ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಹಿಮಾಲಯ ಪರ್ವತ ಶ್ರೇಣಿಗಳು”

ಲೇಖನ ಹಿಮಾಲಯ ಪರ್ವತ ಶ್ರೇಣಿಗಳು” ಆಶಾ ಸಿದ್ದಲಿಂಗಯ್ಯ ಸಿಂಧೂ ನದಿಯ ಬಯಲಿನಲ್ಲಿ ಸಂಸ್ಕೃತಿ ರೂಪುಗೊಳ್ಳುವ ಮೊದಲೇ ಗೊಂಡಿ ಭಾಷೆಯಿತ್ತು ಎನ್ನುವ ಮಾತು ಹೆಚ್ಚು ಮುಖ್ಯವಾಗುತ್ತದೆ. ಹಲವು ಲಕ್ಷ ವರ್ಷಗಳ ಹಿಂದೆ ಈಗಿನ ದಕ್ಷಿಣ ಅಮೆರಿಕ, ದಕ್ಷಿಣ ಆಫ್ರಿಕಾ, ಏಷ್ಯಾ ಖಂಡದ ದಕ್ಷಿಣ ಭಾಗ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಅಂಟಾರ್ಟಿಕಾಗಳು ಕೂಡಿದ್ದ ಭೂಭಾಗವಿತ್ತು. ಅದನ್ನು ಗೊಂಡ್ವಾನ ಎಂದು ಕರೆಯುತ್ತಿದ್ದರು. ಭಾರತದ ವಿಂಧ್ಯ ಪರ್ವತ ಶ್ರೇಣಿಯ ದಕ್ಷಿಣ ಭಾಗ ಅಂದರೆ ದಕ್ಷಿಣ ಭಾರತದ ಪ್ರಸ್ಥಭೂಮಿ ಗೊಂಡ್ವಾನ ಪ್ರದೇಶದ ಭಾಗವಾಗಿತ್ತು. ಅಲ್ಲಿ ವಾಸಿಸುತ್ತಿದ್ದ ಗೊಂಡರು ಸಿಂಧೂ ನದಿ ಬಯಲಿನ ನಾಗರಿಕತೆಯ ಜನರಿಗಿಂತ ಹಿಂದಿನವರು. ಅವರು ಆಡುತ್ತಿದ್ದ ಭಾಷೆ ದ್ರಾವಿಡ ವರ್ಗಕ್ಕೆ ಸೇರಿತ್ತು. ಅದು ಈಗಲೂ ಬಳಕೆಯಲ್ಲಿದೆ ಎಂಬುದು ಕುತೂಹಲದ ವಿಚಾರ. ಹಿಮಾಲಯ ಭೂಮಿಯ ಅತ್ಯಂತ ನವೀನ ಪರ್ವತ ಶ್ರೇಣಿಗಳಲ್ಲಿ ಒಂದು. ಸುಮಾರು ೨೫ ಕೋಟಿ ವರ್ಷಗಳ ಹಿಂದೆ “ಪ್ಯಾಂಜಿಯ” ಭೂಭಾಗ ಒಡೆದು ಇಂಡೋ-ಆಸ್ಟ್ರೇಲಿಯನ್ ಭೂಭಾಗ ಯೂರೇಷ್ಯನ್ ಭೂಭಾಗದತ್ತ ತೇಲಲಾರಂಭಿಸಿತು. ಸುಮಾರು ೪-೭ ಕೋಟಿ ವರ್ಷಗಳ ಹಿಂದೆ ಈ ಎರಡು ಭೂಭಾಗಗಳು ಒಂದಕ್ಕೊಂದು ಗುದ್ದಿದಾಗ ಹಿಮಾಲಯ ಪರ್ವತಗಳು ಸೃಷ್ಟಿಯಾದವು. ಸುಮಾರು ೨-೩ ಕೋಟಿ ವರ್ಷಗಳ ಹಿಂದೆ ಇಂದಿನ ಭಾರತದ ಪ್ರದೇಶದಲ್ಲಿದ್ದ ಟೆತಿಸ್ ಸಾಗರ ಸಂಪೂರ್ಣವಾಗಿ ಮುಚ್ಚಿ ಹೋಯಿತು . ಇಂಡೋ-ಆಸ್ಟ್ರೇಲಿಯನ್ ಭೂಭಾಗ ಇಂದಿಗೂ ನಿಧಾನವಾಗಿ ಟಿಬೆಟ್ ಭೂಭಾಗದ ಅಡಿಯಲ್ಲಿ ಚಲಿಸುತ್ತಿದೆ (ಸುಮಾರು ವರ್ಷಕ್ಕೆ ೨ ಸೆಮೀ), ಮತ್ತು ಮುಂದಿನ ಕೋಟಿ ವರ್ಷಗಳಲ್ಲಿ ಸುಮಾರು ೧೮೦ ಕಿಮೀ ನಷ್ಟು ಚಲಿಸಿರುತ್ತದೆ! ಈ ಚಲನೆಯಿಂದ ಹಿಮಾಲಯ ಶ್ರೇಣಿ ವರ್ಷಕ್ಕೆ ಅರ್ಧ ಸೆಮೀ ನಷ್ಟು ಬೆಳೆಯುತ್ತಿದೆ. ಇದೇ ಚಲನೆಯಿಂದ ಈ ಪ್ರದೇಶ ಸಾಕಷ್ಟು ಭೂಕಂಪಗಳನ್ನು ಸಹ ಕಂಡಿದೆ. ಹಿಮಾಲಯ ಶ್ರೇಣಿ ಪಶ್ಚಿಮದಲ್ಲಿ “ನಂಗಾ ಪರ್ಬತ್” ಇಂದ ಪೂರ್ವದಲ್ಲಿ “ನಾಮ್ಚೆ ಬರ್ವಾ” ದ ವರೆಗೆ ಸುಮಾರು ೨೪೦೦ ಕಿಮೀ ಉದ್ದವಿದೆ. ಅಗಲ ೨೫೦-೩೦೦ ಕಿಮೀ. ಹಿಮಾಲಯ ಶ್ರೇಣಿಯಲ್ಲಿ ಸಮಾನಾಂತರವಾಗಿ ಸಾಗುವ ಮೂರು ವಿಭಿನ್ನ ಶ್ರೇಣಿಗಳನ್ನು ಕಾಣಬಹುದು: “ಉಪ-ಹಿಮಾಲಯ”: ಇದನ್ನು ಭಾರತದಲ್ಲಿ “ಶಿವಾಲಿಕ್ ಹಿಲ್ಸ್ “ಎಂದು ಕರೆಯಲಾಗುತ್ತದೆ. ಈ ಶ್ರೇಣಿ ಅತ್ಯಂತ ಇತ್ತೀಚೆಗೆ ಸೃಷ್ಟಿಯಾದದ್ದು ಮತ್ತು ಸರಾಸರಿ ೧೨೦೦ ಮೀ ಎತ್ತರ ಹೊಂದಿದೆ. ಮುಖ್ಯವಾಗಿ, ಇನ್ನೂ ಬೆಳೆಯುತ್ತಿರುವ ಹಿಮಾಲಯ ಪರ್ವತಗಳಿಂದ ಜಾರುವ ಭೂಭಾಗದಿಂದ ಈ ಶ್ರೇಣಿ ಸೃಷ್ಟಿಯಾಗಿದೆ. “ಕೆಳಗಿನ ಹಿಮಾಲಯ”: ಸರಾಸರಿ ೨೦೦೦-೫೦೦೦ ಮೀ ಎತ್ತರವಿದ್ದು ಇದು ಭಾರತದ ಹಿಮಾಚಲ ಪ್ರದೇಶ, ನೇಪಾಳದ ದಕ್ಷಿಣ ಪ್ರದೇಶಗಳ ಮೂಲಕ ಸಾಗುತ್ತದೆ. ಡಾರ್ಜೀಲಿಂಗ್, ಶಿಮ್ಲಾ, ನೈನಿತಾಲ್, ಮೊದಲಾದ ಭಾರತದ ಅನೇಕ ಪ್ರಸಿದ್ಧ ಗಿರಿಧಾಮಗಳು ಈ ಶ್ರೇಣಿಯಲ್ಲಿಯೇ ಇರುವುದು. “ಮೇಲಿನ ಹಿಮಾಲಯ”: ಈ ಶ್ರೇಣಿ ಎಲ್ಲಕ್ಕಿಂತ ಉತ್ತರದಲ್ಲಿದ್ದು ನೇಪಾಳದ ಉತ್ತರ ಭಾಗಗಳು ಮತ್ತು ಟಿಬೆಟ್ ನ ದಕ್ಷಿಣ ಭಾಗಗಳ ಮೂಲಕ ಸಾಗುತ್ತದೆ. ೬೦೦೦ ಮೀ ಗಿಂತಲೂ ಹೆಚ್ಚಿನ ಸರಾಸರಿ ಎತ್ತರವನ್ನು ಹೊಂದಿರುವ ಈ ಶ್ರೇಣಿ ಪ್ರಪಂಚದ ಅತಿ ಎತ್ತರದ ಮೂರು ಶಿಖರಗಳನ್ನು ಒಳಗೊಂಡಿದೆ – ಎವರೆಸ್ಟ್, ಕೆ-೨, ಮತ್ತು ಕಾಂಚನಗಂಗಾ. ಹವಾಮಾನದ ಮೇಲಿನ ಪ್ರಭಾವ ಭಾರತೀಯ ಉಪಖಂಡ ಮತ್ತು ಟಿಬೆಟ್ ಪ್ರಸ್ಥಭೂಮಿಗಳ ಹವಾಮಾನದ ಮೇಲೆ ಹಿಮಾಲಯ ಶ್ರೇಣಿ ಆಳವಾದ ಪ್ರಭಾವವನ್ನು ಬೀರುತ್ತದೆ. ಆರ್ಟಿಕ್ ಪ್ರದೇಶದಿಂದ ಚಳಿ ಗಾಳಿ ಭಾರತದೊಳಕ್ಕೆ ಬೀಸುವುದನ್ನು ಹಿಮಾಲಯ ಶ್ರೇಣಿ ತಡೆಯುತ್ತದೆ. ಇದರಿಂದಾಗಿ ದಕ್ಷಿಣ ಏಷ್ಯಾ – ಟಿಬೆಟ್ ಮೊದಲಾದ ಪ್ರದೇಶಗಳಿಗಿಂತ ಬೆಚ್ಚಗಿರುತ್ತದೆ. ಹಾಗೆಯೇ ಮಾನ್ಸೂನ್ ಮಾರುತಗಳನ್ನು ತಡೆದು ಭಾರತದ ಪೂರ್ವ ರಾಜ್ಯಗಳಲ್ಲಿ (ಮಿಜೋರಂ, ಮೇಘಾಲಯ, ಇತ್ಯಾದಿ) ಬಹಳಷ್ಟು ಮಳೆಯಾಗುವಂತೆ ಮಾಡುತ್ತದೆ. ಮಾನ್ಸೂನ್ ಮಾರುತಗಳು ಹಿಮಾಲಯವನ್ನು ದಾಟಲಾಗದೆ ಇರುವುದೂ ಸಹ ಟಿಬೆಟ್/ಚೀನಾಗಳಲ್ಲಿನ ಗೋಬಿ ಮರುಭೂಮಿ ಮತ್ತು ತಕ್ಲಮಕಾನ್ ಮರುಭೂಮಿಗಳ ಸೃಷ್ಟಿಗೆ ಒಂದು ಕಾರಣ ಎಂದು ಊಹಿಸಲಾಗಿದೆ. ಚಳಿಗಾಲದಲ್ಲಿ ಪಶ್ಚಿಮದ ಇರಾನ್‍ನ ಕಡೆಯಿಂದ ಉಂಟಾಗುವ ಹವಾಮಾನದ ಪ್ರಕ್ಷುಬ್ಧತೆಗಳನ್ನು ಈ ಶ್ರೇಣಿಗಳು ಮುನ್ನುಗ್ಗದಂತೆ ತಡೆಯುತ್ತವೆ. ಈ ರೀತಿಯ ತಡೆಯುವಿಕೆಯಿಂದಾಗಿ ಕಾಶ್ಮೀರದಲ್ಲಿ ಹಿಮಪಾತವುಂಟಾಗುತ್ತದೆ ಹಾಗೂ ಉತ್ತರ ಭಾರತದ ಮತ್ತು ಪಂಜಾಬ್‍ನ ಕೆಲವು ಭಾಗಗಳಲ್ಲಿ ಮಳೆ ಬೀಳುತ್ತದೆ. ಹಿಮಾಲಯ ಶ್ರೇಣಿಗಳು ಉತ್ತರದಿಂದ ಆರ್ಕ್‍ಟಿಕ್ ಕಡೆಯಿಂದ ಬೀಸುವ ಚಳಿಗಾಳಿಯನ್ನು ಬಹುಮಟ್ಟಿಗೆ ತಡೆದರೂ, ಬ್ರಹ್ಮಪುತ್ರ ಕಣಿವೆಯಲ್ಲಿ ಈ ಚಳಿಗಾಳಿಯ ಸ್ವಲ್ಪ ಪಾಲು ನುಸುಳಿ ಬರುತ್ತದೆ. ಇದರಿಂದಾಗಿ ಬಾಂಗ್ಲಾದೇಶದಲ್ಲಿ ಮತ್ತು ಭಾರತದ ಈಶಾನ್ಯ ರಾಜ್ಯಗಳಲ್ಲಿ ಚಳಿಗಾಲದ ಉಷ್ಣತೆ ಸಾಕಷ್ಟು ಮಟ್ಟಿಗೆ ಕೆಳಗಿಳಿಯುತ್ತದೆ. ಇದೇ ಗಾಳಿಯು ಈ ಈಶಾನ್ಯ ಪ್ರಾಂತ್ಯಗಳಲ್ಲಿ ಈಶಾನ್ಯ ಮುಂಗಾರನ್ನೂ ಉಂಟುಮಾಡುತ್ತದೆ. ***********************************

