Day: May 23, 2021

ಅಂಬೇಡ್ಕರ್

ಆತ್ಮ ಚರಿತ್ರೆ ಬರೆಯಲು ಸಮಯ ಎಲ್ಲಿದೆ?’ ಎಂಬುದು ಅಂಬೇಡ್ಕರ್ ಅವರ ಬಗೆಹರಿಯದ ಪ್ರಶ್ನೆಯಾಗಿತ್ತು. ‘ನನ್ನ ಜನರಿಗೊಂದು ಮಾತೃಭೂಮಿ ಇಲ್ಲ’ ಎಂದ ಬಾಬಾಸಾಹೇಬರು,ಮಾತು ಸೋತ ಎಲ್ಲರಿಗೂ ಮಾತೃಭೂಮಿಯ ಹಕ್ಕು ಕೊಟ್ಟವರು, ಅವರು ಬರೆದದ್ದೆಲ್ಲ ಆತ್ಮಚರಿತ್ರೆಯೇ ಆದೀತು.

ಗಜಲ್

ಗಜಲ್ ಪ್ರಭಾವತಿ ಎಸ್ ದೇಸಾಯಿ ಬಾನಲಿ ಹಾರುವ ಪತಂಗದ ನೂಲು ಕೆಳಗಿಟ್ಟಿರುವೆ ಶಿವಾತೊಗಲು ಗೊಂಬೆಗಳ ಆಡಿಸುವ ಸೂತ್ರ ಮೇಲಿಟ್ಟಿರುವೆ ಶಿವಾ ಕುರುಡು ಕಾಂಚಾಣವು ತಿಪ್ಪೆಯಲಿ ಬಿದ್ದು ಒದ್ದಾಡುತಿದೆಹಸಿವು ಇಂಗಿಸುವ ಆ ಶಕ್ತಿ ನೇಗಿಲಿಗೆ ಕೊಟ್ಟಿರುವೆ ಶಿವಾ ಸಂತೆಯಲಿ ಜೀವಾನಿಲ ಸಿಗದೆ ಪ್ರಾಣಪಕ್ಷಿ ಬಿಕ್ಕುತಿದೆಪ್ರಕೃತಿಯ ಒಡಲಲಿ ಪ್ರಾಣವಾಯು ಮುಚ್ಚಿಟ್ಟಿರುವೆ ಶಿವಾ ಅವನಿಯ ಹುಳು ಹೆಮ್ಮೆಯಲಿ ಶಶಿ ಅಂಗಳದಲಿ ತೆವಳುತಿದೆಇಳೆಯ ನಂದನವನ ನಾಶ ಮಾಡಿ ಮಸಣ ಕಟ್ಟಿರುವೆ ಶಿವಾ ಜಗದ ಸೃಷ್ಟಿಯ ಸೊಬಗು ಕಾಣದೆ “ಪ್ರಭೆ” ಯ ಮನ ನರಳುತಿದೆಮುಗ್ಧ […]

ನಾ ಓದಿದ ಪುಸ್ತಕ

ಕಾಣೆಯಾದ ನಗುವ ಚಂದಿರ ಪುಸ್ತಕವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ.ಕಾವ್ಯದ ಮಾತುಗಳು ಒಂದೇ ಸಾಲಿನಲಿ ಮಿಂಚಿ ಮಾಯವಾಗುವುದಿಲ್ಲ

ಸೂರ್ಯೋದಯ

ಕವಿತೆ ಸೂರ್ಯೋದಯ ಅಬ್ಳಿಹೆಗಡೆ ರಾತ್ರಿ;;ಹೊದ್ದು ಮಲಗಿದ,ಕತ್ತಲ-“ಕೌದಿ”ಯಲ್ಲಿ,ಬೆತ್ತಲಾಗುವ ಆಸೆ-ಹೊತ್ತು,ನಖಶಿಖಾಂತ ಉರಿವ,ಕಾಮನೆಗಳ ತಂಪಾಗಿಸಲು,ಮೆಲ್ಲನೆ,ಕಳ್ಳ ಹಜ್ಜೆಯನಿಡುತ್ತಾ,ಮುನಿಸಿಕೊಂಡಿನಿಯನ ಸಂತೈಸೆ,ಬಳಿಸಾರಿ,ಬರಸೆಳೆದು,ಬಿಗಿದಪ್ಪಿ,ಕೆನ್ನೆಗೊಂದು ಸಿಹಿಮುತ್ತನೊತ್ತಲು,ನಾಚಿ,ರಂಗೇರಿತು ಉಷೆಯ ಕೆನ್ನೆ,ಕಳೆದುದಾಗಲೆ ಕತ್ತಲೆಯ ನಿನ್ನೆ.ಉಭಯರ ಮುಖದಲ್ಲೂ-ಮಂದಹಾಸದ ಉದಯ.ಜೀವಕೋಟಿಗಳಲ್ಲಿ,ಭರವಸೆಗಳುದಯ.ಅದುವೆ,ಸುಂದರ ಶುಭೋದಯ.ಸೂರ್ಯೋದಯ…. . **************************

ಶಾಲಾ journey

ಅಂದು ಹೊಡೆದು, ಬೈದು ನನ್ನನ್ನು ಶಾಲೆಗೆ ಸೇರಿಸಲು ಜೊತೆಗಿದ್ದ ಏಳರಲ್ಲಿ ಐದು ಜನ ಈಗಿಲ್ಲ. ಆದರೆ ಒದೆ ತಿಂದ ಪುಣ್ಯವಂತೆ ನಾನು, ನನಗೆ ಪ್ರತಿಯೊಬ್ಬರ ಬಗ್ಗೆಯೂ ಗೌರವ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತದೆ ಹೊರತು ಕಡಿಮೆಯಾಗುವುದಿಲ್ಲ.

ಅವಳ ಕಣ್ಣು ಬತ್ತಿ ಹೋಗಿತ್ತು

ಸೂತಕದ ಛಾಯೆ ಕಂಡಿತ್ತು ಅಬಲೆಯ ಮನಸು
ಮೌನವುಂಡು ಮೌನದಲ್ಲೇ ನೆಲಕುರುಳಿ ಬಿದ್ದಳು.

Back To Top