ಗಜಲ್
ಗಜಲ್ ಮರುಳಸಿದ್ದಪ್ಪ ದೊಡ್ಡಮನಿ ನಿನ್ನ ಹೆಜ್ಜೆ ಗುರುತು ಮಣ್ಣಿನ ಹುಡಿಯಲಿ ಅಳುಕಿದೆ ಸಾಕಿಎದೆಯ ದಾರಿಯಲಿ ನಡೆದು ಬದುಕು ತುಂಬಿ ತುಳುಕಿದೆ ಸಾಕಿ ಒಲವಿನ ಪರಿಮಳ ಒಡೆದ ಕನ್ನಡಿ ಚೂರಿಗೆ ಮುತ್ತಿಕ್ಕಿದೆ ನೋಡುಉಸಿರ ಬಸಿದು ಕನಸು ಕಟ್ಟಿ ಕಾಲು ಹಾದಿ ಸಾಗಲು ನರಳುತಿದೆ ಸಾಕಿ ಭಾವ ಬಯಲಿಗೆ ಬೆಸುಗೆ ಹಾಕಿ ಮೌನ ಮನೆ ಮಾಡಿದೆಬಾಹು ಬಂಧನದಿ ಬಂಧಿಯಾಗುವ ಹೊಸ ಕನಸು ಚಿಗುರುತಿದೆ ಸಾಕಿ ಕಮರಿದ ಆಸೆ ಹಸಿರಾಗಿ ಉಸಿರ ಸೂಸಲು ಬಂದಿದೆಒಳಗಿನ ಗಾಯ ಮಾಯುವ ಮುನ್ನ ಪ್ರತಿ ಬಿಂಬ ಕಾಡುತಿದೆ ಸಾಕಿ ಮರುಳನೆದೆಯ ಹಾಸಿಗೆಯಲಿ ನಕ್ಷತ್ರದ ಬೆಳಕು ಹರಡಿ ಚಿತ್ತಾರ ಚೆಲ್ಲಿವೆಹುಡಿ ತುಳಿದ ಪಾದಕೆ ಮಲ್ಲಿಗೆ ಹಾಸಿ ಮನವು ನಗುತಿದೆ ಸಾಕಿ ********************