ಹಿಮಾಲಯ ಪರ್ವತ ಶ್ರೇಣಿಗಳು” Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ರತ್ನರಾಯಮಲ್ಲ ಚಳಿಯ ನಿನ್ನಯ ಆಲಿಂಗವನ್ನು ಬಯಸುತಿದೆಒಂಟಿತನ ನಿನ್ನಯ ಜೊತೆಯನ್ನು ಬಯಸುತಿದೆ ಬದುಕಿನಲ್ಲಿ ಬಹು ದೂರ ಸಾಗಬೇಕಾಗಿದೆ ನಾನುಜೀವನವು ನಿನ್ನಯ ಸನಿಹವನ್ನು ಬಯಸುತಿದೆ ನನ್ನೆದೆಯ ಗೂಡು ಹಾಳುಬಿದ್ದ ಕೊಂಪೆಯಾಗಿದೆನನ್ನ ಹೃದಯವು ನಿನ್ನ ಬಡಿತವನ್ನು ಬಯಸುತಿದೆ ತಿಂದ ಅನ್ನ ರುಚಿಯೆನಿಸುತಿಲ್ಲ ಮುದ್ದು ಬಂಗಾರಿಜೀವವು ನಿನ್ನ ಪ್ರೀತಿಯ ಕೈತುತ್ತನ್ನು ಬಯಸುತಿದೆ ‘ಮಲ್ಲಿ’ಯ ಮೈ-ಮನವು ಮರೆತಿದೆ ಬದುಕುವುದನ್ನುಬರಡಾದ ಬಾಳು ನಿನ್ನ ಸಾಂಗತ್ಯವನ್ನು ಬಯಸುತಿದೆ

