Month: May 2021

ಸಾವಿನ ಮೆರವಣಿಗೆ

ಆದರೂ ಕಗ್ಗತ್ತಲ ಕರಾಳ ರಾತ್ರಿಯಲಿ
ಮನೆ ಬೆಳಗುವ ಹಣತೆಯಂತೆ
ಬತ್ತಿಲ್ಲ ಆಶಾವಾದ ಸತ್ತಿಲ್ಲ ಆತ್ಮವಿಶ್ವಾಸ
ಗೆದ್ದೇ ಗೆಲ್ಲುತ್ತೇವೆ ಮತ್ತೆ ಪುಟಿದು

ತರಹಿ ಗಜಲ್

ಗಜಲ್ ತರಹಿ ಗಜಲ್ ಅರುಣಾ ನರೇಂದ್ರ ಸಾನಿ ಮಿಸ್ರಾ: ಡಾ.ಮಲ್ಲಿನಾಥ ತಳವಾರ ಸಾವು ಬದುಕಿನ ನಡುವೆ ಜೀವಗಳು ಸೆಣಸುತ್ತಿವೆಕಾಳಸಂತೆಯಲ್ಲಿ ಹಾಸಿಗೆಗಳು ಬಿಕರಿಯಾಗುತ್ತಿವೆ ಬದುಕಿಗಾಗಿ ಬೊಗಸೆಯೊಡ್ಡಿ ಉಸಿರು ಬಿಕ್ಕುತ್ತಿದೆಶ್ವಾಸದ ಏರಿಳಿತವನ್ನು ನೋಟುಗಳು ನಿರ್ಧರಿಸುತ್ತಿವೆ ದೇಶ ದಳ್ಳುರಿಯಲ್ಲಿ ಒದ್ದಾಡುತ್ತಿದೆ ಹೇ ಖುದಾಉಳುವಿಗೆಲ್ಲಿದೆ ಜಾಗ ಸಂಬಂಧಗಳು ಕಣ್ಣೀರಿಡುತ್ತಿವೆ ಊರು ಕಿರಿದಾಗಿದೆ ಸ್ಮಶಾನ ಹಿರಿದಾಗಿದೆದಫನ್ ಮಾಡಲಾಗದೆ ಹೆಣಗಳು ನಾರುತ್ತಿವೆ ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡುವರೇ ಅರುಣಾದೇಶವಾಳುವ ದೊರೆಗೆ ಆತ್ಮಗಳು ಕಾಡುತ್ತಿವೆ ****************************************

ಗಜಲ್

ಗಜಲ್ ಪ್ರತಿಮಾ ಕೋಮಾರ ಹರಿಯುವ ನದಿಯೂ ಸ್ತಬ್ಧವಾದಂತೆ ಕಾಣುತ್ತಿದೆ ಇಂದುಮಾತಾಡುವ ಮನವೆಲ್ಲಾ ಮೌನ ಹೊದ್ದು ನಡೆಯುತ್ತಿದೆ ಇಂದು ಸೂರ್ಯಚಂದ್ರರ ಆಗಮನವೆಲ್ಲ ನಿಯಮ ಬದ್ಧವಾಗೇ ಇದೆಜಗವು ಮಾತ್ರ ಕತ್ತಲ ಕೂಪದಲ್ಲಿ ಮುಳುಗುತ್ತಿದೆ ಇಂದು ನಿನ್ನೆವರೆಗೂ ಹೂ ಮೊಗದಲ್ಲೆಲ್ಲ ಪ್ರೀತಿ ,ಚೆಲುವು ನಗುತ್ತಿತ್ತು ಎಲ್ಲರ ಒಳಹೊರಗೆ ಬರೀ ಆಕ್ರಂದನವೇ ಕೇಳಿ ಬರುತ್ತಿದೆ ಇಂದು ಭರವಸೆಯ ಬೆಳಕು ನೋವ ಜಡವ ಹತ್ತಿಯಾಗಿಸುವುದು  ನಡುಗುವ ಭಯವೇ ಎಲ್ಲೆಲ್ಲೂ ಸುಳಿದಾಡುತ್ತಿದೆ ಇಂದು ಯಾರದೋ ಹನಿ ಕಣ್ಣೀರು “ಪ್ರತಿ”ಯ ವಿಲವಿಲ ಅನ್ನಿಸುತ್ತಿತ್ತುನಮ್ಮವರ  ಸಾವಿಗೂ ಸ್ಪಂದಿಸಲಾಗದೆ ಎದೆಯು ಕಲ್ಲಾಗುತ್ತಿದೆ […]

ಓಟೂ…..ಓಟು…..

ಕಾಲಾಳುಗಳು ಕಾಣೆಯಾಗಿದ್ದಾರೆ
ಕುದುರೆಗಳು ಲಾಯದಲ್ಲಿದೆ
ಕೆನೆ ಮೆದ್ದಿವೆ
ಕೆನೆಯುತ್ತಿವೆ… ಆಹಾ…
ಅವುಗಳ ಕಿವಿ ತೂತಾಗಿದೆ

ಹೊರಡುವ ಘಳಿಗೆ ತನ್ನ ಹೆಂಡತಿ ತನ್ನನ್ನು ಹಿಂದೆ ಕರೆಯುವಳೆಂದು ಆಸೆಯಿಂದ ದಿಟ್ಟಿಸುತ್ತಾನೆ. ಆದರೆ ಆಕೆಗೆ ಅದರ ಗಮನವೇ ಇರುವುದಿಲ್ಲ. ಅವನು ನಿರಾಸೆ,ನೋವಿನಲ್ಲಿ ಹೊರಡುತ್ತಾನೆ. ಈ ದೃಶ್ಯದ ಮುಕ್ತಾಯದಲ್ಲಿ ಸಭಾಂಗಣ ನಿಂತು ಕಲಾವಿದನ ಅಭಿನಯಕ್ಕೆ ಚಪ್ಫಾಳೆ ಮಳೆ ಸುರಿಸಿತ್ತು.

