ಹಾಯ್ಕುಗಳು
ಭಾರತಿ ರವೀಂದ್ರ.
ನಲ್ಲ
ಮನದಂಗಳ :
ನಲ್ಲನ ಹೆಸರಿನ,
ಹಸೆ ಮೂಡಿದೆ.
ಲಜ್ಜೆ
ಹಸೆಗೂ ಲಜ್ಜೆ
ಅವನ ನೆನಪಲ್ಲಿ,
ನಲ್ಲೆ ನಗಲು.
ದುಂಬಿ
ಹೂವಿನಮಲು.
ದುಂಬಿಗೆ ಹೊಸಗಾನ,
ಶೃಂಗಾರ ಕಥೆ.
ತಾರೆ
ಮಿಂಚಿನ ನೋಟ :
ತಾರೆಗೂ ಕಚಗುಳಿ,
ಮುನಿದ ಚಂದ್ರ.
ನಗು
ನಲ್ಲೆ ನಗುವು :
ತಪ್ಪಿದ ಎದೆ ತಾಳ,
ಮಧುರ ಗಾನ.
ಲಾಂದ್ರ
ಬಾನಂಚ ಲಾಂದ್ರ :
ಹತ್ತಿದಾಗೆಲ್ಲ, ನಲ್ಲೆ
ಮೊಗ ಕೆಂಪಗೆ.
ರವಿತೇಜ
ಮಧುರ ಹಾಡು :
ಹಕ್ಕಿಯ ಸ್ವಾಗತವು,
ರವಿತೇಜಗೆ.
*****************************