ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ಅಮ್ಮನೇಕೆ ದೇವರು?

ಕಥೆ ಅಮ್ಮನೇಕೆ ದೇವರು? ರಾಘವೇಂದ್ರ ಈ ಹೊರಬೈಲು ತನ್ನ ಜೋಪಾನ ಮತ್ತು ಅತೀವ ಪ್ರೀತಿಯ ಹೊರತಾಗಿಯೂ ತನಗೇ ಗೊತ್ತಿಲ್ಲದೆ ಕಾಲು ಜಾರಿ, ಕೈತಪ್ಪಿ ಹೊರಟ ಮಗಳನ್ನು ತಿದ್ದಲು ಹೋಗಿ, ಅವಳಿಂದ “ಬೇರೆಯವರಿಗೆ ಸೆರಗು ಹಾಸಿ, ಭಂಡ ಬಾಳು ಬಾಳಿ, ನನ್ನನ್ನು ಸಾಕಿದವಳು” ಎನಿಸಿಕೊಂಡರೂ, ಬೇರೆ ಯಾರೇ ಆಗಿದ್ದರೂ ರಣಚಂಡಿಯಾಗುತ್ತಿದ್ದ ಆ ತಾಯಿ, ತೀರಾ ಚಿಕ್ಕ ವಯಸ್ಸಿನಲ್ಲಿಯೇ ಅಪ್ಪನನ್ನು ಕಳೆದುಕೊಂಡ ಹೆತ್ತ ಮಗಳ ಮೇಲಿನ ಕರುಳಿನ ಮಮಕಾರಕ್ಕೆ ಬರಸಿಡಿಲಿನಂತಹ ಅವಮಾನವನ್ನೂ ಸಹಿಸಿಕೊಂಡು, ಮಗಳನ್ನು ಕ್ಷಮಿಸಿದ್ದಳು. ಅಪ್ಪನಿಲ್ಲದ ಮಗಳಿಗೆ ತಾನೇ ಅಪ್ಪ-ಅಮ್ಮ ಎರಡೂ ಆಗಿ, ಜೋಪಾನವಾಗಿ ಸಾಕಲು ಆಕೆ ಹರಸಾಹಸಪಟ್ಟಿದ್ದಳು. ಗಂಡು ದಿಕ್ಕಿಲ್ಲದ ಮನೆಯ ಹೆಣ್ಣುಗಳನ್ನು ಹಂಬಲಿಸುವ ಹಸಿವೆಗಣ್ಣುಗಳಿಗೂ ಸೊಪ್ಪು ಹಾಕದೆ, ಬಗ್ಗದೆ, ಎಂಜಲಾಗದೆ, ಗಟ್ಟಿಗಿತ್ತಿಯ ಬಾಳು ನಡೆಸಿದ್ದಳು. ಅಮ್ಮನ ಪ್ರೀತಿಯನ್ನು ಅರ್ಥಮಾಡಿಕೊಳ್ಳುವಲ್ಲಿ ಎಡವಿದ ಮಗಳು, ತನ್ನ ಸ್ವೇಚ್ಛಾಚಾರಕ್ಕೆ ಅಮ್ಮನೇ ಅಡ್ಡಿಯೆಂದು, ತನಗಾಗಿ ಜೀವ ತೇಯ್ದವಳನ್ನು ತೊರೆದು, ಬಣ್ಣದ ಮಾತಿನಿಂದ ಮರುಳು ಮಾಡಿದವನೊಡನೆ ಏನೊಂದೂ ಯೋಚಿಸದೆ ಓಡಿದಳು. ತನ್ನ ತೃಷೆ ತೀರುತ್ತಿದ್ದಂತೆ, ಜೊತೆಗಿದ್ದವನು ಎಲ್ಲವನ್ನೂ ದೋಚಿಕೊಂಡು ಓಡಿ ಹೋದ. ತನ್ನದೆಲ್ಲವನ್ನೂ ಕಳೆದುಕೊಂಡು, ಆಘಾತದಿಂದ ಅಪಘಾತಕ್ಕೊಳಗಾಗಿ ಕಣ್ಣುಗಳನ್ನೂ ಕಳೆದುಕೊಂಡು ಅನಾಥಳಾಗಿ ಬಿದ್ದಿದ್ದಾಗ, ಸಹಾಯದ ಬದಲಿ ಹಸಿದ ನಾಯಿಗಳಂತೆ ಎರಗಲು ಬಂದವರೇ ಹೆಚ್ಚು. ಸುದ್ಧಿ ತಿಳಿದಿದ್ದೇ ಎದ್ದೆನೋ ಬಿದ್ದೆನೋ ಎಂದು ಓಡಿ ಬಂದು, ‘ಉದುರುವ ಎಲೆಗೆ ಮರದ ಹಂಗ್ಯಾಕೆಂದು’ ತನ್ನವೇ ಕಣ್ಣುಗಳನ್ನು ದಾನಮಾಡಿ, ಮಗಳಿಗೆ ಬೆಳಕು ನೀಡಿದ ತಾಯಿ ತಾನು ಕುರುಡಿಯಾಗಿ, ಮಗಳಿಗೆ ಭಾರವಾಗುವುದು ಬೇಡವೆಂದು, ದಿಕ್ಕು ಸಿಕ್ಕಿದೆಡೆ ನಡೆದಳು. *****************

ಅಮ್ಮನೇಕೆ ದೇವರು? Read Post »

ಇತರೆ

ಬನ್ನಿ ಮನೆಗೆ ಹೋಗೋಣ. . .

