ಕವಿತೆ
ಅರುಣ್ ಕೊಪ್ಪ
ಹಸಿರು ಚಿಮ್ಮುವ ಬುವಿಯೊಳು….
ವರುಣನ ಹನಿಗಳ ಸದ್ದು.!
ಕವಿದ ಮೋಡಗಳು…
ಎಲ್ಲೋ ಸೇರಿಹೋದವು…
ಹನಿಯೊಂದೇ …..ಕೂಗುತ್ತಾ
ಕ್ರಮಿಸುತ್ತಿದೆ….
ಭೂ ಗರ್ಭವ!
ಆಳ ಆಳವನು ಸೇರುವಾಸೆ….
ಎಲ್ಲ ಕಡೆ ನರ್ತನ ಮಾಡುವಾಸೆ…
ನಿನ್ನ ಹಾಡಿಗೆ ದ್ವನಿಗೂಡುವ
ಹಿಂಡೇ ಈ ಪ್ರಪಂಚ!!
ನೀ ಇದ್ದರೆ ಜೀವವೇ ಸಂಗೀತಮಯ…
ಹಸಿರು…,ಹಸೀವು…,ಒಲವು ಎಲ್ಲ…..
ನೀ ನರಿಯದಿಹ ಮಿಂಚು!!
ಬಿರುಗಾಳಿ ಬೆನ್ನಟ್ಟಿ ಬಂದಾಗ
ಆಗುವ ಭಯ!!
ನೀ ಕಾಣದಾದಾಗ ಆಗುವ ವ್ಯಥೆ …..
ಬಣ್ಣಿಸಲಾಗದಷ್ಟು ಭಾವಪೂರಿತ…
ನೀ ಸುರಿವ ಸದ್ದೆ ಚಂದ
ನೀ ಬೆರೆವ ಸಾಲು ಸಾಲು
ನೆರೆಗಳೇ ….ಪ್ರಾಕೃತಿಕ ಸೌಂದರ್ಯದ ಅಂತರಾಳ….
ಆದರೆ ನಿನ್ನ ಆಳವ ಬಲ್ಲವರಾರಿಲ್ಲ….ಸಾಗರವೇ….??
ನೀ ಮಳೆಯ ಮಗು,ನಗು,ಮಡದಿ,
ಎಲ್ಲ ವೂ ನೀನೇ. ಎಲ್ಲ ನಿನ್ನ ಮಾಯೇ
**************
ಕವನ ಸೊಗಸಾಗಿದೆ. ಅಭಿನಂದನೆಗಳು ಅರುಣ್. ಅಭಿನಂದನೆಗಳು
ಮಳೆಗಾಲಕ್ಕೊಂದು ವರುಣರಾಗ… ಕವಿತೆ ಭಾವಪೂರ್ಣವಾಗಿದೆ.