ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯು ೧೯೫೧ ಅಕ್ಟೋಬರ್ 25ರಿಂದ ೧೯೫೨ರ ಫೆಬ್ರವರಿ 21ರವರೆಗೆ ನಡೆಯಿತು. ಇದು ಸ್ವಾತಂತ್ರ್ಯಾನಂತರದ ಮೊದಲ ರಾಷ್ಟ್ರೀಯ ಚುನಾವಣೆಯಾಗಿದ್ದು… ರಾಷ್ಟ್ರೀಯ ಕಾಂಗ್ರೆಸ್ ಭರ್ಜರಿ ಜಯದ ತಯಾರಾಯಲ್ಲಿ ಇತ್ತು.

ಸ್ವಾತಂತ್ರ ಭಾರತದ ಪ್ರಥಮ ಸಾರ್ವತ್ರಿಕ ಚುನಾವಣೆ ನಡೆದಾಗ ದೇಶದಾದ್ಯಂತ ರಾಜಕೀಯ ಚಟುವಟಿಕೆಗಳು ಅತಿಯಾಗಿ ಚುರುಕುಗೊಂಡಿದ್ದವು. ಆ ಸಂದರ್ಭದಲ್ಲಿ ಜಯದೇವಿ ತಾಯಿಯವರು ಕೂಡ ಅನೇಕ ರಾಷ್ಟ್ರೀಯ ನಾಯಕರಂತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದೊಂದಿಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಪಕ್ಷದ ಕಾರ್ಯಕರ್ತೆಯಾಗಿ,…. ಪ್ರಮುಖ ನಾಯಕರು ಮತ್ತು ಜನರ ನಡುವಿನ ಕೊಂಡಿಯಾಗಿ ಸೇವೆ ಸಲ್ಲಿಸಿದರು.

 ಸಂಘಟನಾ ಸಾಮರ್ಥ್ಯ, ಪ್ರಾಮಾಣಿಕತೆ ಮತ್ತು ಜನಪರ ಕಾಳಜಿಯಿಂದಾಗಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ವಿಶ್ವಾಸವನ್ನು ಗಳಿಸಿದ್ದರು.

ಆ ಸಮಯದಲ್ಲಿ ಮಹಾರಾಷ್ಟ್ರ ಪ್ರಾಂತ ಕಾಂಗ್ರೆಸ್ ಸಮಿತಿಯ  ಅಧ್ಯಕ್ಷರಾಗಿದ್ದ ಹಿರಿಯ ನಾಯಕರು ಜಯದೇವಿ ತಾಯಿಯವರ ಕಾರ್ಯಕ್ಷಮತೆಯನ್ನು ಗಮನಿಸಿ, ಅವರನ್ನು ಚುನಾವಣೆಗೆ ಸ್ಪರ್ಧಿಸಲು ಆಹ್ವಾನಿಸಿದರು. ರಾಜಕೀಯವಾಗಿ ಉಜ್ವಲ ಭವಿಷ್ಯ ಮತ್ತು ಮಂತ್ರಿ ಸ್ಥಾನವೂ ಅವರಿಗೆ ಸುಲಭವಾಗಿ ದೊರೆಯಬಹುದಾಗಿತ್ತು.
ಅಂದಿನ ಕೆಲವು ನಾಯಕರು, ಕರ್ನಾಟಕದ ಪರವಾಗಿ ಅವರು ನಡೆಸುತ್ತಿದ್ದ ಹೋರಾಟವನ್ನು ಮೃದುಗೊಳಿಸಲು ಹಾಗೂ ಅವರನ್ನು ತಮ್ಮ ಮಂತ್ರಿಮಂಡಲದಲ್ಲಿ ಸೇರಿಸಿಕೊಳ್ಳುವ ಯೋಚನೆಯನ್ನೂ ಮಾಡಿಕೊಂಡಿದ್ದರು ಎನ್ನಲಾಗುತ್ತದೆ.

ಜಯದೇವಿ ತಾಯಿಯವರು ಅಧಿಕಾರದ ಆಸೆಗೆ ಮಣಿಯುವ ವ್ಯಕ್ತಿತ್ವ ಹೊಂದಿರಲಿಲ್ಲ. ಅವರ ದೃಷ್ಟಿಯಲ್ಲಿ ಹುದ್ದೆ, ಅಧಿಕಾರ ಮತ್ತು ವೈಯಕ್ತಿಕ ಗೌರವಕ್ಕಿಂತ ನಾಡು-ನುಡಿ ಮತ್ತು ಜನರ ಹಿತವೇ ಶ್ರೇಷ್ಠವಾಗಿತ್ತು. ಆದ್ದರಿಂದ ಚುನಾವಣೆಗೆ ಸ್ಪರ್ಧಿಸುವಂತೆ ಕೇಳಿದಾಗ ಅವರು ನೀಡಿದ ಉತ್ತರ ಅವರ ವ್ಯಕ್ತಿತ್ವದ ಎತ್ತರವನ್ನು ತೋರಿಸುತ್ತದೆ.
ಅವರು ಸ್ಪಷ್ಟವಾಗಿ ಹೀಗೆ ಹೇಳಿದರು….