ವಿಶೇಷ ಲೇಖನ ಬನ್ನಿ ಮನೆಗೆ ಹೋಗೋಣ. . . ಅಂಜಲಿ ರಾಮಣ್ಣ ಬಡತನ ಮತ್ತು ಒಳ್ಳೆಯ ವಿದ್ಯಾಭ್ಯಾಸ ಸಿಗುತ್ತದೆ ಎನ್ನುವ ಕಾರಣಗಳನ್ನು ನೀಡಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ತಾಯ್ತಂದೆಯರು ತಮ್ಮ ಮಕ್ಕಳನ್ನು ಬೆಂಗಳೂರಿನ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ, NGOಗಳಲ್ಲಿ ದಾಖಲಿಸಿರುತ್ತಾರೆ. ಈ ಕಾರಣಗಳು ಒಂದು ಹಂತದವರೆಗೂ ನಿಜವೇ ಆದರೂ ಹೀಗೆ ಮಕ್ಕಳನ್ನು ದೂರ ಮಾಡಿರುವ ತಂದೆ ತಾಯಿಯರಲ್ಲಿ ತಮ್ಮ ಜವಾಬ್ದಾರಿಯನ್ನು ವರ್ಗಾವಣೆ ಮಾಡುವ ಮನೋಭಾವವೇ ಎದ್ದು ಕಾಣುತ್ತದೆ. ಅವರುಗಳ ಉಡಾಫೆತನವನ್ನು ವ್ಯಾಪಾರೀಕರಣಗೊಳಿಸಿ,  ಸಮಾಜ ಸೇವೆ ಎನ್ನುವ ಹೆಸರಿನಲ್ಲಿ ನಾಯಿಕೊಡೆಗಳಂತೆ ಬೆಂಗಳೂರಿನ ಪ್ರತೀ ಗಲ್ಲಿಯಲ್ಲೂ ’ಸೇವಾಶ್ರಮ’ ಎನ್ನುವ ಬೋರ್ಡ್ ಕಾಣುತ್ತದೆ. ಬಹಳಷ್ಟು ಸಂಸ್ಥೆಗಳಿಗೆ ಸರಿಯಾದ ನೋಂದಾವಣೆ ಇರುವುದಿಲ್ಲ. ಯಾವ ಬಡತನ ಎನ್ನುವ ಕಾರಣಕ್ಕೆ ಮಕ್ಕಳು ಸುಖವಾಗಿರಲು ಇಲ್ಲಿನ ಸಂಸ್ಥೆಗೆ ಬಂದಿರುತ್ತಾರೋ , ವಾಸ್ತವದಲ್ಲಿ ಇಲ್ಲಿ ಇನ್ನೂ ಹಾಳಾದ ಪರಿಸರದಲ್ಲಿ ಇರುತ್ತಾರೆ. ಮಾನಸಿಕ ಆರೋಗ್ಯವೂ ಕುಂದಿರುತ್ತದೆ. Inferiority complexನ ಬಲಿ ಪಶುಗಳಾಗಿರುತ್ತಾರೆ. ಭವಿಷ್ಯದೆಡೆಗೆ ನಿರ್ವಿಣ್ಣರಾಗಿರುತ್ತಾರೆ. ಸಂಸ್ಥೆಗಳು ಅವರಲ್ಲಿನ ಹೆಣ್ಣು ಮಕ್ಕಳನ್ನು ಬ್ಯೂಟಿ ಪಾರ್ಲರ್‍ನ ಕೆಲಸಕ್ಕೆ ಹೊರತಾದ ಯಾವುದೇ ಕೌಶಲ್ಯ ಕಲಿಸಲು ಸೋಲುತ್ತಿವೆ. ಅಬ್ಬಬ್ಬಾ ಎಂದರೆ ಮಕ್ಕಳು ನಾಲ್ಕು ಚೂಡಿದಾರ್ ಹೊಲಿಯುವಷ್ಟು ಟೈಲರ್ ಆಗುತ್ತಿದ್ದಾರೆ ಅಷ್ಟೇ. ಇಲ್ಲಿರುವ ಬಾಲಕಿಯರದ್ದೂ , ಅದೆಷ್ಟೋ ಕುಟುಂಬದ ಜೊತೆಯಲ್ಲಿ ಇರುವ ಹೆಣ್ಣು ಮಕ್ಕಳಂತೆ ಮದುವೆಯೇ ಪರಮ ಗುರಿಯಾಗಿದೆ. ಯಾವುದೋ ಸಮಯದಲ್ಲಿ ತಮ್ಮ ಮಕ್ಕಳನ್ನು ಸಂಸ್ಥೆಗಳಿಗೆ ದಾಖಲು ಮಾಡಿರುವ ಪೋಷಕರು ನಂತರ ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಬೇಕು ಎನ್ನುವು ಆಶಯದಿಂದ ಸಂಸ್ಥೆಯನ್ನು ವಿನಂತಿಸಿಕೊಂಡರೂ ಹತ್ತಾರು ಕಾರಣಗಳನ್ನು ಮುಂದೆ ಒಡ್ಡಿ ಮಕ್ಕಳನ್ನು ಕುಟುಂಬದ ಜೊತೆಗೆ ಹೋಗದಂತೆ ಸಂಸ್ಥೆಯವರು ತಡೆಗಟ್ಟುತ್ತಿರುವುದು ವಾಸ್ತವ. ಇಂತಹ ಸನ್ನಿವೇಶಕ್ಕೆ ಕರೋನ ಧಾಳಿ ತಿಳಿಗಾಳಿ  ತೀಡಿದಂತಾಗಿದೆ. ಕರೋನ ಕೃಪೆಯಿಂದ  ಹೆಚ್ಚಿನ ಪೋಷಕರು ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಲು ಹಪಹಪಿಸುತ್ತಿದ್ದಾರೆ. ಸಂಸ್ಥೆಗಳೂ ತಮ್ಮ ಜವಾಬ್ದಾರಿಯಿಂದ ಹೊರಬರಲು ಮಕ್ಕಳನ್ನು ಮನೆಗೆ ಕಳುಹಿಸಲು ಉತ್ಸುಕರಾಗಿದ್ದಾರೆ. ಬಡ ಕುಟುಂಬಗಳು ತಮ್ಮತಮ್ಮ ತವರಿಗೆ ಹಿಂದಿರುಗುತ್ತಿದ್ದಾರೆ ಮಕ್ಕಳೊಂದಿಗೆ,  ಪರಿಸ್ಥಿತಿ ಸರಿ ಹೋಗುತ್ತದೆ ಆಗ ಮತ್ತೆ ಸಂಸ್ಥೆಗೆ ಸೇರಿಸುವ ಎನ್ನುವ ಭಾವದೊಂದಿಗೆ. ಸಂಸ್ಥೆಗಳೂ ಇವರಲ್ಲದಿದ್ದರೆ ಇನ್ನೊಬ್ಬರು, ಈ ದೇಶದಲ್ಲಿ ಮರುಳಾಗುವ ಜನಕ್ಕೇನು ಕೊರತೆಯೇ ಎನ್ನುವ ಆಶಾಭಾವದೊಂದಿಗೆ ಮಕ್ಕಳನ್ನು ಮನೆ ಸೇರಿಸುತ್ತಿದ್ದಾರೆ. ಅಂತೂ ಕಾನೂನು, ಕಾರ್ಯಾಂಗ ಮಾಡಲು ಸೋತಿದ್ದನ್ನು ಕರೋನ ಒಂದಷ್ಠ್ರ ಮಟ್ಟಿಗೆ ಜಾರಿಗೆ ತಂದಿದೆ. ಮಕ್ಕಳು ಎಷ್ಟೋ ದಿನಗಳ ನಂತರ ಅವ್ವ, ಅಮ್ಮ, ಅಪ್ಪ ಎನ್ನುವ ನಗುವನ್ನು ಸ್ಪರ್ಶಿಸುತ್ತಿದ್ದಾರೆ. ವಿಕೇಂದ್ರೀಕರಣಗೊಳ್ಳುತ್ತಿರುವ ಆರ್ಥಿಕತೆ ಮತ್ತೆ ಕೆಲವೇ ಪ್ರದೇಶಗಳಲ್ಲಿ ತನ್ನ ಪ್ರಾಬಲ್ಯ ಬೆಳೆಸಿಕೊಳ್ಳಲು ಸಮಯ ಹಿಡಿಯುತ್ತದೆ. ಅಲ್ಲಿಯವರೆಗೂ ಮಕ್ಕಳು  ಮನೆಯ ಮಣ್ಣಲ್ಲಿ ಕಿಲಗುಟ್ಟುತ್ತಿರುತ್ತಾರೆ. ಮನೆ ಎಂದರೆ ಅವರಿಗೆ ಬರಿಯ ಮಣ್ಣಲ್ಲ ಅವರ ಅಕ್ಕ ಅಣ್ಣ  ತಂಗಿ ತಮ್ಮಂದಿರ ಪರಿಮಳ. ಅಜ್ಜಿಯ ತೂತು ಬಿದ್ದ ಸೆರಗು, ತಾತನ ಮೋಟು ಬೀಡಿ, ದೊಡ್ಡಪ್ಪನ ಜಗಳ, ಅತ್ತೆ ಬೀದಿ ಬದಿಯಲ್ಲಿ ಕರಿದು ಕೊಡುವ ಕಜ್ಜಾಯ, ಸಡಿಲಾದ ಚೊಣ್ಣವನ್ನು ಮೇಲೆಕ್ಕೆಳುದುಕೊಳ್ಳುತ್ತಾ ಮೂಲೆ ಅಂಗಡಿಗೆ ಹೋಗಿ ಬೆರಳಿಗೆ ಅಂಗಿಯಾಗುವ ಬೋಟಿ! ಓಹ್, ಎಲ್ಲಾ ಮಕ್ಕಳನ್ನೂ ನಗರೀಕರಣಗೊಳಿಸಬೇಕು ಎನ್ನುವ ಅಮಾವಸ್ಯೆ ನಾಗರೀಕತೆಯನ್ನು ಅದ್ಯಾವಾಗ ಆವರಿಸಿಕೊಂಡಿತೋ!  