ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಇಲ್ಲಿ ಇವರೆಲ್ಲರೂ ಹೊಟ್ಟೆ ತುಂಬಿದವರೇ ಇದ್ದಾರೆ ಸೋನಂ
 ಹಸಿವಿನ ಬೆಲೆ ತುಸುವಾದರೂ ತಿಳಿಯದವರೇ ಇದ್ದಾರೆ ಸೋನಂ

ಉಪವಾಸ ಸತ್ಯಾಗ್ರಹಗಳಿಗೆ ಹಿರೇಮಣಿಗಳು ಹೇಗೆ ಮಣಿದಾರು
ಕೇವಲ ಕುರ್ಚಿಗಾಗಿ ಹಣಾ ಹಣಿ ನಡೆಸಿದವರೇ ಇದ್ದಾರೆ ಸೋನಂ

ಬಾಳಿ ಬೆಳಗಬೇಕಾದ ಮಕ್ಕಳ ಕಳೆದುಕೊಂಡವರು ಅಳುತ್ತಿದ್ದಾರೆ
ಯಾರಿಗಿದೆ ಬಾಧಕ ಕರುಳು ಅರಿಯದವರೇ ಇದ್ದಾರೆ ಸೋನಂ

ಇಲ್ಲಿ ಪ್ರಶ್ನೆ ಪತ್ರಿಕೆ ಸೋರುತ್ತದೆ ಅಲ್ಲಿ ಅತ್ಯಾಚಾರ ನಡೆಯುತ್ತದೆ
 ಅನೈತಿಕತೆಯನೇ ಹೊತ್ತುಕೊಂಡು ಮೆರೆದವರೇ ಇದ್ದಾರೆ ಸೋನಂ

ಕ್ಷೀಣಿಸುತ್ತಿರುವ ನಿನ್ನ ಉಸಿರಿಗಾಗಿ ನಾವು ಉಸಿರು ಬಿಗಿ ಹಿಡಿದಿದ್ದೇವೆ
ಜೀವ ಹೋಗಿ ನೆತ್ತರು ಹರಿದರೂ ನಮ್ಮನು ನೋಡದವರೇ ಇದ್ದಾರೆ ಸೋನಂ

ದುಡಿದುಣ್ಣುವ ಶ್ರಮಿಕರು ಜೊತೆಗಿದ್ದು ಹಕ್ಕಿಗಾಗಿ ಹೋರಾಡುತ್ತೇವೆ
 ನ್ಯಾಯ ನೀತಿ ಪ್ರೀತಿ ಎಂದರೆ ಗೊತ್ತಿಲ್ಲದವರೇ ಇದ್ದಾರೆ ಸೋನಂ

ಕೆಟ್ಟು ನಾರುತಿರುವ ವ್ಯವಸ್ಥೆಗೆ ರೋಸಿ ಹೋಗಿದ್ದಾಳೆ ಅರುಣಾ
 ಶೈಕ್ಷಣಿಕ ಬದಲಾವಣೆ ತರಲು ಒಲ್ಲದವರೇ ಇದ್ದಾರೆ ಸೋನಂ


ಅರುಣಾ ನರೇಂದ್ರ


About The Author

2 thoughts on “ಅರುಣಾ ನರೇಂದ್ರ “ಇಲ್ಲಿ ಹೊಟ್ಟೆ ತುಂಬಿದವರೆ ಇದ್ದಾರೆ””

Leave a Reply

You cannot copy content of this page

Scroll to Top