“ರಾಜ್ಯಸಭೆಯಲ್ಲಿ ಸೋಲ್ಲಾಪುರ ಕರ್ನಾಟಕದ ಭಾಗವಾಗಲೇಬೇಕು ಎಂದು ಧೈರ್ಯವಾಗಿ ಹೇಳುವ ಸಂಪೂರ್ಣ ಸ್ವಾತಂತ್ರ್ಯ ಮತ್ತು ಅನುಮತಿ ನನಗೆ ಇದ್ದರೆ ಮಾತ್ರ ನಾನು ಚುನಾವಣೆಗೆ ಸಹಕರಿಸಲು ಸಿದ್ಧ.”ಈ ಮಾತುಗಳು ಜಯದೇವಿ ತಾಯಿಯವರ ಅಚಲ ನಿಲುವಿಗೆ ಸಾಕ್ಷಿಯಾಗಿವೆ. ಅವರಿಗೆ ಚುನಾವಣೆಯಲ್ಲಿ ಗೆಲ್ಲುವುದು ಅಥವಾ ಮಂತ್ರಿಯಾಗುವುದು ಮುಖ್ಯವಲ್ಲ……ಗಡಿ ಭಾಗದ ಕನ್ನಡಿಗರ ನ್ಯಾಯಸಮ್ಮತ ಹಕ್ಕುಗಳ ಪರವಾಗಿ ಸಂಸತ್ತಿನಲ್ಲಿಯೂ ಧ್ವನಿ ಎತ್ತಲು ಅವಕಾಶ ದೊರೆಯಬೇಕೆಂಬುದು ಅವರ ಏಕೈಕ ಆಶಯವಾಗಿತ್ತು.
ಜಯದೇವಿ ತಾಯಿಯವರು ಅಧಿಕಾರಕ್ಕಾಗಿ ತಮ್ಮ ತತ್ವಗಳನ್ನು ಎಂದಿಗೂ ಬಿಟ್ಟುಕೊಡದ ನಾಯಕಿಯಾದರು.  
ಅವರ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಮುಖ್ಯ ಕಾರಣವೆಂದರೆ ಗಡಿ ಭಾಗದ ಕನ್ನಡಿಗರ ಹಕ್ಕುಗಳ ರಕ್ಷಣೆ… ಕನ್ನಡಿಗರ ಆಸ್ತಿ ತ್ವದ ರಕ್ಷಣೆ ಆಗಬೇಕು ಅಖಂಡ ಕರ್ನಾಟಕದ ನಿರ್ಮಾಣ ಮಾಡುವ ಉದ್ದೇಶವಾಗಿತ್ತು.

ಕರ್ನಾಟಕದವರ ಪರವಹಿಸಿ ಮಾತನಾಡುತ್ತಿದ್ದ ಜಯದೇವಿತಾಯಿಯವರನ್ನು ಶಾಂತಗೊಳಿಸಲು ಆಗಿನ ಎಂಪಿ ಸಿಸಿ ಅಧ್ಯಕ್ಷರಾಗಿದ್ದ ಹಿರೇಯವರು ಚುನಾವಣೆಯಲ್ಲಿ ನಿಲ್ಲಲು ಜಯದೇವಿ ತಾಯಿಯವರಿಗೆ ಕೇಳಿದರು. ಜಯದೇವಿತಾಯಿಯವರು ಸ್ಪರ್ಧಿಸಿಸಲು ಒಪ್ಪದಿದ್ದಾಗ ಹೀರೆಯವರು..”ತಾಯಾಯವರೆ ನೀವು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ನೀವು ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸದಿದ್ದರೆ, ನಿಮ್ಮ ಅಭಿಪ್ರಾಯದಂತೆ ಜನಸೇವೆಗೆ ಸಮರ್ಥರಾಗಿರುವ ವ್ಯಕ್ತಿಯೊಬ್ಬರನ್ನು ಸೂಚಿಸಿ” ಎಂದು ಕೇಳಿದರು.

