ಓಟೂ…..ಓಟು…..

ಕವಿತೆ

ಓಟೂ…..ಓಟು…..02

ಬೆಂಶ್ರೀ ರವೀಂದ್ರ

ಅವನು ಕಡಲ ತಡಿಯಲ್ಲಿ ನಿಂತಿದ್ದ
ಹುಣ್ಣಿಮೆ.. ಅಮಾವಾಸ್ಯೆ…….
.. ಹಗಲು….. ರಾತ್ರಿ.. ೨೪ ಗಂಟೆ ನಿಲ್ಲದ
ಮೊರೆತ…. ಮೊರೆ..ಮೊರೆ… ತ

ಒಂದಾದ ಮೇಲೊಂದರಂತೆ ಅಲೆ
ತಡಿಗೆ ತಟ್ಟುತ್ತಲೇ ಇದೆ,
ಕೊಚ್ಚಿದ‌ ಮರಳು ಮತ್ತೆ ತಡಿಗೆ
ಮತ್ತೆ ಕಡಲಿಗೆ

ಎದ್ದಿದ್ದ ಅಲೆ ತಣ್ಣಗಾಯ್ತೆಂದು
ದೀಪ ಹಚ್ಚಿ ಢೋಲು ಹೊಡೆದೆವಲ್ಲಾ
ಈಗ
ದೀಪಗಳು.. ತೂಗಿ…ತೂಗಿ….
ಆರಿಹೋಗುತ್ತಿದೆಯಲ್ಲಾ.. ಗಾಳಿ… ಗಾಳಿ.

ಇಂಗಾಲವ ಅಂಗಳಕ್ಕೆಸದ ದೀಪಗಳು
ಮೊರೆಯುತ್ತಿವೆ ಮೋರೆ ಬಾಡಿ
ಬೇಕು.. ಬೇಕು..‌ಆಮ್ಲಜನಕ…

ಹ್ಞು…ಹ್ಞು…ಹ್ಞೂ… ಉ‌..ಸಿ…ರು..
ಹಾ….ಹ್ಹ…..ಹ್ಞೂ…. ಆ…..ಹಾ….
ಆಕ್ರಂದನ…. ಕ್ಷೀಣ…ಕ್ಷೀಣ…
ಕಣ್ಣು ನಿಸ್ತೇಜ… ವಾಲುತ್ತಿದೆ ..ಕತ್ತು

ಕುತ್ತು.. ಡಾಕ್ಟರೇ ಏನಾದ್ರೂ..ಮಾಡಿ
ಐ…ಕಾಂಟ್….ಬ್ರೀತ್… ಐ…ಕಾಂಟ್
ಸಾರ್…ಸಾರ್…ಏನಾದ್ರೂ…. ಸಾರ್..
ಆಕ್ಸಜನ್ ಶಾರ್ಟೇಜ್.. ಗೆಟ್
ಮೆಡಿಕಲ್ ಆಕ್ಸಿಜನ್….02
…02……02………..02………..

ಎಲ್ಲೆಲ್ಲೂ ಪ್ರತಿಧ್ವನಿಸುತ್ತಲೇ ಇದೆ
ತೆರೆದ ಬಾಯಿ ಮುಚ್ಚುತ್ತಲೇ ಇಲ್ಲ
ಹೌದು
ತೆರೆದ ಬಾಯಿ ಮುಚ್ಚಿತ್ತಲೇ ಇಲ್ಲ
ಕೊಡಿ.. ಕೊಡಿ..ಓಟೂ… ಓಟೂ

ಶತಶತಮಾನಗಳು ಮಲಗಿದ್ದ ಆನೆ
ಈಗತಾನೆ ಎದ್ದಿದೆ ; ಅದಕ್ಕೇ ಹಸಿವು
ಆದರೂ ನೋಡಿ ಎಷ್ಟು ಚೆನ್ನಾಗಿ ಕುಣಿಯುತ್ತಿದೆ
ಓಟು ಕೊಡಿ..ಓಟು ಕೊಡಿ….ಓಟೂ

