Category: ರಂಗ ರಂಗೋಲಿ

ದಿನ ದಿನವೂ ಏಕವ್ಯಕ್ತಿ, ಬಹಪಾತ್ರ. ನಾಟಕದ ರಂಗದಲ್ಲಿ, ಪ್ರೀತಿ, ನೋವು, ಮಮತೆ, ಕಷ್ಟ, ಸಂಘರ್ಷ ಎಲ್ಲವನ್ನೂ ಅನುಭವಿಸಿ, ಹಣ್ಣಾಗುವ ಹಣ್ಣಿನ ಸಿಹಿ ಮಾತ್ರ ಹಂಚುವ ಸ್ತ್ರೀ ಜನ್ಮಕ್ಕೆ ಮಾತ್ರ ‘ಸಿರಿ’ಯಾಗಲು ಸಾಧ್ಯ. ಅದು ಆಕೆಗೆ ನಿಜಜೀವನದಷ್ಟೇ ಸಹಜ.

ಇಲ್ಲಿರುವ ಮಾತೃರೂಪೀ ಸಂಸ್ಕೃತಿ, ಕುಟುಂಬ ರಚನೆ ಹೆಣ್ಣಿನ ಅನನ್ಯತೆಗೆ ದೊಡ್ಡ ಕೊಡುಗೆ ನೀಡಿದೆ. ಅವೆಲ್ಲವೂ ಈ ಪಾಡ್ದನಗಳಲ್ಲಿ ಹರಡಿಕೊಂಡಿದೆ. ಹೆಚ್ಚಿನ ಪಾಡ್ದನಗಳು ದುರಂತ ವಸ್ತುವನ್ನು ಹೊಂದಿರುತ್ತದೆ. ಎಲ್ಲವೂ ತುಳುವರಿಗೆ ಬಲು ಆಪ್ತ. ಇವೆಲ್ಲದರಿಂದ ” ಸಿರಿ” ಎಂಬ ಪದವೇ ನನ್ನೊಳಗೊಂದು ಆಕರ್ಷಣೆಯ ಮೂಲ ಬೀಜಮಂತ್ರವಾಗಿ ಅರಿವಿನ ಕ್ಷೇತ್ರ ವಿಸ್ತರಿಸುವ ಮುನ್ನವೇ ಬಿತ್ತನೆಯಾಗಿತ್ತು

ಕರತಾಡನದ ಸುರಿಮಳೆ. ಏಳಲು ಬಲವಿಲ್ಲದಂತೆ.. ಎದ್ದೆ. ಸಭಾಂಗಣ ಪೂರ್ತಿ ನನ್ನ ನೋಡುತ್ತಿದೆ. ಎದ್ದು ನಿಂತು ಚಪ್ಪಾಳೆ ಸುರಿಯುತ್ತಿದೆ. ನಶೆಯಲ್ಲಿದ್ದಂತೆ ನಡುಗುವ ಕಾಲುಗಳನ್ನು ಎಳೆಯುತ್ತ ನಡೆದೆ. ಅಪ್ರತಿಮ ಕಲಾವಿದರಾದ ಪ್ರಕಾಶ್ ರಾಜ್ ಅವರಿಂದ ಪ್ರಶಸ್ತಿ ಸ್ವೀಕರಿಸಿದೆ. ಮಾತನಾಡಿದೆ

ಇದರ ಕತೆ ಸುತ್ತುವುದೇ, ತಾಯಿಯ ಪಾತ್ರದ ಸುತ್ತ. ಮನೆಯ ಜವಾಬ್ದಾರಿಗಳನ್ನೆಲ್ಲ ಪ್ರೀತಿಯಿಂದ ನಿರ್ವಹಿಸುವ ತಾಯಿ. ಮಕ್ಕಳನ್ನು ಬೆಳೆಸಿ ವಿದ್ಯಾವಂತರನ್ನಾಗಿಸುತ್ತಾಳೆ. ಜವಾಬ್ದಾರಿ ಹೊರಲು ಹಿಂದೇಟು ಹಾಕುವ ಪತಿ. ಮಕ್ಕಳೂ ಮದುವೆಯಾಗಿ ಸೊಸೆಯಂದಿರು ಮನೆ ತುಂಬಿದರೂ ಅಮ್ಮನಿಗೆ ಮುಗಿಯದ ಕೆಲಸ. ಅಪ್ಪ ರಿಟೈರ್ ಆಗಿ ವಿಶ್ರಾಂತ ಜೀವನ

ಅಂಕಣ ಬರಹ ರಂಗ ರಂಗೋಲಿ ಓಪತ್ತಿಯ ಒಡೆದ ಬಳೆ ಚೂರುಗಳು ” ನಾನು ಏನೂ ಹೇಳುವುದಿಲ್ಲ. ತಾಯಿ ಕರುಳಿನ ಸಂಕಟ, ನೋವು, ಅವಳ ಅಸಹಾಯಕತೆ, ನೋಡುವವರಿಗೆ ತಲುಪಬೇಕು. ಯಾವುದೇ ಡೈಲಾಗ್ ಇಲ್ಲ. ಕದಿರು ತುಂಬಿ ಅಂಗಳದಲ್ಲಿ ಪೇರಿಸಿಟ್ಟ ಒಣಹುಲ್ಲುಇದೆ. ಅದು ಅವಳಿಗೆ ಲಕ್ಷ್ಮೀ. ತುಳಸೀಕಟ್ಟೆಯಿದೆ. ನೀವು ಅದರ ಎದುರು ಬೀಳಬೇಕು, ನೀವು, ನಿಮ್ಮ ದುಃಖ..ನನಗೆ ನನ್ನ ಕಲಾವಿದೆಯ ಬಗ್ಗೆ ನಂಬಿಕೆಯಿದೆ. ಅಭಿನಯಿಸಿ” ನಿರ್ದೇಶಕರಾದ ಚಂದ್ರಹಾಸ ಆಳ್ವರು ಕರೆದು ಸಂದರ್ಭ ತಿಳಿಸಿದರು. ನನಗೆ ಭಯ. ತುಳಸೀಕಟ್ಟೆ ಎದುರು ಕುಸಿದು […]