ಆಗ ಜಯದೇವಿ ತಾಯಿಯವರು ಯಾವುದೇ ವೈಯಕ್ತಿಕ ಲಾಭ ಅಥವಾ ರಾಜಕೀಯ ಲೆಕ್ಕಾಚಾರವಿಲ್ಲದೆ *ಮಹಾರಾಣಿ ನಿರ್ಮಲಾರಾಜೆ ಭೋಸಲೆ ಅವರ ಹೆಸರನ್ನು ಶಿಫಾರಸು ಮಾಡಿದರು.
ನಿರ್ಮಲಾರಾಜೆ ಭೋಸಲೆ *ಅವರು ಅಕ್ಕಲಕೋಟೆ ಸಂಸ್ಥಾನದ ಮಹಾರಾಣಿಯಾಗಿದ್ದರು. ಅರಮನೆಯ ವೈಭವದ ಜೀವನದಲ್ಲಿದ್ದವರು…. ಅವರಲ್ಲಿದ್ದ ನಾಯಕತ್ವತೆ,ಸಂವೇದನಾ ಶೀಲತೆ ಮತ್ತು ಸೇವಾ ಮನೋಭಾವವು ಸಮಾಜದ ಅಭಿವೃದ್ಧಿಗೆ ಬಳಕೆಯಾಗಬೇಕೆಂದು ಜಯದೇವಿ ತಾಯಿಯವರು ನಿರ್ಮಲಾ ರಾಜಯೆವರಿಗೆ ಹೇಳಿದರು

 “ಅರಮನೆಯ ನಾಲ್ಕು ಗೋಡೆಗಳೊಳಗೆ ಜೀವನವನ್ನು ಸೀಮಿತಗೊಳಿಸದೆ, ಜನರ ನಡುವೆ ಬೆರೆತು ಅವರ ಕಷ್ಟ-ಸುಖಗಳನ್ನು ಅರಿಯಬೇಕು” ಎಂದು ಅವರು ನಿರ್ಮಲಾ ರಾಜೆಯವರನ್ನು ಪ್ರೇರೇಪಿಸಿದರು.
ಜಯದೇವಿ ತಾಯಿಯವರ ಪ್ರೋತ್ಸಾಹದಿಂದ ನಿರ್ಮಲಾ ರಾಜೆಯವರು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ ಶಿಕ್ಷಣ, ಮಹಿಳಾ ಕಲ್ಯಾಣ, ಸಾರ್ವಜನಿಕ ಸೇವೆ ಮತ್ತು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಸಮಾಜಸೇವೆಯ ಅನುಭವವು ಅವರಿಗೆ ಜನಜೀವನದ ನೈಜ ಸಮಸ್ಯೆಗಳ ಪರಿಚಯವನ್ನು ನೀಡಿತು.

ಈ ಸಾಮಾಜಿಕ ಸೇವೆಯ ಪಯಣವೇ ಮುಂದೆ ಅವರನ್ನು ರಾಜಕೀಯ ಕ್ಷೇತ್ರಕ್ಕೂ ಕೊಂಡೊಯ್ದಿತು. ಜನಸೇವೆಯನ್ನು ಇನ್ನಷ್ಟು ವ್ಯಾಪಕವಾಗಿ ಮಾಡಲು ರಾಜಕೀಯವೂ ಒಂದು ಸಾಧನ ಎಂಬ ಅರಿತಿದ್ದ ಜಯದೇವಿ ತಾಯಿಯವರು ನಿರ್ಮಲಾರಾಜೆ ಭೋಸಲೆ ಅವರ  ನಾಯಕತ್ವದ ವಿಶಿಷ್ಟ ಗುಣ ಔದಾರ್ಯವೆಂದು ತೋರಿಸಿಕೊಟ್ಟರು.

 ಸಮಾಜಕ್ಕೆ ಉತ್ತಮ ನಾಯಕತ್ವ ನೀಡಬಲ್ಲ ವ್ಯಕ್ತಿಗಳನ್ನು ಗುರುತಿಸಿ, ಅವರನ್ನು ಬೆಳೆಸುವ ಮಹತ್ತರ ಕಾರ್ಯವನ್ನು ಮಾಡಿದರು. ನಿಜವಾದ ನಾಯಕ ಎಂದರೆ ಸ್ವತಃ ಮುಂದೆ ನಿಲ್ಲದೇ ಮತ್ತೊಬ್ಬ ನಾಯಕನನ್ನು ರೂಪಿಸುವ ಸಾಮರ್ಥ್ಯವೂ ಹೊಂದಿರಬೇಕು ಎಂಬುದಕ್ಕೆ ಜಯದೇವಿ ತಾಯಿಯವರ ಜೀವನವೇ ಅತ್ಯುತ್ತಮ ಉದಾಹರಣೆಯಾಗಿದೆ.

