Month: October 2020

ಆಹುತಿ

ಕವಿತೆ ಆಹುತಿ ಅನಿಲ ಕಾಮತ ದೇಹ ಹಿಂಡಿಹಿಪ್ಪೆಯಾಗಿಸಿದೆಕಾರಿನಲ್ಲಿ ಬಸ್ಸಿನಲ್ಲಿಹಗಲಲ್ಲಿ ನಸುಕಿನಲ್ಲಿಕಾನನದಲ್ಲಿನೀರವ ಅಹನಿಯಲ್ಲಿ ಬೆಳಕು ಸೀಳುವ ಮುನ್ನಬ್ರೇಕಿಂಗ್ ನ್ಯೂಸ್‌ಗಳಿಗೆಆಹಾರಭುವನ ಸುಂದರಿಸ್ಪರ್ಧೆಯಲ್ಲಿದೇಹ ಸೌಂದರ್ಯದ ಬಗ್ಗೆತೀರ್ಪುಗಾರರತಾರೀಪು ಹೆಣ್ಣು ಭ್ರೂಣಪತ್ತೆ ಮಾಡುವತವಕದಲ್ಲಿಸ್ಕೆನ್ನಿಂಗ್ಮಿಷನ್ ಗಳಿಗೆಪುರುಸೊತ್ತಿಲ್ಲ ನದಿಯ ತಟದಲ್ಲಿರೇಲ್ವೆ ಸೇತುವೆಯಕೆಳಗೆಅರೆಬೆಂದ ಶವವಾಗಿಖಾಕಿಗಳಿಗೆ ಮಹಜರುಮಾಡಲು…. ****************

ಶಿಕ್ಷಣ ಕ್ಷೇತ್ರ ಮತ್ತು ಎರಡು ದಶಕಗಳ ಪ್ರಯಾಣ

ಅನುಭವ ಶಿಕ್ಷಣ ಕ್ಷೇತ್ರ ಮತ್ತು ಎರಡು ದಶಕಗಳ ಪ್ರಯಾಣ ಮಮತಾ ಅರಸೀಕೆರೆ ಬಯಸಿ ಬಂದದ್ದಲ್ಲ. ಹಂಬಲಿಸಿ ಪಡೆದದ್ದಲ್ಲ. ಒಂದು ಬಗೆಯ ಓರೆ ನೋಟದ ಕಸಿವಿಸಿಯ ಬಿಗುವಿನೊಡನೆ ಅನಿಚ್ಛಾಪೂರ್ವಕವಾಗಿ ಇಲಾಖೆಗೆ ಕಾಲಿಟ್ಟದ್ದು. ನಂತರ ಜರುಗಿದ್ದು ಬರೋಬ್ಬರಿ ಇಪ್ಪತ್ತು ವರ್ಷಗಳ ಅನಿಯಮಿತ ಅಡೆತಡೆಯಿಲ್ಲದ ಪ್ರಯಾಣ. ಇದೇ ಅಕ್ಟೋಬರ್ ೨೫ ಕ್ಕೆ ನಾನು ಶಿಕ್ಷಣ ಇಲಾಖೆಯ ಸದಸ್ಯಳಾಗಿ ಎರಡು ದಶಕಗಳೇ ಆಗುತ್ತಿದೆ. ನನ್ನಮ್ಮ ಕೂಡ ಇದೇ ಇಲಾಖೆಯಲ್ಲಿದ್ದವರು.ಅಪ್ಪ ಅಂಚೆ ಇಲಾಖೆ ಉದ್ಯೋಗಿ.ಅದೇಕೋ ತನ್ನ ಇಲಾಖೆ ಬಗ್ಗೆ ಅಸಡ್ಡೆಯಿದ್ದಬಅಪ್ಪನ ಉದ್ಯೋಗಕ್ಕಿಂತ ಸುಲಭವಾಗಿ ಸರಳವಾಗಿ […]

