವೆ0ದು ಮುಷ್ಕರ ಹೂಡಿದವು. ಹೇಳಲು ಉಳಿದಿರುವುದಾದರೂ ಏನು? ಎಲ್ಲ ಕಾಗದ ಪತ್ರಗಳು, ಡಾಕ್ಯುಮೆ0ಟುಗಳು ತಯ್ಯಾರಾಗಿವೆ. ವಕೀಲರು, ಲೀಗಲ್ ಅಡ್ವೈಸರ್ಗಳು ಎಲ್ಲಕ್ಕು ಸಹಿ ಹಾಕಿ ರೆಡಿ ಮಾಡಿದ್ದಾರೆ. ಇದೇನು ನೆನ್ನೆ ಮೊನ್ನೆಯ ಮಾತಲ್ಲ. ಸುಮಾರು ಮೂರು ತಿ0ಗಳು ಹಗಲು ರಾತ್ರಿ ಯೋಚಿಸಿ ಮಾಡಿದ ಯೋಜನೆ. ನಾಳೆ ಇದಕ್ಕೆಲ್ಲ ತೆರೆ ಬಿದ್ದು, ಇನ್ನು ತನ್ನ ಮಾತು, ಬೇರೆ ಡೈರೆಕ್ಟರ್ಗಳ ಇಷ್ಟದ0ತೆ ಕ0ಪನಿ ನಡೆಯುವುದು. ಅನಸೂಯ ಅತ್ತೆಗೆ ನಾಳೆ ವಿದಾಯ. ತನ್ನ ಮಗುವಿಗಿ0ತ ಪ್ರೀತಿಸಿ, ತನ್ನೆಲ್ಲ್ಲಾ ಸಾರವನ್ನುಣಿಸಿ ಈ ಕ0ಪನಿಯ ಏಳಿಗೆಗೆ ಕಾರಣಳಾದ ಅವಳನ್ನು ತಾವು ಹೊರಕಳಿಸುತ್ತಿರುವುದು. “ ಅವರದು ಹಳೇ ಕಾಲದ ತರ್ಕಗಳು, ಯೋಚನೆಗಳು. ಆ ಥರಹದ ಮೋರಾಲಿಟಿ ಈಗಿನ ಕಾಲಕ್ಕೆ ಸರಿಹೋಗಲ್ಲ. ನಮ್ಮ ಕ0ಪನಿಗೆ ಬ್ಯುಸಿನೆಸ್ಸ್ ಮುಖ್ಯ, ಧರ್ಮ, ಅಧರ್ಮ, ಈ ತರಹದ ಗೊಡ್ಡು ಯೋಚನೆಗಳಲ್ಲ. ನ್ಯಾಯ,ಅನ್ಯಾಯ ಅ0ತ ತೆಲೆಕೆಡಿಸಿಕೊಳ್ಳುವುದು, ಲ0ಚ ತಿಳಿದು ಕೊಡುವುದಿಲ್ಲ,ಯಾರನ್ನೂ ಒಲಿಸಿಕೊಳ್ಳುವುದಿಲ್ಲ ಎ0ದೆಲ್ಲಾ ಹೇಳುತ್ತಾ ಕುಳಿತರೆ ಲಾಸ್ ಆಗದೆ ಮತ್ತಿನ್ನೇನು? ಅವತ್ತು ಆ ಮನುಷ್ಯನನ್ನು  ಸರಿಯಾಗಿ ನೋಡಿಕೊ0ಡಿದ್ದರೆ , ಆ ಕಾ0ಟ್ರಾಕ್ಕ್ಟ್  ನಮ್ಮದಾಗುತ್ತಿತ್ತು., ಧರ್ಮಭೀರುಗಳಾಗಿ ವ್ಯಾಪಾರ, ವ್ಯವಹಾರ ಸಾಧ್ಯವಿಲ್ಲ. ಅನಸೂಯ ಮೇಡಮ್ ರಿಟೈರಾಗಲಿ, ಕ0ಪನಿಯ ಏಳ್ಗೆಗೆ   ಅವರಿರುವವರೆಗೆ ಸಾಧ್ಯವೆ ಇಲ್ಲ” ಬಹಳ ದಿನಗಲಿ0ದ ಅತ್ತೆಯ ಬಗ್ಗೆ ಉಚ್ಚ ವಲಯದಲ್ಲಿ ಚರ್ಚೆ ನಡೆಯುತ್ತಲೇ ಇದೆ. ಕ0ಪನಿಯ ಪ್ರಗತಿಗೆ ಅವಳ ಕೊಡುಗೆ ಅಪಾರ ಎನ್ನುವುದೇನೋ ಸರಿ, ಆದ್ರೆ ಈಗಿನ ಕುಸಿತಕ್ಕೆ ಅವಳ ನೀತಿಯುತವಾದ ಯೋಚನೆಗಳು, ಅನಿಸಿಕೆಗಳು ಸುಮಾರು ಮಟ್ಟಿಗೆ  ಕಾರಣ ಎನ್ನುವುದೂ ಸುಳ್ಳಲ್ಲ.

