ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಹಾಯ್ಕುಗಳು

ಹಾಯ್ಕುಗಳು ಭಾರತಿ ರವೀಂದ್ರ. ನಲ್ಲ ಮನದಂಗಳ :ನಲ್ಲನ ಹೆಸರಿನ,ಹಸೆ ಮೂಡಿದೆ. ಲಜ್ಜೆ ಹಸೆಗೂ ಲಜ್ಜೆಅವನ ನೆನಪಲ್ಲಿ,ನಲ್ಲೆ ನಗಲು. ದುಂಬಿ ಹೂವಿನಮಲು.ದುಂಬಿಗೆ ಹೊಸಗಾನ,ಶೃಂಗಾರ ಕಥೆ. ತಾರೆ ಮಿಂಚಿನ ನೋಟ :ತಾರೆಗೂ ಕಚಗುಳಿ,ಮುನಿದ ಚಂದ್ರ. ನಗು ನಲ್ಲೆ ನಗುವು :ತಪ್ಪಿದ ಎದೆ ತಾಳ,ಮಧುರ ಗಾನ. ಲಾಂದ್ರ ಬಾನಂಚ ಲಾಂದ್ರ :ಹತ್ತಿದಾಗೆಲ್ಲ, ನಲ್ಲೆಮೊಗ ಕೆಂಪಗೆ. ರವಿತೇಜ ಮಧುರ ಹಾಡು :ಹಕ್ಕಿಯ ಸ್ವಾಗತವು,ರವಿತೇಜಗೆ. *****************************

ಹಾಯ್ಕುಗಳು Read Post »

ಕಾವ್ಯಯಾನ

ಕವಿತೆ, ಬುದ್ಧ ಮತ್ತು ನಾನು

ಕವಿತೆ ಕವಿತೆ, ಬುದ್ಧ ಮತ್ತು ನಾನು ಟಿ.ಪಿ.ಉಮೇಶ್ ಬುದ್ಧ ಕವಿತೆಯನ್ನು ಬರೆಯಲಿಲ್ಲಬದುಕೆಲ್ಲವನ್ನೂ ಕವಿತೆಯಾಗಿಸಿದಜಗದೆಲ್ಲ ಕವಿತೆಗಳನ್ನು ಬದುಕಿಸಿದಕವಿತೆಗಳಿಗೆ ಬುದ್ಧನೆಂದು ಒಲಿಯಲಿಲ್ಲಕವಿತೆಗಳೇ ಬುದ್ಧನ ತಬ್ಬಿಕೊಂಡವು ತುಂಬಿಕೊಂಡವು ತಡೆದುಕೊಂಡವುಬುದ್ಧ ಬರೆಯಬೇಕೆಂದಿದ್ದರೆಬದುಕಿನ ಕಾವ್ಯವಾಗಿ ಬಂದಂತ ಹೆಂಡತಿಯ ಬರೆಯುತ್ತಿದ್ದಬಹುಶಃ ತನ್ನ ಮೊದಲ ಜೀವಂತ ಕವಿತೆಯಾದ ಮಗನ ಬರೆಯುತ್ತಾ ಬೆಳೆಸುತ್ತಿದ್ದಅವ ನಮ್ಮಂತೆ ಕತ್ತಲ ಮಿಣುಕು ಹುಳದ ಮಿಂಚಲಿಬೆಳದಿಂಗಳ ಅಂಚಲಿ ತೇಲ್ಗಣ್ಣಲಿ ಕೂತು ಬರೆಯಲಿಲ್ಲಇರುವವರೆಗೆ ಧ್ಯಾನದಲಿಹಗಲಿರುಳುಗಳ ಮಧ್ಯವ ಮಾಡಿ ಬತ್ತದಂತ ಬೆಳಕಿನಲ್ಲಿ ಬರೆಸಿದಲೋಕವನ್ನೇ ಭಾರವಿಲ್ಲದಂತ ಬುದ್ಧ ಬದ್ಧತ್ವದ ಕವಿತೆಗಳಾಗಿಸಿದ ಅರಮನೆಯ ಬಂಧನದ ಉದ್ಯಾನದ ಪರಿಮಳಗಳ ಬರೆಯುವುದ ಬಿಟ್ಟು ಪ್ರೀತಿಯ ಬೀಜಗಳ ಬಿತ್ತುತ್ತ ಕವಿತೆಗಳ ಕಾಡನ್ನು ಬೆಳೆಸಿದಭೂಮಿಯ ಆಸೆಗಳ ಬಿಡಿಸಲು ಹೆಣಗಿಅವನೇ ಒಂದು ಎಂದೆಂದೂ ತೀರದ ಮಹದಾಸೆಯ ಕವಿತೆಯಾದಭೂಮಿಯಷ್ಟೋ ಅರಳಿಯಷ್ಟೋ ಆಯಸ್ಸಿದ್ದಿದ್ದರೆ ಕಾಡ ಕೂಸುಗಳೆಲ್ಲ ಬುದ್ಧ ಕವಿತೆಗಳಾಗುತ್ತಿದ್ದರುಇರುವುದೊಂದೆ ಚೂರು ವಯಸ್ಸು ಕಾಡ ಮಕ್ಕಳೆಲ್ಲ ಆಡಿ ಕೂಡಿ ನಿಲ್ಲದ ಕಡಲಾದರುಬುದ್ಧನ ಆನಂದ ಕಾವ್ಯದ ಒಡಲಾದರು ಬುದ್ಧ ಸ್ವತಃ ಒಂದಷ್ಟು ಕವಿತೆಗಳ ಬರೆಯಬೇಕಿತ್ತುನಮ್ಮನೆಲ್ಲ ಈ ಕಾವ್ಯದ ಉರುಳಿನಿಂದ ಕಾಪಾಡಬೇಕಿತ್ತುನಮ್ಮಗೆಲ್ಲ ಅವನನ್ನ ತಿಳಿಸಬೇಕಿತ್ತುನಿಮ್ಮ ನೀವು ತಿಳಿಯಿರೆಂದು ಹೇಳಿ ಹೇಳಿತಡೆಯಿಲ್ಲದ ನಿಷ್ಕಲ್ಮಶ ರೋಹಿಣಿ ನದಿಯಂತೆ ಹರಿದು ಹೋದ ಭೂಮಂಡಲದಿ ಚೆಲ್ಲಿ ಹೋದಇನ್ನು ಯುಗ ಯುಗಗಳು ಕಳೆದರೂನಮ್ಮ ನಾವು ತಿಳಿಯಲಾರೆವುಅವನನ್ನಂತೂ ಎಷ್ಟು ಹಾಡಿದರೂ ಸಿಗಲಾರನುನಾವು ಸುಮ್ಮನಿರಲಾರೆವುಬುದ್ಧನ ಮೇಲಿನ ಕವಿತೆಗಳ ನಿಲ್ಲಿಸಲಾರೆವುಬುದ್ಧನಂತು ಕವಿತೆಯಾದಬರೆವ ನಾವೆಂದು ಬುದ್ಧನಾಗಲಿಲ್ಲಕವಿತೆಯ ಬಿಟ್ಟರೆ ಆಗಬಹುದೇನೋಹೆಂಡತಿಯಿರುವ ನಾನಂತೂ ಕವಿತೆ ಬಿಡಲಾರೆಕವಿತೆ ಬಿಡದ ನಾನಂತೂ ಸದ್ಯ ಈ ಜನ್ಮದಿ ಬುದ್ಧನಾಗಲಾರೆ **********************************************