ಮಕ್ಕಳನ್ನು ಕುಟುಂಬದಿಂದ ಬೇರ್ಪಡಿಸಿ ಬೆಳೆಸುವುದು ಹೇಗಿದೆ ಎಂದರೆ, ಪ್ರಾಕೃತಿಕವಾಗಿ ಸ್ವಜಾತಿಯ ಗುಂಪಿನೊಂದಿಗೆ ಗುರುತಿಸಿಕೊಂಡು, ಇದ್ದು ಬೆಳೆದು ಬದುಕು ರೂಪಿಸಿಕೊಳ್ಳಬೇಕಿರುವ ಜೀವಿಯನ್ನು ಸರ್ಕಸ್‍ ಕಂಪನಿಯಲ್ಲಿ ಕೂಡಿಟ್ಟು, ತರಬೇತಿಕೊಟ್ಟು, ಅಸಹಜಕ್ಕೆ ಒಗ್ಗುವಂತೆ ಪಳಗಿಸಿ ಮತ್ತೆ ತನ್ನ ಪ್ರಾಕೃತಿಕ ಗುಂಪಿನೊಂದಿಗೆ ಒಂದು ಮಾಡುವಂತೆ. ಮಕ್ಕಳ ಹಕ್ಕುಗಳ ಒಡಂಬಡಿಕೆ ಇಂದ, ಮಕ್ಕಳ ಹಕ್ಕುಗಳ ಬಗ್ಗೆ ನಮ್ಮಲ್ಲಿ ಚಾಲ್ತಿಯಲ್ಲಿರುವ ಎಲ್ಲಾ ಕಾಯಿದೆ, ಯೋಜನೆಗಳ ಮೂಲ ಉದ್ದೇಶ ಮಕ್ಕಳು ಅವರ ಕುಟುಂಬದ ಜೊತೆಯಲ್ಲಿಯೇ ಬೆಳೆಯಬೇಕು ಎನ್ನುವುದೇ ಆಗಿದೆ. ಇದು ಕೇವಲ ಉಳ್ಳವರಿಗೆ  ಮಾತ್ರ ಅನ್ವಯ ಆಗುವುದಿಲ್ಲ,  ಅಲೆಮಾರಿ ವರ್ಗದ ಕುಟುಂಬವೂ ತಮ್ಮ ಮರಿಗಳನ್ನು ತಮ್ಮದೇ ಗೂಡೆಯಲ್ಲಿಟ್ಟು ಕಾಪಾಡಬೇಕು. ಎಲ್ಲೆಡೆಯಲ್ಲಿಯೂ ಮಕ್ಕಳ ದೈಹಿಕ,  ಮಾನಸಿಕ, ಭಾವನಾತ್ಮಕ ಮತ್ತು ಬುದ್ಧಿಮತ್ತೆಯ ಆರೋಗ್ಯ ಕಾಪಾಡಲು ಪರ್ಯಾಯ ಬೆಂಬಲ ಕೊಡುವುದು ಮಾತ್ರ ಸರ್ಕಾರದ ಜವಾಬ್ದಾರಿ ಬಾಕಿಯಂತೆ ಮಕ್ಕಳು ಅವರವರ ಕುಟುಂಬದ ಹೊಣೆ ಮತ್ತು ಸಾಮಾಜಿಕ ಕರ್ತವ್ಯ. ನಮ್ಮ ಸಂವಿಧಾನದದ ಪರಿಚ್ಚೇಧ 14,15 ಮತ್ತು 21 ಇವುಗಳ ಪ್ರಕಾರ ಮತ್ತು Universal Declaration of Human Rights, Convention For Elimination of all All Forms of Violence Against Women and Child Rights Convention ಇವುಗಳ ಆಶಯ “Institutionalization shall be a last resort” ಕರೋನ ಸನ್ನಿವೇಶವು ಪಂಚಾಯ್ತಿ ಅಧಿಕಾರ ವ್ಯವಸ್ಥೆಯನ್ನು ಎಚ್ಚರಗೊಳಿಸಿದೆ. ಅಂಗನವಾಡಿಗಳ ಕಡೆಗೆ ಸರ್ಕಾರದ ಹೆಚ್ಚು ಗಮನ ಹರಿಯುವಂತೆ ಮಾಡಿದೆ. ಅಂತರ್ಜಾಲ ಮುಖೇನ ಶಿಕ್ಷಣ ಏರು ಮುಖ ಕಾಣುತ್ತಿದೆ. ನ್ಯಾಯಾಲಯಗಳು ಗ್ರಾಮೀಣ ಮತ್ತು ಅರೆ ಪಟ್ಟಣ ಪ್ರದೇಶಗಳಲ್ಲಿ ಉದ್ಯೋಗ ಯೋಜನೆಗಳು ಸರಿಯಾಗಿ ಜಾರಿಗೆ ಮಾಡುವಂತೆ ಕಾರ್ಯಾಂಗಕ್ಕೆ ಆದೇಶ ನೀಡಿವೆ. ಈ ಎಲ್ಲಾ ಶ್ರಮಗಳಿಂದ ಮಕ್ಕಳು ಕುಟುಂಬದ ಜೊತೆ ಇರುವಂತೆ ಆಗುತ್ತದೆ. ಕೃಷಿ ಕ್ಷೇತ್ರದಲ್ಲಿ ಸರ್ಕಾರದ ಮತ್ತು ಸಾಂಸ್ಥಿಕ ವ್ಯವಸ್ಥೆಯ ಬಲದಿಂದ ವ್ಯವಸಾಯ ಊರ್ಜಿತಗೊಂಡರೆ ಕಳೆದು ಹೋಗಿರುವ ಒಂದು ತಲೆಮಾರಿನ ಮನಸ್ಸು ರೈತನಾಗುತ್ತೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮನೆಗಳಲ್ಲಿಯೇ ಹೆಚ್ಚು, ಬಡತನ ಬಾಲ ಕಾರ್ಮಿಕತೆಗೆ ಮೂಲ ಎನ್ನುವ ಕರಾಳ ಸತ್ಯವನ್ನು ಭೂತಗನ್ನಡಿಯಲ್ಲಿ ದಪ್ಪಗಾಗಿಸುವ ಪ್ರತಿವಾದಿಗಳು ಮಕ್ಕಳನ್ನು ಸಂಸ್ಥೆಯಲ್ಲಿ ಇರಿಸುವುದು ಸುರಕ್ಷಿತ ಎನ್ನುತ್ತಾರೆ. ಆದರೆ ಲ್ಹಾಕ್ಗೆಡೌನ್ ಕಾರಣದಿಂದ ಚಿಕ್ಕ ಚಿಕ್ಕ ಗುಂಪುಗಳಲ್ಲಿ ಹಂಚಿಹೋಗಿ ಮನೆ ಸೇರಿಸಿಕೊಂಡಿರುವ ಮಕ್ಕಳಿಗೆ, ಅವರ ಸಂಬಂಧಿಗಳಿಗೆ ಮಕ್ಕಳ ಹಕ್ಕುಗಳ ಬಗ್ಗೆ awareness ಕೊಡುವುದು ಮೊದಲಿಗಿಂತಲೂ ಸುಲಭ ಸಾಧ್ಯ. ಅದಕ್ಕಾಗಿ ಸಮಾಜ ಕಾರ್ಯಕರ್ತರನ್ನು, ಗ್ರಾಮ ಪಂಚಾಯತಿ ಸಿಬ್ಬಂದಿಗಳನ್ನು ತರಬೇತುಗೊಳಿಸಬೇಕಷ್ಟೇ. ನಗರ ಪ್ರದೇಶಗಳಿಗೆ ಮಾತ್ರ ಸೀಮಿತ ಗೊಂಡಿರುವ ಮಕ್ಕಳೆಡೆಗಿನ ನಮ್ಮ ಕಾಳಜಿಯನ್ನು ಅವರಿರುವ ಜಾಗಗಳಿಗೆ ಕೊಂಡೊಯ್ಯ ಬೇಕಿದೆ. ಮಕ್ಕಳ ಪಾಲನೆ, ಪೋಷಣೆ, ಸುರಕ್ಷತೆ, ವಿದ್ಯಾಭ್ಯಾಸವನ್ನೂ ಅವರ ಜೊತೆಗೇ “ಬನ್ನಿ ಮನೆಗೆ ಹೋಗೋಣ” ಎಂದು ಜತನದಿಂದ ಕರೆದುಕೊಂಡು ಹೋಗಬೇಕಿದೆ. ಅವರೆಡೆಗೆ ಮಿಡಿಯುವ ನಮ್ಮ ಮನಸ್ಸುಗಳಿಗೆ ಅವರುಗಳನ್ನು ಅವರವರ ಕುಟುಂಬಕ್ಕೆ ಸೇರಿಸುವುದೇ ಧ್ಯಾನವಾಗಬೇಕಿದೆ. ಎಲ್ಲರ ಗಮ್ಯವೂ “Lets Go Home” ಎನ್ನುವುದೇ ಆಗಬೇಕಿದೆ. ************************* ಲೇಖನ ಕೃಪೆ: ಅಸ್ಥಿತ್ವ ಲೀಗಲ್ ಬ್ಲಾಗ್(ಅಂಜಲಿ)

