ಕವಿತೆ
ಅಮ್ಮ
ನಾಗರಾಜ್ ಬೆಳಗಟ್ಟ
ನವಮಾಸಗರ್ಭಧರಿಸಿ
ಕರುಳಬಳ್ಳಿಕತ್ತರಿಸಿ
ನೆತ್ತರಮುದ್ದೆಯಸ್ಪರ್ಶಿಸಿದಕುಲದೇವತೆ
ನೋವಲ್ಲೇನಗೆಸುರಿಸಿ
ನಿನ್ನುಸಿರನನಗರಿಸಿ
ಹೃದಯಕ್ಕೆಉಸಿರನ್ನಿಟ್ಟಸೃಷ್ಟಿದೇವತೆ ||
ಹಾಲುಉಣಿಸಿ
ಅರಿವುಬೆಳೆಸಿ
ಬಾಳಲ್ಲಿನೀನಾದೆಅಷ್ಟದೇವತೆ
ಜೀವನೀಡಿ
ಹರಿಕೆಮಾಡಿ
ಹರುಷದಿಹೊತ್ತುಮೆರೆದಇಷ್ಟದೇವತೆ ||
ದೈರ್ಯನೀಡಿ
ಗೆಲುವಬೇಡಿ
ಬಾಳಪಾಠಕಲಿಸಿದಜ್ಞಾನದೇವತೆ
ಮಾತುಚೆನ್ನ
ನೀತಿಚಿನ್ನ
ಎಂದುತೋರಿದಮಾತೃದೇವತೆ ||
ತೊಳುಗಳತಿದ್ದಿತೀಡಿ
ಮೊಗಕೆಕಾಡಿಗೆಯಚಂದಮಾಡಿ
ಬಾಳಿನದೃಷ್ಟಿತೆಗೆದದೃಷ್ಟಿದೇವತೆ
ಪ್ರತಿಕ್ಷಣವೂಮುದ್ದುಮಾಡಿ
ಪ್ರತಿದಿನವೂಶುದ್ಧಮನದಿ
ಜುಟ್ಟುಕಟ್ಟಿಇಟ್ಟನಿಟ್ಟಅನ್ನಅನ್ನದೇವತ ||
ಧರಣಿಯೊಳಗೆ
ವರವುನೀನು
ಮೆರೆದುಮೆರೆದುಸ್ಮರಿಸುವೆ
ಶಿರವಬಾಗಿ
ಕರವಮುಗಿದು
ನಮಿಸಿನಮಿಸಿನಲಿಯುವೆ||
***************************
superb Sir