Month: May 2021

ಶಾಲಾ journey

ಅಂದು ಹೊಡೆದು, ಬೈದು ನನ್ನನ್ನು ಶಾಲೆಗೆ ಸೇರಿಸಲು ಜೊತೆಗಿದ್ದ ಏಳರಲ್ಲಿ ಐದು ಜನ ಈಗಿಲ್ಲ. ಆದರೆ ಒದೆ ತಿಂದ ಪುಣ್ಯವಂತೆ ನಾನು, ನನಗೆ ಪ್ರತಿಯೊಬ್ಬರ ಬಗ್ಗೆಯೂ ಗೌರವ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತದೆ ಹೊರತು ಕಡಿಮೆಯಾಗುವುದಿಲ್ಲ.

ಅವಳ ಕಣ್ಣು ಬತ್ತಿ ಹೋಗಿತ್ತು

ಸೂತಕದ ಛಾಯೆ ಕಂಡಿತ್ತು ಅಬಲೆಯ ಮನಸು
ಮೌನವುಂಡು ಮೌನದಲ್ಲೇ ನೆಲಕುರುಳಿ ಬಿದ್ದಳು.

ಗಜಲ್

ಅರಿಷಡ್ವರ್ಗಗಳಿಗೆ ಅಂಕುಶ ಹಾಕಿ ನೀ ವಿಶ್ವ ಮಾನವನಾಗು ಅಬಾಟೇ
ಪಂಚ ಭೂತಗಳ ಮುನಿಸಿನ ಕೈ ವಶವಾಗುತ್ತಿರುವೆ ಇದು ನಿನ್ನ ಕರ್ಮಫಲ

ನಿರುತ್ತರ : ಒಂದು ಅವಲೋಕನ

ಹೀಗೆ ನಿರುತ್ತರದಲ್ಲಿ ಬದುಕಿನ ಪ್ರಶ್ನೆಗಳಿಗೆ ಹಲವು ಉತ್ತರಗಳಿವೆ. ಕೆಲ ಕವಿತೆಗಳು ತಾತ್ವಿಕವಾಗಿವೆ. ಗ್ರಾಮೀಣ ಮಹಿಳೆಯ ಬದುಕಿನ ಏರಿಳಿತಗಳ ತೂಗಿಸಿಕೊಂಡು ಹೋಗುವ ಒಳನೋಟ ಸಂಗೀತ ಅವರ ಕವಿತೆಗಳಲ್ಲಿ ಕಾಣಸಿಗುತ್ತದೆ

ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—25 ಆತ್ಮಾನುಸಂಧಾನ ತುಂಬ ಪ್ರಭಾವ ಬೀರಿದ ಪ್ರಾಚಾರ್ಯರು ಪ್ರಾಧ್ಯಾಪಕರು ಪದವಿ ಶಿಕ್ಷಣದ ಕಾಲೇಜು ಜೀವನದಲ್ಲಿ ಪ್ರಾಮಾಣಿಕ ನಿಷ್ಠೆ ತೋರಿದ್ದರೆ ಅಪಾರವಾದ ಜ್ಞಾನನಿಧಿ ಕೈವಶ ಮಾಡಿಕೊಳ್ಳುವ ಎಲ್ಲ ಅವಕಾಶಗಳೂ ಇದ್ದವು. ಆದರೆ ಸೂಕ್ತ ಮಾರ್ಗದರ್ಶನ, ತಿಳುವಳಿಕೆಯ ಕೊರತೆಯಿಂದಾಗಿ ಕೇವಲ ಹರೆಯದ ಹುಡುಗಾಟಿಕೆಯಲ್ಲಿ ಪದವಿ ಶಿಕ್ಷಣದ ಮೂರು ವರ್ಷಗಳು ತೀರ ಹಗುರವಾಗಿ ಕಳೆದು ಹೋದವು. ಆದರೂ ತಮ್ಮ ಪಾಠ ಕ್ರಮದ ವಿಶಿಷ್ಠತೆ, ವೇಷಭೂಷಣ, ನಡೆನುಡಿಗಳಿಂದಲೇ ಮನಸ್ಸನ್ನು ಗಾಢವಾಗಿ ಪ್ರಭಾವಿಸಿದ ಅಧ್ಯಾಪಕರು ಮತ್ತಿತರ ವ್ಯಕ್ತಿಗಳನ್ನು […]

ದಾರಾವಾಹಿ ಆವರ್ತನ ಅಧ್ಯಾಯ: 17 ಏಕನಾಥರು, ಶಂಕರನ ಜಮೀನು ನೋಡಲು ಅವನೊಂದಿಗೆ ಹೊರಟಿದ್ದರು. ಶಂಕರ ತನ್ನ ಜಾಗದಲ್ಲಿ ಉದ್ಭವಿಸಿದ ನಾಗನ ಸಮಸ್ಯೆಗೆ ಪರಿಹಾರ ಮಾರ್ಗೋಪಾಯದ ಕುರಿತು ದಾರಿಯುದ್ದಕ್ಕೂ ಏಕನಾಥರೊಡನೆ ಕೆದಕಿ ಕೆದಕಿ ಪ್ರಶ್ನಿಸುತ್ತ ತನ್ನ ಭಯವನ್ನು ನಿವಾರಿಸಿಕೊಳ್ಳಲು ಹೆಣಗುತ್ತ ಕಾರು ಚಲಾಯಿಸುತ್ತಿದ್ದ. ಆದರೆ ಏಕನಾಥರು ಅತೀವ ಚಾಣಾಕ್ಷರು. ಅವರು, ಅವನ ಒಂದೊಂದು ಪ್ರಶ್ನೆಗೂ ಬಹಳವೇ ಯೋಚಿಸಿ ಪರಿಹಾರ ಸೂತ್ರವನ್ನು ಮರೆಮಾಚಿಯೇ ಉತ್ತರಿಸುತ್ತ, ಏನನ್ನೋ ಗಂಭೀರವಾಗಿ ಯೋಚಿಸುತ್ತ ಸಾಗುತ್ತಿದ್ದರು. ಕಾರಣ, ಅವರ ತಲೆಯೊಳಗೆ ಹೊಸ ಯೋಜನೆಯೊಂದು ರೂಪಗೊಳ್ಳುತ್ತಿತ್ತು.    […]

ಗಜಲ್

ತುತ್ತು ಕೂಳಿಗೂ ಪರದಾಡುವ ಪರಿಸ್ಥಿತಿ
ಬೇತಾಳದಂತೆ ಬೆನ್ನುಹತ್ತಿದೆಯಲ್ಲ|
ಮುಳ್ಳುಕಂಟಿಯಲಿ ಸಾವಿನ ಸೋಪಾನವ
ತುಳಿಯುತ್ತಿದೆ ಈ ಬಾಲೆ||

Back To Top