ಕಾಗೆ ಮುಟ್ಟಿದ ನೀರು

ಪುಸ್ತಕ ಪರಿಚಯ ಕಾಗೆ ಮುಟ್ಟಿದ ನೀರು ಪುಸ್ತಕ:- ಕಾಗೆ ಮುಟ್ಟಿದ ನೀರುಲೇಖಕರು:-ಡಾ.ಪುರುಷೋತ್ತಮ ಬಿಳಿಮಲೆಪ್ರಕಾಶನ:-ಅಹರ್ನಿಶಿ ಪ್ರಕಾಶನ,ಶಿವಮೊಗ್ಗ ಕಾಗೆ ಮುಟ್ಟಿದ ನೀರು ಪುಸ್ತಕ ಅನೇಕ ಓದುಗ ಪ್ರಭುಗಳ ಉತ್ತಮ ಅನಿಸಿಕೆಗಳ ಓದಿ ತೀರಾ ಮನಸ್ಸಾಗಿ ಓದಲು ಹಂಬಲ ಹೆಚ್ಚಾಗಿ,ತೀರಾ ಕಡಿಮೆ ರಿಯಾಯತಿಯಲ್ಲಿ ಪುಸ್ತಕ ಕೊಡುವುದಾದರೆ ಕಳಿಸಿ ಎಂದು ಪ್ರಕಾಶಕರಿಗೆ ಸಂದೇಶವನ್ನು ಕಳಿಸಿದ ಕೂಡಲೇ, ಆಯ್ತು ವಿಳಾಸ ಬರಲಿ ಎಂದು ಅತ್ತಕಡೆಯಿಂದ ಕಳುಹಿಸಿ ಕೊಟ್ಟರು.ಆತ್ಮಕತೆ ನನ್ನಿಷ್ಟದ ಒಂದು ಓದುವಿನ‌ ವಿಭಾಗ. ಪುಸ್ತಕವೂ ಕೈಸೇರಿತು, ಸಿಕ್ಕಗಳಿಗೆ ಮೊದಲು ಬೆನ್ನುಡಿ-ಮುನ್ನುಡಿ ಓದುವ ಹವ್ಯಾಸ ನನ್ನದಾಗಿದೆ. […]

ಮಳೆಗಾಲದ ಬಿಸಿಲುಕವಿತೆ

ಕವಿತೆ ಮಳೆಗಾಲದ ಬಿಸಿಲು ಅಬ್ಳಿ,ಹೆಗಡೆ ಹಗಲ ಶಿಶು ಶಶಿಯೊಡನೆಆಟದಲಿ ಸೋತು.ಮುಗಿಲುಗಳ ಮರೆಯಲ್ಲಿಅಳುತಿಹನು ಕೂತು.ಮಗುವ ಕಾಣದ ತಾಯಿರಮಿಸಿ ತಾ ಕರೆಯೆ-ಕಣ್ಣೊರೆಸಿ ಹೊರ ಬಂದಮಗು-ನಗುವ ‘ಹೊಳೆಯೆ’. ******************************

