ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ತುಂಬಿದ ನಿನ್ನೊಲವ ಜೋಳಿಗೆಯಿಂದ
ನನಗೂ ತುಸು ಉಣಬಡಿಸಬಾರದೇ
ಕನಸು ಮುನಿಸು ಸಮವಾಗಿ ಜೋಡಿಸು
ಶುರುವಾಗಲಿ ನಮ್ಮಿ ಭಾವಯಾನ

ಜೊತೆಗಿರಲು ಬೇಕಷ್ಟಿಷ್ಟು ಸಡಿಲತೆ
ಇರಬೇಕು ಎಚ್ಚರಿಕೆ ಇನಿತು
ನೆನಪಲೆ ನಗುವ ಕಲಿಯಲಿ ಮನ
ಮಧುರ ಸಂಯಮವೇ ಹೆಸರದಕೆ

ಅದೇನಿದ್ದರೂ ನಿನ್ನ ನಂತರ
ನಿನ್ನ ಅನುರಾಗವೇ ನಿರಂತರ
ಹಾಕಲ್ಹೇಗೆ ಮನಕೆ ಕಡಿವಾಣ
ಭೇದಿಸುವುದೇ ಪ್ರೇಮದ ನಿಯಮ….!!


About The Author

Leave a Reply

You cannot copy content of this page

Scroll to Top