 ಕನ್ನಡ ನಾಡಿನ ಗಡಿಭಾಗಗಳ ಬಗ್ಗೆ ಅವರಿಗೆ ಅಪಾರವಾದ ಕಾಳಜಿ. ಅಕ್ಕಲಕೋಟ, ಸೊಲ್ಲಾಪುರ ಸೇರಿದಂತೆ ಕನ್ನಡಿಗರ ಬದುಕು, ಭಾಷೆ ಮತ್ತು ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದ್ದ ಪ್ರದೇಶಗಳು ಕರ್ನಾಟಕದೊಂದಿಗೆ ಉಳಿಯಬೇಕು ಎಂಬುದು ಅವರ ಆಂತರಿಕ ಬಯಕೆಯಾಗಿತ್ತು.

ಅಕ್ಕಲಕೋಟ ಮತ್ತು ಸೊಲ್ಲಾಪುರ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಗೊತ್ತುವಳಿ ತರಲು ನಿರ್ಮಲ ರಾಜಯೆಅವರು ಕಾರಣರಾದರು ಎಂಬ ಸುದ್ದಿ ಜಯದೇವಿ ತಾಯಿಯವರ ಕಿವಿಗೆ ಬಿದ್ದಾಗ, ಅದು ಅವರ ಮನಸ್ಸಿನ ಮೇಲೆ ಬಿದ್ದ ದೊಡ್ಡ ಹೊಡೆತವಾಗಿತ್ತು.
ಯಾಕೆಂದರೆ, ತಾವು ನಂಬಿ ಬೆಳೆಸಿದ ವ್ಯಕ್ತಿಯೇ ತಮ್ಮ ಮನಸ್ಸಿಗೆ ವಿರುದ್ಧವಾದ ನಿಲುವು ತೆಗೆದುಕೊಂಡಿದ್ದಾರೆ ಎಂಬ ನೋವು ಒಂದು ಕಡೆಯಾಯಿತು.

“ನಾವು ಯಾರಿಗಾಗಿ ಹೋರಾಡಿದೆವು?
ಯಾರನ್ನು ನಂಬಿ ಮುಂದೆ ಕಳುಹಿಸಿದೆವು?
ನಮ್ಮ ನಾಡಿನ ನೋವನ್ನು ಹೇಳಬೇಕಾದವರೇ ನಮ್ಮ ನಾಡಿನ ಗಡಿಯನ್ನು ಬೇರೆಯವರ ಪಾಲಾಗಿಸುವ ಮಾತಿಗೆ ಹೇಗೆ ಕೈಜೋಡಿಸಿದರು?”
ಎಂದರು .ಜಯದೇವಿ ತಾಯಿಯವರಿಗೆ ಸಾಮಾನ್ಯ ರಾಜಕೀಯ ಭಿನ್ನಾಭಿಪ್ರಾಯವಾಗಿರಲಿಲ್ಲ.
ಅಕ್ಕಲಕೋಟ, ಸೊಲ್ಲಾಪುರ  ಕೇವಲ ಭೂಪಟದ ಮೇಲಿನ ಪ್ರದೇಶಗಳಾಗಿರದೆ…..
ಅಲ್ಲಿ ಕನ್ನಡದ ಉಸಿರಿತ್ತು. ಕನ್ನಡಿಗರ ಬದುಕಿತ್ತು. ತಲೆಮಾರುಗಳಿಂದ ಬೆಳೆದು ಬಂದ ಭಾಷೆ, ಸಂಸ್ಕೃತಿ, ನೆನಪುಗಳು, ಸಂಬಂಧಗಳು ಇದ್ದವು.
ಆ ನೆಲದ ಬಗ್ಗೆ ಅವರಿಗಿದ್ದ ಭಾವನೆ ತಾಯಿಗೆ ತನ್ನ ಮಗುವಿನ ಮೇಲಿರುವ ಮಮತೆಯಂತಿತ್ತು.

