ಕವಿತೆ
ಕ್ಷಮಿಸು ಪ್ಲೀಸ್..
ಮಧುಸೂದನ ಮದ್ದೂರು.
ನೋವಿನಾಳದ ಕಿಸರು ಗಾಯಕೆ ನಿನ್ನ
ನೆನಪುಗಳ
ನೊಣಗಳ ದಾಳಿ
ಝೇಂಕಾರ
ಒಳಗೊಳಗೇ
ಯಾತನೆ ವೇದನೆ
ಒಬ್ಬನೇ ಇದ್ದೇನೆ
ಹಾಯಿಯಲಿ
ಸುತ್ತಲೂ ಅಳುವಿನ
ಉಪ್ಪುಪ್ಪು ಕಡಲು
ನನ್ನುಳುವಿನ ಉಪ್ಪು ಜಾರಿ
ಕಡಲು ಹೆಪ್ಪುಗಟ್ಟುತ್ತಿದೆ..
ಮುಳುಗಬೇಕೆನ್ನುವ ಹಡಗು ಮುಳುಗುತ್ತಿಲ್ಲ
ದೂರದೆಲ್ಲೆಲ್ಲೋ
ಮಿಣುಕು
ಹುಳುದಂತಹ ಬೆಳಕು
ಕಣ್ಣಿಗಾನಿಸುತ್ತಿದ್ದಂತೆ
ನೀನೆನಾದರೂ
ಅದೇ ಹಸಿರು ನೆರಿಗೆ ಲಂಗ ತೊಟ್ಟು ಬಂದೆಯಾ
ಎಂಬ ಹುಂಬತನದ ನಿರೀಕ್ಷೆ
ಸಾಯಲು ಬಿಡುತ್ತಿಲ್ಲ
ಬದುಕಲು ಬಿಡುತ್ತಿಲ್ಲ
ಪ್ರೀತಿ ಅಂದರೆ ಹೀಗೇನಾ..
ಗೊತ್ತಾಗುತ್ತಿಲ್ಲ
ಕ್ಷಮಿಸು ಪ್ಲೀಸ್..
****************************