Day: May 16, 2021

ಸೀರೆಯಲ್ಲಿ ಬಂಧಿಯಾದ ಅಮ್ಮನ ಬದುಕು…

ಅಮ್ಮನಿಗೆ “ಸೀರೆ” ಅವಳ ಏಕೈಕ ವ್ಯಕ್ತ ವಾಗಿತ್ತು. ಸೀರೆ ಸೀರೆ ಸೀರೆ, ಎಲ್ಲಿ ಹೋದರೂ ಮನೆಯಲ್ಲಿದ್ದರೂ. ಅವಳಿಗೆ ಅದು ಎಂದೂ ವ್ಯಾಪಾರ ಆಗಿರಲಿಲ್ಲ, ಬದುಕಿನ ಶೈಲಿ ಯಾಗಿತ್ತು. ಅವಳು ಉಡದೆಯೇ ಹೋದ ಹತ್ತಾರು ಬಗೆ ಬಾಕಿ ಇದೇ ನಿಜ, ಆದರೆ ಅವಳಿಂದ ಅದ ಪಡೆಯದೆಯೇ ಉಳಿದ ಹೆಣ್ಣಿಲ್ಲ. ಸೀರೆಯೇ ಅಮ್ಮನಾಗಿದ್ದು ಈಗ ಅರಿವಿಗೆ ಬಂತು ಮಗಳಿಗೂ

ಕೋಳಿ ಕಥೆ ಕೇಳಿ

ಹಾಸ್ಯ ಲೇಖನ ಕೋಳಿ ಕಥೆ ಕೇಳಿ ಶಾಂತಿವಾಸು ನಮ್ಮ ಮನೆಯ ಪಕ್ಕದಲ್ಲಿ ಒಂದು ಸೌದೆ ಡಿಪ್ಪೋ ಇತ್ತು. ಆಗೆಲ್ಲಾ ಮಧ್ಯಾನ್ಹ 3 ಗಂಟೆಗೆ ನಾವು ಸ್ಕೂಲಿನಿಂದ ವಾಪಸ್ ಬರುವಾಗ, ಥೇಟ್ ಈಗಿನ ಲಾಕ್ಡೌನ್ ತರಹದ ನಿಶಬ್ದವೇ ಇರುತ್ತಿತ್ತು. ಅಜ್ಜ ಸೌದೆ ಹೊಡೆಯುವಾಗ ಬಿಡುವ “ಹುಶ್ಸಾ ಹುಶ್ಸಾ” ಉಸಿರಿನ ಶಬ್ದ ಮೂರ್ನಾಲ್ಕು ಮನೆಗಳ ದಾಟಿ ಕೇಳುತ್ತಿತ್ತು. ಉಸಿರಾಡುವುದೇ ಅಷ್ಟು ದೊಡ್ಡ ಶಬ್ದವೆಂದರೆ, ಇನ್ನು ಮಾತಾಡುವಾಗ ಧ್ವನಿ ಹೇಗಿರಬೇಡ? ಅದಕ್ಕಿಂತ ಜಗಳವಾಡುವಾಗ ಇನ್ನೂ ನಾಲ್ಕು ರಸ್ತೆಗೆ ಕೇಳಿಸುವುದಿಲ್ಲವೇ? ಅಜ್ಜನ ಹೆಸರು […]

ಬಾಗಿಲನ್ನು ತೆರೆದಿಡಿ

ಕವಿತೆ ಬಾಗಿಲನ್ನು ತೆರೆದಿಡಿ ವಿಶ್ವನಾಥ ಎನ್ ನೇರಳಕಟ್ಟೆ ಬಾಗಿಲನ್ನು ತೆರೆದಿಡಿತುಸು ಗಾಳಿಯಾಡಲಿಬರಿಯ ಕಿಟಕಿಸಾಲುವುದಿಲ್ಲ ಈ ಕಾಲಕ್ಕೆಎದೆಯುರಿಯ ಆರುವಿಕೆಗೆಹಿರಿದು ಗಾಳಿಯ ಸಹಕಾರವಿರಲಿ ಬಿಸಿಲ ಝಳಕ್ಕೆ ಬಳಲಿದ ಪಕ್ಷಿಗಳುಬರಲಿ ಒಳಕ್ಕೆವಿರಮಿಸಲಿ ತುಸು ಹೊತ್ತುಪ್ರಣಯನಾದದ ಕೇಕೆಅನುರಣಿಸಲಿ ಭಿತ್ತಿಗಳಲಿ ಮನೆಯೊಳಗೆ ಮುತ್ತಿರುವ ಕತ್ತಲುಕಣಕಣವಾಗಿ ಕಡಿದುಹೋಗಲಿಹೊರಗಿನ ಬೆಳಕಿನಲ್ಲಿಕಣ್ಣ ದೃಷ್ಟಿ ಸೂಕ್ಷ್ಮವಾಗಲಿ ಬಾಗಿಲನ್ನು ತೆರೆದಿಡಿ ಎದೆಯ ಕವಾಟಗಳಲ್ಲಿಸಾಮರಸ್ಯದ ಗಾಳಿಯಾಡಲಿ

