ಕವಿತೆ
ಆಯ್ಕೆ ನಿನ್ನದು
ಸುಮಾ ಆನಂದರಾವ್
ಜುಳುಜುಳು ಹರಿವ ಝರಿ ತೊರೆಗಳು
ನಯನ ಮನೋಹರ ಪರ್ವತ ಶಿಖರಗಳು
ಬಣ್ಣ ಬಣ್ಣದ ಹೂ ಗೊಂಚಲುಗಳು
ಹೀರಿದ ಮಕರಂದದಿ ಮಧು ಪಾತ್ರೆಯ
ಸಿಹಿ ತುಂಬಿಸಿ ಝೇಂಕರಿಪ ದುಂಬಿಗಳು
ಕಣ್ಮನ ಸೂರೆಗೊಳ್ಳುವ ಹಚ್ಚ ಹರಿದ್ವರ್ಣ
ಒಳನುಸುಳಲು ಹೊಂಚುಹಾಕುತಿಹ ಸೂರ್ಯಕಿರಣ
ಒಂದೇ ಎರೆಡೇ ಗೋವರ್ಧನ ಗಿರಿ ಸಂಪತ್ತು
ಶ್ಯಾಮನೇಕೆಭಾರದ ಗಿರಿಯ ಒಂದೇ ಬೆರಳಲಿ ಹಿಡಿದ ?
ಹಗುರಾದ ಕೊಳಲನೇಕೆ ಎರಡು ಕೈಯಲಿ ಪಿಡಿದ!
ಅಚ್ಚರಿಯೊಡನೆ ದಿವ್ಯ ಸತ್ಯವೊಂದಿಹುದು
ಗಿರಿಯಲಿ ಸೌಂದರ್ಯ ತುಂಬಿಕೊಂಡರೂ
ಗಾಢ ಕತ್ತಲು, ಭಯಂಕರ ಮೃಗಗಳು, ಸರೀಸೃಪಗಳು
ಓಡಲಾಳದಿ ಇವೆಯಲ್ಲವೇ?
ಕೊಳಲಾದರೋ ತನ್ನೊಳಗೆ ನುಗ್ಗಿದ ಶ್ವಾಸವನ್ನು ಸಹ ಹಿಡಿದಿಡದೆ
ಸುಶ್ರಾವ್ಯವಾಗಿ ಕಿವಿಗೆ ಇಂಪು ನೊಂದ ಮನಕೆ ತಂಪು ನೀಡುವುದು
ನಿರಾಡಂಬರ ನಿಷ್ಕಲ್ಮಶವ ಅನಾವರಣಗೊಳಿಸುವ
ಕೊಳಲಾಗುವೆಯ ಶ್ಯಾಮ ನಿನ್ನ ಭದ್ರವಾಗಿ
ಎರೆಡು ಕೈಯಲಿ ಪಿಡಿವ
ಗಿರಿಯಾಗುವೆಯ ಆಗಲು ಹಿಡಿವ ಆದರೆ
ಎತ್ತಿ ಆಗಸದೆತ್ತರಕೆ ಒಂದೇ ಬೆರಳಲಿ
ಆಯ್ಕೆ ನಿನ್ನದು
*****************************************
Adhbuta
ಬ್ಯೂಟಿಫುಲ್
Classic
Thumba channagide.