ಕನ್ನಡ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ” ಪಡೆದ ಇವರು ರಂಗಭೂಮಿಹಾಗೂಕಿರುತೆರೆಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿಭಾಷೆಯಸಿನೇಮಾಗಳಲ್ಲಿಅಭಿನಯ. ಕೊಂಕಣಿಸಿನೇಮಾ ” ಅಂತು” ವಿನಅಭಿನಯಕ್ಕೆರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿಪ್ರಸ್ತುತಿ 30 ಯಶಸ್ವೀಪ್ರದರ್ಶನಕಂಡಿದೆ.ಮಂಗಳೂರುವಿಶ್ವವಿದ್ಯಾನಿಲಯದಕೊಂಕಣಿಅಧ್ಯಯನಪೀಠದಸದಸ್ಯೆ. ಪ್ರಸ್ತುತರಾಜ್ಯಕೊಂಕಣಿಸಾಹಿತ್ಯಅಕಾಡಮಿಸದಸ್ಯೆ. “ಅಮೋಘಎಂಬಸಂಸ್ಥೆಹುಟ್ಟುಹಾಕಿಸಾಹಿತ್ಯಿಕಹಾಗೂಸಾಂಸ್ಕೃತಿಕಕಾರ್ಯಕ್ರಮಗಳಆಯೋಜನೆ. ಆಕಾಶವಾಣಿಕಲಾವಿದೆ.ಇದುವರೆಗೆ 3 ಕವನಸಂಕಲನಸೇರಿದಂತೆ 6 ಪುಸ್ತಕಗಳುಪ್ರಕಟಗೊಂಡಿವೆ. GSS ಕಾವ್ಯಪ್ರಶಸ್ತಿ,ಕನ್ನಡಸಾಹಿತ್ಯಪರಿಷತ್ತಿನದತ್ತಿಪ್ರಶಸ್ತಿ,GS Max ಸಾಹಿತ್ಯಪ್ರಶಸ್ತಿ. ಹಲವಾರುಕವಿಗೋಷ್ಠಿಯಲ್ಲಿಭಾಗವಹಿಸುವಿಕೆ

ಎಲ್ಲವೂ ಕನಸಿನಲ್ಲಿ. ಏನೋ ನಡೆದಂತೆ. ಉಮಾಶ್ರೀಯವರು ಮುಖ್ಯಪಾತ್ರದಲ್ಲಿದ್ದ ಸಿನೇಮಾ. ಕೃಷ್ಣಮೂರ್ತಿಯವರಿಗೆ ಅವರ ಗಂಡನ ಪಾತ್ರ. ನನಗೆ ಅವರ ಎರಡನೆಯ ಹೆಂಡತಿಯ ಪಾತ್ರ

ನಾಟಕ ನೋಡಿದ ಅದೆಷ್ಟು ಸಿರಿವಂತ ಹೃದಯದವರು ದೊಡ್ಡ ದೊಡ್ಡ ಹೆಸರು ಮಾಡಿದ ಕಲಾವಿದರೊಂದಿಗೆ ನನ್ನನ್ನು ಹೋಲಿಸಿ ಶಹಭಾಷ್ ಎಂದಾಗ ಕಲಾವಿದೆಯಾಗಿ ತೊರೆ ತೆರೆದು ಅರಳುವಿಕೆಗೆ ಸಮರ್ಪಣೆ ಮಾಡಿದ್ದು ಸಾರ್ಥಕ ಅನ್ನಿಸಿದೆ

ರಂಗ ರಂಗೋಲಿಯಲ್ಲಿ ಪೂರ್ಣಿಮಾ ಬರೆಯುತ್ತಾರೆ-
ಅದು ಸುಮಾರು 2009 ರ ಇಸವಿ. ಬದುಕಿನ ಸಂಕ್ರಮಣ ಕಾಲ. ಹಲವು ಕೌತುಕಗಳನ್ನು, ಹಲವು ತಿರುವುಗಳನ್ನೂ, ಹಲವು ಸಂಕಟಗಳನ್ನೂ, ಸಂಭ್ರಮಗಳನ್ನು ಯಥೇಚ್ಛವಾಗಿ ಸುರಿದುಬಿಟ್ಟಿತ್ತು.

ಕಲಿಕೆಯ ದೃಷ್ಟಿಯಿಂದ ಸರಸಮ್ಮನ ಸಮಾಧಿಯ ಚಿತ್ರೀಕರಣದ ಸಮಯದಲ್ಲಿ ಹಲವಾರು ಕಲಾವಿದರ ಅಭಿನಯ, ದೇಹಭಾಷೆ, ತೊಡಗಿಸಿಕೊಳ್ಳುವ ಪರಿ, ಸಂಭಾಷಣೆಯನ್ನು ಉಚ್ಚರಿಸುವ ಬಗೆ ಇವನ್ನೆಲ್ಲ ಬಹಳ ಸಮೀಪದಿಂದ ಗಮನಿಸಿದ್ದೆ. ಇದು ನನ್ನೊಳಗಿನ ರಂಗದ ಹುಚ್ಚಿಗೆ ಬಹಳ ಕಾಣಿಕೆ ನೀಡಿದೆ.

Back To Top