ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

                                          

ಅವಳ ಕಂಗಳ ಮಿಂಚನು ಅರಸುತಾ ಕಾಡಿನಿಂದ ಬಂದೀನಿ
ಅವಳಿಗಾಗಿ ಸುಂದರ ಕನಸುಗಳ ಮೂಟೆ ಹೊತ್ತು ತಂದೀನಿ

ಅವಕುಂಠದೊಳಗಿನ ಮೊಗವು ನಗೆ ಜೊನ್ನ ಚೆಲ್ಲುತಿದೆ
ಮಾನಸ ‌ಸರೋವರದೊಳಗಿನ ಬಿರಿದ ನೈದಿಲೆ ಹಿಡಿದು ನಿಂತೀನಿ

ಕರದೊಳಗಿನ ಕುಸುಮ ಜಾರಿದರೂ ಕಂಪು ಉಳಿದಿದೆ

ದುಂಬಿ ಯಾಗಿ ಅವಳ ಒಡಲೊಳಗೆ ಪರಾಗ ತುಂಬೀನಿ

ನಾನು ಅವಳ ವ್ಯಾಮೋಹದ ಬಲೆಯಲಿ ಸಿಲುಕಿರುವೆ ನೋಡು
ಹೊಳೆವ ಅವಳ ಕಪೋಲದ ಮೇಲೆ ಪ್ರೇಮದುಂಗುರ ಒತ್ತೀನಿ

ಬೆಳದಿಂಗಳ ಇರುಳು ಅರಳಿದ ಪಾರಿಜಾತದ ಘಮಲು ಹರಡಿದೆ
ಅನುರಾಗದ ಕಡಲಿಂದ ಪ್ರಭೆಯ ಹೃದಯದ ಮುತ್ತನು ಕದ್ದೀನಿ


About The Author

Leave a Reply

You cannot copy content of this page

Scroll to Top