ಬನ್ನಿ ಮನೆಗೆ ಹೋಗೋಣ. . . Read Post »

ಕಾವ್ಯಯಾನ, ಗಝಲ್

ಅಮ್ಮನಿಗೊಂದು ಗಜಲ್

ಅಮ್ಮನಿಗೊಂದು ಗಜಲ್ ಸುಜಾತಾ ರವೀಶ್ ಅಣುರೂಪದಲಿಂದ ಅಸುವ ತುಂಬಿ ಪೊರೆದ ಚೈತನ್ಯಧಾಯಿ ಅಮ್ಮ ಭ್ರೂಣವಾದಾಗಿನಿಂದ ಕಸುವ ನೀಡಿ ಸಾಕಿದ ಜೀವನಧಾಯಿ ಅಮ್ಮ ನವಮಾಸಗಳು ಒಡಲಲ್ಲಿ ಕಂದನ ಭಾರ ಹೊತ್ತು ಸಲಹಿದೆಯಲ್ಲಮ್ಮ ತನ್ನ ಜೀವವನೆ ಒತ್ತೆಯಿಟ್ಟು ಭುವಿಗೆ ತಂದ ಮಮತಾಮಯಿ ಅಮ್ಮ ಅಮೃತಸದೃಶ ಎದೆ ಹಾಲೂಡಿಸಿ ಶಕ್ತಿ ತುಂಬಿಸಿದೆಯಲ್ಲಮ್ಮ ಅನೃತವಾಡದೆ ಬದುಕು ನಡೆಸ ಕಲಿಸಿದ ವಾತ್ಸಲ್ಯಮಯಿ ಅಮ್ಮ  ಕೆಟ್ಟ ಮಕ್ಕಳಿರಬಹುದು ಎಂದೂ  ಕುಮಾತೆಯರು ಲೋಕದಲ್ಲುಂಟೇನಮ್ಮ? ಸಿಟ್ಟು ಮಾಡಿಕೊಳ್ಳದೇ ಯಶಸ್ಸಿನ ದಾರಿ ತೋರಿದ ಸಹನಾಮಯಿ ಅಮ್ಮ   ವಿಜಯ ಪಥದಿ ಸಾಧನೆಯ ಕಾಣಲು ದಾರಿದೀಪ ನೀನೇನಮ್ಮ ಸುಜಿಯ ರಥದ ಸಾರಥಿಯಾಗಿ ಸದಾ ಮುಂದಿರುವ ಆದರ್ಶಮಯಿ ಅಮ್ಮ  *********************************

ಅಮ್ಮನಿಗೊಂದು ಗಜಲ್ Read Post »

ಕಾವ್ಯಯಾನ

ಸತ್ವ ಪರೀಕ್ಷೆ

ಕವಿತೆ ಸತ್ವ ಪರೀಕ್ಷೆ ಲಕ್ಷ್ಮೀದೇವಿ ಪತ್ತಾರ ಸತ್ತವರ ಬಾಯಿಗೆ ಮಣ್ಣುಬದುಕುಳಿದರೆ ಹೋಳಿಗೆ , ಹುಗ್ಗಿ ಇದ್ದೆ ಇದೆ ಮುಂದೆ ಉಣ್ಣಲು ಸ್ವಲ್ಪ ತಾಳ್ಮೆ ಸಹನೆ ಇರಲಿ ಬಾಳಿಗೆಹೊರಗೆ ಬರದೆ ಇದ್ದದರಲ್ಲೆ ಹೊಂದಿಕೊಂಡು ಹೋಗಿ ಸುಮ್ಮನೆ ರಾಜಮಹಾರಾಜರೇ ಹದಿನಾಲ್ಕು ವರ್ಷಗಳ ಕಾಲ ವನವಾಸ ಗೈದರುಹದಿನಾಲ್ಕು ದಿನಗಳವರೆಗೆ ಮಾತ್ರಮನೆಯೊಳಗೆ ಇದ್ದರೆ ಏನು ತ್ರಾಸು ಇಂದು ಮನೆಯೆ ಆನಂದವಾಗಿರಲು ಬಲು ಸುರಕ್ಷಿತನಮ್ಮವರೊಂದಿಗೆ ಕಳೆಯಲು ಇದೂಂದು ಅವಕಾಶ ಇಂದಿನ ಕಷ್ಟದ ದಿನಗಳು ಕಳೆದರೆ ಸಾಕುಮುಂದೆ ಇದೆ ಭಾಗ್ಯದ ಬಾಗಿಲುಯಮ ಒಡ್ಡಿರುವನು ನಮ್ಮ ತಾಳ್ಮೆಗೊಂದು ಸವಾಲುಸತ್ವ ಪರೀಕ್ಷೆ ನಾವು ಗೆಲ್ಲುಲೇ ಬೇಕು ಬದುಕಿ ಬಾಳಲು *****************************

ಸತ್ವ ಪರೀಕ್ಷೆ Read Post »

