ಹಾಯ್ಕುಗಳು

ಹಾಯ್ಕುಗಳು

ಭಾರತಿ ರವೀಂದ್ರ

Abstract bright blurred background with spring and summer small blue flowers and plants. With beautiful bokeh in the sunlight. Abstract bright blurred background royalty free stock images

1) ಹೂಗಳು

ಬಣ್ಣದ ಲೋಕ :
ಹೂಗಳು ಹಲವಾರು,
ದೃಷ್ಟಿ ಹೀನತೆ.

2) ವಿರಹ

ವಿರಹ ತಾಪ :
ಮೂಡಣದ ದೊರೆಗೆ,
ಭುವಿ ಪ್ರೀತಿಗೆ.

3) ಕವಿ

ಕವಿ ತಾಕತ್ತು :
ರವಿ ಇಲ್ಲೆಡೆ ಎಲ್ಲಾ
ಕರಾಮತ್ತು.

4) ಭೂರಮೆ

ಭೂರಮೆ ಕಳೆ:
ಹಸಿರುಟ್ಟ ಬೆಡಗಿ,
ಕೋಗಿಲೆ ಗಾನ.

5) ಮೌನ

ಮೌನದ ಭಾರ :
ಮಾತುಗಳ ಕದನ,
ಮುಕ್ತಾಯ ಗೀತೆ.

6) ಅಮ್ಮ

ದಾರಿ ದೀವಿಗೆ :
ಅಮ್ಮನ ನಗೆ ರೂಪ,
ಬಾಳು ಸಂಭ್ರಮ.

7) ನಲ್ಲ

ಅನುದಿನವೂ
ಅನವರತ ನಗು,
ನಲ್ಲನ ಮೊಗ.

8) ಕಾಣಿಕೆ

ಮುಗಿಲ ಮಾಲೆ :
ಭುವಿಯ ಕೊರಳಿಗೆ,
ರವಿ ಕಾಣಿಕೆ.

9) ಬೆಳದಿಂಗಳು

ವಿರಹ ತಾಪ :
ಬೆಳದಿಂಗಳ ರಾತ್ರಿ,
ಚಂದ್ರ ಗ್ರಹಣ.

10) ಸ್ವಪ್ನ

ಸ್ವಪ್ನ ರಾಣಿಗೆ :
ಜಾಗರಣೆ ಬಹಳ,
ನನಸಾಗಲು.

************************************

Leave a Reply

Back To Top