ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಮರಳ  ಹೆಜ್ಜೆಗಳನು ಕಡಲು ಅಳಿಸಿದಂತಾಗಿದೆ  ಈ ಬದುಕು
ಇರುಳು ಕಂಡ ಬಾವಿಗೆ  ಹಗಲು  ಬಿದ್ದಂತಾಗಿದೆ ಈ ಬದುಕು

ತಣ್ಣಗೆ  ಉರಿಯುವ  ಬೂದಿಮುಚ್ಚಿದ  ಕೆಂಡ  ಇದಲ್ಲವೇ
ಕೆಸರಿನಲಿ ಅವಿತ ಮುಳ್ಳಿನ ಮೊನೆಯಂತಾಗಿದೆ  ಈ ಬದುಕು

ಸಂತೈಸುವ ಕೈಗಳೇ  ಬಸಿರಿಗೆ ಕೊಳ್ಳಿ ಇಟ್ಟು ನಗುತಿವೆ
ಕತ್ತಲೆಯ ಗರ್ಭದಿ ಬೆಳಕು ಕಳೆದಂತಾಗಿದೆ ಈ ಬದುಕು

ಹಗಲು ವೇಷಧಾರಿಗಳ ಮೋಜು ಬಲುಜೋರು ಇಲ್ಲಿ
ಸತ್ತ ಹೆಣಗಳ ಸಿಂಗಾರ ನೋಡುವಂತಾಗಿದೆ ಈ ಬದುಕು

ಭಾವಗಳ ರೆಕ್ಕೆ  ಮುರಿದು ಬೆತ್ತಲೆಯಾಗಿವೆ ನೊಂದು ಬೇಗಂ
ಪ್ರೀತಿಯನು ಎದೆಯ ಗೋರಿಯಲಿ ಹುಗಿದಂತಾಗಿದೆ ಈ  ಬದುಕು


About The Author

Leave a Reply

You cannot copy content of this page

Scroll to Top