ಜೀವನ ಪಯಣ (ಸುನೀತ ಕಾವ್ಯ)

ಸುನೀತ ಕಾವ್ಯ

ಜೀವನ ಪಯಣ (ಸುನೀತ ಕಾವ್ಯ)

ಸುನೀತ (ಐದು ಮಾತ್ರೆಯ ನಾಲ್ಕು ಗಣಗಳ ಹದಿನಾಲ್ಕು ಸಾಲುಗಳು)

ಶುಭಲಕ್ಷ್ಮಿ ಆರ್ ನಾಯಕ

Work make me slave. Young businessman run in huge hamster wheele royalty free stock images

ಸಾಗುತಿದೆ ಅನವರತ ಜೀವನ ರಥದ ಪಯಣ
ಹಲವು ಮಧುರ ವಸಂತಗಳ ಹರೆಯವನು ದಾಟಿ
ಕಾಲ ಗುರುವ ವೀಣೆಯ ತಂತಿಯ ಸದಾ ಮೀಟಿ
ಸದ್ದುಗದ್ದಲದಿ ಮಾಡದೇ ಸಮಯದ ಹರಣ

ಏಳು ಬೀಳುಗಳನು ಸಮ ದೂಗಿಸುವ ತಾಳ್ಮೆಯು
ಬದುಕಿನ ಸತ್ಯವನು ಅರಿತು ಅರುಹುವ ಛಲದಲ್ಲಿ
ಸಾಗಿದೆ ಪಯಣವು ಗುರಿ ಸೇರೋ ತವಕದಲ್ಲಿ
ಪಯಣದಲಿ ಬೇಕೆಮಗೆ ಎಂದಿಗೂ ಭರವಸೆಯು

ಬಂದ ಸೋಲು ಗೆಲುವುಗಳ ಅನುನಯದಿ ಸವಿಯುತ
ಮಾರ್ಗದ ಎಡರು ತೊಡರುಗಳ ಸಂಯಮದಿ ಸಹಿಸಿ
ಆವರಿಪ ಹಮ್ಮು ಬಿಮ್ಮುಗಳ ವಿನಯದಿ ಅಳಿಸಿ
ಹೊಂದಿಕೆ ಪ್ರೇಮ ಭಾವದ ಅರಿವಲಿ ಬೆರೆಯುತ

ಜೀವನ ಪಥದೊಳು ಛಲ ವಿಶ್ವಾಸದಿ ನಡೆಯುವ
ನೋವುಗಳ ಮರೆಯುತ್ತ ನೆಮ್ಮದಿಯನು ಪಡೆಯುವ

**********************************************

6 thoughts on “ಜೀವನ ಪಯಣ (ಸುನೀತ ಕಾವ್ಯ)

  1. ನಮಸ್ಕಾರ,
    ನನ್ನ ರಚನೆಯ ಸುನೀತ ಕಾವ್ಯವನ್ನು ಪ್ರಕಟಿಸಿ ಪ್ರೋತ್ಸಾಹಿಸಿದ *ಸಂಗಾತಿ* ಇ ಪತ್ರಿಕೆಯ ಸಂಪಾದಕ ಮಂಡಳಿಗೆ ಹೃತ್ಪೂರ್ವಕ ಧನ್ಯವಾದಗಳು.

    1. ತುಂಬಾ ಚೆನ್ನಾಗಿ ಬರೆದಿದ್ದೀರಿ ಮೇಡಂ ,ಒಳ್ಳೆಯದಾಗಲಿ

  2. ಸುಂದರ‌ ಕಾವ್ಯ ರಚನೆ ಮೇಡಂ…. ಜೀವನದ ಪಥದ ನಡೆಗೊಂದು ನಮನಗಳು..

  3. ಬಹಳ ಸೊಗಸಾಗಿ ವರ್ಣಿಸಿದ್ದೀರಿ…ಹೀಗೆ ಮುಂದುವರಿಯಲಿ ನಿಮ್ಮ ಸಾಹಿತ್ಯದ ಪಯಣ…. ಎಂಬ ಶುಭನುಡಿಯೊಂದಿಗೆ..

Leave a Reply

Back To Top