Day: January 11, 2021

ಕ್ಷೌರಿಕ

ಕವಿತೆ ಕ್ಷೌರಿಕ ಮಾಲತಿ ಶಶಿಧರ್ ಪಾಪ ಕ್ಷೌರಿಕ ಕವಿಯಂತಲ್ಲಕವಿ ಬರೆದ ಸಾಲುಗಳ ತಿದ್ದಬಹುದುಬೇಡವೆನಿಸಿದರೆ ಅಳಿಸಿಬಿಡಬಹುದು ಪಾಪ ಕ್ಷೌರಿಕ ಗೋಡೆ ತುಂಬಾವಿಧ ವಿಧ ಹೇರ್ ಕಟ್ಗಳ ಚಿತ್ರಅಂಟಿಸಿ ಕೇಳಿದ ಹಾಗೆ ಕೆರೆಯಬೇಕುಒಮ್ಮೆ ಕತ್ತರಿ ಕಚಕ್ ಎಂದರೆಅಲ್ಲಿಗೇ ಮುಗಿಯಿತು ಕವಿತೆ ಬರೆವ ನನ್ನ ಬೆರಳಿಗಿಂತಲೂನನ್ನ ಕೂದಲು ಬಹಳಾ ವಿಧೇಯಿಪದಗಳು ಸಿಗದೆ ಬೆರಳು ಪರದಾಟನಡೆಸ ಬಹುದೇನೋ ಆದರೆಕೂದಲು ಎಳೆದತ್ತ ಸುಮ್ಮನೆಹೋರಡುತ್ತದೆಬಾಚಣಿಗೆಯಾಗಲಿ ಬ್ಲೆಡ್ ಆಗಲಿ ಅದಕ್ಕೆ ಪೆನ್ನಿಗೆ ಬೆರಳು ಕೊಡುವಷ್ಟುಸುಲಭವಾಗಿ ಅವನ ಕೈಗೆತಲೆ ಕೊಡುವುದಿಲ್ಲಕೊಡಲೇ ಬೇಕಾದಾಗನಡುಗುತ್ತಲೇ ಕೊಡುತ್ತೇನೆಅದೂ ಎರಡೂ ಕಂಗಳಬಿಗಿಯಾಗಿ ಮುಚ್ಚುತ್ತಾ… ******************************

“ನಮ್ಮ ಪಯಣ”

ಪುಸ್ತಕ ಸಂಗಾತಿ “ನಮ್ಮ ಪಯಣ” ಮಕ್ಕಳ ಮೂಲಕ ಇತಿಹಾಸ ಸೃಷ್ಠಿ.           ಒಬ್ಬ ಸಮರ್ಥ ಶಿಕ್ಷಕ ಅಕ್ಷರಗಳನ್ನು ಮಾತ್ರ ಕಲಿಸಲಾರ. ತಾನಿರುವ ಊರಿನ ಶಾಲೆಯ ಮತ್ತು ಸಮುದಾಯದ ಇತಿಹಾಸವನ್ನೂ ಸೃಷ್ಠಿಸಬಲ್ಲ ಎಂಬುದಕ್ಕೆ ಶಿಕ್ಷಕ ಗಂಗಪ್ಪ ಎಸ್.ಎಲ್ (ಗಂಗಾಧರ) ಅವರು ಸಂಪಾದಿಸಿದ “ನಮ್ಮ ಪಯಣ” ಎಂಬ ಕೃತಿಯೇ ಸಾಕ್ಷಿಯಾಗಿದೆ.        ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಮುಂಡಗೋಡ, ಹಳಿಯಾಳ ಮತ್ತು ಜೋಯಡಾ ತಾಲೂಕುಗಳ ಹಚ್ಚಹಸಿರಿನ ದಟ್ಟ ಕಾನನದ ಮಧ್ಯದಲ್ಲಿ ತಮ್ಮ ದನ-ಕರುಗಳನ್ನು ಸಾಕುತ್ತಾ ಬದುಕು ಸಾಗಿಸುತ್ತಿರುವ ಗೌಳಿಗರು ಆಧುನಿಕ […]

