ತರಹಿ ಗಜಲ್

ಗಜಲ್

ತರಹಿ ಗಜಲ್

ಅರುಣಾ ನರೇಂದ್ರ

gray tomb

ಸಾನಿ ಮಿಸ್ರಾ: ಡಾ.ಮಲ್ಲಿನಾಥ ತಳವಾರ


ಸಾವು ಬದುಕಿನ ನಡುವೆ ಜೀವಗಳು ಸೆಣಸುತ್ತಿವೆ
ಕಾಳಸಂತೆಯಲ್ಲಿ ಹಾಸಿಗೆಗಳು ಬಿಕರಿಯಾಗುತ್ತಿವೆ

ಬದುಕಿಗಾಗಿ ಬೊಗಸೆಯೊಡ್ಡಿ ಉಸಿರು ಬಿಕ್ಕುತ್ತಿದೆ
ಶ್ವಾಸದ ಏರಿಳಿತವನ್ನು ನೋಟುಗಳು ನಿರ್ಧರಿಸುತ್ತಿವೆ

ದೇಶ ದಳ್ಳುರಿಯಲ್ಲಿ ಒದ್ದಾಡುತ್ತಿದೆ ಹೇ ಖುದಾ
ಉಳುವಿಗೆಲ್ಲಿದೆ ಜಾಗ ಸಂಬಂಧಗಳು ಕಣ್ಣೀರಿಡುತ್ತಿವೆ

ಊರು ಕಿರಿದಾಗಿದೆ ಸ್ಮಶಾನ ಹಿರಿದಾಗಿದೆ
ದಫನ್ ಮಾಡಲಾಗದೆ ಹೆಣಗಳು ನಾರುತ್ತಿವೆ

ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡುವರೇ ಅರುಣಾ
ದೇಶವಾಳುವ ದೊರೆಗೆ ಆತ್ಮಗಳು ಕಾಡುತ್ತಿವೆ

****************************************

Leave a Reply

Back To Top