ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯ ಜುಗಲ್ ಬಂದಿ ಖಾಲಿತನದ ಗಳಿಗೆಯ ಕವಿತೆಗಳು ಬದುಕಿನ ಖಾಲಿತನದ ಕುರಿತಾಗಿ ಕವಯತ್ರಿ ಶ್ರೀಮತಿ ವೀಣಾ ಪಿ. ಹಾಗೂ ಮಾಧವ ‘ತನ್ನ ಗುರುತನ್ನು ಹೊರಜಗತ್ತಿಗೆ ತೋರಿಸಿಕೊಳ್ಳಲಿಚ್ಛಿಸದ ಕವಿ’ – ಇವರಿಬ್ಬರ ಕಾವ್ಯ ಜುಗಲ್ ಬಂದಿ ಸಂಗಾತಿ ಓದುಗರಿಗಾಗಿ ಖಾಲಿತನದ ಗಳಿಗೆಯ ಕವಿತೆಗಳು ಗಳಿಗೆ-2 ಖಾಲಿತನ ತನುವ ಮೇಲಣ ಗಾಯದಂತಲ್ಲಮನದೊಳಗಣ ಗೀರು-ಗಾಯ-ರಸಿಕೆಗಳುನಾ ಬಲ್ಲೆ..ನಿನ್ನ ಕೊಲ್ಲುವ ನಿಶ್ಯಬ್ಧದಿಂದ ಕಂಗೆಟ್ಟುಮೌನ ಮುರಿಯಲೆಂದೇ ನಾ ನಿನ್ನ ಪ್ರಶ್ನಿಸಿದೆ..ಒಲವೋ.. ಚೆಲುವೋ..ಧಗೆಯೋ.. ಹಗೆಯೋ..ಬಯಕೆಯೋ.. ಭರವಸೆಯೋ..ನೋವೋ.. ನಿರಾಸೆಯೋ..ಮನವೆಂದಿಗೂ ಖಾಲಿಯಿರದೆಂದಷ್ಟೇನಾ ಉಲ್ಲೇಖಿಸಿದೆ..ಸಾಂತ್ವನಕೆ ಪದ ದಕ್ಕದಸಮ ದು:ಖಿಯನಿಂತು ನೀಹಸಿಗಾಯ ಬಗೆದವಳೆಂದದ್ದು ಸರಿಯೇ??!! ವೀಣಾ ಪಿ. ಎದೆಗಿರಿವ ಮಾತಿಗಿಂತಎದೆಗಿಳಿವ ಮೌನವನಪ್ಪಿರುವೆಹಗೆಯಲ್ಲವಿದು; ಮನದ ಬೇಗೆತಣಿಯುತಿದೆ ಮೆಲ್ಲನೆ ತಂಪಿನೆಡೆಗೆನೀ ಕಳಿಸಿದ ಕವಿತೆಯ ಸಾಲಿಗೆಖಾಲಿಯಾದ ಮನವೀಗ ತುಂಬುತಿದೆಹಸಿಗಾಯಕೆ ನಿನ್ನ ಸಾಂತ್ವನ ಮುಲಾಮಾಗುತಿದೆ ಮಾಧವ ****************** ಪರಿಚಯ: ವೀಣಾ ಪಿ. ಶ್ರೀಮತಿ ವೀಣಾ ಪಿ., ಹರಿಹರ …ಇತಿಹಾಸ ಉಪನ್ಯಾಸಕಿ, ಸಂಶೋಧಕಿ, ಕವಯಿತ್ರಿ ಹಾಗೂ ಬರಹಗಾರ್ತಿಯಾಗಿದ್ದು, ಕನ್ನಡ ಸಾಹಿತ್ಯ ಹಾಗೂ ಐತಿಹಾಸಿಕ ಸಂಶೋಧನಾ ಕ್ಷೇತ್ರದಲ್ಲಿ ಅತೀವ ಆಸಕ್ತಿಯಿಂದ ತೊಡಗಿಸಿಕೊಂಡಿದ್ದು, ಇವರ ಚೊಚ್ಚಲ ಕೃತಿ “ಭಾವೋದ್ದೀಪ್ತಿ”ಯು ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹ ಧನ ಯೋಜನೆಯಡಿ ಆಯ್ಕೆಗೊಂಡು ಪ್ರಕಟಗೊಂಡಿದೆ. ಬದುಕಿನಲ್ಲಿ ಭರವಸೆಗಳ ಬೆಂಬತ್ತುವಿಕೆ ಇವರ ಬರವಣಿಗೆಯ ಮೂಲ ಆಶಯವಾಗಿದೆ.

