ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾಣದ ಸ್ವರ್ಗಕೆ
ಹಂಬಲವೇಕೆ
ಕಾಣುವ ಬದುಕನು
ಕಳೆವೆಯೇಕೆ

ಹುಟ್ಟಿದ ಉಸಿರು
ಹೊರಡಲೇಬೇಕು
ಈ ನಿತ್ಯ ಸತ್ಯವನು
ಮರೆವೆಯೇಕೆ

ನರಕದ ಭಯಕೆ
ನಡುಗುವೆಯೇಕೆ
ಮನದ ಗಾಯಕ್ಕಿಂತ
ದೊಡ್ಡದೇನಿದೆ

ಮೂರ್ತಿಯಲ್ಲ
ಅಮೂರ್ತದಲ್ಲ
ಕೊನೆಯ ತೀರ್ಪು
ಆತ್ಮಸಾಕ್ಷಿಯಲ್ಲವೇ

ಕೈಯಲಿ ಕರುಣೆ
ಮನದಲಿ ಪ್ರೀತಿ
ಬದುಕಲಿ ಮಾನವತೆ
ಸಾಕಲ್ಲವೇ

ಕಾಣುವ ಬದುಕೇ
ಕೈಯಲ್ಲಿರುವುದು
ಪ್ರೀತಿ ಇರುವೆಡೆ
ಸ್ವರ್ಗ ಇರುವುದು

ಮೂರು ದಿನದ ಬದುಕು
ನಗುನಗುತಾ ಸಾಗಲಿ
ಒಬ್ಬರ ನೋವಿಗೆ
ಇನ್ನೊಬ್ಬ ಕಾರಣವಾಗದಿರಲಿ

ಸ್ವರ್ಗ ನರಕವೆಲ್ಲ
ಮನದೊಳಿವೆ
ಮಾಡಿದ ಒಳಿತುಗಳೇ
ಉಳಿಯಲಿವೆ


About The Author

Leave a Reply

You cannot copy content of this page

Scroll to Top