ಕವಿತೆ, ಬುದ್ಧ ಮತ್ತು ನಾನು Read Post »

ಕಾವ್ಯಯಾನ

ಮಗಳೆ ನಿನಗಾಗಿ

ಕವಿತೆ ಮಗಳೆ ನಿನಗಾಗಿ ಶಾಲಿನಿ ಆರ್. ಎದೆಗೆ ಹಾಲ ಬಿತ್ತಿಒಡಲ ಗುಡಿಯಕದವ  ತಟ್ಟಿಬಳಿಗೆ ಕರೆದುಅಂತರಂಗದಾಧುನಿಗೆ ಬೆಸೆದ  ನೀ’ಬಾಳಗೀತೆ ಮುನ್ನುಡಿ, ಪಡೆದ ಸುಖಕೆಪ್ರೀತಿ ಬೆರೆಸಿಹಡೆದ ಋಣಕೆತಾಯ್ತನದಾನಂದಬಡಿಸಿ ಬೆಸೆದ,ಸೊಬಗಿನೈಸಿರಿ ನೀ’ಬಾಳಗೀತೆ ಮುನ್ನುಡಿ, ನಿತ್ಯ ಹಸಿರಿದುಬಾಳ ನಂದನತೊದಲ ಮಾತು,ತಪ್ಪು ಹೆಜ್ಜೆಗೊಂದುಹೂಬನ ಚುಂಬನ,ನಲಿವ ಗೊಂಚಲಿನಕಿರುಗೆಜ್ಜೆ ನೀ’ಬಾಳಗೀತೆ ಮುನ್ನುಡಿ, ಬಿಡದೆ ಹನಿಸುಹೊಕ್ಕಿಹ ಮಮತೆಯನಾನಲ್ಲ ತಾಯಿಯು,ಮರುಜನ್ಮವಿತ್ತೆನೀ ಎನಗೆ ತಾಯೆಒಡಲತುಂಬಿದಹೊನಲ ಜೇನು ನೀ’ಬಾಳಗೀತೆ ಮುನ್ನುಡಿ, ಕಣ್ಣಂಚಿನ ಹನಿಯುನಿಂತಲ್ಲೆ ಕಡಲಾಯಿತುಆನಂದದಂಗಳದಿಅಮ್ಮ’ ಎನುವ ಕರೆಗೆಜಗದ ಸುಖಸೊನ್ನೆಯಾಯ್ತುತಾಯ್ತನದ ಭಾಷ್ಯ ನೀ’ಬಾಳಗೀತೆ ಮುನ್ನುಡಿ, ಕರುಳಬಳ್ಳಿ ಬೆಸೆದುಒಲವ ಕಡಲ ಸುತ್ತಿಅವನ ಪ್ರೀತಿಮೋಹ ಮಂತ್ರಕೆಓ! ಗುಟ್ಟು, ಸುಧೆಯಹರಿಸಿದ ಧೇನು ನೀ’ಬಾಳಗೀತೆ ಮುನ್ನುಡಿ…

ಮಗಳೆ ನಿನಗಾಗಿ Read Post »

