ಗಜಲ್

ಗಜಲ್

ಪ್ರತಿಮಾ ಕೋಮಾರ

ಹರಿಯುವ ನದಿಯೂ ಸ್ತಬ್ಧವಾದಂತೆ ಕಾಣುತ್ತಿದೆ ಇಂದು
ಮಾತಾಡುವ ಮನವೆಲ್ಲಾ ಮೌನ ಹೊದ್ದು ನಡೆಯುತ್ತಿದೆ ಇಂದು

ಸೂರ್ಯಚಂದ್ರರ ಆಗಮನವೆಲ್ಲ ನಿಯಮ ಬದ್ಧವಾಗೇ ಇದೆ
ಜಗವು ಮಾತ್ರ ಕತ್ತಲ ಕೂಪದಲ್ಲಿ ಮುಳುಗುತ್ತಿದೆ ಇಂದು

ನಿನ್ನೆವರೆಗೂ ಹೂ ಮೊಗದಲ್ಲೆಲ್ಲ ಪ್ರೀತಿ ,ಚೆಲುವು ನಗುತ್ತಿತ್ತು
 ಎಲ್ಲರ ಒಳಹೊರಗೆ ಬರೀ ಆಕ್ರಂದನವೇ ಕೇಳಿ ಬರುತ್ತಿದೆ ಇಂದು

ಭರವಸೆಯ ಬೆಳಕು ನೋವ ಜಡವ ಹತ್ತಿಯಾಗಿಸುವುದು
  ನಡುಗುವ ಭಯವೇ ಎಲ್ಲೆಲ್ಲೂ ಸುಳಿದಾಡುತ್ತಿದೆ ಇಂದು

ಯಾರದೋ ಹನಿ ಕಣ್ಣೀರು “ಪ್ರತಿ”ಯ ವಿಲವಿಲ ಅನ್ನಿಸುತ್ತಿತ್ತು
ನಮ್ಮವರ  ಸಾವಿಗೂ ಸ್ಪಂದಿಸಲಾಗದೆ ಎದೆಯು ಕಲ್ಲಾಗುತ್ತಿದೆ ಇಂದು

************

One thought on “ಗಜಲ್

Leave a Reply

Back To Top