ತಾವು ಪ್ರೀತಿಸಿದ ನಾಡಿಗಾಗಿ ಹೋರಾಡುವವರನ್ನು ಹುಡುಕಿ, ಅವರನ್ನು ಮುಂದೆ ತಂದು, ಅವರ ಮೇಲೆ ವಿಶ್ವಾಸವಿಟ್ಟು ಜವಾಬ್ದಾರಿ ನೀಡಿದ ಒಬ್ಬ ಹಿರಿಯ ಹೋರಾಟಗಾರ್ತಿಯ ಮನಸ್ಸಿಗೆ ಇದು ಎಷ್ಟು ದೊಡ್ಡ ಆಘಾತವಾಯಿತು.
 ಜಯದೇವಿ ತಾಯಿಯವರ ರಾಜಕೀಯ ಜೀವನದಲ್ಲಿ ಒಂದು ಕಹಿ ಅಧ್ಯಾಯವಾಗಿದ್ದರೂ, ಅದು ಅವರ ಕನ್ನಡಾಭಿಮಾನವನ್ನು ಕುಗ್ಗಿಸಲಿಲ್ಲ.
ಬದಲಿಗೆ ಅವರ ಮನಸ್ಸಿನಲ್ಲಿ ಇನ್ನಷ್ಟು ಗಟ್ಟಿಯಾದ ಸಂಕಲ್ಪ ಮೂಡಿಸಿತು….
ಗಡಿ ಕಳೆದುಕೊಂಡರೂ ಕನ್ನಡ ಕಳೆದುಕೊಳ್ಳಬಾರದು.
ಭೂಭಾಗದ ಮೇಲೆ ಹಕ್ಕು ಕಳೆದುಕೊಂಡರೂ ಭಾಷೆಯ ಮೇಲಿನ ಪ್ರೀತಿ ಕಳೆದುಕೊಳ್ಳಬಾರದು.
ರಾಜಕೀಯದಲ್ಲಿ ಸೋಲು ಬಂದರೂ ನಾಡಿನ ಪರವಾದ ಹೋರಾಟದಲ್ಲಿ ಹಿಂದೆ ಸರಿಯಬಾರದೆಂದ ತಮ್ಮ ಹೊರಾಟ ಮುಂದುವರಿಸಿದರು.

ಅವರ ಜೀವನ ನಮಗೆ ಹೇಳುವ ಸಂದೇಶ ಒಂದೇ
“ಪದವಿ ಬದಲಾಗಬಹುದು…
ರಾಜಕೀಯದವರು ಬದಲಾಗಬಹುದು…
ಆದರೆ ಹೆತ್ತ ತಾಯಿಯ ಮೇಲಿನ ಪ್ರೀತಿ, ನಾಡಿನ ಮೇಲಿನ ಅಭಿಮಾನ ಮತ್ತು ನುಡಿಯ ಮೇಲಿನ ನಿಷ್ಠೆ ಬದಲಾಗಬಾರದು.”
ಸೊಲ್ಲಾಪುರ ಮತ್ತು ಅಕ್ಕಲಕೋಟ,ಜತ್ತದ ನೆಲದ ಮೇಲೆ ಕನ್ನಡದ ಹೆಜ್ಜೆಗುರುತು ಉಳಿಯಬೇಕು ಎಂಬ ಅವರ  ಕನಸನ್ನು ತಮ್ಮ ಹೃದಯದಿಂದ ಎಂದಿಗೂ ಅಳಿಸಿರಲಿಲ್ಲ.
ಅದೇಷ್ಟೋ ಬಾರಿ ಕಣ್ಣೀರಿನು ಹಾಕಿದರು
ಅದು ತನ್ನ ನಾಡು ತನ್ನ ಕೈಯಿಂದ ಜಾರಿಹೋಗುತ್ತಿರುವುದನ್ನು ಕಂಡ ಕನ್ನಡ ತಾಯಿಯ ಹೃದಯದ ನೊಂದಿತ್ತು.

*ಕನ್ನಡ ತಾಯಿಗಾಗಿ |ಕಣ್ಣೀರ ಸುರಿದಾವ
ಉನ್ನತ ನಾಡು ಒಂದು ಗೂಡಿಸಲು- ಸಿದ್ದರಾಮ
ಅನ್ನ ನೀರಿನ ಪರಿವೆ ಹರಿಸಿದಿರಿ
||*

ಅದಕ್ಕಾಗಿಯೇ ಜಯದೇವಿ ತಾಯಿಯವರು ಇಂದಿಗೂ ನಿಸ್ವಾರ್ಥ ಸೇವೆ, ಕನ್ನಡಾಭಿಮಾನ ಮತ್ತು ತತ್ವನಿಷ್ಠ ರಾಜಕೀಯದ ಪ್ರತೀಕವಾಗಿ ಸ್ಮರಿಸಲ್ಪಡುತ್ತಾರೆ. (ಮುಂದುವರೆಯುವುದು)


.

About The Author

2 thoughts on “”

Leave a Reply

You cannot copy content of this page

Scroll to Top