ಕಾವ್ಯಯಾನ

ತೆರೆದಿಟ್ಟ ದೀಪ

ಕಥೆ ತೆರೆದಿಟ್ಟ ದೀಪ ಯಮುನಾ.ಕಂಬಾರ ಅದು ಮಧ್ಯಾಹ್ನದ ಸಮಯ. ಸೂರ್ಯ ತನ್ನ ಕಿರಣಗಳನ್ನು ಭಗವತಿಯ ಮುಂದಿನ ಗಿಡದ ಮೇಲೆ ಚೆ ಲ್ಲಿದ್ದ. ಗಿಡದ ಮೇಲೊಂದು ಪಕ್ಷಿ ಅತ್ತ ಇತ್ತ ನೋಡುತ್ತಾ ಕುಳಿತುಕೊಂಡಿತ್ತು. ಪಕ್ಢಿಯನ್ನು ಗಿಡವನ್ನು ವೀಕ್ಷಿಸುತ್ತಾ ಇದ್ದ ಭಗವತಿಯ ಕಣ್ಣುಗಳು ಪಲ್ಲಟಗೊಂಡು   ದಾರಿಯತ್ತ ಹರಿದವು.ಅವಳು ದಾರಿಯಲ್ಲಿ ಬರುವ ಹೆಣ್ಣು ಮಗಳನ್ನು ನೋಡಿದೊಡನೆ ತನ್ನ ನೆನಪುಗಳನ್ನು ಒತ್ತಿ ನೋಡ ತೊಡಗಿದಳು. ಹೌದು ಅವಳು ಅವಳೇ……ಈಗ್ಯ ಹದಿನಾಲ್ಕು ವರ್ಷಗಳ ಹಿಂದೆ ತನ್ನ ಮನೆಯಲ್ಲಿ ಮುಸುರೆ ತಿಕ್ಕುತ್ತಿದ್ದ ಮಾಬೂಬಿ.ಭಗವತಿಗೆ ಅವಳನ್ನು ನೋಡಿ ಮನಸ್ಸು ಹಬ್ಬವಾಯಿತು.          ಕೆಂಪು ತಿಳಿಯ ಶೀರೆ, ಸೆರಗನ್ನು ಉದ್ದವಾಗಿ ಬಿಟ್ಟು ತಲೆ ಮೇಲೆ ಹೊದ್ದು ಹೊಟ್ಟೆಯಲ್ಲಿ ಸಿಕ್ಕಿಸಿಕೊಂಡಿದ್ದಳು. ಭರ ಭರ ಬರುವಾಗ ನೆರಿಗೆ ಸಿಕ್ಕು ಬಿದ್ದೇನೆಂದು ಶೀರೆಯ  ನೆರಿಗೆಗಳನ್ನು ನಡದಲ್ಲಿ ತುರುಕಿದ್ದಳು. ಬಗಲಲ್ಲಿ ಒಂದು ಹಸಿರು ಹರಕು ಚೀಲ ಹಿಡಿದುಕೊಂಡು ದುಡುದುಡುನೇ ಬರುತ್ತಿದ್ದಳು.  ಭಗವತಿಯ ಮಿಂಚು ಕಣ್ಣುಗಳಿಗೆ ಸಿಕ್ಕುಕೊಂಡ ಮಾಬೂಬಿ ” ಯಾಕ್ರಿ….. ಊಟಾತ್ರ್ಯಾ…….? ಎಂದು ಭಗವತಿಯನ್ನು ಕೇಳಿದಳು. ಭಗವತಿ ಹೂಂ ಗುಟ್ಟುತ್ತಾ…” ಯಾಕ ….ಇಲ್ಲಿ ಮಾಡತ್ತೀ ಏನ …..ಕೆಲಸ ..” ಎಂದು ವಿಚಾರಿಸಿದಳು. “ಮಾಲಾ….. ಏನ ಮಾಡ್ತಾಳ …..? ” ಎಂದು ಮತ್ತೊಂದು ಪ್ರಶ್ನೆಯನ್ನೂ ಇಟ್ಟಳು.      ಮಾಲಾ ಮಾಬೂಬಿಗೆ  ಒಬ್ಬಳೇ ಮಗಳು.ಆಗ ಅವಳು ಇನ್ನೂ ಹೈಸ್ಕೂಲ ವಿಧ್ಯಾರ್ಥಿನಿ. ತಾಯಿ ಕೆಲಸಕ್ಕೆ ಚಕ್ಕರ ಕೊಟ್ಟಾಗಲೆಲ್ಲಾ ಮಗಳು ಮಾಲಾ ಬಂದು ಮುಸುರೆ ತಿಕ್ಕಿಕೊಟ್ಟು ಹೋಗುತ್ತಿದ್ದಳು. ಮಾಲಾ ಎಂಥಹ ಚೆಲುವೆ ನೀಳವಾದ ಮೂಗು ತೆಳ್ಳನೆಯ ಬಳುಕುವ ಮೈ ಕಪ್ಪಾಗಿದ್ದರೂ ಮೋಹಕಳಾಗಿದ್ದಳು. ಒಂದು ದಿನ  ಮಾಬೂಬಿ  ಬೋಗುಣಿ ತಿಕ್ಕುತ್ತಾ : ” ನಮ್ಮ ಮಾಲಾ ಬೆಂಗಳೂರಿಗೆ ಹೋದಳ್ರಿ ” ಅಂದಾಗ ಭಗವತಿಯ ಮೈ ಕಂಪಿಸಿತ್ತು. ಮಾಬೂಬಿಗೇನು ಹುಚ್ಚು ಹಿಡಿತಾ….! ? ಎಂದು ಗೊಣಗುಟ್ಟಿದಳು. ಅದನ್ನು ತೋರ್ಪಡಿಸಿಕೊಳ್ಳದೇ ಕೈಯಲ್ಲಿಯ ಪುಸ್ತಕವನ್ನು ಟಿ.ವಿ.ಮುಂದೆ ಇಟ್ಟು ಓಡಿ ಬಂದು  : “ಆಂ ……ಏನಂದೆ ಮಾಬೂಬಿ ನಿನ್ನ ಮಗಳು ಬೆಂಗಳೂರಿಗೆ ಹೋದ್ಳಾ……! ?” ಎಂದು ಭಗವತಿ ಕೇಳಿದಳು. ಹೂನ್ರಿ…..ಯಾಕ ಬಡುರ ಮಕ್ಕಳು ಹೋಗಬಾರ್ದಾ….” ಎಂದು ಭಗವತಿಗೆ ಸವಾಲನ್ನೇ ಎಸೆದಿದ್ದಳು. ಪಾಪ  ಮಾಬೂಬಿಗೆ ಗೊತ್ತಿಲ್ಲ….ಬೆಂಗಳೂರು . ಅವಳು ಎಷ್ಟಾದರೂ ಚಿಕ್ಕ ಪಟ್ಟಣದಲ್ಲಿ ಕಸ ಮುಸುರೆ ತಿಕ್ಕುತ್ತಾ ಬದುಕಿದವಳು. ” ಆಕಿಗೆ ಬೆಂಗಳೂರಾಗ   MB  ಅ~ಏನ ಅಂತಾರಲ್ರೀ ಅದು ಸಿಕ್ಕೈತ್ರಿ” ಎಂದು ಬೋಗುಣಿ ತಿಕ್ಕುತ್ತಾ ಭಗವತಿಯತ್ತ ನೋಡುತ್ತಾ ಹೇಳಿದಳು. ಭಗವತಿ ಬೆರಗುಗಣ್ಣಿನಿಂದ ಮಾಬೂಬಿಯನ್ನು ನೋಡಿದಳು. ಮಾಬೂಬಿಯ ಎದೆ ತುಂಬಿ ಬಂದಿತ್ತು. ಮುಖ ಕಳೆ ಏರಿ  ಗೆಲುವಾಗಿತ್ತು.ಕಣ್ಣುಗಳು ಕನಸುಗಳ ಮಿಂಚಿನಿಂದ ಹೊಳೆದಿದ್ದವು.ಅವಳ ಮೈ ಧಣಿವು ಕಳೆದುಕೊಂಡು ಹಗುರಾಗಿತ್ತು. “ಹೌದು, MBA ಕೋರ್ಸ್ಸನ್ನು ಸ್ವಲ್ಪು ಕಾಳಜಿಯಿಂದ ಮಾಲಾ ಕಲಿತರೆ ಸಾಕು ಅವಳಿಗೆ ಕಂಪನಿಯವರು ಕರೆದು ನೌಕರಿ ಕೊಡುವ  ಸಾಧ್ಯತೆ ಇತ್ತು. ಭಗವತಿ ಕಾಳಿಕಾ ಪ್ಗೋಟೋದ ಮುಂದೆ ಹಚ್ಚಿದ ದೀಪ ಕಾಂತಿ , ಶಾಂತಿಯಿಂದ ಉರಿಯುತ್ತಿದ್ದದ್ದು  ಒಮ್ಮೆಲೆ  ತೊಲಬಾಗಿಲಿನಿಂದ ಬರ್ರೆಂದು ಬಂದ ಗಾಳಿಗೆ  ಓಲಾಡತೊಡಗಿತು.ಭಗವತಿ ಕಂಪಿಸಿದಳು. ” ದೇವಿ , ಬಡವರ ಬಾಳ್ವೆ ಕಾಯವ್ವ ” ಎಂದು ದೀನ ಕಣ್ಣುಗಳಿಂದ  ದೇವಿ ಫೋಟೋವನ್ನು ದಿಟ್ಟಿಸಿದಳು. ಮಾಲಾ ತೆರೆದಿಟ್ಟ ದೀಪವಾಗಿದ್ದಳು. ಮೊಬೈಲ್ , ಇಂಟರನೆಟ್  ಫೇಸಬುಕ್ಕ , ವ್ಯಾಟ್ಸಾಪದಂತಹ ಬಿರುಗಾಳಿಗಳನ್ನು ಎದುರಿಸಿ ಗೆಲ್ಲುವ ಸವಾಲು ಅವಳ ಎದುರಿತ್ತು.        “ಏನೈತ್ರಿ……‌‌ಮಾಡುದು , ಅದೊಂದು ಫೋನಾಗೇತಿ  ಎದ್ದ್ರು ಕುಂತ್ರು ……ಅದೊಂದಿದ್ದ್ರ ಏನೂ ಬ್ಯಾಡ್ರಿ…..ನಾ ಅಲ್ಲಿ ಥೇಕುದ~ ಇಲ್ಲೀ ಥೇಕುದ್~ ~  ನನ್ನ ಹಣೆಬರಾ ಏನ ಬದಲ್ ಆಗಲಿಲ್ಲ… ” ಮಾಬೂಬಿಯ ಮುಖ ವಿಷದಿಂದ ನಂಜೇರಿದಂತಾಗಿತ್ತು.  ಅಂದ್ರ ಮಾಲಾಳ ಮೇಲೆ ಪರೋಕ್ಷವಾಗಿ ಆರೋಪ ಹೊರಿಸಿದಂತಿತ್ತು. ಅದನ್ನು ಗುರುತಿಸಿದ ಭಗವತಿ ” ಹೋಗ್ಲಿ ಬಿಡು , ನಾಳೆ ಗಂಡನ ಮನಿಯಾಗ ಮಾಡುದು ಇದ್ದ~ ಇರತೈತಿ , ಅಲ್ಲಿ ಅವ್ನ ಬಿಡಸವ್ವರ್ರು ಯಾರು……! ? ಹೊಟ್ಯಾಗ ಹಾಕ್ಕೊ…..ತಾಯಿ ಅಲ್ಲಾ…..ನೀನು…..,!! ” ಭಗವತಿ ಸಮಾಧಾನ ಹೇಳಿದಳು. ” ಯಾವದ …..ಯಾವದ   ಹೊಟ್ಯಾಗ ಹಾಕ್ಕೊಲಿ ಅವ್ವಾರ  ಹಾಕ್ಕೊಳ್ಳುದು ಹಾಕ್ಕೋತೇನಿ  ಹಾಕ್ಕೊಳ್ಳಾರದ್ದು ಹೆಂಗ ಹಕ್ಕೋಲಿ ……….!! ? ” ಮಾಬೂಬಿ ನೋವಿನಿಂದ ತತ್ತರಿಸಿದರೂ ಮಾತಿನ ಮೇಲೆ ಹಿಡಿತವಿಟ್ಟಿದ್ದಳು.ಭಗವತಿಗೆ ಮಾಬೂಬಿಯ  ಸ್ಥೈರ್ಯ ” ಅಬ್ಬಾ !!” ಎನಿಸಿತು. ಭಗವತಿ ಮತ್ತೆ ” ಅಂದರೆ …….ಮಾಬು……????” ಎನ್ನುತ್ತಾ ಅವಳ ಕಣ್ಣುಗಳಲ್ಲಿ ಇನುಕಿದಳು.ಅವಳ ಕಣ್ಣುಗಳು ಅಟ್ಲಾಂಟಿಕ್ ಸಾಗರದ ಭೋರ್ಗರೆವ ಪ್ರವಾಹವಾಗಿತ್ತು. “ಮದುವಿ ಮಾಡಿ ಬಿಡು , ತ್ರಾಸ ತಗೋಬ್ಯಾಡ  ” ಭಗವತಿ ಉಪಾಯ ಸೂಚಿಸಿದಳು. “ಯಾರಿಗೆ ಮಾಡ್ಲಿರಿ ಮದುವಿ ……!!!!!!!!???????? ” ಅವಳ ಕಣ್ಣಿನ ಕಟ್ಟೆಯೊಡದಿತ್ತು. ” ಮಾಲಾಗ ” ಭಗವತಿ ಅಂದಳು. “ಆಗುದಿಲ್ಲಂತ್ರಿ ಆಕಿ ……” ಮಾಬೂಬಿ ಉತ್ತರಿಸುತ್ತಿದ್ದಂತೆ …. ಗಿಡದಲ್ಲಿಯ ಪಕ್ಷಿ ಬರ್ರನೇ ಹಾರಿ ಬಂದು ನೆಲದ ಮೇಲೆ ಬಿದ್ದ ಅಕ್ಕಿಕಾಳುಗಳನ್ನು ಆಯತೊಡಗಿತು.  ಅದನ್ನು ನೋಡಿದ  ಭಗವತಿ ಮಾಬೂಬಿಯರ ಮೈಗಳು ಕಂಪಿಸತೊಡಗಿದವು. ***********************************

