ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್


ಗಜಲ್
(ರವಿ ಸರ್ ಅವರ ಗಜಲ್ ಒಂದರಿಂದ ಪ್ರೇರಿತ )
ಬಣ್ಣವಿಲ್ಲವೆಂದು ಬಯ್ಯುವ ಬಿಳಿ ಪುಟದೊಳಗೂ ತುಸು ಚಂದವಿದೆ
ಲೋಪಗಳಿವೆಯೆಂದು ನಾ ಜರಿವ ಜಗದೊಳಗೂ ತುಸು ಚಂದವಿದೆ
ಎಲ್ಲಾ ರಾಗಗಳನು, ಯಾರು ಹಾಡುವವರಿದ್ದಾರಿಲ್ಲಿ ಹೇಳು
ಯಾರೂ ಗುನುಗುನಿಸದ ಪದ್ಯದೊಳಗೂ ತುಸು ಚಂದವಿದೆ
ಆಕಾಶಕ್ಕೂ, ಅನುದಿನ ಆನಂದ ನೀಡಲು ಸಾಧ್ಯವಾಗುವುದೇ
ಕಪ್ಪೆಂದು ಕಡೆಗಣಿಸಿದ ಮೋಡದೊಳಗೂ ತುಸು ಚಂದವಿದೆ
ವರ್ಣನೆಗೂ ನಿಲುಕದ ಮಾತುಗಳಿಗಿಲ್ಲಿ ಬರವಿಲ್ಲ ನಿಜ
ಪದಗಳಿಂದ ಮುನಿಸಿಕೊಂಡ ಮೌನದೊಳಗೂ ತುಸು ಚಂದವಿದೆ
ಜಂಜಾಟವಿಲ್ಲದ ಜೀವನ ಬರೀ ಕಲ್ಪನೆಯಷ್ಟೇ ವಾಣಿ
ನೋವು ತುಂಬಿದ ನಯನದೊಳಗೂ ತುಸು ಚಂದವಿದೆ
ವಾಣಿ ಯಡಹಳ್ಳಿಮಠ




Best lines
Thank you so much