ಗಜಲ್

ಗಜಲ್ ರತ್ನರಾಯಮಲ್ಲ ಕಾಳಸಂತೆಯಲಿ ಹಾಸಿಗೆಗಳು ಕೊಳೆಯುತ್ತಿವೆಜೀವದ ಬಡತಿಗಾಗಿ ಆಸ್ಪತ್ರೆಗಳು ಹವಣಿಸುತ್ತಿವೆ ಜನನದಲ್ಲಿ ಮರಣವೂ ಇದೆ ಅಂಜುವವರಾರುಸಾವಿನಲ್ಲೂ ರಾಜಕೀಯ ಪಕ್ಷಗಳು ಚಿಗುರುತ್ತಿವೆ ಪಾಪ-ಪುಣ್ಯ ಬಾಲ್ಯದಿಂದಲೂ ಅನುರಣಿಸುತಿದೆಮಸಣಗಳೂ ಇಂದು ಧನವನ್ನು ಬೆಳೆಯುತ್ತಿವೆ ಆತ್ಮವಿಶ್ವಾಸದ ಫಸಲಿಗೆ ಪರಂಪರೆಯೇ ಇದೆ ಇಲ್ಲಿಮಾಧ್ಯಮಗಳೇ ಭಯ ಬಿತ್ತಿ ದುಡ್ಡು ದೋಚುತ್ತಿವೆ ಮರಣಕ್ಕೆ ಚುಂಬಿಸಲು ಭಯ ಪಡದಿರು ‘ಮಲ್ಲಿ’ಹಣದ ಹಾದರವು ಹೆಣಗಳನ್ನು ಉರುಳಿಸುತ್ತಿವೆ ****************

ಗಜಲ್.

ಗಜಲ್. ವಿಜಯಲಕ್ಷ್ಮಿ ಕೊಟಗಿ ನನ್ನ ದೇಹದ ಬಣ್ಣ ಬಿಸಿಲನ್ನೇ ಉಂಡು ಕಪ್ಪಾಗಿದೆ ಕಾಮ್ರೇಡ್ನನ್ನ ಗಜಲ್ ದುಡಿದು ಹಕ್ಕಳೆದ್ದು ಕೆಂಪಾಗಿದೆ ಕಾಮ್ರೇಡ್ ನಾನು ಹಸಿವನ್ನು ತಣಿಸಲು ಕೆಸರಿಗಿಳಿಯಲು ಹೇಸದಿರಬಹುದುನನ್ನ ಗಜಲಿನಲ್ಲಿ ಸ್ವಾಭಿಮಾನದ ನಿರ್ಮಲ ಕನಸಿದೆ ಕಾಮ್ರೇಡ್ ನಾನು ಆಸ್ತಿ ಅಧಿಕಾರವಿಲ್ಲದ ಬಡವನೇ ಇರಬಹುದುನನ್ನ ಗಜಲಿಗೆ ಸಂವಿಧಾನದ ಒಡನಾಟವಿದೆ ಕಾಮ್ರೇಡ್ ನಾನು ನರಪೇತಲ ನಾರಾಯಣನಂತೆ ಇದ್ದಿರಬಹುದುನನ್ನ ಗಜಲಿಗೆ ಬಲಭೀಮನ ತಾಕತ್ತಿದೆ ಕಾಮ್ರೇಡ್ ನಾನು ದಲಿತ ಶೂದ್ರ ಕೂಲಿಕಾರ್ಮಿಕನೇ ಇರಬಹುದುನನ್ನ ಗಜಲ್ ಶ್ರಮಿಕರ ಬೆವರಿಗೆ ಅರ್ಪಿತವಾಗಿದೆ ಕಾಮ್ರೇಡ್ ನಾನು ಮನುಷ್ಯನೆಂದೇ ಭಾವಿಸದ […]

ಗಜಲ್

ಮುಚ್ಚಿದ ಕಿಟಕಿಗೆ ಬಡಿದು ಸಾಯುವ ಹಕ್ಕಿಗೆ ಯಾವ ಭ್ರಮೆ
ಚಾಚಿದ ಕೈಗಳೆಲ್ಲ ಹಿಂದೆ ಸರಿಯುತ್ತಿವೆ ಸಹಿಸಲಾಗುತ್ತಿಲ್ಲ.

ಬದರ್ ಪುಸ್ತಕದ ವಿಶ್ಲೇಷಣೆ

ಈ ಲೋಕದ ನಿಸ್ವಾರ್ಥತೆಗೆ ಪಠ್ಯವಾಗಿರುವವಳೇ ಹೆಣ್ಣು. ಭೂಮಿಗೆ ಬಿದ್ದ ಫಲ ಕೊಡಲೇಬೇಕು. ಅಂತೆಯೇ ಈ ಲೋಕದ ಉತ್ಪಾದಕತೆಯ ಶಕ್ತಿ ಇರುವುದು ಹೆಣ್ಣಿನಲ್ಲಿ ಮಾತ್ರ. ಆದ್ದರಿಂದ ಮಡದಿಯನ್ನು, ತಾಯಿಯನ್ನು, ಹೆಣ್ಣನ್ನು ಗೌರವಿಸುವುದು ನಮ್ಮ ಸಂಸ್ಕೃತಿಯಾಗಿದೆ.

Back To Top