ತೆರೆದಿಟ್ಟ ದೀಪ Read Post »

ಕಾವ್ಯಯಾನ

ಕ್ಷಮಿಸು ಪ್ಲೀಸ್..

ಕವಿತೆ ಕ್ಷಮಿಸು ಪ್ಲೀಸ್.. ಮಧುಸೂದನ ಮದ್ದೂರು. ನೋವಿನಾಳದ ಕಿಸರು ಗಾಯಕೆ ನಿನ್ನನೆನಪುಗಳನೊಣಗಳ ದಾಳಿಝೇಂಕಾರಒಳಗೊಳಗೇಯಾತನೆ ವೇದನೆ ಒಬ್ಬನೇ ಇದ್ದೇನೆಹಾಯಿಯಲಿಸುತ್ತಲೂ ಅಳುವಿನಉಪ್ಪುಪ್ಪು ಕಡಲುನನ್ನುಳುವಿನ ಉಪ್ಪು ಜಾರಿಕಡಲು ಹೆಪ್ಪುಗಟ್ಟುತ್ತಿದೆ..ಮುಳುಗಬೇಕೆನ್ನುವ ಹಡಗು ಮುಳುಗುತ್ತಿಲ್ಲದೂರದೆಲ್ಲೆಲ್ಲೋಮಿಣುಕುಹುಳುದಂತಹ ಬೆಳಕುಕಣ್ಣಿಗಾನಿಸುತ್ತಿದ್ದಂತೆನೀನೆನಾದರೂಅದೇ ಹಸಿರು ನೆರಿಗೆ ಲಂಗ ತೊಟ್ಟು ಬಂದೆಯಾಎಂಬ ಹುಂಬತನದ ನಿರೀಕ್ಷೆಸಾಯಲು ಬಿಡುತ್ತಿಲ್ಲಬದುಕಲು ಬಿಡುತ್ತಿಲ್ಲಪ್ರೀತಿ ಅಂದರೆ ಹೀಗೇನಾ..ಗೊತ್ತಾಗುತ್ತಿಲ್ಲಕ್ಷಮಿಸು ಪ್ಲೀಸ್.. ****************************

ಕ್ಷಮಿಸು ಪ್ಲೀಸ್.. Read Post »

