ಅಂಕಣ ಬರಹ ವಸಂತ ಬಂದ! ರಂಗಕ್ಕೆ ರಂಗು ತಂದ!! ವೈಶಾಲಿ ನಗರದ ಬೀದಿ. ವೈಭವದ ಅರಮನೆ. ಅದು ರಾಜನ ಅರಮನೆಯಲ್ಲ. ನಗರದ ಮುಖ್ಯ ನೃತ್ಯಗಾರ್ತಿ,ರಾಜನರ್ತಕಿ ಆಮ್ರಪಾಲಿಯ ಮನೆ. ಆಮ್ರಪಾಲಿ ಚಿಗುರು ಮಾವಿನ ತಳಿರಂತಹವಳು. ಅವಳ ಸೌಂದರ್ಯದ ಕಥನ ಕೇಳಿ ನೆರೆ ಹೊರೆಯ ರಾಜರೂ, ರಾಜಕುಮಾರರೂ ಬಂದಿದ್ದಾರೆ. ಅವಳ ಪ್ರೇಮ ಭಿಕ್ಷೆಗಾಗಿ ಹೊರಬಾಗಿಲಲ್ಲಿ ಸರದಿಯಲ್ಲಿ ಕಾಯುತ್ತಿದ್ದಾರೆ. ಆಕೆ ಒಳಗಡೆ ಇದ್ದಾಳೆ, ಪ್ರಣಯದ ತುರೀಯದ ಅಮಲಲ್ಲಿ. ಆದರೂ ಅದೇನೋ ಬೇಸರ. ಅವಳನ್ನು ಆವರಿಸಿದೆ. ಎಲ್ಲವೂ ಇದ್ದರೂ ಏನೋ ಕೊರತೆ. ತಳಮಳ. […]
ಕೂಸು
ಕವಿತೆ ಕೂಸು ಎಂ. ಆರ್. ಅನಸೂಯ ತಾಯೊಡಲ ಹಸುಳೆಯೊಂದುಅನಾಮಧೇಯನಾಗಿ ಭುವಿಗಿಳಿಯಿತುಮುಕ್ತ ಮನದಮುಗ್ಧ ಕೂಸಾಗಿ ಮಡಿಲ ತುಂಬಿತು ಹುಟ್ಟುಡುಗೆಯ ಕೂಸಿಗೆಜಾತಿಯ ವಸ್ತ್ರ ತೊಡಿಸಿದೆವುಮುಗ್ಧ ನಗೆಯ ಮುದ್ದು ಮೊಗದಹಣೆಗೆ ಧರ್ಮದ ತಿಲಕವಿಟ್ಟೆವುನಿದ್ರೆಯಲಿ ನಗುವ ಮುದ್ದು ಮಗುವಅಂತಸ್ತಿನ ತೊಟ್ಟಿಲಲ್ಲಿ ತೂಗಿದೆವು ********************************
ಹೇಗಾಯಿತು ಹೊಸ ವರುಷ
ಕವಿತೆ ಹೇಗಾಯಿತು ಹೊಸ ವರುಷ ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ ಚುಕ್ಕಿಗಳು ಕರ್ರಗಾದವೆ?ಹಕ್ಕಿಗಳು ಬೆರಗಾದವೆ?ಕತ್ತಲೆ ಥಳಥಳ ಹೊಳೆಯಿತೆ?ಬೆಳಕು ಉಮ್ಮಳದಿ ಅದುರಿತೆ?ಮೂಡಿತೇಗೆ ಹೊಸ ವರುಷ? ನೆತ್ತರು ಬಿಳಿಯಾಯಿತೆ?ಸತ್ತವರೆದ್ದು ಕುಳಿತರೆ?ಎಲೆ ಉದುರಿ ತಲೆ ಸವರಿತೆ?ಕೋಗಿಲೆ ನೇಗಿಲು ಹೂಡಿತೆ? ಬದುಕುಗಳು ಭವಣೆಗೆ ಮಿಕ್ಕವೆ?ಕೆದಕುಗಳು ಎಣಿಕೆಗೆ ಸಿಕ್ಕವೆ?ಕಳೆದ ಘಳಿಗೆ ಎದೆ ಹೊಕ್ಕಿತ್ತೆ?ಜಗದ ನಗು ಮುಗಿಲ ನೆಕ್ಕಿತೆ?ಮೂಡಿತೇಗೆ ಹೊಸ ವರುಷ? ಬೈಬಲ್ ಕಥೆ ಹೊನ್ನಾಯಿತೆ?ಕುರಾನ ನುಡಿ ಭಿನ್ನವಾಯಿತೆ?ಭಗವದ್ಗೀತೆ ಕಣ್ಣಾಯಿತೆ?ಮೂಡಿತೇಗೆ ಹೊಸ ವರುಷ? ಬಡವರ ಕೊರಗು,ಹೂವಾಯಿತೆ?ಹಸಿದ ಕೂಸು ನಕ್ಕಾಡಿತೆ?ನದಿಯ ಹರಿವು,ಕುದಿತವಾಯಿತೆ?ಗಾಳಿಯ ತುದಿ ಕಣ್ಣಿಗೆ ಕಂಡಿತಾ?ಮೂಡಿತೇಗೆ ಹೊಸ ವರುಷ? […]
ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ-10 ಆತ್ಮಾನುಸಂಧಾನ ಬನವಾಸಿಯಲ್ಲಿ ನೋವಿನ ನೆನಪುಗಳು ಬಾಲ್ಯದ ನಾಲ್ಕು ವರ್ಷಗಳನ್ನು ಬನವಾಸಿಯಲ್ಲಿ ಕಳೆಯುವ ಅವಕಾಶ ದೊರೆತದ್ದು ನನ್ನ ಬದುಕಿನಲ್ಲಿ ಒದಗಿ ಬಂದ ಭಾಗ್ಯವೆಂದೇ ನಾನು ಭಾವಿಸಿದ್ದೇನೆ. ಅತ್ಯಂತ ಆಪ್ತ ಸ್ನೇಹಿತರಾಗಿ ದೊರೆತ ಮುಖೇಶ್ ಕುಚಿನಾಡ, ಸೊಮಶೇಖರ ಒಡಿಯರ್, ಅಶೋಕ ಪಾಳಾ, ಸೆಂಟ್ರಲ್ ಕೆಫೆಯ ಸದಾನಂದ ಶೆಟ್ಟಿ, ಕಿರಾಣಿ ಅಂಗಡಿಯ ಸಚ್ಚಿದಾನಂದ ಮೂಡ್ಲಗಿರಿ ಶೆಟ್ಟಿ ಮುಂತಾದ ಗೆಳೆಯರ ಒಡನಾಟದಲ್ಲಿ ಅತ್ಯಂತ ಮಧುರವಾದ ಅನುಭವಗಳು ನನಗೆ ದಕ್ಕಿವೆ. ಈ ಗೆಳೆಯರೆಲ್ಲ ಆಟ ಪಾಠ […]