ಬದುಕು- ಬವಣೆ

ಕವಿತೆ ಬದುಕು- ಬವಣೆ ಸಹನಾ ಪ್ರಸಾದ್ ಗಂಡ ಹೆಂಡಿರ ಸಂಬಂಧಸಂಸಾರಕ್ಕೆ ಇದೇ ಮೆರಗುಉಫ಼್ಫ಼್ ಹೇಳಲಾಗದು ಅನುಬಂಧಜತೆಗಿರುವರು ಸಾಯುವವರೆಗೂ ಆದರೆ ಇರಲೇಬೇಕಿಲ್ಲ ಪ್ರೀತಿವ್ಯಾವಹಾರಿಕವಾದರೂ ನಡೆದೀತುಇದ್ದರೆ ಸಮಾಜದ ಭೀತಿಪ್ರೀತಿಯೂ ಗಿಲೀಟು ಬತ್ತಿ ಹೋದ ಮೇಲೆ ಪ್ರೀತಿಯ ಚಿಲುಮೆಜತೆಗಿರುವುದೂ ಅನಿವಾರ್ಯವಾದಾಗಮುದುಡಿದ ಮನಸ್ಸುಗಳಿಗೆ ಎಲ್ಲಿದೆ ಒಲುಮೆಕಿತ್ತೇ ಹೋಯಿತೇನೋ ಅನಿಸುತ್ತೆ ಹೃದಯದ ಭಾಗ ನಮ್ಮ ಸಮಾಜದಲ್ಲಿ ಇಲ್ಲ ವಿಚ್ಚೇದನಒಮ್ಮೆ ಜತೆಗೂಡಿದರೆ ಮುಗಿಯಿತು ಬದುಕುಒಳ್ಳೆ ಜನ ಸಿಗದಿದ್ದರೆ ಬದುಕೇ ವೇದನಸಹಿಸಿಕೊಳ್ಳಬೇಕು ಖಾಲಿಯಾಗುವವರೆಗೂ ಸರಕು! *************************

ಬದಲಾದ ಕಾಲಕ್ಕೆ ಹಳ್ಳಿಯ ಬದುಕು

ಲೇಖನ ಬದಲಾದ ಕಾಲಕ್ಕೆ ಹಳ್ಳಿಯ ಬದುಕು ಸರಿತಾ ಮಧು ಹಳ್ಳಿಗಳ ದೇಶವೇ ನಮ್ಮದು. ಮೊದಲಾದರೆ ಸುಂದರ ಸ್ವರ್ಗದಂತೆ ಇದ್ದವು. ಕೂಡು ಕುಟುಂಬ, ಅದಕ್ಕೆ ಹೊಂದಿಕೊಂಡಂತೆ ಗದ್ದೆ- ತೋಟಗಳು, ರಕ್ತ ಸಂಬಂಧಗಳು ಹಾಗೂ ಮಾನವೀಯ ನೆಲೆಯಲ್ಲಿ ಒಟ್ಟಿಗೆ ಸೇರಿ ನಲಿಯುತ್ತಿದ್ದ ಸಂದರ್ಭಗಳು. ಮೂರು – ನಾಲ್ಕು ತಲೆಮಾರಿನ ಅನುಭವಗಳ ಬೆರೆತ ಸಂಸಾರ. ಮನೆಗಳಲ್ಲಿ ಆಡಂಬರವಿರಲಿಲ್ಲ ಮನಸಿನಲ್ಲಿ ಆತ್ಮೀಯತೆ ಇತ್ತು. ಅವಿಭಕ್ತ ಭಾವ ರಕ್ತಗತವಾಗಿ ಮುಂದುವರೆಯುತ್ತಿತ್ತು. ಹಣಕಾಸಿಗೆ ಅಡಚಣೆಯಿತ್ತು ಅದರ ಹೊರತು ಪರಿಶುದ್ಧವಾದ  ಬದುಕಿಗಲ್ಲ. ನಗರ ಜೀವನಕ್ಕೆ ಮನಸೋತ ಕೆಲವು […]

