ಹಕ್ಕು
ಕವಿತೆ ಹಕ್ಕು ರಜನಿ ತೋಳಾರ್ ನಿನ್ನನೆನಪುಗಳ ಶಿಖರದಮೇಲೆಮನೆಯಕಟ್ಟಿರುವೆನೀಚೂರುಚೂರುಮಾಡಿದಕನಸುಗಳಚೂರುಗಳ ಮೆಟ್ಟಿಲುನೋಡಿದಾಗಲೆಲ್ಲಾಪಾದಗಳಲ್ಲಿನೆತ್ತರು! ಮಂದಹಾಸದಮರೆಯಲ್ಲಿಬಚ್ಚಿಡುವಹನಿಗಳಕತ್ತಲಲ್ಲಿಬಿಚ್ಚಿದಾಗಹೊತ್ತಿಕೊಳ್ಳುವಹಣತೆಯಪ್ರತಿಉಸಿರಿನಲ್ಲೂನಿನ್ನದೇನಗುವಿನನೆರಳು! ನಿನ್ನಬರುವಿನಹಂಬಲವೇನಿಲ್ಲ…ಈನೆನಪುಗಳಮೇಲೆಹಕ್ಕುಕೇವಲನನ್ನದಾಗಿರಲಿಎಂಬುದೊಂದೇಛಲವು! ಹಕ್ಕುಕಾಯಿದೆಗಳಜಾತ್ರೆಗೆಜೊತೆಗೊಯ್ದುಕೊಡಿಸಿಹಾಳೆತುಂಬಾಪದಗಳಕ್ಷಣದಲ್ಲೇಕಣ್ಮರೆಯಾದೆಅಂದುಉಡುಗೊರೆಯಕೊಟ್ಟು! ಪದಗಳಬೇಡಿಯಿಂದಅಕ್ಷರಗಳಬಿಡಿಸಿಬಿತ್ತಿರುವೆಬೇಲಿಸುತ್ತಲೂನಿನ್ನನೆನಪಿನಲ್ಲಿಚಿಗುರಿಕವನವಾಗಲು!
ಸಂಕ್ರಾಂತಿ ಕಾವ್ಯ ಸುಗ್ಗಿ ಸಂಕ್ರಾಂತಿ. ಜ್ಯೋತಿ ಡಿ.ಬೊಮ್ಮಾ ಎಳ್ಳು ಬೆಲ್ಲ ಜೊತೆಗೆ ಬೆಸೆದುಸಮರಸದಲ್ಲಿ ಬಾಳು ಹೊಸೆದುನೀಗಲಿ ಮನದ ಮತ್ಸರಬರುವ ಹತ್ತಿರ ಹತ್ತಿರ. ಸುಗ್ಗಿಯ ಸೊಬಗಲಿ ಹಿಗ್ಗಿನಾಭರಣಕಟ್ಟಿ ಮನೆ ಮನೆಗೂ ತಳಿರು ತೋರಣಹಾಕಿ ಮನೆ ಮುಂದೆ ರಂಗವಲ್ಲಿ ಶ್ರೀಕಾರಬಂತು ಬಂತು ಊರಿಗೆ ಹಿಗ್ಗಿನ ಹರಿಕಾರ. ನವಯುಗದ ಪಥವ ಹಿಡಿದುಉತ್ತರಾಯಣ ಪಣ್ಯಕಾಲವ ಸೇರಲುಹೊಸ ಲಯಕ್ಕೆ ಬದಲಾಯಿಸಿತು ಬದುಕು ಪಥಲಭಿಸಲಿ ಸಕಲರಿಗೂ ನೆಮ್ಮದಿ ಅನವರತ. ಎಳ್ಳು ಬೆಲ್ಲ ತಿಂದು ದೂರಾಗಲಿಮನಮನದಲ್ಲೂ ಬತ್ತಿದೊಡಕುಶಾಂತಿಯಲ್ಲಿ ನೆಟ್ಟ ಹಗೆಯ ಕನಸೂಓ ಸಂಕ್ರಾಂತಿಯೆ..ನೀ ಎಂದೆಂದಿಗೂ ಶುಭವ ಒಲಿಸು. […]
ನಂಟಿನ ಗುಟ್ಟು..
