ಡಾ. ಶ್ರೀಶೈಲ ಮಾದಣ್ಣವರ ಅವರ ಗಜಲ್

ಮುಗಿಲ ವೀಣೆ ಮೀಟಿದವರಾರು ನುಡಿಸುತಿದೆ ಮೇಘ ರಾಗ
ಹೃದಯ ಕೋಣೆಯ ತಟ್ಟಿದವರಾರು ಹರಿಸುತಿದೆ ಅನುರಾಗ

ಸುರಿವ ಮಳೆ ಮೋಡಗಳಲಿ ಮಿಂಚುತಿದೆ ಬೆಳಕಿನ ಕೋಲು
ಬಾನಿನ ಎದೆಗಿಳಿದವರಾರು ಬೆಳಗಿಸುತಿಹರು ಪ್ರೀತಿ ಚಿರಾಗ

ಹರಿದ ಹನಿ ಹನಿಗಳಿಗೂ ಹೂ ಅರಳಿಸುವ ಹಂಬಲಗಳು
ಮುತ್ತು ಮಣಿ ಬಿತ್ತಿದವರಾರು ಹರಡುತಿದೆ ಪ್ರೇಮ ಪರಾಗ

ಉಂಡ ನೆಲವು ಹಸಿಯಾಗಿದೆ ಪ್ರೀತಿ ಇಂಗಿ ಒಡಲಿನೊಳಗೆ
ಎದೆಹಾಲು ಉಣಿಸಿದವರಾರು ತೊದಲಿನಲೂ ಹೊಸರಾಗ

ಹಸಿರು ಉಸಿರು ಬೆಳೆಸಿಕೊಂಡು ನಗುತಿದೆ ನೋಡು ಪರಿಸರ
ಬಾಳು ತೆನೆಗಟ್ಟಿಸಿದವರಾರು ಬದುಕು ಈಗ ಬಲು ಸರಾಗ


About The Author


Comments

One response to “ಡಾ. ಶ್ರೀಶೈಲ ಮಾದಣ್ಣವರ ಅವರ ಗಜಲ್”

  1.  Avatar
    Anonymous

    ತುಂಬಾ ಸೊಗಸಾದ ಸಾಲುಗಳು, ಮುಗಿಲಿಗೂ ಪ್ರೀತಿ ಉಕ್ಕಿದಾಗ ಸುರಿವ ಮಳೆ ಕಣ್ಣಮುಂದೆ ಕಟ್ಟುತ್ತದೆ ಕವನ

Leave a Reply

You cannot copy content of this page