ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಮಗಳೆ ನಿನಗಾಗಿ

ಶಾಲಿನಿ ಆರ್.

Free Indian Mother With Baby Drawing, Download Free Clip Art, Free Clip Art  on Clipart Library

ಎದೆಗೆ ಹಾಲ ಬಿತ್ತಿ
ಒಡಲ ಗುಡಿಯ
ಕದವ  ತಟ್ಟಿ
ಬಳಿಗೆ ಕರೆದು
ಅಂತರಂಗದಾ
ಧುನಿಗೆ ಬೆಸೆದ  ನೀ’
ಬಾಳಗೀತೆ ಮುನ್ನುಡಿ,

ಪಡೆದ ಸುಖಕೆ
ಪ್ರೀತಿ ಬೆರೆಸಿ
ಹಡೆದ ಋಣಕೆ
ತಾಯ್ತನದಾನಂದ
ಬಡಿಸಿ ಬೆಸೆದ,
ಸೊಬಗಿನೈಸಿರಿ ನೀ’
ಬಾಳಗೀತೆ ಮುನ್ನುಡಿ,

ನಿತ್ಯ ಹಸಿರಿದು
ಬಾಳ ನಂದನ
ತೊದಲ ಮಾತು,
ತಪ್ಪು ಹೆಜ್ಜೆಗೊಂದು
ಹೂಬನ ಚುಂಬನ,
ನಲಿವ ಗೊಂಚಲಿನ
ಕಿರುಗೆಜ್ಜೆ ನೀ’
ಬಾಳಗೀತೆ ಮುನ್ನುಡಿ,

ಬಿಡದೆ ಹನಿಸು
ಹೊಕ್ಕಿಹ ಮಮತೆಯ
ನಾನಲ್ಲ ತಾಯಿಯು,
ಮರುಜನ್ಮವಿತ್ತೆ
ನೀ ಎನಗೆ ತಾಯೆ
ಒಡಲತುಂಬಿದ
ಹೊನಲ ಜೇನು ನೀ’
ಬಾಳಗೀತೆ ಮುನ್ನುಡಿ,

ಕಣ್ಣಂಚಿನ ಹನಿಯು
ನಿಂತಲ್ಲೆ ಕಡಲಾಯಿತು
ಆನಂದದಂಗಳದಿ
ಅಮ್ಮ’ ಎನುವ ಕರೆಗೆ
ಜಗದ ಸುಖ
ಸೊನ್ನೆಯಾಯ್ತು
ತಾಯ್ತನದ ಭಾಷ್ಯ ನೀ’
ಬಾಳಗೀತೆ ಮುನ್ನುಡಿ,

ಕರುಳಬಳ್ಳಿ ಬೆಸೆದು
ಒಲವ ಕಡಲ ಸುತ್ತಿ
ಅವನ ಪ್ರೀತಿ
ಮೋಹ ಮಂತ್ರಕೆ
ಓ! ಗುಟ್ಟು, ಸುಧೆಯ
ಹರಿಸಿದ ಧೇನು ನೀ’
ಬಾಳಗೀತೆ ಮುನ್ನುಡಿ…

About The Author

2 thoughts on “ಮಗಳೆ ನಿನಗಾಗಿ”

  1. ಸುಧಾ ಶಿವು

    ನಿಮ್ಮ ಬಾಳಗೀತೆಯ ಮುನ್ನುಡಿ ಕವಿತೆ ಸೊಗಸಾಗಿ ಮೂಡಿ ಬಂದಿದೆ

Leave a Reply

You cannot copy content of this page

Scroll to Top