ಕಾವ್ಯಯಾನ

ಗುಂಗು

ಕವಿತೆ ಗುಂಗು ಮಾಲತಿ ಶಶಿಧರ್ ನಿನ್ನ ತೋಳಿನ ಚೌಕಟ್ಟುಬಿಟ್ಟು ಬಂದ ಮೇಲೂ ನನ್ನಕೊರಳು ಕೆನ್ನೆಗಳ ಮೂಲೆಯಲ್ಲಿನಿನ್ನ ಪರಿಮಳದ ಭಾಸ. ಬೆಚ್ಚಗಿನ ಉಣ್ಣೆ ಬಟ್ಟೆ ತೊಟ್ಟಿದ್ದರುಒಳಗೆ ಮಾಗಿ ಚಳಿಯ ಕೊರೆತನೀ ಗಿಲ್ಲಿ ಗುರುತು ಮಾಡಿದತೊಡೆಯ ಎದೆಗವುಚಿಕೊಂಡುಕಣ್ಮುಚ್ಚಿ ನಗುತ್ತೇನೆ. ಮುತ್ತನಿಟ್ಟು ಹೊತ್ತೇ ಕಳೆದುಹೋದರು ಮತ್ತು ಮಾತ್ರಹಳಸದೆ ತುಟಿಯಂಚಿನತೊಟ್ಟು ರಕ್ತದಲ್ಲಿ ಹೆಪ್ಪುಗಟ್ಟಿಕುಳಿತಿದೆ. ಅಮಾಸೆ ಹೆರಳ ಇಪ್ಪತ್ತುಬಾರಿ ಒಪ್ಪ ಮಾಡಿದರುಗಾಳಿಗೋಲಾಡೊ ಮುಂಗುರುಳಲಿನಿನ್ನದ್ದೇ ತುಂಟತನ ಕಂಡುಕನ್ನಡಿಯತ್ತ ಕೈಚಾಚುವೆಹುಚ್ಚಿಯಂತೆ.. ***************************************

ಗುಂಗು Read Post »

