ಕಾವ್ಯ ಸಂಗಾತಿ
ಶ್ರೀದೇವಿ. ಮ.ಗುಮ್ಮಗೋಳ
“ಬಾನು-ಭೂಮಿ
(ಇಂಗ್ಲೀಷನ sonnet/ಸುನೀತ ಮಾದರಿಯ ಪದ್ಯ)”


ಬಾನಿನ ಬಾನು ಕಣ್ಣ ತೆರೆದು ನೋಡಿದ
ಭುವಿಯು ಭವದಿಂದ ನಮಸ್ಕರಿಸಿದಳು
ತಳುಕಿ ಬಳುಕಿ ಗಿಡಬಳ್ಳಿಗಳ ನಾಚಿಸಿದಳು
ಆಗಸ ಬೊಗಸೆ ಪ್ರೀತಿ ಬೇಡಿದ
ಮಿಥುನ ರಾಗಕೆ ಮಳೆಯ ಸ್ಪುರಿಸಿದ
ಹಸಿರಿನಲಿ ಉಸಿರಾಗಿ ಜೀವ ಅಂಕುರಿಸಿತು
ಇಳೆಯಲಿ ಬೆಳೆಯ ಸಮೃದ್ಧಿ ಆವರಿಸಿತು
ಲೋಕಕೆ ಸಂತೋಷದ ಹೊಳೆ ಹರಿಸಿದ
ಪರಿಸರವ ಪರಿಭ್ರಮಿಸುತ ಜ್ಞಾನಿಸಿದ
ಸಂವತ್ಸರ ಋತುಗಳ ಕಾವ್ಯ ಬರೆದ
ಜಗವನಾಳುವ ಒಡೆಯನಾಗಿ ಮೆರೆದ
ಸಂಜೆಯಲಿ ದ್ಯಾನಸ್ಥನಾಗಿ ಬುದ್ದ ಎನಿಸಿದ
ತೆರೆದು ನೋಡುವ ನೋಟವಿದು
ಪ್ರಕೃತಿ ಹೇಳುವ ಪಾಠವಿದು
ಶ್ರೀದೇವಿ. ಮ.ಗುಮ್ಮಗೋಳ



