ರೈತ ಗಜಲ್

ಬರೀ ಭರವಸೆಯ ಮಹಾಪೂರ ಬೇಡ ನನಗೆ

ನೀಡಿ ಹಿಡಿ ಕಾಳು ಮರಳಿಸುವೆ ರಾಶಿರಾಶಿ ನಿಮಗೆ

ಬರದಿರುವ ಮಳೆಗಾಗಿ ಕಾಯುತ್ತಾ ಕೂರುವುದಿಲ್ಲ 

ರಕ್ತ ಬಸಿದಾದರೂ  ನೀಡುವೆ ನಿಮಗೆ ಬೆಲ್ಲ

ನನಗೇನು ಬೇಕಿಲ್ಲ ನಿಮ್ಮಂತೆ ಸೂಟುಬೂಟು

ಕೊನೆಗಂತೂ ಇದ್ದೇ ಇದೆಯಲ್ಲ ಖಾಲಿ ಕಪಾಟು

ತುತ್ತು ಅನ್ನ ನೀರು ಸೂರು ಸಾಕು ಎನಗೆ

ಮತ್ತೇನು ಮಿಕ್ಕಿದ್ದು ಹಂಚಿ ಬಿಡುವೆ ನಿಮಗೆ

ಬೇಡೆನಗೆ ಮಣ ಮಣ ಬಂಗಾರದ ತಿಜೋರಿ

ಸಾಕೆನಗೆ ಒಣ ಒಣ ಒಂದೊತ್ತಿನ ಅನ್ನದ ಐಸಿರಿ

*************************************************

ಶ್ರೀದೇವಿ ಕಜ೯ಗಿ

2 thoughts on “

Leave a Reply

Back To Top