ಗುಂಗು

ಕವಿತೆ

ಗುಂಗು

ಮಾಲತಿ ಶಶಿಧರ್

grayscale photography of woman doing ballet

ನಿನ್ನ ತೋಳಿನ ಚೌಕಟ್ಟು
ಬಿಟ್ಟು ಬಂದ ಮೇಲೂ ನನ್ನ
ಕೊರಳು ಕೆನ್ನೆಗಳ ಮೂಲೆಯಲ್ಲಿ
ನಿನ್ನ ಪರಿಮಳದ ಭಾಸ.

ಬೆಚ್ಚಗಿನ ಉಣ್ಣೆ ಬಟ್ಟೆ ತೊಟ್ಟಿದ್ದರು
ಒಳಗೆ ಮಾಗಿ ಚಳಿಯ ಕೊರೆತ
ನೀ ಗಿಲ್ಲಿ ಗುರುತು ಮಾಡಿದ
ತೊಡೆಯ ಎದೆಗವುಚಿಕೊಂಡು
ಕಣ್ಮುಚ್ಚಿ ನಗುತ್ತೇನೆ.

ಮುತ್ತನಿಟ್ಟು ಹೊತ್ತೇ ಕಳೆದು
ಹೋದರು ಮತ್ತು ಮಾತ್ರ
ಹಳಸದೆ ತುಟಿಯಂಚಿನ
ತೊಟ್ಟು ರಕ್ತದಲ್ಲಿ ಹೆಪ್ಪುಗಟ್ಟಿ
ಕುಳಿತಿದೆ.

ಅಮಾಸೆ ಹೆರಳ ಇಪ್ಪತ್ತು
ಬಾರಿ ಒಪ್ಪ ಮಾಡಿದರು
ಗಾಳಿಗೋಲಾಡೊ ಮುಂಗುರುಳಲಿ
ನಿನ್ನದ್ದೇ ತುಂಟತನ ಕಂಡು
ಕನ್ನಡಿಯತ್ತ ಕೈಚಾಚುವೆ
ಹುಚ್ಚಿಯಂತೆ..

***************************************

11 thoughts on “ಗುಂಗು

Leave a Reply

Back To Top