ಕಾವ್ಯಯಾನ

ಮೂರು ದಿನಗಳ ಆಚೆ…

ಕವಿತೆ ಮೂರು ದಿನಗಳ ಆಚೆ… ಕವಿತಾ ಹೆಗಡೆ ಅಭಯಂ ಅಣುವೊಡೆದು ಚೂರಾಗಿ,ಪಿಂಡವೊಂದು ಬ್ರಹ್ಮಾಂಡಸೇರಲೊಲ್ಲದ ತಪ್ಪಿಗೆ,ನೀರಲ್ಲಿ ನೀರಾಗಿ,ಮಲಿನದ ಹೆಸರಲ್ಲಿ ಹರಿದುಹೋದರೆ;ರಜ ಸೋರಿದ್ದು ದೇಹಕ್ಕೆ,ತಮ ಕವಿದದ್ದು ಮನಕ್ಕೆ. ೧. ಆಚೆ ಕೂತರೆ:ಇಡೀ ಮನೆಯಲ್ಲಿ ಇವಳೊಬ್ಬಳೇ ಅಸ್ಪೃಶ್ಯೆ,ಮೂರು ದಿನ ಯಾಚನೆಯೇ ಜೀವನ.ಕೊಟ್ಟರುಂಟು …ತಿನ್ನು..ಉಡು.ಯಾತನೆಯೇ ಜೀವನ.ಕೂತು, ಮಲಗಿ ಬೇಸರಪಡು,ಇಲ್ಲ, ಹೊರೆ ಹೊರಗೆಸಲ ಮಾಡು.ಕತ್ತೆಯಾಗುವುದು ಲೇಸು! ೨. ಆಚೆಯಾಗಿ ಈಚೆಯಿದ್ದರೆ:ರಿಯಾಯತಿಯಿಲ್ಲದ ನಿತ್ಯ ಕರ್ಮಗಳು,ನೆಂಟರು, ಒಮ್ಮೊಮ್ಮೆ ದುಪ್ಪಟ್ಟಾಗುವಬಿಡುವಿಲ್ಲದೆ ಬೆಂಬತ್ತುವ ಜವಾಬ್ದಾರಿಗಳು.ಮಗುವಾದರೆ ಒಳ್ಳೆಯದಿತ್ತು! ೩. ಶಾಲೆಯ ಹುಡುಗಿ:ನೂರು ಆಚರಣೆ – ಸ್ಪರ್ಧೆಗಳಹೆಸರಲ್ಲಿ, ಎಳೆಜೀವವ ಕುಣಿಸಿ,ಹೆಣಗಿಸಿ, ಯಾರು ಯಾರದೋಕಾಣದ ಕಲ್ಲು ಮನ ರಂಜಿಸಲು ,ತಾಲೀಮಿನಲಿ ಬತ್ತಿದ ಕಾಲು.ನೋ ಸಿಂಕ್……..ಕ್ಷಣ ವಿರಮಿಸಿದರೂ ಮೂದಲಿಕೆ-“ಇಕಿನ ಮತ್ತ ಯದಕ್ಕೂತಗೋಬ್ಯಾಡ್ರಿ..ಕೆಟ್ ಆಲಸಿ ಇದಾಳಿಕಿ…”ಅವಕಾಶಗಳಿಗೆಲ್ಲ ಎಳ್ಳು ನೀರು! ೪. ಹೊಸ ನಟಿ:ಸೇದಿ ಹೋಗುವ ಕಾಲು,ಸಿಡಿವ ಸೊಂಟದ ಬಾಧೆ,ಎಲ್ಲಿಂದ ಬಂದೀತು ಭಾವನೆ?“ನಿಮ್ಮಂಥವ್ರೆಲ್ಲಾ ಯಾಕ್ರೀ ಬರ್ತೀರಾಫೀಲ್ಡಿಗೆ?…..ಪ್ಯಾಕ್ ಅಪ್..”ಮೊದಲ ಚಾನ್ಸಿಗೇ ಅರ್ಧಚಂದ್ರ ;ಇಲ್ಲ ಅದೇ ಕಡೆಯ ಚಿತ್ರ! ೫. ರಿಯಾಲಿಟಿ ಶೋ ಸ್ಪರ್ಧಿ:ಕನಿಷ್ಟ ಬಟ್ಟೆಯಲಿ,ಲಾಗ ಹಾಕುವ, ಹತ್ತುವ,ಹಾರುವ, ಕುಣಿವ, ಮಣಿವಸವಾಲು…”ಆಗದು ಎನ್ನುವಮಾತೇ ಆಡಕೂಡದು..”ಮತ್ತೆ ಮತ್ತೆ ತೆಗೆದುಕೊಂಡಹಿಂದೆ ಮುಂದೆ ಹಾಕುವ ಗುಳಿಗೆಗಳಅಡ್ಡ ಪರಿಣಾಮ, ಅಕಾಲ ವೃದ್ಧಾಪ್ಯ,ನಿಜದ ಮುದುಕಿಯಾದರೆ ಒಳ್ಳೆಯದಿತ್ತು! ೬. ಉದ್ಯೊಗಸ್ಥೆ:ಪರಿಪೂರ್ಣೆಯಾಗುವ ತವಕ,ಸಮಳೆನಿಸಿಕೊಳುವ ತುಡಿತ,ಮೂರರ ಚಕ್ರದಲಿ ಮಾತಿಲ್ಲ.ಗಿರಗಟ್ಟೆ ತಿರುಗುವ ಕರ್ಮದಲಿಕಾರಣ ಕೊಡುವ ಹಾಗಿಲ್ಲ.“ಪ್ರೆಸೆಂಟೇಶನ್ ತೃಪ್ತಿಕರವಾಗಿಲ್ಲ,ಸಮಯಕ್ಕೆ ಸಬ್ಮಿಟ್ಟಾಗಿಲ್ಲ…”ನಿವೃತ್ತಿ ದಿನಾಂಕ ಯಾವಾಗ! ಬಾಧೆಗಳ ಅಡಗಿಸಿದ ಹುಸಿ ನಗುಎದೆಯಲ್ಲಿ ಭಾವೋದ್ವೇಗದ ಅಳು.ಹಸಿ ಹಸಿ ಸುಳ್ಳು ರಜೆಯ ಜೀವಕೆಅಷ್ಟು ಬೇಗ ನಿಜದ ರಜೆ ಸಿಗುವುದೆ?ಮುಗಿದ ನಿರಾಳತೆ ಆರುವುದರೊಳಗೆಮತ್ತೆ ಬಂದೇ ಬಿಟ್ಟಿತು. ಮೂರಕ್ಕೆನೂರುಗಳ ನೋಟು ಪಡೆಯುತ ಅಣಕಿಸುತ.ಮೂರು ದಿನಗಳ ಆಚೆಯೋ ಈಚೆಯೋ;ಹುಡುಕಬೇಕಿದೆ ಹೊಸ ಬದುಕ –ಹೊಸ ಬೆಳಕ… *************

ಮೂರು ದಿನಗಳ ಆಚೆ… Read Post »

ಕಾವ್ಯಯಾನ

ಅವ್ವ ವರ್ಣಿಸದಳ

ಅವ್ವ ವರ್ಣಿಸದಳ ಅಭಿಜ್ಞಾ ಪಿ ಎಮ್ ಗೌಡ ಅವ್ವ ವರ್ಣಿಸದಳಹಗಲಿರುಳು ನೋವಂಡುದುಡಿದು ದಣಿದ ಅಕ್ಷಯನಿಧಿ.!ಯುಗದ ಅವತಾರನವ್ಯತೆಯ ಮಮಕಾರಮೌನದ ಪ್ರತಿರೂಪ ಈ ಅವ್ವತನ್ನೊಡಲ ನೋವುಗಳ ಬಚ್ಚಿಟ್ಟುಮೆರೆಯುವಳು ನಲಿಯುವಳು…. ಹೊಲದಲಿ ಸೀರೆಯೆತ್ತಿನಡು ಸಿಕ್ಕಿಸಳೆಂದರೆಆ ಬಾನು ಹಕ್ಕಿ ಪತಂಗಳ ಹಿಂಡೆನಾಚಿ ನೀರಾಗಿ ಸುರಿದಿಹವು…ಪಚ್ಚೆಯರಸಿನೊಳಗಿನ ಕೆಸರಾಟಮೈಮಾಟ ಕಂಡ ಪೈರೆಲ್ಲಾಲಕಲಕ .! ಥಕಥಕ.! ಅಬ್ಬಬ್ಬಾ.!ಸಾನುರಾಗದ ವೈಭೋಗಅವಳೊಳಗೆ ಮೈದಳೆದು ಹೊಮ್ಮಿರಲು… ಅಂತಃಕರಣದ ಒಲವರಸಿ.!ಅಗಣಿತ ವಿಷಯವರಿತ ಜ್ಞಾನನಿಧಿಪತಿಗೆ ಹೆಗಲಾಗಿ ಸಾರಥಿಯಸಾರೋಟಲಿ ಸಾಗುವ ಬಾಳಿನ ಒಡತಿ.!ಮರುಭೂಮಿ ಅಂಗಳದಿಚಿಮ್ಮುತಿಹ ಹನಿಯಲಿ ಚಿಗುರುವಓಯಸಿಸ್ ಅಂತೆ ಭರವಸೆಯ ಚೈತನ್ಯಬೆಳಕನ್ನೀಡೊ ಧ್ರುವತಾರೆಮಕ್ಕಳಿಗೆ ಜೀವದುಸಿರಧಾರೆ… ಮುದ್ದು ಕಂದಗಳ ಆಟಿಕೆಯಂತೆಬಾನಂಗಳದ ಶಶಿಯನು ಕರೆದಾಳೆಗೆ!ಅವಳನ್ನೊರ್ಣಿಸಲು ಪದಗಳಿಗುಭರವುಂಟಾಗಿದೆ ನನ್ನೊಳಗೇಕೆ.!ಅವ್ವ ಅನ್ನುವೊಂದು ಅನೂಹ್ಯ ತಾರೆ..ಅದ್ವಿತೀಯ ಮಾತಾ ನಿತ್ಯತತ್ವಾರಗಳ ಹೊಡೆತ ತಿಂದಳಾಕೆಮಮತೆಯ ಬಯಲೊಳಗೆರಮ್ಯತೆಯ ಕಣಜವಾಗಿಭಾವನೆಗಳ ಸೆಳೆತದೊಳಗೆದಿವ್ಯ ಜ್ಯೋತಿ ಬೆಳಗಿದಳೀಕೆ… ದಳ್ಳುರಿಯ ಕೂಪದಲಿ ನಲಗಿದರುನಗುವಳು ಬಂಡೆದ್ದ ಮನದಲಿಮಮತೆಯನು ಸೂಸಿ.!ಹಸಿವಿನೊಡಲ ಹೊತ್ತರುಹಸಿದ ಜೀವಕೆ ತುತ್ತು ನೀಡಿದಾಕೆಅವಳೊಳಗೆ ಚೆಲುವ ಬಲವುಉಕ್ಕಿ ಹರಿಯುತಿಹುದು..ಇವಳೊಂದು ಆತ್ಮೀಯತೆಯ ಹಣತೆಸ್ಫೂರ್ತಿಯ ಚಿಲುಮೆಪ್ರಕೃತಿಯ ಪ್ರತಿರೂಪವೀ ಅವ್ವ… ***********************************