ಕವಿತೆ ನಂಟಿನ ಗುಟ್ಟು.. ಜ್ಯೋತಿ ಡಿ.ಬೊಮ್ಮಾ. ನೀರೆಗೂ ಸೀರೆಗೂ ಅಂಟಿದನಂಟನ್ನು ಬಲ್ಲಿರಾ..ಪಡೆದಷ್ಟು ಹೆಚ್ಚಾಗುವ ಹಂಬಲದಗುಟ್ಟೆನು ಗಮನಿಸಿದ್ದಿರಾ.. ಅಂಚು ಸೆರಗಿನ ವರ್ಣನೆಬಣ್ಣಿಸುವದೆ ಒಂದು ಕಲೆ.ಆ ವರ್ಣ ನೆ ಮುಂದೆ ಎಷ್ಟಿದ್ದರೇನುಸೀರೆಯ ಬೆಲೆ. ಎಷ್ಟು ಕೊಂಡರು ತೀರದಮನದ ಹಂಬಲ.ಇನ್ನೊಂದು ಮತ್ತೊಂದು ಎಂದುಬಯಸುವದು ಮನ ಚಂಚಲ. ಕಂಚಿ ಪಿತಾಂಬರ ರೇಷ್ಮೆಹೆಸರಿರುವವು ಅನೇಕ.ಕೆಂಪು ಹಳದಿ ಗುಲಾಬಿಗಳಲ್ಲಿಕಂಗೊಳಿಸುವದನ್ನು ನೋಡುವದೆ ಪುಳಕ. ಮೈಗೆ ಒಪ್ಪುವಂತೆ ಉಟ್ಟುಗತ್ತಿನ ಕುಪ್ಪಸ ತೊಟ್ಟುಚಿಮ್ಮುವ ನೀರಿಗೆಗಳನ್ನೆತ್ತಿಗಾಳಿಗೆ ಹಾರುವ ಸೆರಗಿಗೆ ಪಿನ್ನಿನ ಹೂ ಮುಡಿಸಿಹಂಸ ನಡಿಗೆಯಲ್ಲಿ ನಡೆವ ನೀರೆಯೆ.. ನಿನಗೂ ಸೀರೆಗೂ ಅಂಟಿದನಂಟಿನ […]
ಇನ್ವಿಕ್ಟಸ್ ಮತ್ತು ಮಂಡೇಲಾ
ಲೇಖನ ಇನ್ವಿಕ್ಟಸ್ ಮತ್ತು ಮಂಡೇಲಾ ರಶ್ಮಿ ಹೆಗಡೆ ಮುಂಬೈ ಕೆಲವರ ವ್ಯಕ್ತಿತ್ವ ಹಾಗೂ ಸ್ಪೂರ್ತಿದಾಯಕ ಮಾತುಗಳು,ಸಾಧಕರ ಜೀವನಗಾಥೆಗಳು,ಕೆಲವು ಪುಸ್ತಕಗಳು,ಇನ್ನು ಕೆಲವು ಕಾವ್ಯಗಳು ನಮಗೆ ಗುರುವಾಗಿ,ಆದರ್ಶದ ಚಿಲುಮೆಗಳಾಗಿ ಜೀವನದುದ್ದಕ್ಕೂ ಪ್ರೇರೇಪಿಸುತ್ತವೆ. ಕೆಲವು ಕಾವ್ಯಗಳಂತೂ ಉತ್ಕೃಷ್ಟತೆಯ ಎಲ್ಲೆಯನ್ನು ಮೀರಿ ಬೆಳೆಯುತ್ತವೆ. ಬದುಕಿನ ಅಂಕುಡೊಂಕಿನ ದಾರಿಯಲ್ಲಿ ಹಾದಿ ತಪ್ಪದಂತೆ ಮುನ್ನಡೆಸಿ,ಸಂಕಟದ ಸಮಯದಲ್ಲಿ ಧೈರ್ಯ,ನೆಮ್ಮದಿ ನೀಡಿ ಚಿಕಿತ್ಸೆಯ ರೂಪದಲ್ಲಿ ಕಾಪಾಡುತ್ತವೆ. ಉತ್ಕೃಷ್ಟವಾದ ಸಾಹಿತ್ಯ ಹಾಗೂ ಪುಸ್ತಕಗಳು ಮನುಷ್ಯನ ಯೋಚನಾಲಹರಿಯನ್ನೇ ಬದಲಿಸಬಲ್ಲದು. ಶಬ್ದಗಳು ಖಡ್ಗಕ್ಕಿಂತ ಹರಿತವಾದದ್ದು ಎನ್ನುವುದು ಸತ್ಯ. ಹೀಗೆಯೇ ಒಂದು ಪುಸ್ತಕ ಒಬ್ಬ […]
ಅಂಕಣ ಬರಹ ವಸಾಹತುವಿನಿಂದ ಬಿಡುಗಡೆಗೆ ಭಾಷೆ ಕೊಟ್ಟವ ( ಬಸವಣ್ಣನವರ ಒಂದು ವಚನದ ಭಾಷಿಕ ವಿವೇಚನೆ ) ಕನ್ನಡ ಸಾಹಿತ್ಯ ಸಂಸ್ಕೃತದ ಪ್ರಭಾವಕ್ಕೆ ಸಿಕ್ಕು ವಸ್ತು, ರೂಪ, ಅಭಿವ್ಯಕ್ತಿಯ ಕ್ರಮದಲ್ಲಿ ಬೆಳವಣಿಗೆ ಹೊಂದಿ ಜನಸಾಮಾನ್ಯರಿಂದ ಬಹುದೂರ ನಿಂತಿದ್ದುದು ಎಲ್ಲಕಾಲದಲ್ಲಿಯೂ ಸತ್ಯವೇ ಸರಿ. ಹನ್ನೆರಡನೆಯ ಶತಮಾನದ ವಚನ ಚಳುವಳಿಯ ಸಾಹಿತ್ಯ ರೂಪ ಮತ್ತು ಅದರೊಳಗಿನ ಸಂವೇದನೆಗಳು ನೆಲದ ಬೇಡಿಕೆ, ಸದ್ಯದ ತುರ್ತಿಗೆ ಸ್ಪಂದಿಸಿ ಜನಸಾಮಾನ್ಯರ ನಾಡಿಮಿಡಿತಕ್ಕೆ ಸ್ಪಂದಿಸಿದ್ದು. ಸಂಸ್ಕೃತದ ಮಾರ್ಗ ಸಂಪ್ರದಾಯಕ್ಕೆ, ಮಹಾಕಾವ್ಯ ಪರಂಪರೆಗೆ ವಿರುದ್ಧವಾಗಿ ತನ್ನದೇ […]