Day: January 12, 2021

ಕಾಫಿಯಾನ ಗಝಲ್

ಕಾಫಿಯಾನ ಗಝಲ್ ಜಬೀವುಲ್ಲಾ ಎಂ. ಅಸದ್ ಇರುಳಲ್ಲಿ ಹಚ್ಚಿಟ್ಟ ದೀಪಗಳ ಬೆಳಗು ಹಗಲಲ್ಲಿ ಮಾಯವಾಗಿದೆಹೃದಯದಲ್ಲಿ ಹುದುಗಿದ್ದ ಪ್ರೇಮದ ಬೀಜ ಈಗ ಮೊಳಕೆಯಾಗಿದೆ ಕಾಣದ ಭರವಸೆಯ ಕರಪಿಡಿದು ನಡೆದಿರುವೆ ಸುಮ್ಮನೆ ಎಲ್ಲಿಗೋನೆನಪಿನಾಗಸ ಗುಡುಗಿ ಧೋಗುಟ್ಟಿ ಸುರಿದು ಮನಸ್ಸು ಹಸಿಯಾಗಿದೆ ಹೃದಯದ ಹಾದಿಯಲ್ಲಿದೆ ನಿನ್ನ ಹೆಜ್ಜೆ ಗುರುತುಗಳ ಕಾಡುವ ಸದ್ದುಮದ್ದಿಲ್ಲದ ಮನದ ನೋವಿಗೆ ಕಣ್ಣ ಕಂಬನಿ ಸಾಂತ್ವನವಾಗಿದೆ ನಶ್ವರದ ಬಾಳಿದು ಸಾರ್ಥಕವಾಗಿಸಬೇಕು ಶಾಶ್ವತೆಯ ಅರಸದಿರುಮುಂಜಾವಿಗೆ ಅರಳಿ ಘಮಘಮಿಸಿದ ಸುಮ ಸಂಜೆಗೆ ಸಾವಾಗಿದೆ ಕಾಣದ ಕಿಚ್ಚು ಹುಚ್ಚೆದ್ದು ಹಬ್ಬಿ ಸುಡುತ್ತಿಹುದು ಸಂಬಂಧಗಳನ್ನುಒಡಲ […]

ಹಾಯ್ಕುಗಳು

ಹಾಯ್ಕುಗಳು ಭಾರತಿ ರವೀಂದ್ರ 1) ರವಿ ಹೇಮಂತ ಋತುಬೆಳಗೋ ರವಿ ಕೂಡಾಮೈಗಳ್ಳನಾದ. 2) ಚಂದ್ರ ಬಾನಿಗೆ ಬಣ್ಣ :ತಾರೆಯ ಕೆನ್ನೆಯದು,ಚಂದ್ರ ನಕ್ಕಾಗ. 3) ಇಬ್ಬನಿ ಹೂವಿನ ನಗು :ಮತ್ತೇರಿತು ಸೂರ್ಯಗೆ,ಇಬ್ಬನಿ ಮುತ್ತು. 4) ಲಾಲಿ ತೊಟ್ಟಿಲು ಕಟ್ಟಿ :ಬಾನಿಗೆ, ಲಾಲಿಹಾಡು,ಹಕ್ಕಿ ಹೇಳಿದೆ. 5) ಸ್ವಪ್ನ ಸೋಲದೆ ಉಂಟೆ :ಜೋಗುಳಕೆ, ನಿದ್ದೆಗೆಸ್ವಪ್ನ ಜಾರಿತು