ಕಥಾಗುಚ್ಛ

ಧನ್ಯ ಮಿಲನ

ಕಥೆ ಧನ್ಯ ಮಿಲನ ಸರೋಜಾ ಶ್ರೀಕಾಂತ್ ಅಮಾತಿ ರಾಧೆ,ರಾಧೆ….ಅದೇ ಧ್ವನಿ!…..ಹೌದು ಇದು ಅದೇ ಧ್ವನಿ,ಕೃಷ್ಣ ….ಕೃಷ್ಣ ! ಎಲ್ಲವಿತಿರುವೆ!? ಎದುರಿಗೊಮ್ಮೆ ಬರಬಾರದೆ? ಅದೆಷ್ಟೋ ವರುಷಗಳ ನಂತರ ಮತ್ತೆ ಕೃಷ್ಣ ಬಂದಿದ್ದ.ಅದೇ ತೇಜಸ್ಸು,ನಗುದುಂಬಿದ ಮುಖ ಕೃಷ್ಣನ ದರ್ಶನವಾಗುತ್ತಲೇ ನದಿ ದಂಡೆಯ ಆ ಉರಿಬಿಸಿಲೂ ಹಿತವೆನಿಸಿಸುತ್ತಿತ್ತು ರಾಧೆಗೆ.ಅಬ್ಬಾ! ,ಅಂತೂ ಬಂದೆಯಲ್ಲ ಸ್ವಾಮಿ ಇಷ್ಟು ವರ್ಷಗಳು ಬೇಕಾದವೆ ಈ ರಾಧೆಯನ್ನು ಕಾಣಲು? ಅಂದಾಗ ನೀನೆಂದೂ ನನ್ನ ಜೊತೆಯೇ ಇರುವೆ ರಾಧೆ ಏಕೆ ನಿನಗೆ ಹಾಗೇಣಿಸುವುದಿಲ್ಲವೇ?ಭೇಟಿ ವಿಳಂಬವಾಯಿತೆಂದು ನನ್ನನ್ನೇ ಮರೆತು ಬಿಟ್ಟೆಯಾ ಹೇಗೆ? ಇಲ್ಲ ಕೃಷ್ಣ ಇಲ್ಲ ನೀ ನನ್ನೊಳಗೇ ಇರುವೆ ನಿನ್ನನ್ನು ಹೃದಯದಲ್ಲಿ ಕೂಡಿ ಹಾಕುವ ಮೊದಲೇ ನೀ ಮಾತಿನಲ್ಲಿ ಸೋಲಿಸಿ ಬಿಡುವೆ ನಿನ್ನಿಂದ ಸೋಲಲೂ ಅದೃಷ್ಟವೇ ಬೇಕು ಅಲ್ಲವೇ ಕೃಷ್ಣ? ಇಷ್ಟು ಕಾಯಿಸುವುದು ನಿನಗೆ ಸರಿಯೇ ಕೃಷ್ಣ…. ನದಿ ದಂಡೆಯ ಮರಳಿನ ಪ್ರತಿ ಕಣ ಕಣಕ್ಕೂ ಗೊತ್ತು ನಾ ನಿನ್ನನೆಷ್ಟು ಹಂಬಲಿಸಿದೆ ಎಂದು ಹಸಿರು ಹಾಸಿದ ಗರಿಕೆ ಪಕ್ಕದಲ್ಲಿಯೇ ನಗುತ್ತ ಅರಳಿರುವ ಸುಂದರ ಹೂಗಳು,ಸೂಸುವ ಈ ತಂಗಾಳಿಗೆ,ಗಿಡ ,ಮರ ,ಬಳ್ಳಿ ಅಷ್ಟೇ ಏಕೆ ನದಿಯೊಳಗೀಜಾಡುವ ಬಣ್ಣಬಣ್ಣದ ಮೀನಿನ ಕಣ್ಣಿಗೂ ನನ್ನ ಪ್ರೀತಿ ಕಂಡಿರಬಹುದು ಕೃಷ್ಣ .ಅವನ್ನೊಮ್ಮೆ ನೋಡಿ ಬಿಡು ಸಾಕು ನನ್ನ ಮನಸ್ಸಿನ ತುಮುಲ,ವಿರಹ ಎಲ್ಲವೂ ನಿನಗೆ ಗೊತ್ತಾಗುವುದು ಕೃಷ್ಣ. ಇಷ್ಟೊಂದು ಚಂದದ ಮಧುರ ವಾಣಿ ಎಲ್ಲಿಂದ ಕಲಿತೆ ರಾಧೆ!? ಹೃದಯವಾಸಿಯಾದ ಶ್ರೀಕೃಷ್ಣನ ಸಹವಾಸದಿಂದಲೇ ಇದೆಲ್ಲವೂ ಸಂಭವಿಸಿರಬೇಕಷ್ಟೇ ನನ್ನದೆನಿಲ್ಲ ಕೃಷ್ಣ.ಹೇಗಿರುವೆ ರಾಧೆ ತುಸು ಕೆಲಸ,ಕಾರ್ಯದಲ್ಲಿ ಮಗ್ನಳಾದಂತೆ ಕಾಣುತ್ತದೆ. ಅದೆಂತದೂ ಮಹಾ ಕಾರ್ಯವಿಲ್ಲ ಬಿಡು ಕೃಷ್ಣ ನೆನೆದವರ ಮನದಲ್ಲಿ ಎಂಬಂತೆ ನೀ ಬಂದಿರುವೆ ಅಷ್ಟೇ ಸಾಕೆನಗೆ. ಕುಶಲೋಪಚಾರದ ಬಳಿಕ ಸರಿ ರಾಧೆ ನಾನಿನ್ನು ಬರಲೇ!?…. ಸಂಜೆ ಮತ್ತೆ ಇದೇ ನದಿ ದಂಡೆಯಲ್ಲಿ ಸಿಗುವೆ ಎಂದು ಹೊರಟೇ ಬಿಟ್ಟ ಕೃಷ್ಣ. ಹೀಗೆ ಬಂದು ಹಾಗೆ ಹೋಗುವುದೇ ಕೃಷ್ಣ ನಾನೊಪ್ಪುವುದಿಲ್ಲ ಒಂದರೆಗಳಿಗೆಯಾದರೂ ನೀ ಇರಲೇಬೇಕು ಎಂದು ಮುನಿಸಿಕೊಂಡ ರಾಧೆ ಹಿಂತಿರುಗಿ ನೋಡುವಷ್ಟರಲ್ಲಿ ಕೃಷ್ಣನೇ ಕಾಣುತ್ತಿಲ್ಲ.ಅತ್ತ,ಇತ್ತ ಸುತ್ತಲೂ ಹುಡುಕಿದ ರಾಧೆಗೆ ಏನಿದು ಇದೆಲ್ಲ ಬರೀ ನನ್ನ ಭ್ರಮೆಯೊ ಹೇಗೆ ಏನೊಂದು ತೋಚುತ್ತಿಲ್ಲವೆಂದು ಮತ್ತೆ ಸುತ್ತೆಲ್ಲವೂ ಕಣ್ಣಾಡಿಸುತ್ತ ಕೃಷ್ಣ ಕಾಣದಂತಾದಾಗ ಬೇಸರದಿಂದ ಮನೆಕಡೆ ಹೆಜ್ಜೆ ಹಾಕಿದಳು ರಾಧೆ. ಇದೇನಿದು ಆಶ್ಚರ್ಯ!…. ಹಿಂತಿರುಗಿ ನೋಡಿದಾಗ ಕಣ್ಮರೆಯಾಗಿದ್ದ ಕೃಷ್ಣ ಮನೆಯಂಗಳಕ್ಕೆಲ್ಲ ನೆರಳಾಗಿರೋ ಆ ಬೇವಿನ ಮರಕ್ಕೆ ಕಟ್ಟಿದ ಉಯ್ಯಾಲೆಯಲ್ಲಿ ಕೊಳಲನಿಡಿದು ಕುಳಿತಿರುವ.ಕಣ್ಣುಗಳನ್ನುಜ್ಜುತ್ತ ಮತ್ತೆ,ಮತ್ತೇ ಆ ಕಡೆಗೆ ದೃಷ್ಟಿ ನೆಟ್ಟಾಗ ರಾಧೆಯ ಎದೆಬಡಿತ ಜೋರಾಯಿತು!.ಕೃಷ್ಣನ ಮರು ಆಗಮನ ಒಂದು ಕಡೆ ಸಂತಸದ ಸುಗ್ಗಿ,ಮತ್ತೊಂದೆಡೆ ಮೊದಲ ಘಟನೆಯಂತೆ ಇದೂ ಕೂಡ ನನ್ನ ಭ್ರಮೆಯೇ ಎಂಬ ಭಯದ ನಿಗಿ ಕೆಂಡ.ಸಂಜೆ ಬರುವೆನೆಂದ ಕೃಷ್ಣ   ಈಗಲೇ ಮರಳಿದ್ದು ಯಾಕೆ “ಏನಾದರೂ ಮರೆತಿರಬಹುದೇ!?