ಗಜಲ್ Read Post »

ಕಾವ್ಯಯಾನ

ನಾಲ್ಕು ದಿನದ ಪಯಣ

ಕಾವ್ಯಯಾನ ನಾಲ್ಕು ದಿನದ ಪಯಣ ತೇಜಾವತಿ ಹೆಚ್.ಡಿ. ಪ್ರವಾಹವೋ ಬಿರುಗಾಳಿಯೋಚಂಡಮಾರುತವೋ ಜ್ವಾಲಾಮುಖಿಯೋ ಸುನಾಮಿಯೋ… ಯಾವುದೋ ಒಂದು ವಿಕೋಪಬಂದೆರಗಲೇಬೇಕುನವನೆಲೆ ರೂಪಾಂತರವಾಗಲುಹೊಸ ಅಲೆ ಪ್ರಸಾರವಾಗಲು… ಬೇಕಾದದ್ದು ಬೇಡವಾಗಿಬೇಡವಾದದ್ದು ಬೇಕಾಗಿಕಸ ರಸವಾಗಿ, ರಸ ಕಸವಾಗಿಎಲ್ಲವೂ ತಲೆಕೆಳಾಗಾಗುವವಿಚಿತ್ರ ಸತ್ಯ-ಮಿಥ್ಯ ಪ್ರತಿಬಿಂಬಗಳ ದರ್ಶನವಾಗಲು…ಓ ಕಾಲನೇ… ವಜ್ರಕ್ಕಿಂತಲೂ ನೀನೆಷ್ಟು ಕಠೋರ.. ನಿನ್ನನುಗ್ರಹವಿದ್ದರೆಹೂವಿನ ಮೇಲಿನ ನಡಿಗೆಇಲ್ಲದಿದ್ದರೆ..ಕತ್ತಿಯ ಮೇಲಿನ ನಡಿಗೆಮುಟ್ಟಿದ್ದೆಲ್ಲಾ ಮಲ್ಲಿಗೆಯಾಗಿಸುವ ನಿನಗೆತಾಕಿದ್ದೆಲ್ಲ ನಂಜಾಗಿಸುವ ಕಲೆಯೂ ಕರಗತವಾಗಿದೆ ಬಿಡು.. ಎಂದಾದರೂ ನಿನ್ನಂತರಗವ ಅಳೆಯಲಾದೀತೇ…?ಈ ಕ್ಷಣಿಕದ ಗೊಂಬೆಗಳು..! ದಾನ ಮಾಡಿದ ಕರಗಳು ಬೇಡುವುದೆಂದರೇನು..ತನ್ನಸ್ತಿತ್ವವ ಪರರ ವಶದಲ್ಲಿಟ್ಟುನಶ್ವರದ ಬಾಳು ಬದುಕುವುದೆಂದರೇನು.. ನೂರೊಂದು ಮನೆಗಳ ಬೆಳಗಾಗಿದ್ದ ಬೆಳಕುಕತ್ತಲಕೋಣೆಯಲ್ಲಿ ಕೊಳೆಯುವುದೆಂದರೇನು…ದೃಷ್ಟಿ ಕಳೆದುಕೊಂಡ ನಯನಗಳುಎಲ್ಲಿದ್ದರೇನು… ಎಂತಿದ್ದರೇನು? ಭೂಮಿ ತಿರುಗುವುದುಕಾಲ ಉರುಳುವುದುಕಾಡು ನಾಡಾಗಿ, ನಾಡು ಕಾಡಾಗಿನೆಲ ನೀರಾಗಿ, ನೀರು ನೆಲವಾಗಿದೇಹ ಮಣ್ಣಾಗಿ, ಜೀವ ಹಾರಿಹೋಗಿ ಆತ್ಮ ಅಮರವಾಗುವುದು…. ಇದಿಷ್ಟೇ ತಾನೇ…ನಾಲ್ಕು ದಿನದ ಪಯಣ..ಇದಿಷ್ಟೇ ತಾನೇ..ಮುಕ್ತಗುಟ್ಟು… **************************

ನಾಲ್ಕು ದಿನದ ಪಯಣ Read Post »