Read Post »

ಇತರೆ

ಉಪವಾಸ ಒಂದು ತಪಸ್ಸು

ಲೇಖನ ಉಪವಾಸ ಒಂದು ತಪಸ್ಸು ಆಸೀಫಾ  ಹಬ್ಬಗಳ ಆಚರಣೆ ತನ್ನದೇ ಆದ ಮಹತ್ವ ಹಾಗೂ ವೈಶಿಷ್ಟ್ಯತೆಯನ್ನು ಹೊಂದಿದ್ದು ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತದೆ.ಅದರಂತೆ ರಂಜಾನ್ ಮುಸ್ಲಿಮರಿಗೆ ಪವಿತ್ರ ಹಾಗೂ ಪುಣ್ಯ ಸಂಪಾದಿಸಿಕೊಳ್ಳುವ ತಿಂಗಳಾಗಿದೆ.ಮೂವತ್ತು ದಿನಗಳು ಉಪವಾಸಾಚಾರಣೆ,ಖುರಾನ್ ಪಠಣ , ದಾನಧರ್ಮ ಹಾಗೂ ಸನ್ನಡತೆ ಈ ತಿಂಗಳ ವಿಶಿಷ್ಟತೆಗಳು. ಸೂರ್ಯೋದಯದ ಮೊದಲು ಆಹಾರ ಸೇವನೆ ಅಂದರೆ  ಸೆಹರಿ ಮಾಡಲಾಗುವುದು, ಸೂರ್ಯೋದಯದ ನಂತರ ಉಪವಾಸ ಬಿಡುವುದು ಅಂದರೆ ಇಫ್ತಾರ್ ಮಾಡಲಾಗುವುದು. . ದಿನವೆಲ್ಲಾ ಖುರಾನ್ ಓದುವುದು,ಜಪಮಾಡುವುದು, ನಮಾಜ್ ಮಾಡುವುದು, ಕೈಲಾದಷ್ಟು ದಾನ ಮಾಡುವುದು.ಇಲ್ಲಿ ಕೈಲಾದಷ್ಟು ಅಂದರೆ ಏನೂ ಇಲ್ಲ ಕಡುಬಡವರು ಅಂದ ಪಕ್ಷದಲ್ಲಿ ತಲೆಗೆ 💯 ರೂ ಆದರೂ ದಾನಮಾಡಲೇ ಬೇಕು ಇದನ್ನು ಝಕಾತ್  ಎನ್ನುವರು.ಇನ್ನು ಉಳ್ಳವರು ಬಂಗಾರ,ಮನೆಮಠ, ಆಸ್ತಿಪಾಸ್ತಿಗಳನ್ನು ಲೆಕ್ಕ ಹಾಕಿ ಒಂದು ಲಕ್ಷಕ್ಕೆ ಎರಡೂವರೆ ಸಾವಿರ ರೂಪಾಯಿಯಂತೆ ದಾನ ಮಾಡಲೇಬೇಕು ಇದು ಕಡ್ಡಾಯ.ಹಣ,ಊಟ,ಬಟ್ಟೆ, ದವಸಧಾನ್ಯ ವಿತರಣೆಮಾಡುವುದು ಈ ತಿಂಗಳಲ್ಲಿ ಸಾಮಾನ್ಯ.ಈ ರೀತಿ ಮಾಡುವುದರಿಂದ ಪವಿತ್ರ ಮಾಸ ರಂಜಾನ್ ನಲ್ಲಿ ಅಲ್ಲಾಹನು ಯಾರಿಗೂ ಬರಿಹೊಟ್ಟೆ ಮಲಗದಂತೆ ಕಾಪಾಡುವನು ಎನ್ನುವ ನಂಬಿಕೆ ನಿಜವಾಗುವುದು..ಉಪವಾಸವೆನ್ನುವುದು ಒಂದು ಬಗೆಯ ತಪಸ್ಸು.  ಇದು ದೈಹಿಕ ಹಾಗೂ ಮಾನಸಿಕವಾಗಿ ಮನುಷ್ಯನನ್ನು ದೃಢಗೊಳಿಸುವುದಲ್ಲದೆ ಸುಳ್ಳು, ಮೋಸ, ವಂಚನೆ, ಲೈಂಗಿಕತೆ ,ನೀಚಕೃತ್ಯಗಳಿಗೆ ಕಡಿವಾಣ ಹಾಕುತ್ತದೆ.ಇದರಿಂದ ಉತ್ತಮ ಸಮಾಜದ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು.ಆದರೆ ಇತ್ತೀಚಿನ ದಿನಗಳಲ್ಲಿ ಕೇವಲ ಈ ಒಂದು ತಿಂಗಳು ಮಾತ್ರ ಸನ್ಮಾರ್ಗದಲ್ಲಿ ನಡೆದು ನಂತರ ಮೊದಲಿನಂತಾಗುವುದು ವಿಷಾದನೀಯ. ಹಬ್ಬದ ದಿನ ಬಡವ, ಬಲ್ಲಿದ, ಮೇಲು, ಕೀಳು ಇವ ಶತ್ರು ,ಮಿತ್ರ,ಎಂಬ ಭಾವನೆಗಳಿಲ್ಲದೆ ಒಂದೆಡೆ ಸೇರಿ ನಮಾಜ್ ಹಾಗೂ ಪ್ರಾರ್ಥನೆಯನ್ನು ನೆರವೇರಿಸಿ ಒಬ್ಬರನೊಬ್ಬರು ಆಲಿಂಗಿಸಿಕೊಳ್ಳುವ ದೃಶ್ಯ ಸಮಾನತೆ ಹಾಗೂ ಸೌಹಾರ್ದತೆಯನ್ನು ತೋರುತ್ತದೆ.ಈ ಭಾವನೆಗಳು ಸದಾ ಜನರಲ್ಲಿ ಹೀಗೆ ಇದ್ದರೆ ಎಷ್ಟು ಒಳಿತು ಅಲ್ಲವೇ. *******************