….ಅಥವಾ ಬೇಕಂತಲೇ ನನ್ನ ಆಟ ಆಡಿಸುವ ಸಂಚೆ? ….ಅದಕ್ಕೆ ಅಲ್ಲವೆ ಅವನನ್ನು ಕಳ್ಳ ಅನ್ನುವುದು ಹೀಗೆ ಅದೆಷ್ಟೋ ಪ್ರಶ್ನೆಗಳ ಸರಮಾಲೆಯೇ ರಾಧೆಯ ಮನವನ್ನು ನಲುಗಿಸಿಬಿಟ್ಟವು.ತುಸು ಸಮಾಧಾನಿಸಿಕೊಂಡ ರಾಧೆ ಅಂತರ್ಯಾಮಿ ಶ್ಯಾಮನೆ ಆಪತ್ಬಾ0ಧವ ಅವನೇ ನನ್ನ ಜೊತೆಗಿರುವಾಗ ನನಗಿನ್ನೇತರ ಭಯ!?…. ಅಂದುಕೊಳ್ಳುತ್ತಲೇ ಕೃಷ್ಣನ ಬಳಿ ಹೋಗುತ್ತಾಳೆ. ಕೃಷ್ಣ  ತನ್ನ ಸನಿಹ ಬರುತ್ತಿರುವ ರಾಧೆಯನ್ನು ಕಂಡು ಮುಗುಳ್ನಗುತ್ತಾನೆ. ಉಯ್ಯಾಲೆಯಲ್ಲಿ ತನ್ನ ಪಕ್ಕದಲ್ಲೇ ಕುಳಿತುಕೊಳ್ಳುವಂತೆ ಸನ್ನೆ ಮಾಡುತ್ತ ಕೃಷ್ಣ ತಾನೇ ಮಾತಿಗಿಳಿಯುತ್ತಾನೆ.” ಎಷ್ಟೋ ವರುಷಗಳ ನಂತರದ ನಮ್ಮಿಬ್ಬರ ಈ ಸುಮಧುರ ಭೇಟಿಯನ್ನು ಅಷ್ಟು ಸುಲಭದಲ್ಲಿ ಮುಗಿಸುವೆನೇ ರಾಧೆ!?….ಅಂದಾಗ ಮೌನವಾಗಿಯೇ ಇದ್ದ ರಾಧೆ ಕೃಷ್ಣನ ಮುಖ ನೋಡುವುದರಲ್ಲೇ ತಲ್ಲೀನಳಾಗಿದ್ದಾಳೆ.”ಏ… ರಾಧೆ ಅಂತ ಜೋರಾಗಿ ಕೂಗುತ್ತ ಅವನು ಕೈ ಸ್ಪರ್ಶಿಸಿದಾಗ ಪುಳಕಿತಳಾದ ರಾಧೆ ವಾಸ್ತವಕ್ಕೆ ಮರಳುತ್ತಾಳೆ.ಬೀಸೋ ತಂಗಾಳಿಗೆ ಬೇವಿನ ಮರದ ಪುಟ್ಟ,ಪುಟ್ಟ ತಿಳಿ ಹಳದಿ ಬಣ್ಣದ ಪುಷ್ಪಗಳು ಆಗೊಮ್ಮೆ,ಈಗೊಮ್ಮೆ ಸುರಿಯೋ ತುಂತುರು ಮಳೆ ಹನಿಯ ರೀತಿ ಕೃಷ್ಣನ ಕೆನ್ನೆಯನ್ನು ಮೃದುವಾಗಿ ತಟ್ಟುತ್ತಿವೆ.ಆಗಲೇ ಮತ್ತೊಂದು ವಸಂತ ಋತು ಬಂದಾಯಿತೇ!? ಅಷ್ಟು ಬೇಗನೆ ಬೇವಿನ ಮರ ಚಿಗುರಿ,ಹಸಿರಾಗಿ ಮತ್ತೇ ಹೂ ಕೂಡ ಬಿಟ್ಟಿತೇ!?…. ಇದಕ್ಕೆಲ್ಲ ಕಾರಣ ನನ್ನ ಕೃಷ್ಣನ ಆಗಮನವೇ ಅಥವಾ ನಾನೇ ಈ ಮೊದಲು ಅದನ್ನೆಲ್ಲ ಗಮನಿಸಿರಲಿಲ್ಲವೇ!?…… ಅದೇಷ್ಟೋತ್ತು ಮೌನವಹಿಸುವೆ ರಾಧೆ ಹಾಗೆಯೇ ಸಲುಗೆಯಿಂದ ಮತ್ತೊಮ್ಮೆ ಕೃಷ್ಣನೆಂದು ಕರೆಯಬಾರದೆ? ಎಂಬ ಕೃಷ್ಣನ ಅಂತರಾಳದ ಮಾತುಗಳನ್ನು ರಾಧೆಯ ಅಂತರಂಗ ಆಲಿಸುತ್ತಲೇ ಕೃಷ್ಣ…. ಅಂತ ಕೂಗಿದಳು ರಾಧೆ. ಈಗ ಬಾಹ್ಯ ಪ್ರಪಂಚದ ಮತ್ತಾವ ಚಿಂತೆಗಳು ಅವಳಲ್ಲಿರಲಿಲ್ಲ ಹೃನ್ಮನದೊಳಗೆಲ್ಲ ಕೃಷ್ಣನೊಬ್ಬನೇ…. ಹೌದು ಕೃಷ್ಣ, ಮತ್ತಾವ ಸಂಬಂಧದಲ್ಲೂ ಇರದ,ಅಕ್ಷರಕ್ಕೂ ನಿಲುಕದ ,ಪದಗಳಿಗೂ ಸಿಗದ ಅನನ್ಯ ಅನುಬಂಧ ನಮ್ಮದು ಎಂದು ಕೃಷ್ಣನ ಭುಜಕ್ಕೊರಗುತ್ತಾಳೆ  ರಾಧೆ….!. ಹೌದು ರಾಧೆ ನಿನ್ನ ಮಾತು ಅಕ್ಷರಶಃ ನಿಜ!…. ಸ್ನೇಹ,ಪ್ರೇಮ,ಪ್ರೀತಿ ಅವೆಲ್ಲವುಗಳನ್ನು ಮೀರಿದ ನಮ್ಮಿ ಅನುಬಂಧಕ್ಕೆ ಅದಾವುದೇ ಹೆಸರಿಲ್ಲ.ಉಸಿರಿಗೂ ಮತ್ತೊಂದು ಹೆಸರು ಬೇಕೇ ರಾಧೆ!? ಅಂದಿಗೂ,ಇಂದಿಗೂ ಮುಂದೆಯೂ ನಮ್ಮಿ ಮೈತ್ರಿಯು ಚಿರಂಜೀವಿ. ದೂರದಲ್ಲಿದ್ದಷ್ಟಕ್ಕಿಂತ ದ್ವಿಗುಣದ ಸನಿಹ ಅಂದರೂ ತಪ್ಪಿಲ್ಲ ರಾಧೆ.ಮೆಲ್ಲನೆ ಕಣ್ತೆರೆದ ರಾಧೆಗೆ ಇದಾವುದನ್ನು ಅರಗಿಸಿಕೊಳ್ಳುವ ಶಕ್ತಿಯೂ ಇಲ್ಲ, ಯುಕ್ತಿಯೂ ಬರುತ್ತಿಲ್ಲ. ಮತ್ತೇನೋ ನೆನಪಾದವಳಂತೆ ಒಂದೇ ಒಂದು ಕ್ಷಣ ಕೃಷ್ಣ, ಹೀಗೋಗಿ ಹಾಗೆಯೇ ಬರುವೆ ಎಂದು ಒಂದೇ ಉಸಿರಿನಲ್ಲಿ ಓಡುತ್ತಾ ದೇವರ ಮನೆಯಲ್ಲಿ ಜೋಪಾನವಾಗಿಟ್ಟ ಕೃಷ್ಣನ ಆ ಬಂಗಾರದ ಕೊಳಲನ್ನು ರೇಷ್ಮೆಯ ವಸ್ರ್ತದ ಸಮೇತ ತಂದು ಅವನೆದುರಿಗೆ ಹಿಡಿದು ಕೊಳಲು ನುಡಿಸಲೇಬೇಕೆಂದು ಹಠ ಹಿಡಿಯುತ್ತಾಳೆ.ರಾಧೆಯ ಮುಗ್ಧ ಹೃದಯಕ್ಕೆ ಸೋತ ಕೃಷ್ಣ ಆ ಕೊಳಲನ್ನೆತ್ತಿಕೊಂಡು ರಾಧೆಯನ್ನು ನೆನೆಯುತ್ತ ನಾದ ಹೊಮ್ಮಿಸುವಾಗ  ಗೋವುಗಳೆಲ್ಲ ಎಷ್ಟೋ ವರುಷದ ನಂತರ ತೇಲಿ ಬಂದ  ಸುಂದರ ಕೊಳಲ ನಾದಕ್ಕೆ ತಲೆದೂಗುತ್ತ ಕೊರಳಲ್ಲಿನ ಗಂಟೆಯ ಸಪ್ಪಳ ಮಾಡುತ್ತಿವೆ.