ಕಾವ್ಯಯಾನ

ಸಾವಿತ್ರಿ

ಕವಿತೆ ಸಾವಿತ್ರಿ ಡಾ.ಸುರೇಖಾ ರಾಠೋಡ ವೀರ ಮಹಿಳೆ ಸಾವಿತ್ರಿಅಕ್ಷರದ ಅವ್ವ ಸಾವಿತ್ರಿ ಅಕ್ಷರ ಕಲಿಯಲು ಹೊರಾಡಿದಅಕ್ಷರ ಕಲಿಸಲು ಶ್ರಮಿಸಿದವೀರ ಮಹಿಳೆ ಸಾವಿತ್ರಿ ದಿನ ದಲಿತರ ಶಿಕ್ಷಣಕ್ಕಾಗಿನಿಂದನೆ, ಅಪಮಾನ, ಅವಮಾನಗಳನ್ನುಸಹಿಸಿದ ವೀರ ಮಾತೆ ಸಾವಿತ್ರಿ ಬಡವಬಲ್ಲಿದವರೆನ್ನೆದೆ ಎಲ್ಲರಸೇವೆ ಮಾಡಿದದೇಶದ ಮೊದಲ ಶಿಕ್ಷಕಿಮೊದಲ ಮುಖ್ಯೋಪಾಧ್ಯಾಯಿನಿಸಾವಿತ್ರಿ ಮಹಿಳಾ ಶಿಕ್ಷಣಕ್ಕಾಗಿ ಜೀವನವನ್ನೇಮುಡುಪಾಗಿಟ್ಟವೀರ ಮಾತೆ ಸಾವಿತ್ರಿ ಜ್ಯೋತಿ ಬಾ ಪುಲೆಯವರೊಂದಿಗೆಶಾಲೆಗಳನ್ನು ತೆರೆದ ಶಿಕ್ಷಣದಾತೆಸಾವಿತ್ರಿ ಜನರ ಕೆಂಗಣ್ಣಿಗೆ ಗುರಿಯಾಗಿಸಂಪ್ರದಾಯಸ್ಥರನ್ನು ಎದುರು ಹಾಕಿಕೊಂಡುದಿಟ್ಟತನದಿಂದ ಮುಂದೆ ನಡೆದದಿಟ್ಟ ಮಹಿಳೆ ಸಾವಿತ್ರಿ ಶಾಲಾ ಮಕ್ಕಳ ಬೇಕು ಬೇಡಗಳನ್ನುಕುಂದುಕೊರತೆಗಳನ್ನು ನಿಗಿಸಿದಸಹನಾಮಯಿ ಸಾವಿತ್ರಿ ಶಿಕ್ಷಣದ ಜೊತೆಗೆಜೀವನ ಕೌಶಲ್ಯ ಕಲಿಸಿದಜೀವನವಿಧಾತೆ ಸಾವಿತ್ರಿ ರೂಢಿ, ಸಂಪ್ರದಾಯ, ಸಮಾಜಿಕರಣದಕಟ್ಟಳೆಗಳನ್ನು ಮುರಿದು ಶವಸಂಸ್ಕಾರವ ಮಾಡಿದ ಧೈರ್ಯವಂತೆ ಸಾವಿತ್ರಿಅಕ್ಷರದವ್ವ ಸಾವಿತ್ರಿಮೊದಲ ಶಿಕ್ಷಕಿ ಸಾವಿತ್ರಿ ***********************

ಸಾವಿತ್ರಿ Read Post »