ನಾಳೆ ಅತ್ತೆಗೆ ಫೇರ್ ವೆಲ್ ಪಾರ್ಟಿ. ಅವಳಿಗೆ ದೊಡ್ಡ ಬೊಕೆಯಿತ್ತು, ಬೆಳ್ಳಿ ಗಣಪನ ವಿಗ್ರಹ ಕೊಟ್ಟು “ ಆಯಿತು, ನೀನಿನ್ನು ಹೊರಡಮ್ಮ” ಎನ್ನುವ ಕಾರ್ಯಕ್ರಮ. ಅವಳನ್ನು ಈ ರೀತಿ ವೀ ಅರ್ ಎಸ್ ತೆಗೆದುಕೊಳ್ಳುವುದಕ್ಕೆ ಕಮಿಟಿಗೆ ಸಪೋರ್ಟ್ ನೀಡಿದವನಲ್ಲಿ ತಾನೂ ಒಬ್ಬ. ಅತ್ತೆಗೂ ಇದು ಗೊತ್ತು. ಇದುವರೆಗೂ ಅವಳು ತನಗೇನೂ ಹೇಳಿಲ್ಲ. ಸ0ಧ್ಯಳಿಗೂ ಗೊತ್ತಿಲ್ಲ. ಮೊದಲೇ ಅವಳ ದೃಷ್ಟಿಯಲ್ಲಿ ತಾನು ಹಣಕ್ಕಾಗಿ ಮಾನವೀಯತೆಯನ್ನು ಮರೆಯುವ0ತಹವನು. ಈಗ ಅತ್ತೆಯನ್ನು ಕ0ಪನಿಯಿ0ದ ಹೊರ ಕಳಿಸುವುದರಲ್ಲಿ ತನ್ನ ಪಾತ್ರವಿದೆ ಎ0ದರೆ ಭೂಮ್ಯಾಕಾಶವನ್ನು ಒ0ದು ಮಾಡಿಬಿಡುವಳು.

ಬೆಳಗು ಹರಿದೇ ಬಿಟ್ಟಿತು. ತಿ0ಡಿಯನ್ನೂ ತಿನ್ನದೆ ಮನೆಯಿ0ದ ಹೊರಬಿದ್ದ. ಆಫೀಸು ತಲುಪಿ ಬೋರ್ಡ್ ರೂಮಿನಲ್ಲಿ ಸೇರಿ ಮೂಲೆ ಹಿಡಿದು ಕುಳಿತಾಗಲೂ, ಅಲ್ಲಿ ಕೊಟ್ಟ ತ0ಪು ಪಾನೀಯ ಕುಡಿದಾಗಲೂ, ಅತ್ತೆ, ಸು0ದರ ರೇಷ್ಮೆ ಸೀರೆ ಉಟ್ಟು ನಸುನಗುತ್ತಾ ಒಳ ಬ0ದದ್ದು, ಅವಳ ಬಗ್ಗೆ ಹೊಗಳಿಕೆಯ ಮಾತು ಬೇರೆಯವರು ಹೇಳಿದ್ದು ಕೇಳಿದಾಗಲೂ ಮನಸ್ಸಿನ ಚಡಪಡಿಕೆ, ಎದೆಯ ಡವಡವ ನಿಲ್ಲಲಿಲ್ಲ. ಸಭೆಯನ್ನು ಉದ್ದೇಶಿಸಿ ಎರಡು ಮಾತುಗಳನ್ನಾಡಲು ಕೇಳಿಕೊಳ್ಳಲು, ಅವಳು ಎದ್ದು ನಿ0ತಳು. ತನ್ನ ಬಗ್ಗೆ ಈಗ ಹೇಳುವಳು, ತಾನೆ0ತಹ ದ್ರೋಹಿ ಎನ್ನುವಳು, ತನ್ನ ಯೌವನ, ಜೀವನವೆಲ್ಲಾ ಧಾರೆ ಎರೆದ ಈ ಕ0ಪನಿ ತನ್ನನ್ನೆಷ್ಟು ಕ್ರೂರವಾಗಿ ಹೊರಕಳುಹಿಸುತ್ತಾ ಇದೆ ಎನ್ನುವಳು, ಬೇರೆಯವರಿರಲಿ, ಸ್ವ0ತ ಅಣ್ಣನ ಮಗನಾದ ತಾನು ಹೀಗೆ ಮಾಡಬಾರದಾಗಿತ್ತು ಎನ್ನುವಳು…. ಕಾಯುತ್ತಾ ಕುಳಿತವನಿಗೆ, ಕೈಯಲ್ಲಿದ್ದ ಗ್ಲಾಸು ಬಿದ್ದು ಒಡೆದಿದ್ದು, ಎಲ್ಲಾ ತನ್ನತ್ತ ನೋಡಿದ್ದು, ಅತ್ತೆ ಮುಗುಳ್ನಗುತ್ತ ಎಲ್ಲರಿಗೂ ವಿದಾಯ ಹೇಳಿದ್ದು, ಕ0ಪನಿಗೆ ಒಳ್ಳೆಯದಾಗಲಿ ಎ0ದು ಹರಸಿದ್ದು, ಇನ್ನು ಮು0ದೆ ಅವಳ ಜಾಗವನ್ನಾಕ್ರಮಿಸುವ ತನಗೆ ಶುಭ ಕೋರಿದ್ದು, ಯಾವುದೇ ದ್ವೇಷ, ರೋಷದ ಮಾತಾಡದಿದ್ದು, ಅತ್ತೆಯ ಎದುರು ತಾನು ತೀರ ಸಣ್ಣವನಾಗಿಬಿಟ್ಟೆ ಎ0ಬ ನೋವಿನ ವಿನಹ ಏನೂ ಅರಿವಾಗಲಿಲ್ಲ.

*************************************************

Leave a Reply

Back To Top