ನವಿಲೊಂದು ನಾಟ್ಯವಾಡುತ್ತ ಅವರತ್ತ ಬರುತ್ತದೆ.ಇಷ್ಟು ವರ್ಷದ ತಪಸ್ಸು ಈಗ ಫಲ ಕೊಟ್ಟಿರುವಂತೆ ರಾಧೆಯ ಸಂತಸಕ್ಕೆ ಪಾರವೇ ಇಲ್ಲ.ತನಗರಿವಿಲ್ಲದಂತೆಯೇ ರಾಧೆ ನೃತ್ಯ ಮಾಡುತ್ತ ಕೃಷ್ಣನಿಗೆ ವಂದಿಸುತ್ತಾಳೆ…. ಅಭಿನಂದಿಸುತ್ತಾಳೆ.ಬಿಸಿಲ ತಾಪಕ್ಕೆ  ಸುರಿದ ಕೃಷ್ಣನ ಮುಖದ ಮೇಲಿನ ಬೆವರು ಹನಿಯನ್ನು ತನ್ನ ಚಿತ್ತಾರದ ಸೀರೆ ಸೆರಗಿನಿಂದ ಮೃದುವಾಗಿ ಒರೆಸುತ್ತ ಆಯಾಸವಾಯಿತೆ ಕೃಷ್ಣ?… ನೀ ಬಂದ ಖುಶಿಯಲ್ಲಿ  ನನ್ನನ್ನೇ ನಾ ಮರೆತೆ ನಿನಗೆ ಹಸಿವಾಗಿರಬಹುದು ತಾಳು ಎಂದು ಅಡುಗೆ ಕೋಣೆಯತ್ತ ನಡೆಯುತ್ತಾಳೆ. ಅದೆಂಥ ಅನನ್ಯ ಭಕ್ತಿ ನನ್ನಲ್ಲಿವಳಿಗೆ…. ಶ್ಯಾಮನೆಂದು ಧ್ಯಾನಿಸೋ ಮೊದಲೇ ಸ್ಮರಿಸಲಿ ರಾಧೆಯನ್ನೇ ಅನ್ನೋ ವರವನ್ನು ಪ್ರಧಾನಿಸುವಾಗಲೇ ಬೆಳ್ಳಿ ಬಟ್ಟಲಲ್ಲಿ ಬೆಣ್ಣೆ ಹಿಡಿದುಕೊಂಡು ಬಂದ ರಾಧೆ ತಗೋ ಕೃಷ್ಣ ನಿನಗಿಷ್ಟವಾದದ್ದನ್ನೇ ತಂದಿರುವೆ ಎನ್ನುತ್ತಾ ತಾನೇ ಕೈತುತ್ತು ಕೊಡುವಳು.ಬೇರಾವ ಮೋಹಪಾಶವಿರದ ಶುದ್ಧ ಪ್ರೀತಿ ನಿನ್ನದು ರಾಧೆ ಅದೇನು ವರ ಬೇಕು ಕೇಳು ಅಂದಾಗ ಏನು ವರ ಕೇಳಲಿ ಕೃಷ್ಣ!?…. ನನ್ನೆಲ್ಲ ಆಗು ಹೋಗು,ಮೂಲಗಳಿಗೆ ಸೃಷ್ಟಿ, ಕಾರಣಕರ್ತ ನೀನೇ ಇರುವಾಗ ನನ್ನ ಬೇಕು ಬೇಡಗಳೆಲ್ಲ ನಿನಗೇ ಗೊತ್ತು ಹೀಗಿದ್ದೂ ನನ್ನನ್ನು ಪರೀಕ್ಷಿಸುವ ಹುನ್ನಾರವೇ!?….. ಅಥವಾ ಇಷ್ಟು ವರುಷದಲ್ಲಿ ರಾಧೆ ಬದಲಾಗಿರುವಳೆಂಬ ಭಾವನೆಯೇ!?…. ಇಲ್ಲ ಕೃಷ್ಣ ಇಲ್ಲ ನೀನೆಲ್ಲವನ್ನೂ ಅರಿತಿರುವೆ, ಅರಿಯದವನಂತೇಕೆ ನಟಿಸುವೆ!? ಕಣ್ಣೊಳಗಿನ ದೃಷ್ಟಿಗೇಕೆ ವರ್ಣನೆ…. * ಸೃಷ್ಟಿಸಿದ ಬೊಂಬೆಗಳಲ್ಲೆಲ್ಲ ನಿನ್ನದೇ ಜೀವಂತಿಕೆ ನನ್ನೊಳಗಿನ ನಿನಗಾವ ಆರಾಧನೆ ಪೂಜಿಸುವ ಪದಗಳೆಲ್ಲ ನೀನಿತ್ತ ಕಾಣಿಕೆ! ಸದಾ ನಿನ್ನ ಹೃದಯದಲ್ಲಿ ವಾಸಮಾಡಿಕೊ ಎನ್ನ.ಅದರ ಹೊರತು ಮತ್ತಾವ ವರವು ಬೇಕಿಲ್ಲ ಅದರ ಅಗತ್ಯವೂ ನನಗಿಲ್ಲ ಕೃಷ್ಣ ಅಂದಾಗ .ತಥಾಸ್ತು ಅಂತಾನೆ ಕೃಷ್ಣ.ಅಷ್ಟೊತ್ತಿಗಾಗಲೇ ಸೂರ್ಯನು ಪಡುವಣ ದಿಕ್ಕಿನೆಡೆಗೆ ಧಾವಿಸುತ್ತಿದ್ದ.ಅದು ಅವನಿಗೂ ವಿರಮಿಸುವ ಹೊತ್ತಲ್ಲವೇ!?…. ಹಕ್ಕಿಗಳೆಲ್ಲ ಬಾನಂಗಳದಿ ನೇಸರನ ವಿದಾಯ ಸಲ್ಲದು ಎಂಬಂತೆ ಏನೋ ಕಿಚಿ ಪಿಚಿ ಅನ್ನುತ್ತಿದ್ದವು. ಹೇ….! ಒಲವೇ ನಾನಿನ್ನು ಹೋಗಿ ಬರಲೇ!? ಅನ್ನೋ ಕೃಷ್ಣನೆದೆಯ ಸದ್ದು ರಾಧೆಯ ಹೃದಯಕ್ಕೂ ಕೇಳಿಸುತ್ತಿತ್ತು.ಮನವದೆಷ್ಟು ಬೇಡವೆಂದು ಕೂಗಿದರೂ ಕರ್ತವ್ಯದ ಕರೆ ದೇವರಿಗೂ ಉಂಟು ರಾಧೆ.ಅದಕ್ಕಾಗಿ ಮರಳಲೇಬೇಕು .”ಇಂದು ನಾ ನಿನ್ನೊಂದಿಗೆ ಕಳೆದ ಈ ಪ್ರತಿ ಕ್ಷಣಗಳೇ ನನಗೆ ಸ್ಫೂರ್ತಿ ಕೃಷ್ಣ” ನಿನ್ನ ಇಂದಿನ ಈ  ಭೇಟಿಯದು ನಾ ನಿರೀಕ್ಷಿಸದ,ಅವರ್ಣನೀಯ ಸಂಭ್ರಮದ ಸಂಗತಿ. ಈ ಮಧುರ ನೆನಪುಗಳೊಂದಿಗೆಯೇ ನಾನು ಜೀವಿಸುತ್ತೇನೆ ಅದು ಈ ಜನ್ಮದಲ್ಲಷ್ಟೇ ಅಲ್ಲ ನಾ ಜನಿಸೋ ಪ್ರತಿಜನ್ಮದಲ್ಲೂ ನಮ್ಮ ಈ ಪವಿತ್ರ ಅನುಬಂಧ ಹೀಗೆ ಇರುವುದು.ಹೋಗಿ ಬಾ ಕೃಷ್ಣ….. ಹೋಗಿ ಬಾ….ಎನ್ನುತ್ತಲೇ ಕೃಷ್ಣ ಅವಳಾತ್ಮದೊಳಗೆ ವಿಲೀನವಾದ…! *********************************************

ಧನ್ಯ ಮಿಲನ Read Post »

You cannot copy content of this page

Scroll to Top