ಪುಟತಿರುಗಿಸುವ ಮುನ್ನ

ಕವಿತೆ ಪುಟತಿರುಗಿಸುವ ಮುನ್ನ ನೂತನದೋಶೆಟ್ಟಿ ಅವನಿಗೆ ಗೊತ್ತುಇದುಕೊನೆಯಿರದ ನಾಳೆಯೆಂದುದಿನವೂ ಓಕುಳಿಯಾಡುತ್ತ ಬರುತ್ತಾನೆಕಾಮನಬಿಲ್ಲನ್ನು ಗುರುತಿಗಿರಿಸಿ ತೆರಳುತ್ತಾನೆಎಂದಾದರೂ ಒಂಟಿಯಾಗಿಸುತ್ತಾನೆಯೇ? ಚಂದ್ರತಾರೆಯರನ್ನು ಕಳಿಸುತ್ತಾನೆಕತ್ತಲೆಗೆ ಹೊಳಪ ತುಂಬಲುಕಾಯಿಸುತ್ತಾನೆ ಪ್ರೇಮಿಯಂತೆವಿರಹವಿರದ ಬಂಧುರದಿಂದ ಗಿಡ, ಮರ, ಹಕ್ಕಿಗಳಿಂದ ಕಲಿಸುತ್ತಾನೆನಲಿವು, ನೋವು, ಹಸಿವು, ನಿದ್ದೆಪ್ರೇಮ, ಸ್ನೇಹಎಂಥ ಮಾಯಗಾರನೋ ನೀನುಏನು ಕನಸುಗಾರ ! ಕಳೆದ ದಿನಗಳ ನೆನಪಿಸದೆಪಡೆಯಲುಕನವರಿಸದೆಕೊಡುವ ನಿರಂತರತೆಯಲ್ಲಿಧನ್ಯನಾಗುತ್ತೀಯಲ್ಲ ! ನಾವು ಕಲಿತದ್ದಾದರೂ ಏನು!ದಿನಗಳ ಲೆಕ್ಕ,ಕೊಡುವ ಕೊಂಬ ಸಂಚು !ವರುಷ ವರುಷಗಳ ಹಪಹಪಿ ಮತ್ತೆ ನಾಳೆ ಬಂದೇ ಬರುತ್ತಾನೆಅದೇ ಬೆಳಕು, ಬಣ್ಣ, ಅಂದ ಹೊಸತೆಂಬ ಪರದೆಯನ್ನುಕಣ್ಣಿಗಂಟಿಸಿಕೊಂಡುನೋಡುವ ನಾವುಪುಟತಿರುಗಿಸುತ್ತೇವೆಭ್ರಮೆಯಲ್ಲಿ. ————————-

ಅಂದಿಗೂ- ಇಂದಿಗೂ

ಕವಿತೆ ಅಂದಿಗೂ- ಇಂದಿಗೂ ನಾಗರೇಖಾ ಗಾಂವಕರ ನಾನು ಹುಟ್ಟಿದಾಗ ಇದೆಲ್ಲ ಇರಲೇ ಇಲ್ಲ,ಬಣ್ಣಬಣ್ಣದ ಅಂಗಿ ತೊಟ್ಟು,ಕೇಕು ಚಾಕಲೇಟುಗಳ ಹಂಚಿರಲೇ ಇಲ್ಲ. ಅಡಿಯಿಡಲು ಕಲಿತಂತೆ ಕೋಳ್ಗಂಬಕ್ಕೆ ಕಟ್ಟಿದಕಾಲಕುಣಿಕೆ ಬಿಚ್ಚಿ ಹೊರಗಡಿಯಿಟ್ಟಾಗಚೂಪುಕಲ್ಲೊಂದು ಕಾಲ ಬಗೆದಾಗಕಲ್ಲಿಗೆ ಎರಡೇಟು ಬಿಗಿದುಮತ್ತೆ ನಡೆದಾಗ ನನಗೆಭಯವಾಗಿರಲಿಲ್ಲ, ನೋವೂ.. ಅಮ್ಮನ ಕೈ ತೊಟ್ಟಿಲತೂಗಲೇ ಇಲ್ಲ.ಜೋಗುಳವ ಅವಳಿಗೆಂದೂಹಾಡಲಾಗಲೇ ಇಲ್ಲ,ಹಗಳಿರುಳು ದುಡಿದ ಮೈ ಹಾಸಿಗೆಕಂಡಾಗ ಬಿದ್ದದ್ದು, ಮರುದಿನ ಎದ್ದದ್ದು,ಮತ್ತೆ ಬಗಲಿಗೇರಿದ್ದು,ಅದೇ ಹರಕು ಬುಟ್ಟಿ, ಅದರಲ್ಲೆರಡು ರೊಟ್ಟಿತುತ್ತಿನ ಚೀಲ ತುಂಬಬೇಕಿತ್ತಲ್ಲಮತ್ತೆ ಗದ್ದೆ ಹಾಳೆಯ ಮೇಲೆ ಕಟ್ಟಿಟ್ಟಹುಲ್ಲಿನ ಹೊರೆ ಅವಳಿಗಾಗೇಕಾದಿರುತ್ತಿತ್ತಲ್ಲ,ಆದರವಳ ಪ್ರೀತಿಯ ಬೆಚ್ಚನೆಯ […]