ಅವ್ವ ವರ್ಣಿಸದಳ Read Post »

ಕಾವ್ಯಯಾನ

ಅಮ್ಮನ ದಿನಕ್ಕೊಂದು ಕವಿತೆ

ಅಮ್ಮನ ದಿನಕ್ಕೊಂದು ಕವಿತೆ ವಿಜಯಲಕ್ಷ್ಮಿ ಕೊಟಗಿ ಮುಸ್ಸಂಜೆ ಹೊತ್ತಿನ್ಯಾಗ ದೀಗಿ ಮುಡಿಸಿ ಒಲೆಯೊಳ್ಗ ಬೆಂಕಿ ಹೊತ್ಸಿಕೈ ಚಾಚಾಳ ಅವ್ವ ಮೈ ಚಾಚಾಳಹಡ್ದು ಬ್ಯಾನಿ ಅಪ್ಪನ ಗ್ಯಾನಅದೆಲ್ಲಿ ಕುಡಿದು ಬಿದ್ದಾನೋ?ಗಳಿಗಳಿಗೀ ನಿಟ್ಟುಸಿರಿಗೆಬೂದ್ಯಾಗಿನ ಕೆಂಡ ನಿಗಿನಿಗಿಆಕಿ ಮನಸಿನ ತುಂಬಾ ದಟ್ಟ ಹೊಗಿ,ಬಡವ್ರಿಗೆ ಹೊಟ್ಟಿ ಯಾಕ ಕೊಟ್ಟಾನೋ ಶಿವ?ಹಸ್ದು ತೆಕ್ಕಿ ಬಡ್ದು ಅಳಾಮಕ್ಕಳ್ನ ರಮ್ಸಿಹೊಟ್ಟಿ ಸಂಕ್ಟಾನ ಹೊಟ್ಯಾಗ ಒತ್ತಿಮಜಾಕಟಾ ತೋರಿಸ್ತೀನಂತಸ್ವಾರಾಗ ನೀರು ತುಂಬಿಚಂದ್ರಮನ ಬಿಂಬ ತೋರಿಸಿದ್ರಯವ್ವಾ! ನೀರಿನ್ಯಾಗ ರೊಟ್ಟಿ ನಂದಿತಬೇಅಂತ ಆಸೆಗಣ್ಣಿಲೇ ನೋಡಕತ್ಯಾವುಕರುಳಿಗೆ ಕಳ್ಳಿ ಬಡ್ದುದೊಡ್ಡ ದೊಡ್ಡ ಗುಳ್ಳಿಯಾಗೆವುಹಿರೇಮಗಳು ಮೈನೆರ್ತಾಳಸಾಣದು ಮಲಿ ಜಗ್ಗತೈತಿನೆಲ ಹಾಸಿ ನೆಲ ಹೊಚ್ಚಿಮನ್ಸಿಗೆ ಮುಳ್ಳು ಬಡ್ದು ಸರವತ್ನಾಗಅವ್ವ ಕತ್ತಲ್ದಾಗ ಕರಗಿಹೋಗ್ಯಾಳಹಾವಿನ ಜತಿ ಆಟ ಆಡ್ಯಾಳಗೂಳಿಗೂಡ ಕುಸ್ತಿ ಹಿಡದಾಳಬೆಳಗಾಮುಂಜಾನಿ ಗೂಡು ಸೇರಿನೆಲಕ್ಕೊರಗಿ ಬೆನ್ನು ಹಚ್ಚಿದರೆಚೂರುಗಾಯ ನೋಡಿ ಮಗ್ಳು ಗಾಬರಾಗ್ಯಾಳಉಡಿಯ್ಯಾಗಿನ ಮಂಡಾಳ ಗಬಗಬಮುಕ್ಕೋ ಮಕ್ಕಳ್ನೋಡಿ ಕಣ್ಣೀರಿಟ್ಟಾಳಸವರಾಡೆದ್ದು ಸೆರಗಿನ ಚುಂಗು ಬಿಚ್ಚಿದ್ರ ಪುಡಿಗಾಸು ಗರತಿತನ್ದ ಕಿಮ್ಮತ್ತು!ನಕ್ಕೆ ನಕ್ಕಳು ಮಕ್ಕಳು ದಿಗಿಲು ಬಿದ್ದುಮಾರಿ ನೋಡಿದ್ವುಹೊರಗ ಉರಿದೇವ ಉಗುಳೋ ಬೆಂಕಿನನುಂಗಿ ನಿಂತ ಭೂಮ್ತಾಯಂಗನೋವು ನುಂಗಿದ ಅವ್ವ ತಣ್ಣಗ ಕಂಡ್ಲು. *********************************

ಅಮ್ಮನ ದಿನಕ್ಕೊಂದು ಕವಿತೆ Read Post »

ಕಾವ್ಯಯಾನ

ಅಮ್ಮ….

ಅಮ್ಮಂದಿರ ದಿನದ ವಿಶೇಷ ಕವಿತೆ ಅಕ್ಷತಾ ಜಗದೀಶ ನೋವಿನಲ್ಲು ನಗುವ ಚೆಲ್ಲುವವಳು..ತಾನು ಹಸಿದು ಕೈ ತುತ್ತು‌ ನೀಡುವವಳುಎಷ್ಟೇ ಕಷ್ಟಗಳಿದ್ದರು,ಎಷ್ಟೇ ದು:ಖವಿದ್ದರುತನ್ನ ಮಗುವಿಗಾಗಿ ಕೇವಲಸುಖವನ್ನೇ ಬಯಸಿದವಳು… ತನ್ನ ನೋವಿನ ದಿನಗಳನುತನ್ನಲ್ಲಿಯೇ ಕೊನೆಗಾಣಿಸಿತನ್ನ ಕರುಳಿನ ಕುಡಿಗಾಗಿಹೂವಿನ ಹಾಸಿಗೆ ನಿರ್ಮಿಸಿದವಳು..ಮುಳ್ಳುಗಳೇ ಕಾಲಿಗೆ ಚುಚ್ಚಿದರುಕಣ್ಣಿರ ಹನಿ ಮಗುವಿಗೆ ತಾಗದಂತೆಎಚ್ಚರಿಕೆ ವಹಿಸಿದವಳು.. ಮಗುವಿನ ಅಳುವಿನಲ್ಲಿ ತಾ ಅತ್ತಳುಕಂದನ ನಗುವಿನಲ್ಲಿ ತಾ ನಲಿಡಾಡಿದಳುಅಮ್ಮ ಎಂಬ ಒಂದು ನುಡಿಯ ಕೇಳಿತನ್ನೇಲ್ಲ ನೋವನ್ನು ಮರೆತಳು.. ವಿಶಾಲವಾದ ಕಡಲಿನ ಹಾಗೆ ಅಮ್ಮನಿನ್ನ ಮಮತೆ….ಅಮ್ಮ ಎಂಬ ಪದಕ್ಕೆ ಅಮ್ಮನೇ ಸಾಟಿನಮನ ನಿನ್ನ ಪಾದ ಕಮಲಗಳಿಗೆ ಕೋಟಿ.. ಕೋಟಿ.. -***

ಅಮ್ಮ…. Read Post »