ಕುಣಿ ಮರಿ ಕುಣಿ…ಕಿಂಕಿಣಿ..ಕಿಣಿ
ಗದ್ದುಗೆ ನೀನೆ ಬರಬೇಕು
ಮಾಂತ್ರಿಕ ಜೋಳಿಗೆಗೆ ಹಾಕಿಕೋ ಓಟೂ

ಬೀದಿ.. ಬೀದಿಯಲೀಗ ಹರಿದ ಜೋಳಿಗೆ
ಸ್ವಾಮಿ..02… ಇದೆಯಾ….02….
ಸಿಗದ ಬೆಡ್‌ಗಳು ಬಾಯಾರಿವೆ
ಬೆಟರ್ ಲಕ್ ನೆಕ್ಸ್ಟ್ ಟೈಂ
ಅನ್ನದಿರು ಭಗವಂತ

ಓಟು ಕಿತ್ತುಕೊಂಡವರು ಓಡಿದ್ದಾರೆ
ಕಾಲಾಳುಗಳು ಕಾಣೆಯಾಗಿದ್ದಾರೆ
ಕುದುರೆಗಳು ಲಾಯದಲ್ಲಿದೆ
ಕೆನೆ ಮೆದ್ದಿವೆ
ಕೆನೆಯುತ್ತಿವೆ… ಆಹಾ…
ಅವುಗಳ ಕಿವಿ ತೂತಾಗಿದೆ

02….02… ಬೇಕು…. 02…ಬೇಕು
ಹ್ಞಾ….ಹ್ಞಾಅ..ಕುದುರೆಗಳು ಕೆನೆಯುತ್ತಿವೆ
ಓಟು..ಬೇಕು..ಆಹಾ..ಓಟು ಬೇಕು
ಓಟೂ….ಓಟೂ……..

*********************

3 thoughts on “ಓಟೂ…..ಓಟು…..

  1. ಪ್ರಸ್ತುತ ಪರಿಸ್ಥಿತಿಯ ವಿಡಂಬನೆ ಹರಿತವಾಗಿ ಮೂಡಿದೆ

  2. ಸದ್ಯದ ಪರಿಸ್ಥಿತಿ ಗೆ ಕನ್ನಡಿ ಹಿಡಿದಂತಿದೆ

  3. ಮೊನಚಾದ ಸಂದೇಶ. ಜೊತೆಗೆ ಕವನ ತನ್ನ ರೂಪದಲ್ಲೂ ( ಫಾರ್ಮ್‌ ) ಒಂದು ಅನನ್ಯತೆಯನ್ನು ಸಾಧಿಸಿದೆ. ಓಟು ಎನ್ನುವುದನ್ನು ಧ್ವನಿಸಲು ಆಮ್ಲಜನಕದ ರಾಸಾಯನಿಕ ಸಂಕೇತದ ಬಳಕೆ ಒಂದು ಶ್ಲೇಷೆಯನ್ನು ಸಾಧಿಸಿದೆ. ರೂಪವಾದಿ ವಿಮರ್ಶೆಯ ಒರೆಗಲ್ಲಲ್ಲಿ ತೇರ್ಗಡೆಯಾಗಿ ಮಿಂಚುವ ಫಾರ್ಮ್‌ ನಲ್ಲಿ ಕವಿ ಕಂಟೆಂಟ್‌ ( ವಸ್ತು) ನ್ನು ತುಂಬಿದ್ದಾರೆ. ಹಿನ್ನೆಲೆಯಾಗಿ ರುವ ಆಮ್ಲಜನಕದ ಸಿಲಿಂಡರುಗಳ ಚಿತ್ರವೂ ಮಾರ್ಮಿಕವಾಗಿದೆ. ಅಭಿನಂದನೆಗಳು. – ಶಾಂತಾ ನಾಗಮಂಗಲ

Leave a Reply

Back To Top