ಪತ್ರ
ಕವಿತೆ ಪತ್ರ ಅಕ್ಷತಾ ಜಗದೀಶ. ನೋಡ ನೋಡುತ್ತಲೇ ಮರೆಯಾಯಿತುತಿಂಗಳಿಗೊಮ್ಮೆ ಬರುತ್ತಿದ್ದ ಪತ್ರಲೇಖನಿ ಹಿಡಿದುಮಧುರ ಬಾಂಧವ್ಯ ನೆನೆದುಅಕ್ಷರ ಮಾಲೆಯೊಳುಸಂಬಂಧ ಪೋಣಿಸಿ ಬರೆದುಹತ್ತಿರ ಬೆಸೆಯುತ್ತಿದ್ದ ಪತ್ರಈಗ ಕೇವಲ ನೆನಪು ಮಾತ್ರ! ನೋವು ನಲಿವಿನಲ್ಲಿ ಜೋತೆಯಾಗಿದ್ದಪತ್ರ…ಬಂಧುಗಳೊಡನೆ ಬಾಂಧವ್ಯ ಬೆಸೆಯಲುಸೇತುವೆಯಾಗಿದ್ದ ಪತ್ರ..ಅಗಾಧವಾದ ಮಾತುಗಳನುಮಿತಗೊಳಿಸಿ ವ್ಯಕ್ತಪಡಿಸುತ್ತಿದ್ದಪತ್ರ..ಈಗ ಕೇವಲ ನೆನಪು ಮಾತ್ರ! ಎಷ್ಟೇ ಆಧುನಿಕತೆಯ ಉಪಕರಣಬಂದರುಪತ್ರಕ್ಕೆ ಸರಿಸಮನಾಗಿ ನಿಲ್ಲಲಾರರುನೆನಪುಗಳಲಿ ನೆನೆಪಾಗಿನೆನಪನ್ನೇ ನೆನಪಿಸುವ ಪತ್ರಈಗ ಕೇವಲ ನೆನಪು ಮಾತ್ರ… ************************

