ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಕಟು ಪದದಿ ಕುಟುಕಿ ಪ್ರೀತಿಯಿಂದ ನಗುವ ಹೂಮನದ ಸ್ನೇಹ ಗಾನಕೆ ಅದೆಂತಹ ಹೆಸರನಿಟ್ಟೆ
ಹಾಡಿ ಹರಸಿ ಹೃದಯದುಂಬಿ ಕುಣಿವ ಭಾವ ತಾನಕೆ ಅದೆಂತಹ ಹೆಸರನಿಟ್ಟೆ

ನೂರು ಸಲ ದೂರ ನೂಕಿದರೂ  ಉಸಿರೆತ್ತದ ಹದುಳ ಜೀವ ಮಿಡಿದ ಮಧುರ ಗಾನವದು
ಮಾತಿನ ಚೂರಿಯಿಂದ ಇರಿದು ಕೊಂದು ಪವಿತ್ರ ನೇಹ ಪಾನಕೆ ಅದೆಂತಹ ಹೆಸರನಿಟ್ಟೆ

ಕಾವ್ಯಯಾನದ ಪಥಿಕ ಮೃದು ಮಧುರ ಎದೆಹಾಸ ತುಂಬೆಲ್ಲ ಮಾತಿನ ಮುಳ್ಳುಗಳ ನೇವರಿಕೆ
ಮಲ್ಲಿಗೆ ಮನದ ಮೌನ ದೋಣಿಯ ಪ್ರೀತಿ ಪಯಣ ಯಾನಕೆ  ಅದೆಂತಹ  ಹೆಸರನಿಟ್ಟೆ

ತೊಟ್ಟು ನೀನಿತ್ತ ಗಾಯಗಳ ಆಭರಣ ಮೈ ನೇವರಿಸಿ ಹೃದಯ ಭಿತ್ತಿಯಲ್ಲಿ ಕಾಪಿಟ್ಟು ಕೊಂಡಿರುವೆ.
ಕೊಟ್ಟ ನೋವುಗಳ ಸರಮಾಲೆ ಹೊತ್ತು ನಿನ್ನೆಡೆಗೆ ಬರುವ ಒಲವ ಹೆಜ್ಜೆ ಪಾದಕೆ ಅದೆಂತಹ ಹೆಸರನಿಟ್ಟೆ.

ಬೆಳದಿಂಗಳ ಕಸಿದು ಕಾರ್ಗತ್ತಲು ನೀವಿದ ಶಶಿಗೆ ಗೊತ್ತಿಲ್ಲವೇ  ತಾನು ನೀಡಿದ ನೋವು
ಇಂದುವಿನ ಅಂತರಂಗದಿ ಅರಳಿದ  ಹೂಗೆಜ್ಜೆ ನಾದಕೆ ಅದೆಂತಹ ಹೆಸರನಿಟ್ಟೆ


About The Author

Leave a Reply

You cannot copy content of this page

Scroll to Top