ಅಂಕಣ ಸಂಗಾತಿ, ಕಾಲಾ ಪಾನಿ

ಅಂಕಣ ಬರಹ ಖ್ಯಾತ ಲೇಖಕಿ ಶೀಲಾ ಭಂಡಾರ್ಕರ್ ಅವರಿಂದ ಅಂಡಮಾನ್ ಪ್ರವಾಸದ ವಿಶಿಷ್ಟ ಅನುಭವಗಳ ಸರಣಿಬರಹ……….. ಅದ್ಯಾಯ-9 ಮಡ್ ವೊಲ್ಕೆನೊ, ಭೂಮಿಯ ಅಡಿಯಲ್ಲಿ ಕೆಲವು ರಾಸಾಯನಿಕಗಳು ಕೊಳೆತು ಉಂಟಾದ ಗ್ಯಾಸ್ ನಿಂದಾಗಿ ಭೂಮಿಯನ್ನು ಬಿರಿದು ಕೆಸರು ಮೇಲಕ್ಕೆ ಚಿಮ್ಮುತ್ತದೆ. ಭೂಮಿಯ ತಳದಿಂದ ಕಲ್ಲಿನ ಚೂರುಗಳು, ಮರಳುಗಲ್ಲುಗಳು, ಸಮುದ್ರದ ಕೆಸರು, ಕೆಂಪು ಮತ್ತು ಹಸಿರು ಬಣ್ಣದ ಕಲ್ಲುಗಳು ಚಿಮ್ಮಿ ಮೇಲೆ ಬಂದು ಹರಿಯುತ್ತವೆ. ಬಿಸಿಯಾದ ಕೆಸರು ಹರಿದು ಬಂದು ನೋಡಲು ಸಿಮೆಂಟಿನಂತ ರಾಡಿಯಾಗಿ ನಿಂತಿತ್ತು. ಕೆಸರಿನ ಬುದ್ಬುದಗಳು, ನೀರ್ಗುಳ್ಳೆಗಳು ಆ ಜಾಗದಿಂದ ಹೊರಗೆ ಚಿಮ್ಮುತ್ತವೆ. ಅಂಡಮಾನ್ ದ್ವೀಪದಲ್ಲಿ ಒಟ್ಟು ಹನ್ನೊಂದು ಇಂತಹ ಮಣ್ಣಿನ ಜ್ವಾಲಾಮುಖಿಗಳಿವೆಯಂತೆ. ಅವುಗಳಲ್ಲಿ ಎಂಟು ಭರಟಾಂಗ್ ದ್ವೀಪದಲ್ಲೇ ಇವೆ. ಉಳಿದವು ಉತ್ತರ ಅಂಡಮಾನ್ ಪ್ರದೇಶದಲ್ಲಿವೆ. ರಷ್ಯಾ, ಉಕ್ರೇನ್, ಇಟೆಲಿ, ರೊಮಾನಿಯಾ, ಚೈನಾ, ಇರಾನ್, ಪಾಕಿಸ್ತಾನಗಳಲ್ಲೂ ಇಂತಹ ಕೆಸರಿನ ಜ್ವಾಲಾಮುಖಿಗಳಿವೆಯಂತೆ‌. ಮೇಲೆ ಹತ್ತಿ ಹೋಗಲು ಮೆಟ್ಟಿಲುಗಳಿವೆ. ಮಧ್ಯ ಮಧ್ಯ ನಡೆದು ಹೋಗುವ ದಾರಿ, ನಡುನಡುವೆ ಮೆಟ್ಟಿಲುಗಳು. ಹೋಗುವ ಮತ್ತು ಬರುವ ದಾರಿ ಸ್ವಲ್ಪ ಪ್ರಯಾಸದಾಯಕವಾಗಿದ್ದರೂ ಅಪರೂಪದ, ಇಂಥದ್ದೊಂದು ಸೃಷ್ಟಿಯ ವೈಚಿತ್ರ್ಯವು ನೋಡಲು ಸಿಕ್ಕಿತು. ಬಣ್ಣ ಹಸಿಯಾಗಿದೆ ಎಂದು ಬೋರ್ಡ್ ಹಾಕಿದ್ದರೂ ಒಮ್ಮೆ ಮುಟ್ಟಿ ನೋಡಿ ಪರೀಕ್ಷಿಸಬೇಕೆಂದು ಅನಿಸುವುದು ಸಹಜ. ಹಾಗೆಯೇ ಇಲ್ಲಿ ಬಿಸಿಯಾಗಿದೆ ಎಂದು ಹೇಳಿದ್ದರೂ, ಸಣ್ಣಗೆ ಹೊಗೆ ಬರುತ್ತಾ ಇದ್ದರೂ, ಮೆಲ್ಲ ಹರಿದು ಬರುತಿದ್ದ ಆ ರಾಡಿಯನ್ನು ಒಮ್ಮೆ ಬೆರಳಿನಿಂದ ಮುಟ್ಟಿದೆ. ಸುಡುವಂತಲ್ಲದಿದ್ದರೂ ಬಿಸಿ ಇತ್ತು. ಅಷ್ಟೇ.. ಅಲ್ಲಿ ಹತ್ತಿ ಹೋಗಿ ಸುಧಾರಿಸಿಕೊಂಡು ಸ್ವಲ್ಪ ಹೊತ್ತು ಅಲ್ಲಿದ್ದು ವಾಪಸ್ ಕೆಳಗೆ ಬಂದೆವು. ಮತ್ತೆ ದೋಣಿ ಹತ್ತಿ ಭರಟಾಂಗ್ ಜೆಟ್ಟಿಗೆ ಬಂದು ಅಲ್ಲಿಂದ ಫೆರ್ರಿ ಕ್ರಾಸ್ ಮಾಡಿ ಇನ್ನೊಂದು ಭಾಗಕ್ಕೆ ಬಂದು ಅಲ್ಲಿ ಚಿಕ್ಕ ಮನೆಯಂತ ಹೋಟೆಲ್ ಒಂದರಲ್ಲಿ, ಬಹುಷಃ ಅದು ಒಂದೇ ಹೋಟೆಲ್ ಇರಬೇಕು ಅಲ್ಲಿ. ಊಟಕ್ಕೆಂದು ಕರೆತಂದರು. ಅಲ್ಲಿಗೆ ಬರುವ ಪ್ರವಾಸಿಗರು ಅದೇ ಹೋಟೆಲ್ ಗೆ ಬರಬೇಕಿತ್ತು ಅನಿಸುತ್ತದೆ. ತುಂಬಾ ಜನ ತುಂಬಿದ್ದರು ಅಲ್ಲಿ‌. ಅಂತೂ ಇಂತೂ ಸ್ವಲ್ಪ ಕಾದ ಮೇಲೆ ಒಳ್ಳೆಯ ಊಟ ಸಿಕ್ಕಿತು. ಅನ್ನ, ಸಾಂಬಾರು, ಪಲ್ಯ, ಹಪ್ಪಳ, ಉಪ್ಪಿನಕಾಯಿ ನಮ್ಮೂರಿನ ಊಟದ ಹಾಗೇ ಇತ್ತು. ಸಹಜವಾಗಿ ಭಯಂಕರ ಹಸಿವೆಯೂ ಆಗಿತ್ತು. ಅಮೃತದಂತೆ ರುಚಿ ಅನಿಸಿತು ಎಲ್ಲರಿಗೂ. ಅಲ್ಲಿಂದ ಹೊರಡುವಾಗ ಎಲ್ಲರೂ ಅಂದರೆ ನಮ್ಮ ಯುವಪೀಳಿಗೆ,  ರಾಕೇಶ್ ಅವರನ್ನು ನೀವು ಆದಿವಾಸಿಗಳನ್ನು ತೋರಿಸಲೇ ಇಲ್ಲ ಎಂದು ಪೀಡಿಸುತಿದ್ದರು. ಈಗ ಸಿಗಬಹುದು ನೋಡೋಣ, ನಿಮ್ಮ ಅದೃಷ್ಟ ಚೆನ್ನಾಗಿದ್ದರೆ ಹೊರಗೆ ಬರುತ್ತಾರೆ  ಎಂದರು. ನಾವು ಬಂದ ಬಸ್ಸು ನಮಗಾಗಿ ಕಾದಿತ್ತು ಅಲ್ಲಿ. ಫೋಟೊ ತೆಗೆಯಬಾರದೆಂದು ಎಚ್ಚರಿಸಿದ್ದರೂ ಯಾರೋ ಮಹಿಳೆಯೊಬ್ಬರು