ರಚ್ಚೆ ಹಿಡಿದ ಮನ

ಕವಿತೆ ರಚ್ಚೆ ಹಿಡಿದ ಮನ ಸ್ವಭಾವ ಕೋಳಗುಂದ ಮಳೆ ನಿಂತ ನೆಲದಲ್ಲಿನಡೆಯುತ್ತಲೇ ಇದ್ದಳುಗುರುತು ಮಾಡಿ ಗುರಿಯೆಡೆಗೆ ಹಸಿಟ್ಟಿಗೆ ಬಿಸಿ ನೀರು ಸುರುವಿತಟ್ಟಿ ಬೆಳರ ಚಿತ್ರದ ಹಚ್ಚೆಬೆಂದ ರೊಟ್ಟಿ ಹಸಿದ ಹೊಟ್ಟಗೆ ಹರಗಿದ ಹೊಲಕ್ಕೆ ಬೀಜ ಬಿತ್ತಿನೀರು ಹಾಯಿಸಿ ಕಳೆ ಕಿತ್ತುಕೊಯ್ಲಿಗೆ ಕಾದು ರಾಶಿ ಪೈರಾಗಿಸಿದ್ದ ರಚ್ಚೆ ಹಿಡಿದ ಕೂಸುನೆಟಿಗೆ ತೆಗೆದು ನೀವಾಳಿಸಿರಂಚು ಬೂದಿಯ ತಿಲಕದ ಕೈಚಳಕ ಗುಡಿಯ ಗಂಟೆಯ ನಾದಕ್ಕೆತಲೆದೂಗಿದ ಎಳೆ ಜೋಳದ ತೆನೆನೊರೆ ಉಕ್ಕಿ ಕೆಚ್ಚಲ ತಂಬಿಗೆ ಸೋರಿತ್ತು ಕೊಟ್ಟಗೆಯ ಕರು ಚಂಗನೆ ಎಗರಿಅಂಗಳದ ರಂಗೋಲಿ […]

ಗಝಲ್

ಗಝಲ್ ಸ್ಮಿತಾ ಭಟ್ ಒಲವಿನ ನಿರೀಕ್ಷೆಯ ಬದುಕ ಮುಗಿಸಿದ್ದೇನೆನಲಿವಿನ ದೀಪದೆದುರು ಕಣ್ಮುಚ್ಚಿ ಕುಳಿತಿದ್ದೇನೆ/ ಯಾರಿಗೆ ಯಾರೂ ಆಸರೆಯಲ್ಲ ಇಲ್ಲಿಸೆರೆಯಾದ ಉಸಿರಿನ ಕೀಲಿ ತೆಗೆದಿದ್ದೇನೆ / ಕ್ಷಮಿಸು ಕಣ್ಣತೇವಕ್ಕೆ ನನ್ನ ಹೊಣೆ ಮಾಡದಿರುಕರವಸ್ತ್ರ ಇರಿಸಿಕೊಳ್ಳುವ ರೂಢಿ ಮರೆತಿದ್ದೇನೆ/ ಮೊಗಕೆ ಒಳಗುದಿಯ ತೋರುವ ಇರಾದೆ ಇಲ್ಲಬರಿದೇ ತರತರದ ಮಾತಾಗಿ ನಗುತ್ತಿದ್ದೇನೆ/ ಬಲಹೀನ ಮನಸು ಏನೂ ಸಾಧಿಸದು ಮಾಧವಾಭವಿತವ್ಯದ ಬಾಗಿಲಿಗೆ ತೋರಣವ ಕಟ್ಟಿದ್ದೇನೆ/ *********************************

