ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ನಂಬಿಕೆ ಗಾಜಿ ನಂತೆ
ನಮ್ಮನೋಟ ಒಳ ತೂರಿ ಹೋಗುವಷ್ಟು ಸ್ಪಷ್ಟ ಸ್ವಚ್ಛ

ಜಾಗ್ರತೆ ರಹಿತ ನಮ್ಮ ಸ್ಪರ್ಶ ನೆನಪಿಡಲು ಅದು ಬಲು ಸೂಕ್ಷ್ಮ

ಮೊದಲ ಬಾರಿಯ ಅಂತ ಸ್ಪರ್ಶಕೆ ಒಡೆಯದೆ ಉಳಿದಿದೆ
ಎಲ್ಲಿಯವರೆಗೆ?

ಒಂದು ಸಾಮಾನ್ಯ ದಿನ ಬಹು ಸಣ್ಣ ಒತ್ತಡಕೆ ಅದರಲಿ ಬಿರುಕು ಕಾಣಲೂ ಬಹುದು
ನಮ್ಮ ಸಂಬಂಧಗಳೂ ಬಹುಶಃ ಹಾಗೆಯೇ!

ಅದು ನಮಗರಿವಿಗೆ ಬರುವುದು ಸರಿಪಡಿಸ ಹೋದಾಗ
ಅದು ಆಗಲೇ ಬಿರಕು ಬಿಟ್ಟಿದೆ ಎಂದು.
(ಮು.ಪು ವಿನ ಆಂಗ್ಲ ಬರಹದ ಕನ್ನಡೀಕರಣ.)


About The Author

Leave a Reply

You cannot copy content of this page

Scroll to Top