ಕಾವ್ಯ ಸಂಗಾತಿ
ವಿನೋದ ತಾವ್ಡೆಕರ್
“ಗುಡಿ ಯೊಳಗೆ ಇವ-ನಮ್ಮವ
ಹೊರಬಂದರೆ ಯಾರಿವ !!”


ತೋರಿಕೆಯ ಜೀವನ ನೀ ಬಿಟ್ಟುಬಿಡು ಮನುಜ,
ಮೇಲೊಂದು ಒಳಗೊಂದ ಮಾಡುವುದ ಬಿಡು!!
ಅರಿತುಕೊ ನಿನ್ನ., ಕಲಿತುಕೊ ಒಳಿತನ್ನ !!
ಬಯಸ ಬೇಡ ನೀ ನನ್ನಿಂದ ಎಂದಿಗೂ,
ದುರಾಸೆಯ ನೀ ಬಿಟ್ಟುಬಿಡು!!
ಕೊಡುವೆ ನಾ ನಿನ್ನ ರ‍್ಮದ ಫಲ ವ ಕೇಳಿ ಪಡೆಯುವ ಆಸೆ ನೀ ಬಿಟ್ಟುಬಿಡು ಮನುಜ!!
ನಿನ್ನಿಂದ ನನಗೆ ಯಾವುದೇ ಆಸೆಯೂ ಇಲ್ಲ,
ಕೊಡುತ್ತಿರುವೆ ನಾ ನಿನಗೆ ಕುರಿಯ-ತಲಿ, ಪ್ರಾಣಿಯ-ಬಲಿ ಎಂಬ,
ನಾಲಕ್-ಕಾಸಿನ ತೋರಿಕೆಯ ಜೀವನ ನೀ ಬಿಟ್ಟುಬಿಡು ಮನಜ!!
ಹಿಂಸೆಯ ಬದಿಗಿಟ್ಟು ದ್ವೇಷವ ನೀ ತೋರದುಬಿಡು,
ಪ್ರೇಮದ ದಾರಿಯ ನೀ ಸ್ವೀಕರಿಸು ಮನುಜ !!
ಅಸಹಾಯನಿಗೆ ಸಹಾಯ, ಪೀಡಿತನಿಗೆ ಧಾನ,
ಸಹಜ ಕರುಣೆಯಲಿ ನೀ ನನ್ನ ಕಾಣುವೆ ಮನುಜ !!
ನೀ ಸಹಕರಿಸಿದ, ದೇಹವು ವೊಂದಿಸುತ್ತಿರುವ ಪ್ರತೀ ವೊಂದನೆಯೂ ನನಗೆ ಸ್ವೀಕಾರವಿದೆ.
ನಿನ್ನ ನಮನ ಯಾಚಿಸುವ ಆಸೆ ನನಗಿಲ್ಲ,
ನೀ ಧ್ಯಾನವೇ ಆಚರಿಸು. ನನಗೆ ನಿನ್ನ ವೊಂದನೆಯೂ ರ‍್ಮವೇ ಸೂಚಿಸಲು ಬಿಡು,
ತೋರಿಕೆಯ ಜೀವನ ನೀ ಬಿಟ್ಟುಬಿಡು ಮನುಜ!!
ಒಪ್ಪಿಕೋ ಪ್ರೇಮವ ದುಃಖದ ಜೀವನ ನೀ
ಬಿಟ್ಟುಬಿಡು ಮನುಜ ನೀ ಬಿಟ್ಟುಬಿಡು ಮನುಜ!!
-ವಿನೋದ ತಾವ್ಡೆಕರ್