ಆಯ್ಕೆ ನಿನ್ನದು

ಕವಿತೆ ಆಯ್ಕೆ ನಿನ್ನದು ಸುಮಾ ಆನಂದರಾವ್ ಜುಳುಜುಳು ಹರಿವ ಝರಿ ತೊರೆಗಳುನಯನ ಮನೋಹರ ಪರ್ವತ ಶಿಖರಗಳುಬಣ್ಣ ಬಣ್ಣದ ಹೂ ಗೊಂಚಲುಗಳುಹೀರಿದ ಮಕರಂದದಿ ಮಧು ಪಾತ್ರೆಯಸಿಹಿ ತುಂಬಿಸಿ ಝೇಂಕರಿಪ ದುಂಬಿಗಳುಕಣ್ಮನ ಸೂರೆಗೊಳ್ಳುವ ಹಚ್ಚ ಹರಿದ್ವರ್ಣಒಳನುಸುಳಲು ಹೊಂಚುಹಾಕುತಿಹ ಸೂರ್ಯಕಿರಣಒಂದೇ ಎರೆಡೇ ಗೋವರ್ಧನ ಗಿರಿ ಸಂಪತ್ತು ಶ್ಯಾಮನೇಕೆಭಾರದ ಗಿರಿಯ ಒಂದೇ ಬೆರಳಲಿ ಹಿಡಿದ ?ಹಗುರಾದ ಕೊಳಲನೇಕೆ ಎರಡು ಕೈಯಲಿ ಪಿಡಿದ!ಅಚ್ಚರಿಯೊಡನೆ ದಿವ್ಯ ಸತ್ಯವೊಂದಿಹುದುಗಿರಿಯಲಿ ಸೌಂದರ್ಯ ತುಂಬಿಕೊಂಡರೂಗಾಢ ಕತ್ತಲು, ಭಯಂಕರ ಮೃಗಗಳು, ಸರೀಸೃಪಗಳುಓಡಲಾಳದಿ ಇವೆಯಲ್ಲವೇ?ಕೊಳಲಾದರೋ ತನ್ನೊಳಗೆ ನುಗ್ಗಿದ ಶ್ವಾಸವನ್ನು ಸಹ ಹಿಡಿದಿಡದೆಸುಶ್ರಾವ್ಯವಾಗಿ ಕಿವಿಗೆ […]

ಒಂದು ಲಸಿಕೆ ಹನಿ

ಕವಿತೆ ಒಂದು ಲಸಿಕೆ ಹನಿ ಕೊಟ್ರೇಶ್ ಅರಸೀಕೆರೆ ತಮ್ಮದಲ್ಲದ ತಪ್ಪಿಗೆ ಜೀವ ತೆತ್ತವರಿಗಾಗಿಬೂದಿ ಮುಚ್ಚಿದ ಕೆಂಡದ ಬದುಕುಒಡಲಲಿಟ್ಟುಕೊಂಡವರಿಗಾಗಿಬರಿಗಾಲಲ್ಲಿ ನಡೆದ ಪುಟ್ಟ ಕಂದಮ್ಮಗಳಿಗೆನನ್ನ ಆತ್ಮಗೌರವ ಬಿಟ್ಟು ಕೇಳಿಕೊಳ್ಳತ್ತೇನೆಒಂದು ಲಸಿಕೆ ಹನಿಯನ್ನು ಚುಮುಕಿಸಿನಿಮಗಾಗಿಯೇ ಓಟು ಒತ್ತುತ್ತೇನೆ! ರಾತ್ರಿಯೆಲ್ಲ ಕೆಮ್ಮಿ ಉಸಿರಿಗಾಗಿ ಹೋರಾಡಿಪ್ರಾಣ ಬಿಟ್ಟವರಿಗಾಗಿಮಕ್ಕಳನ್ನು ಮನೆಯಲ್ಲಿರಿಸಿ ಸೇವೆಗೈದ ವೈದ್ಯದಾದಿಯರಿಗಾಗಿಸೇವೆ ಮಾಡುತ್ತಲೇ ಪ್ರಾಣ ಬಿಟ್ಟವರ ಪರವಾಗಿಮಂಡಿಯೂರಿ ಕೇಳಿಕೊಳ್ಳುತ್ತೇನೆ ಒಂದು ಹನಿಲಸಿಕೆ ಚುಮುಕಿಸಿ ನಿಮಗಾಗಿ ಓಟು ಒತ್ತುತ್ತೇನೆ! ನಾನು ಯಾರಲ್ಲೂ ಹೇಳುವುದಿಲ್ಲ ನೀವು ಪರಮ ದ್ರೋಹಿಗಳೆಂದುನಾನು ಯಾರಲ್ಲೂ ಹೇಳುವುದಿಲ್ಲ ನೀವುಠಕ್ಕ ದೇಶಭಕ್ತರೆಂದುನಾನು ಯಾರಲ್ಲೂ ಹೇಳುವುದಿಲ್ಲ […]

Back To Top