ಆದಿವಾಸಿ ಮಹಿಳೆಯನ್ನು ಕಂಡಕೂಡಲೇ ತಮ್ಮ ಫೋನ್ ಕೈಗೆ ತಗೊಂಡು ಕ್ಲಿಕ್ ಮಾಡುವಾಗ ಫ್ಲಾಶ್ ಬೆಳಕು ಅದು ಹೇಗೆ ಆ ಆದಿವಾಸಿ ಮಹಿಳೆಗೆ ತಿಳಿಯಿತೊ, ಬಸ್ಸು ನಿಲ್ಲಿಸಿ ಹತ್ತಿ ಬಂದು ಆ ಫೋಟೊ ತೆಗೆದ ಮಹಿಳೆಯನ್ನೇ ಹಿಗ್ಗಾ ಮುಗ್ಗಾ ಥಳಿಸಿ ಹಾಕಿದ್ದು ಉದಾಹರಣೆಯಾಗಿ ಹೇಳಿ ನಮ್ಮನ್ನೆಲ್ಲಾ ಹೆದರಿಸಿ ಇಟ್ಟರು ರಾಕೇಶ್ ಸರ್. ತುಂಬಾ ನಿಧಾನವಾಗಿ ಚಲಿಸುತ್ತವೆ ಅಲ್ಲಿ ವಾಹನಗಳು, ಪ್ರಕೃತಿ ಸೌಂದರ್ಯದ ಜೊತೆಗೆ ಆದಿವಾಸಿಗಳ ದರ್ಶನ ಭಾಗ್ಯ ಸಿಗಬಹುದೆನ್ನುವ ಸಣ್ಣ ಆಸೆಯಿಂದ ಕೂಡ. ಒಬ್ಬರನ್ನಾದರೂ ತೋರಿಸಿಯೇ ತೋರಿಸುತ್ತೇವೆ ಎಂಬ ಆಶ್ವಾಸನೆ ನೀಡಿದ್ದರು ನಮ್ಮ ಬಸ್ ಡ್ರೈವರ್. ಮುಂದೆ ಮುಂದೆ ಸಾಗುತ್ತಿರುವಾಗ ಅಲ್ಲಿ ನೋಡಿ ಅಂದಿದ್ದು ಕೇಳಿಸಿತು. ಅಲ್ಲಿ ಎಂದರೆ ಎಲ್ಲಿ ಎಂದು ನೋಡುವುದರೊಳಗೆ ಒಬ್ಬ ಆರು ಅಡಿಗಳಿಗಿಂತಲೂ ಎತ್ತರದ ಹದವಾದ ತೂಕದ ಕಟ್ಟು ಮಸ್ತಾದ ಕಪ್ಪು ಎಂದರೆ ಮಿರಿ ಮಿರಿ ಮಿಂಚುವ ಕಪ್ಪು ಬಣ್ಣದ ಆಕರ್ಷಕ ನಿಲುವಿನ ಆದಿವಾಸಿ ಯುವಕ ನಿಂತಿದ್ದ. ಮೈಮೇಲೆ ಬರ್ಮುಡಾ ಮಾತ್ರ ಧರಿಸಿದ್ದ. ಪಕ್ಕದಲ್ಲಿ ಅದೇ ನಿಲುವಿನ ಚಿಕ್ಕ ಗಾತ್ರ ಎನ್ನುವಂತಿದ್ದ ಒಂದು ಮಗುವಿತ್ತು. ಆ ದೃಶ್ಯ ಈಗಲೂ ಕಣ್ಣ ಮುಂದಿದೆ. ಅವನು ಯಾವ ವಾಹನವನ್ನೂ ನೋಡುತ್ತಿರಲಿಲ್ಲ. ನಮ್ಮಂತೆಯೇ ನಮ್ಮ ಹಿಂದೆ ಮುಂದೆ ವಾಹನಗಳು ಆಮೆ ವೇಗದಲ್ಲಿ ಚಲಿಸುತ್ತಾ ಇದ್ದವು. ಮತ್ತೆ ಮುಂದೆ ಹೋಗುತಿದ್ದಂತೆ ಒಬ್ಬಳು ಮಹಿಳೆ. ಅವಳು ಮಾತ್ರ ನೈಟಿ ಹಾಕಿಕೊಂಡಿದ್ದಳು. ಅಲ್ಲೊಂದು ಬಸ್ಸಿನವರು ಅವರ ಬಳಿ ಇದ್ದ ತಿನ್ನುವ ವಸ್ತುಗಳು, ಬಟ್ಟೆ, ಇನ್ನೂ ಏನೇನೋ ಹೊರಗೆ ಎಸೆಯುತಿದ್ದರು. ಆ ಹೆಂಗಸು ಬಗ್ಗಿ ಒಂದೊಂದನ್ನೂ ಹೆಕ್ಕುವುದರಲ್ಲೇ ಮಗ್ನಳಾಗಿದ್ದಳು. ಹಾಗೆಲ್ಲಾ ಏನೂ ಎಸೆಯಬೇಡಿ ಎಂದು ಮತ್ತೊಮ್ಮೆ ನಮ್ಮ ಮ್ಯಾನೇಜರ್ ನಮಗೆ ಹೇಳಿದರು. ಎಲ್ಲರೂ ಹೀಗೆ ಹೆಕ್ಕಿಕೊಳ್ಳುವುದಿಲ್ಲ, ಕೆಲವರು ಸಿಟ್ಟಾಗುತ್ತಾರೆ ಎಂದರು. ಮುಂದೆ ನಾವು ಕಾದು ನಿಂತಿದ್ದ ಗೇಟ್ ದಾಟಿ ಬಂದು ಬಸ್ ನಿಲ್ಲಿಸಿ, ಚಾ, ಕಾಫಿ ಕುಡಿಯುವವರಿಗೆ, ಶೌಚಾಲಯಕ್ಕೆ ಹೋಗುವವರಿಗೆಂದು ಸ್ವಲ್ಪ ಬಿಡುವು ಕೊಟ್ಟರು‌. ಇವತ್ತು ನಮಗೆ ಶಾಪಿಂಗ್ ಗೆ ಕರೆದುಕೊಂಡು ಹೋಗುತ್ತೇವೆಂದು ಹೇಳಿದ್ದರಲ್ಲಾ! ನಾವೂ ಬೇಗ ಹೋಗೋಣ ಎಂದು ಅವಸರ ಮಾಡುತಿದ್ದೆವು‌. ಈಗ ಬರುವಾಗ ಪೋರ್ಟ್ ಬ್ಲೇರ್ ನ ಬೇರೊಂದು ದಿಕ್ಕಿನಿಂದ ಬಸ್ಸು ಬಂದಿದ್ದರಿಂದ ಆ ಊರಿನ ಸಿಟಿಯಂತಹ ಭಾಗ ನೋಡಲು ಸಿಕ್ಕಿತು. ಸಿಗ್ನಲ್, ವಾಹನಗಳ, ಜನರ ಸಂದಣಿಯಿತ್ತು ಅಲ್ಲಿ. ಸಿಂಡಿಕೇಟ್ ಬ್ಯಾಂಕ್ ನ ಶಾಖೆ ನೋಡಿದೆವು. ಜೀವ ವಿಮಾ ಕಛೇರಿಯೂ ಇತ್ತು. ನೋಡಲು ಗೋವಾದಂತದ್ದೇ ಊರು. ಈಗ ನಮಗೆ ಬೇರೊಂದು ಭವ್ಯವಾದ ಹೋಟೆಲ್ ಲ್ಲಿ ತಂಗಲು ವ್ಯವಸ್ಥೆ ಮಾಡಿದ್ದರು. ಬೇಗ ಬೇಗ ನಮ್ಮ ರೂಮುಗಳನ್ನು ನೋಡಿ ಖರೀದಿಗೆಂದು ಹೊರಟು ಬಂದರೆ.. ಆರು ಗಂಟೆಗೆ ಅಂಗಡಿಗಳು ಬಂದ್. (ಮುಂದುವರೆಯುವುದು…) ********************** –ಶೀಲಾ ಭಂಡಾರ್ಕರ್.

Read Post »

You cannot copy content of this page

Scroll to Top