ಇತರೆ, ಜೀವನ

ಮಾತು ಮನವನ್ನು ಅರಳಿಸಬೇಕು

ಲೇಖನ ಮಾತು ಮನವನ್ನು ಅರಳಿಸಬೇಕು ಮಾಲಾ ಕಮಲಾಪುರ್ ಭಾಷೆ ಮನುಷ್ಯನಿಗೆ  ಲಭಿಸಿದ ದೈವ ದತ್ತ ವರ ವಾದರೆ ಮಾತು ನಮ್ಮ ಭಾವನೆಗಳನ್ನು ಅಭಿವ್ಯಕ್ತಗೊಳಿಸುವ ಮೂಲಕ ಅಮೂಲ್ಯ ಸಾಧನ ಆಗಿದೆ. ಮಾತು ನಮ್ಮ ಬದುಕನ್ನು ಕಟ್ಟುತ್ತದೆ. ಇದು ವ್ಯಕ್ತಿಯ  ಬಿಚ್ಚಿಡುವ ಪಾರಿಜಾತದ ಪರಿಮಳದಂತೆ. ನಾವಾಡುವ ಮಾತು ಪುಷ್ಪದ ದಳದಂತೆ. ಮಾತಿನ ಬಳಕೆ  ಬಲ್ಲವರು ಮಾಣಿಕ್ಕ್ಯ ತರುತ್ತಾರೆ. ಬಳಿಕೆ ಅರಿಯದವರು ಜಗಳ ತರುತ್ತಾರೆ.ಮನುಷ್ಯನು  ಯಾವುದೇ ಲೌಕಿಕ ವಾದ ವಸ್ತು ಗಳಿಂದ ಅಲಂಕಾರ ಮಾಡಿಕೊಂಡರು ಶೋಭಿಸುವುದಿಲ್ಲ. ಆದರೆ ಒಳ್ಳೆಯ ಮಾತು ಮತ್ತು ಪ್ರಾಮಾಣಿಕ  ಮಾತುಗಳಿಂದ  ಅಲಂಕಾರ ದಿಂದ  ಶೋಭಿಸುತ್ತಾನೆ. ಮನುಷ್ಯನ  ಅಂತಸ್ತಾಗಲಿ, ಕುಲವಾಗಲಿ ಯಾವದು ಆತನ ಯಶಸ್ಸಿಗೆ ಕಾರಣವಾಗುವುದಿಲ್ಲ. ಮಧುರ ಮಾತೇ ಆತನ ಗೆಲುವಿಗೆ ಕಾರಣವಾಗುತ್ತದೆ.ಮಾತು ಮನವನ್ನು ಅರಳಿಸವೇಕು, ಹೃದಯತಣಿಸಿ ಜೀವಕ್ಕೆ ಕಳೆಯನ್ನು ತುಂಬ ಬೇಕು. ಶರಣರಾಗಲಿ, ದಾಸರಾಗಲಿ ತಮ್ಮ ನಡೆ ನುಡಿ ಸಾಮರಸ್ಯದ  ಬೆಸುಗೆಯನ್ನೇ ಬೆಸೆದಿದ್ದಾರೆ. ಅದಕ್ಕೆ ಬಸವಣ್ಣ ನವರು ನುಡಿದಡೇ  ಮುತ್ತಿನ ಹಾರದಂತೆ ಇರಬೇಕು, ನುಡಿದರೆ ಮಾಣಿಕ್ಕ್ಯದ  ದೀಪ್ತಿಯಂತಿರಬೇಕು, ನುಡಿದಡೆ ಸ್ಪಟಿಕದ ಸಲಾಕೆಯಂತಿರಬೇಕು ಎಂದು ಸಾರಿದ್ದಾರೆ.ನಾವು ಮಾತನಾಡುವಾಗ ಸಮಯ ಸಂಧರ್ಭ ಅವಲೋಕಿಸಿ ಮಾತನಾಡಬೇಕು. ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎಂಬ ಪ್ರಚಲಿತ ಗಾದೆ ಮಾತು ಇದೆ ಮಾತಿಗೆ ಕ್ಷಮೆ ಕೇಳಬಹದು ಆದರೆ ಅದರಿಂದಾಗುವ ನೋವು ಶಮನವಾಗುವುದಿಲ್ಲ. ಪುರಾಣ ಕಾಲದಲ್ಲಿಯೂ ಋಷಿ ಮುನಿಗಳ ಮಾತು ಕೋಪ ತಾಪ ದಿಂದ ಹೊರ ಬಂದಾಗ ಶಾಪವಾಗುತ್ತಿತ್ತು. ಅವರು ಅರಳಿದ ಹೃದಯದಿಂದ ಮಾತು ವರವಾಗುತಿತ್ತು. ಬಲ್ಲವರು ಕಡಿಮೆ ಮಾತುಗಳಲ್ಲಿ ಮೌಲ್ಲ್ಯಾ ಧಾರಿತ ವಿಷಯಗಳನ್ನು ಬಿಚ್ಚಿಡುತ್ತಾರೆ. ಮಾತು ಹಿತವಾದಷ್ಟು ಒಳಿತು. ಅದಕ್ಕೆ ನಮ್ಮ ಹಿರಿಯರು ಮಾತು ಬೆಳ್ಳಿ ಮೌನ ಬಂಗಾರ ಎಂದಿದ್ದಾರೆ.ಒಟ್ಟಿನಲ್ಲಿ ಹೇಳುವುದಾದರೆ ನಮ್ಮ ನಾಲಿಗೆ ಒಳ್ಳೇದು ಆದರೆ ನಾಡೆಲ್ಲ ಒಳ್ಳೇದು. ಅದಕ್ಕೆ ನಮ್ಮ ಹಿರಿಯರು ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ ಅಂತ ಹೇಳಿದರು. ಮೃದುವಾದ ಮಾತು ಕಠೋರ ವ್ಯಕ್ತಿ ಗಳ ಹೃದಯವನ್ನು ಕರಗಿಸುತ್ತದೆ ಪ್ರಾಮಾಣಿಕ ಮಾತು ಮನುಷ್ಯನ ಕೀರ್ತಿಯನ್ನು ಹೆಚ್ಚಿಸುತ್ತದೆ. ************************

ಮಾತು ಮನವನ್ನು ಅರಳಿಸಬೇಕು Read Post »

You cannot copy content of this page

Scroll to Top