ಸಂಕ್ರಾಂತಿ ಕಾವ್ಯ ಸುಗ್ಗಿ ಹಳೆಮನೆ ಮತ್ತು ಗೋಡೆ ಗಡಿಯಾರ ವಿಭಾ ಪುರೋಹಿತ ಮೂರ್ನಾಲ್ಕು ತಲೆಮಾರಿನವರುಚಿರಪರಿಚಿತರೇ,ಅನಾದಿ…..ಅದೇ ಗೋಡೆ ಅದೇ ಜೀವಅದೇ ಭಾವ ಅದೇ ಬಡಿತನಿರ್ಲಿಪ್ತ….. ನಿನ್ನಾತ್ಮ ಸಾಂಗತ್ಯ….ಇನ್ನೂ ಬಸಿರ ಬಯಕೆ ತೀರಿಲ್ಲಹೆಣ್ಣೋ ಗಂಡೋನೋವೋ ನಲಿವೋ ಹಡಿಯುತ್ತಲಿರುವೆ !ವಿಧಿಯ ಕೈವಾಡಗಳು ನಿನ್ನಾಡಿಸುತ್ತವೆಬಿಕ್ಕಿ ನರಳಾಡಿಸುತ್ತವೆನಕ್ಕು ನಲಿಸುತ್ತವೆಹಿಂಡು ಹಿಂಡಾಗಿ ಕಷ್ಟಗಳಒಂದೊಂದಾಗಿ ಸುಖಗಳಹೆರುತ್ತ…. ಅದೆಷ್ಟುಪಾಠ ಕಲಿಸಿರುವೆ !ಸಂಯಮ ಪರೀಕ್ಷಿಸಿರುವೆ !ದಾಯಾದಿ ಬಂಧುಗಳ ಬಿರುಕುಹೆಣ್ಮಕ್ಕಳ ಅಳುಕುದೇಶದ ವಿದ್ಯಮಾನಸ್ವಾತಂತ್ರ್ಯ ಹೋರಾಟದ ಭಯಾನಕವಿಕೋಪಗಳ ವಿಪತ್ತೂ ಕಂಡಿರುವೆಹಾಹಾ….ಆದರೀಗ….ಏನೂ ಗೊತ್ತಿಲ್ಲದವರಂತೆಹೊಸತಲೆಮಾರಿನವರೆದಿರು‘ ಆಂಟಿಕ್ ಪೀಸ್ ‘ ನಂತೆ .ಹಳೇ ಟಿಕ್ ಟಿಕ್ ನಲಿಹೊಸ […]