ಗಜಲ್

ಗಜಲ್ ಸಿದ್ಧರಾಮ ಹೊನ್ಕಲ್ ಏಳು ದಶಕಗಳೇ ಕಳೆದವು ಹೊಸ ಮಳೆಯು ಸುರಿಯಲಿಲ್ಲ ನೋಡು ಸಾಕಿಭೂತಾಯಿ ಮಕ್ಕಳ ಬಂಜೆತನ ಹಿಂಗಲೇಯಿಲ್ಲ ನೋಡು ಸಾಕಿ ದುಡಿ ದುಡಿದು ನೊಂದ ರೈತನ ಮುಖದಲ್ಲಿ ನಗೆಯು ಅರಳಲಿಲ್ಲಜಗಕೆ ಅನ್ನ ಹಾಕುವವರ ಬಾಯಿಯೇ ಸಿಹಿಯಾಗಲಿಲ್ಲ ನೋಡು ಸಾಕಿ ಗಾಂಧಿ ಕಂಡ ಗ್ರಾಮೀಣ ಭಾರತದ ಕನಸುಗಳೆಲ್ಲ ಜಾರಿ ಕಡಲ ಪಾಲಾದವು ಈ ಮಣ್ಣಲಿಹಳ್ಳಿ ಹಳ್ಳಿಗಳೆಲ್ಲ ಗುಳೇ ಎದ್ದು ಹೋಗಿ ಸುಖವೆಂಬುದೇ ಸುಳಿಯಲಿಲ್ಲ ನೋಡು ಸಾಕಿ ಕುರ್ಚಿಯ ಕನಸಿನಲಿ ಸ್ವಾರ್ಥದ ಸೆಳವಿನಲಿ ದೇಶ ನಮ್ಮ ನಮ್ಮವರಲ್ಲಿಯೇಹರಾಜಾಯಿತುಅಧಿಕಾರದ ಅಮಲಿನಲ್ಲಿ […]

ಅಮ್ಮ

ಕವಿತೆ ಅಮ್ಮ ಸಂತೋಷ್ ಹೆಚ್ ಈ ಈ ಜೀವಕ್ಕೆ ಗರ್ಭದಿ ನೆಲೆ ಕೊಟ್ಟುಹೃದಯದಲಿ ಪ್ರೀತಿಯ ಬಚ್ಚಿಟ್ಟುಭವಿಷ್ಯದ ಕನಸಿನ ಗಿಡನೆಟ್ಟುನವಮಾಸ ಕಳೆದಳು ಅಮ್ಮ ನನ್ನ ಒಡಲಿಗೆ ಮಡಿಲಾದೆ ನೀನುಹಾಲನ್ನು ಎರೆದ ತಾಯಿಯು ನೀನುಈ ದೇಹಕ್ಕೆ ಉಸಿರನ್ನು ನೀಡಿದವಳು ನೀನುಆ ಋಣವ ತೀರಿಸಲಾಗದ ಮಗನಾದೆ ನಾನು ಮನೆಯೆಂಬ ಗುಡಿಗೆ ದೇವರು ನೀನುಹಸಿವನ್ನು ನೀಗಿಸೋ ಕರುಣಾಮಯಿ ನೀನುಬಿಸಿಲಲ್ಲೂ ಕೂಡ ನೆರಳಾದೆ ನೀನುಆ ಮರಕ್ಕೆ ನೀರೆರೆಯುವ ಮಗನಾದೆ ನಾನು ಅಜ್ಞಾನವೆಂಬ ಇರುಳನ್ನು ಸರಿದುಅರಿವೆಂಬ ಬೆಳಕನ್ನು ನೀಡಿದೆ ನೀನುಈ ಬಾಳಿಗೊಂದು ದೀಪವು ನೀನುಆ ದೀಪ […]

ಮಾತು ಮೀಟಿ ಹೋಗುವ ಹೊತ್ತು

ಕೊಡಗಿನ ಕಾನನದ ಮಡಿಲೊಳಗಿದ್ದುಕೊಂಡು ಯಾವ ವಾದ-ಪಂಥಗಳಿಗೂ ಪಕ್ಕಾಗದೆ, ಆಪ್ತವೆನಿಸುವಂತಹ ತಮ್ಮದೇ ಶೈಲಿ, ಭಾಷೆ, ತಂತ್ರ ಮತ್ತು ರೂಪಕಗಳನ್ನು ಕಂಡುಕೊಳ್ಳುತ್ತಾ ಕಾವ್ಯ ಕೃಷಿ ಮಾಡುತ್ತಿದ್ದಾರೆ ಸ್ಮಿತಾ. ಹೀಗೆಯೇ ಕಾವ್ಯದ ಸುಗ್ಗಿಯಾಗಿ ಅವರು ಸಾಹಿತ್ಯ ಶಿಖರದ ಉತ್ತುಂಗಕ್ಕೇರಲಿ ಎಂಬುದು ಓದುಗರ ಆಶಯ.

Back To Top