ಉಪವಾಸ ಒಂದು ತಪಸ್ಸು Read Post »

ಕಾವ್ಯಯಾನ

ಅಪ್ಪನ ಕವಿತೆಗಳು

ಉಸಿರನಿತ್ತ ಒಡಲು ಜಗದಿ ಬಯಸೊದು ಬೊಗಸೆ ಪ್ರೀತಿ
ಮರುಗದಿರಲಿ ಆತನೊಡಲು ನಿದಿರೆಯ ನಿಟ್ಟುಸಿರಲಿ
ನಮ್ಮ ಬಯಕೆ ಹೊನ್ನು ಚಿಂತೆಯ ಹೊರೆಯಾಗದಿರಲಿ ಆತಗೆ.

ಅಪ್ಪನ ಕವಿತೆಗಳು Read Post »

ಇತರೆ, ಪ್ರಬಂದ

ಹಾಲು ಎಲ್ಲಿ ಕೊಳ್ಳುವುದು?

ಅಪರೂಪಕ್ಕೊಮ್ಮೆ ಹಸುಕರು ಹಾಕಿದಾಗ ಗಿಣ್ಣು ಹಾಲು ಉಚಿತವಾಗಿ ವರ್ತನೆಯವರು ಕೊಡುತ್ತಿದ್ದರು.ಮನೆಯ ಕ್ಯಾಲೆಂಡರ್ ನಲ್ಲಿ ನೆಂಟರು ಬಂದಾಗ ಹೆಚ್ಚಿಗೆ ತೊಗೊಂಡ ಹಾಲಿನ ಲೆಕ್ಕ ಗುರುತಿಸುವ ಕೆಲಸ ಮಕ್ಕಳಿಗೆ.ತಿಂಗಳ ಕೊನೆಗೆ ಲೆಕ್ಕ ಹಾಕಿ ಚುಕ್ತಾ ಮಾಡಿದರಾಯಿತು.

ಹಾಲು ಎಲ್ಲಿ ಕೊಳ್ಳುವುದು? Read Post »

ಇತರೆ

ತನ್ನಿಂದಲೇ ಜೀವ-ಜೀವನ ಸಾಗಿಸುವವರು ತಪ್ಪು ಮಾಡಿದಾಗ ತಿದ್ದಿಕೊಳ್ಳದಿದ್ದರೆ ಅವನ ಮಾತು ಕೇಳದಿದ್ದರೆ ಮನುಷ್ಯ ಯಾವ ಕೆಳಹಂತಕ್ಕಾದರೂ ಪಿಶಾಚಿಯಾದರೂ ಸರಿ ಹಿಂಜರಿಯಲ್ಲ ಅಂತ ಸಾರಾಳ ಕಥೆಯು ಒಂದು ಪಾಠವಾಗಲಿದೆ ಎಂದರೂ ತಪ್ಪಾಗಲಾರದು.

Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ರಂಗದ ಮೇಲಿನ ಕೆಮಿಸ್ಟ್ರಿಗೆ, ರಂಗದ ಕೆಳಗಿನ ಕಲಾವಿದರ ಅನ್ಯೋನ್ಯತೆ, ಕಾಳಜಿ, , ಹಾಸ್ಯ ಲಾಸ್ಯಗಳು ಅತ್ಯಂತ ಅಗತ್ಯ ಜೀವತಂತುಗಳು ಎಂಬುದನ್ನು ನಾನು ನಿಧಾನವಾಗಿ, ಪಾರಿವಾಳ ಒಂದೊಂದೇ ಕಾಳುಗಳನ್ನು ಹೆಕ್ಕಿ ನುಂಗುವಂತೆ, ಕಲಿಯುತ್ತಲೇ ಇದ್ದೆ.

Read Post »

You cannot copy content of this page

Scroll to Top