ಕವಡೆಗಳು

ಕವಿತೆ ಕವಡೆಗಳು ವಿಭಾ ಪುರೋಹಿತ್ ಪಬ್ ಜಿ ವಿಡಿಯೋ ಗೇಮ್ ಬೇಜಾರಾಗಿಚೌಕಾಬಾರಾ ಪಗಡೆ ಅಳೆಗುಳಿಮನೆಝಾಡಿಸಿಕೊಂಡು ಮೇಲೆದ್ದಿವೆಚರಿತ್ರೆಯ ಮು‌ಷ್ಟಿಯೊಳಗಿಂದತಂದಾಣಿಪಿಲ್ಲೆ ಹಾವುಏಣಿಯಾಟ ಹುಣಸೆಬೀಜಗಳು ಕಾಶಿಯಿಂದ ತಂದ ಕವಡೆಗಳು ಕಣ್ಬಿಟ್ಟಿವೆ ಲಾಕ್ಡೌನಿನಲ್ಲಿ ! ಬೊಗಸೆಯಲ್ಲಿಟ್ಟು ಕುಲುಕಿಸಿ ಎಸೆದಾಗಬೇಕಾಗುವ ಅಂಕೆ ದೊರೆತರೆ ಅದೃಷ್ಟಅಂಗಾತ ಬಿದ್ದಕವಡೆ ಕುದುರಿಯೇಳುವ ಭಾಗ್ಯಡಬ್ಬು ಮಲಗಿದ ಕವಡೆ ನಿತಾಂತಬಾಳಭವಿತವ್ಯಕ್ಕೆ ಕವಡೆ ಸಂಖ್ಯೆ ಗಳಪಾರಾಯಣವಂತೆ ಜೋತಿಷ್ಯಾಲಯದಲ್ಲಿಸಾಲುಗಟ್ಟಿ ನಿಂತಿದ್ದಾರೆ ಕವಡೆವಾಣಿಗಾಗಿಅರ್ಧಸತ್ಯವಿದ್ದರೂ ನಂಬುವ ಅನಿವಾರ್ಯಮನದೊಳಗೆಹೂತಿಟ್ಟ ಪ್ರಶ್ನೆ ಗಳಿಗೆರಾಮಬಾಣವಂತೆ ಕವಡೆಗಳು ಅದೇನೋ ನೂರೆಂಟು ಕಗ್ಗಂಟುಲೆಕ್ಕಾಚಾರದ ಸೂತ್ರಗಳುನೌಕೆ ಓಡುವುದಕ್ಕೂ ನಿಲ್ಲುವದಕ್ಕೂಕಾರಣಿಸುವ ಲಂಗರು ಕವಡೆಉತ್ತರ ಹೇಳಬೇಕಂತೆ……ಅಂತೆ ಕಂತೆಗಳ ಉಡ್ಡಯನಪ್ಯಾಶ್ಚರೀಕರಿಸಿದ […]

ಈಗ ಅವಳು

ಕವಿತೆ ಈಗ ಅವಳು ವಾಯ್.ವ್ಹಿ.ಕಂಬಾರ ಬಣ್ಣದ ಬಟ್ಟೆಗೆ ಕಣ್ಣಾಗುವ ಅವಳುಬಿಳಿಯ ಹೊಳಪಿಗೆ – ಬಾಯಾಗುವಳುಹೊಲ , ಮನೆ ಕದನ – ಕಲಾಪಗಳಲ್ಲಿಕಥೆಯಾದವರು – ಬಿಲ್ಲಿಗೆ ಕಲ್ಲಾಗುವರು !! ದಪ್ಪ ಮೀಸೆಗಳಲ್ಲಿಬರವಸೆಯ ಕಣ್ಣಿರಿಸಿದವಳಿಗೆಸಂಕಟ ತಿಳಿಯದ ಬೆಳಕ ಕಂಡು – ಕುಬ್ಜಳಾಗುವಳು !! ಹೆಜ್ಜೆ ಹೆಜ್ಜೆಗೂ ಅನ್ನ ಅರಸುವ ಅವಳುಅವಮಾನದ ವಿಷ ತುಳಿದುಹಸಿವೆಯ ಹರಾಜಿಗೆ – ತ ಲೆಬಾಗುವಳು !! ರಕ್ತ ಸಂಭಂದಗಳು , ಸ್ನೇಹಗಳುಬಾಲ್ಯದ ಆಟಗಳು , ತೊಟ್ಟಿಲದಜೋಗುಳಗಳು – ಸುಟ್ಟುಹೋದಸುಡುಗಾಡದಲ್ಲಿ ಈಗ ಅವಳು !! ಎಲ್ಲ ಬಿಟ್ಟು […]

Back To Top