ಗಝಲ್
ಸ್ಮಿತಾ ಭಟ್
ಒಲವಿನ ನಿರೀಕ್ಷೆಯ ಬದುಕ ಮುಗಿಸಿದ್ದೇನೆ
ನಲಿವಿನ ದೀಪದೆದುರು ಕಣ್ಮುಚ್ಚಿ ಕುಳಿತಿದ್ದೇನೆ/
ಯಾರಿಗೆ ಯಾರೂ ಆಸರೆಯಲ್ಲ ಇಲ್ಲಿ
ಸೆರೆಯಾದ ಉಸಿರಿನ ಕೀಲಿ ತೆಗೆದಿದ್ದೇನೆ /
ಕ್ಷಮಿಸು ಕಣ್ಣತೇವಕ್ಕೆ ನನ್ನ ಹೊಣೆ ಮಾಡದಿರು
ಕರವಸ್ತ್ರ ಇರಿಸಿಕೊಳ್ಳುವ ರೂಢಿ ಮರೆತಿದ್ದೇನೆ/
ಮೊಗಕೆ ಒಳಗುದಿಯ ತೋರುವ ಇರಾದೆ ಇಲ್ಲ
ಬರಿದೇ ತರತರದ ಮಾತಾಗಿ ನಗುತ್ತಿದ್ದೇನೆ/
ಬಲಹೀನ ಮನಸು ಏನೂ ಸಾಧಿಸದು ಮಾಧವಾ
ಭವಿತವ್ಯದ ಬಾಗಿಲಿಗೆ ತೋರಣವ ಕಟ್ಟಿದ್ದೇನೆ/
*********************************