ಗಜಲ್

ಗಜಲ್ ವಾಯ್.ಜೆ.ಮಹಿಬೂಬ ಹೃದಯದಲಿ ಪ್ರೀತಿ ಅಂಕುರಿಸಿದೆ ಸಸಿಯಾಗಿಸಲು ಬಾ ಸಖಿಹದವಾಗಿ ಮನಬೆರೆಸಿ ಉದಯರಾಗದಿ ನೀರೆರೆಯಲು ಬಾಸಖಿ ಅನುಮಾನ ಸಂಶಯದ ಶೆಕೆ ಬಡಿಯದಿರಲಿ ಎಲ್ಲಿಯೂ ಇದಕೆನಂಬುಗೆ ವಿಶ್ವಾಸಗಳ ರೆಕ್ಕೆ-ಪುಕ್ಕಗಳಾಗಿ ವಿಹರಿಸಲು ಬಾ ಸಖಿ ಅನುವು-ತನುವುಗಳೆ ದಿನಮಂತ್ರಗಳಾಗಲಿ ನಮ್ಮಿಬ್ಬರ‌ ಬಾಳ್ಗೆನೀನಿರುವಾಗ ಹಂಗ್ಯಾತರದು ಸತ್ಕಾಲಕೆ ಹಿತವಾಗಲು ಬಾ ಸಖಿ ಹರಾಮಿನ ಅರಮನೆ ತೊರೆದುಬಿಡು,ಕಂಬಳಿ-ದಿನದಂಬಲಿ ಸಾಕುತಮಕೆ ಬೆಳಕು-ಅಹಂಗೆ ವಿರಾಮ,ನಾನು ಸಂಭ್ರಮಿಸಲು ಬಾಸಖಿ ‘ಅಜಾದ್’ಬಯಸುವುದೇನಿದೆ,ಬಯಕೆಯೂ ಅರಾಮಿನಲ್ಲಿದೆಸತ್ಕರಿಸಿದವನೇ ಜಗದೊಡೆಯನಿಗೆ ಕರಮುಗಿಯಲು ಬಾಸಖಿ ***********************************************************

ಮಾಜಿ ಪ್ರದಾನಿಯವರ ಅನುವಾದಿತ ಕಥೆ

ಅನುವಾದಿತತ ಕಥೆ ಮಾಜಿ ಪ್ರದಾನಿಯವರ ಅನುವಾದಿತ ಕಥೆ ಗೊಲ್ಲರ ರಾಮವ್ವ(ಕೊನೆಯ ಭಾಗ) ತೆಲುಗು ಮೂಲ:ಪಿ.ವಿ.ನರಸಿಂಹರಾವ್ ಕನ್ನಡಕ್ಕೆ:ಚಂದಕಚರ್ಲ ರಮೇಶ್ ಬಾಬು ಭಾಗ – ೨ ರಿಂದ                ಭಾಗ- ೩ ಹಾಲು ಕರೆಯೋ ಸಮಯ ಕಳೀತಾ ಇದೆ. ಮನೆ ಹೊರಗಡೆ ಕಟ್ಟಿ ಹಾಕಿದ ಎಮ್ಮೆಗಳು ಕರುಗಳಿಗಾಗಿ ಕೂಗ್ತಾ ಇವೆ. ಹಾಗೇ ಒಳಗಡೆ ಕರುಗಳು ಕೂಡ ವಿಲಪಿಸುತ್ತಿವ ಹಾಲು ಕರೆಯಬೇಕೆನ್ನುವ ಆತ್ರ ಒಂದುಕಡೆ. ಹಸಿವಿನ ಸಂಕಟ ಮತ್ತೊಂದು ಕಡೆ. ಆದರೇ ಹಾಲು ಕರೀತಾ ಇಲ್ಲ ಯಾರೂ. ದಿನಾಲೂ ಆದರೇ ಈ […]

ರಾಜು ಹೆಗಡೆಯವರ ಕವಿತೆಗಳು

ಕವಿತೆ ರಾಜು ಹೆಗಡೆಯವರ ಕವಿತೆಗಳು ಸಂಜೆಯ ವಾಕಿಂಗ್        ಇನ್ನೂ ಚುಕ್ಕಿಗಳು ಚಿಗುರದ ಆಕಾಶ ತೆಳುವಾಗಿ ಬೆಳಕು ಕತ್ತಲೆ ಬೆರೆತು ಉರಿಯುವ ಸಮಯ. ಆಗಲೇ ಲೈಟನ್ನು ಹೊತ್ತು ಓಡುವ ಕಾರು, ಮೋಟಾರು. ನಡೆಯಲಾರದೆ ನಿಂತ ಬೀದಿ ದೀಪಗಳು ಕೂಗಿದರೆ ಮಾತ್ರ ಕೇಳುವ ದೂರದ ಸಾಲು ಮರಗಳಲ್ಲಿ ಮೊರೆವ ಹಕ್ಕಿಗಳ ಮೌನ ಈಗಷ್ಟೇ ಬಿಟ್ಟು ಹೋದ ಪ್ರೇಮಿಗಳ ಪಿಸು ಮಾತಿನ ಬಿಸಿಯ ಹೀರುತ್ತ, ಸಾವಕಾಶವಾಗಿ ಒಂದೊಂದೆ ಹೆಜ್ಜೆಯಲ್ಲಿ ದಾಟುತ್ತಿದ್ದೇನೆ ಮರಗಳನ್ನು ದೀಪಗಳನ್ನು….. ———— ೨ ತಿರುಮಲೇಶರ….. ಅವರೀಗ ಹೈದರಾಬಾದನಲ್ಲಿದ್ದಾರೆ […]

“ಧ್ಯಾನಸ್ಥ ಕವಿತೆಗಳು”

ಪುಸ್ತಕ ಸಂಗಾತಿ “ಧ್ಯಾನಸ್ಥ ಕವಿತೆಗಳು”  “ಥಟ್ ಎಂದು ಬರೆದು ರಸೀದಿಯಲ್ಲ ಕವಿತೆ” ಶೀರ್ಷಿಕೆಯ ಕಾರಣಕ್ಕಾಗಿಯೇ ಸೆಳೆವ ಕವನ ಸಂಕಲನವಿದು. ರಸೀದಿ ಎನ್ನುವುದು ಯಾವುದೇ ವಸ್ತು ವಿಲೇವಾರಿಯಾಗಿದ್ದಕ್ಕೆ ನೀಡುವ ಸಾಕ್ಷö್ಯ. ಮತ್ತದು ವ್ಯವಹಾರದ ನಂಬಿಕೆ ಮತ್ತು ಅಪನಂಬಿಕೆಯನ್ನು ಬಿಂಬಿಸುತ್ತದೆ. ನಂಬಿಕಸ್ಥ ನಡವಳಿಕೆ ಎನ್ನುವ ಹೊತ್ತಿನಲ್ಲಿಯೇ ಅಪನಂಬಿಕೆಯ ಜಾಡು ಕೂಡ ಇದೆ ಎನ್ನುವುದನ್ನು ಸೂಚ್ಯವಾಗಿ ಸೂಚಿಸುತ್ತಿರುತ್ತದೆ. ಆದರೆ ಕವಿತೆಗಳು ಹಾಗಲ್ಲ ಎನ್ನುವ ನಂಬಿಕೆ ಸುಮಿತ್ ಮೇತ್ರಿಯದು. ಮತ್ತು ಇಲ್ಲಿನ ಕವಿತೆಗಳದ್ದು ಕೂಡ ಹೀಗಾಗಿಯೇ ಇವು ಎದೆಗಿಳಿಯುತ್ತವೆ. ಕಂಡದ್ದನ್ನು ಪ್ರಾಮಾಣಿಕವಾಗಿ ಇಷ್ಟೇ […]

Back To Top